ಅಲ್ಪಾವಧಿ ಹೂಡಿಕೆ ಮಾಡಲು ಬ್ಯಾಂಕ್ ಗಳು ಹಲವು ಯೋಜನೆಗಳನ್ನು ನೀಡುತ್ತದೆ. ಅದರಲ್ಲಿ ಹೆಚ್ಚಾಗಿ ಹೂಡಿಕೆ ಮಾಡುವುದು FD ಯೋಜನೆಯಲ್ಲಿ. ಬ್ಯಾಂಕ್ ಗಳು ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ಅತಿ ಕಡಿಮೆ ಸಮಯದಲ್ಲಿ ಅಂದರೆ ಕೇವಲ 7 ದಿನಗಳಲ್ಲಿ ಹೂಡಿಕೆ ಮಾಡಲು ಅವಕಾಶ ನೀಡಿದೆ. ಅಂತೆಯೇ ಬರೋಬರಿ 10 ವರ್ಷಗಳ ಅವಧಿಗೆ ಹೂಡಿಕೆ ಮಾಡುವ ಅವಕಾಶವನ್ನು ನೀಡಿದೆ. ಹಾಗೆಯೇ ಒಂದು ವರ್ಷದ ಅವಧಿಯಲ್ಲಿ ಹೂಡಿಕೆ ಮಾಡುವವರಿಗೆ ಯಾವ ಬ್ಯಾಂಕ್ ನಲ್ಲಿ ಏಷ್ಟು ಬಡ್ಡಿದರಗಳು ಸಿಗುತ್ತವೆ ಎಂಬ ಬಗ್ಗೆ ಪೂರ್ಣ ಮಾಹಿತಿ ನೀಡಲಾಗಿದೆ.
ಹೂಡಿಕೆಯ ಅವಧಿಯ ಮೇಲೆ ಬಡ್ಡಿದರ ನಿರ್ಧಾರ :- ಸಾಮಾನ್ಯವಾಗಿ ಬ್ಯಾಂಕ್ ನಲ್ಲಿ ಏಷ್ಟು ಅವಧಿಗೆ ಹೂಡಿಕೆ ಮಾಡಿದ್ದಾರೆ ಎಂಬುದರ ಮೇಲೆ ಬಡ್ಡಿದರಗಳು ನಿಗದಿ ಆಗುತ್ತವೆ. ಅಧಿಕ ಅವಧಿಯಲ್ಲಿ ಹೂಡಿಕೆ ಮಾಡಿದರೆ ಹೆಚ್ಚು ಬಡ್ಡಿದರಗಳು ನಿರ್ಧಾರ ಆಗುತ್ತವೆ. ಕೇವಲ 7 ದಿನಗಳಿಂದ 10 ವರ್ಷಗಳ ಅವಧಿಗೆ ಹೂಡಿಕೆ ಮಾಡುವ ಅವಕಾಶ ನೀಡುತ್ತವೆ.
ಒಂದು ವರ್ಷದ ಅವಧಿಗೆ ಹೂಡಿಕೆ ಮಾಡಿದರೆ ಏಷ್ಟು ಬಡ್ಡಿದರ ಸಿಗಲಿದೆ :-
ನೀವು ಒಂದು ವರ್ಷದ ಅವಧಿಗೆ FD ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಕೆಲವು ಬ್ಯಾಂಕ್ ನಲ್ಲಿ ಕಡಿಮೆ ಬಡ್ಡಿದರ ಹಾಗೂ ಕೆಲವು ಬ್ಯಾಂಕ್ ಹೆಚ್ಚು ಬಡ್ಡಿದರ ನೀಡುತ್ತವೆ. ಹಾಗಾದರೆ ಯಾವ ಬ್ಯಾಂಕ್ ನಲ್ಲಿ ಏಷ್ಟು ಬಡ್ಡಿ ಸಿಗುತ್ತದೆ ಎಂಬ್ಡಿನನು ನೋಡೋಣ :-
1) ಐಸಿಐಸಿಐ ಬ್ಯಾಂಕ್ :- ಐಸಿಐಸಿಐ ಬ್ಯಾಂಕ್ ನಲ್ಲಿ ಒಂದು ವರ್ಷದ ಅವಧಿಗೆ ಸಾಮಾನ್ಯ ನಾಗರಿಕರಿಗೆ ಸಿಗುವ ಬಡ್ಡಿದರವು ಶೇಕಡಾ 3% ರಿಂದ 6% ಆಗಿರುತ್ತದೆ. ಈ ಬ್ಯಾಂಕ್ ಭಾರತದ ಹಲವು ರಾಜ್ಯಗಳಲ್ಲಿ ಶಾಖೆಗಳು ಇವೆ.
2) ಎಚ್‌ಡಿಎಫ್‌ಸಿ ಬ್ಯಾಂಕ್: ಈ ಬ್ಯಾಂಕ್ ನಲ್ಲಿ ಹೂಡಿಕೆ ಒಂದು ವರ್ಷದ ಅವಧಿಗೆ ಹೂಡಿಕೆ ಮಾಡಿದರೆ ನಿಮಗೆ ಶೇಕಡಾ 3% ರಿಂದ 6% ಬಡ್ಡಿದರ ಸಿಗುತ್ತದೆ. ಎಚ್‌ಡಿಎಫ್‌ಸಿ ಬ್ಯಾಂಕ್ ಸಹ ಭಾರತದಾದ್ಯಂತ ತನ್ನ ಶಾಖೆಗಳನ್ನು ಹೊಂದಿದೆ.
3) ಯೆಸ್ ಬ್ಯಾಂಕ್ :- ಯಸ್ ಬ್ಯಾಂಕ್ ನಲ್ಲಿ ಹೂಡಿಕೆ ಮಾಡುವ ಸಾಮಾನ್ಯ ನಾಗರಿಕರಿಗೆ ಒಂದು ವರ್ಷದ ಅವಧಿಯ FD ಯೋಜನೆ ಹೂಡಿಕೆಗೆ ಶೇಕಡಾ 3.25% ರಿಂದ 7.25% ಬಡ್ಡಿದರ ಸಿಗುತ್ತದೆ.
4) PNB :- ಒಂದು ವರ್ಷದ FD ಯೋಜನೆಯ ಹೂಡಿಕೆ ಮಾಡಿದ ಸಾಮಾನ್ಯ ನಾಗರಿಕರಿಗೆ ಶೇಕಡಾ 3% ರಿಂದ 5.75% ರ ವರೆಗೆ ಬಡ್ಡಿದರ ಸಿಗುತ್ತದೆ.
5) ಎಸ್.ಬಿ.ಐ :- ಭಾರತದಾದ್ಯಂತ ಹೆಚ್ಚಿನ ಶಾಖೆ ಹಿಂದಿರುವ SBI bank ಒಂದು ವರ್ಷದ FD ಯೋಜನೆ ಹೂಡಿಕೆಗೆ ಶೇಕಡಾ 3% ರಿಂದ 5.75% ವರೆಗೆ ಬಡ್ಡಿದರವನ್ನು ನೀಡುತ್ತದೆ.
6) ಯೂನಿಟಿ ಸ್ಮಾಲ್ ಫೈನಾನ್ಸ್ ಬ್ಯಾಂಕ್ :- ಯೂನಿಟಿ ಸ್ಮಾಲ್ ಫೈನಾನ್ಸ್ ಬ್ಯಾಂಕ್ ನಲ್ಲಿ ಒಂದು ವರ್ಷದ ಅವಧಿಗೆ FD ಯೋಜನೆಯಲ್ಲಿ ಹೂಡಿಕೆ ಮಾಡುವ ಸಾಮಾನ್ಯ ನಾಗರಿಕರಿಗೆ ಶೇಕಡಾ 4.50% ರಿಂದ 7.85% ರ ವರೆಗೆ ಬಡ್ಡಿದರ ನೀಡುತ್ತದೆ. ಇದು ಒಂದು ಚಿಕ್ಕ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಆಗಿದ್ದು ಹಲವು ಕಡೆ ತನ್ನ ಶಾಖೆಯನ್ನು ಹೊಂದಿದೆ.
ಬ್ಯಾಂಕ್ ನಲ್ಲಿ ಹೂಡಿಕೆ ಮಾಡುವ ಮುನ್ನ ಬ್ಯಾಂಕ್ ಗೆ ನೇರವಾಗಿ ತೆರಳಿ ಅಥವಾ ಬ್ಯಾಂಕ್ ನ ಅಧಿಕೃತ ವೆಬ್ಸೈಟ್ ನಲ್ಲಿ ಪೂರ್ಣ ಮಾಹಿತಿ ಹಾಗೂ ಷರತ್ತುಗಳನ್ನು ತಿಳಿದು ಹೂಡಿಕೆ ಮಾಡುವುದು ಉತ್ತಮ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ರೈತರಿಗೆ ಶುಭ ಸುದ್ದಿ: ಹಸು ಕುರಿ ಹಾಗೂ ಮೇಕೆ ಸಾಕಾಣಿಕೆ ಮಾಡಲು ಬರೋಬರಿ 58,000 ರೂಪಾಯಿ ಸಬ್ಸಿಡಿ ಸಿಗುತ್ತಿದೆ.
ಇದನ್ನೂ ಓದಿ: ಕೃಷಿ ಸಖಿ ಯೋಜನೆಯಲ್ಲಿ ಮಹಿಳೆಯರಿಗೆ ಸಿಗಲಿದೆ ಬರೋಬ್ಬರಿ 60,000 ರೂಪಾಯಿ ಆದಾಯ ಗಳಿಸುವ ಅವಕಾಶ