ನಿಮ್ಮ ಬಳಿ 10ರೂಪಾಯಿ ನಾಣ್ಯ ಇದ್ಯಾ; ನಾಣ್ಯ ಇರೋರು ಅಪ್ಪಿ ತಪ್ಪಿಯು ಈ ತಪ್ಪು ಮಾಡಬೇಡಿ.

ದೇಶದಲ್ಲಿ ಡಿಜಿಟಲೀಕರಣ ಹೆಚ್ಚಾದಂತೆ ಎಲ್ಲ ಆನ್ಲೈನ್ ಮಾಯವಾಗಿ ಹೋಗ್ತಿದೆ.. ನಿತ್ಯದ ವ್ಯವಹಾರಗಳಲ್ಲಿ ಹಣಕಾಸಿನ ನಗದು ವ್ಯವಹಾರಕ್ಕಿಂತ ಆನ್ಲೈನ್ ಪೇಮೆಂಟ್ ಗಳಿಗೆ ಹೆಚ್ಚು ಹೆಚ್ಚಿನ ಆದ್ಯತೆ ನೀಡ್ತಾರೆ.. ಅದಕ್ಕೆ ಮುಖ್ಯವಾಗಿ ಚಿಲ್ಲರೆ ಸಮಸ್ಯೆಯು ಕಾರಣ ಅಂದ್ರು ತಪ್ಪಾಗಲ್ಲ. ಇನ್ನು ಮುಖ್ಯವಾಗಿ ನಿತ್ಯದ ವ್ಯವಹಾರಗಳಲ್ಲಿ ಹತ್ತು ಹಾಗೂ ಇಪ್ಪತ್ತು ರೂಪಾಯಿ ನಾಣ್ಯ ಚಲಾವಣೆ ಆಗದೇ ಚಿಲ್ಲರೇ ಸಮಸ್ಯೆಯಾಗಿದ್ದು, ಸಾರ್ವಜನಿಕರು, ವ್ಯಾಪಾರಸ್ಥರು ಚಿಲ್ಲರೆ ಹಣಕ್ಕಾಗಿ ಪರದಾಡುವಂತಾಗಿದೆ. ಆರ್‌ಬಿಐ ಚಲಾವಣೆಗೆ ತಂದಿರುವ 10 ಹಾಗೂ 20 ರೂಪಾಯಿ ನಾಣ್ಯಗಳನ್ನು ಜನತೆ ತಿರಸ್ಕರಿಸುತ್ತಿರುವುದರಿಂದ ಎಲ್ಲೆಡೆ ಗೊಂದಲದ ಸನ್ನಿವೇಶ ನಿರ್ಮಾಣವಾಗುತ್ತಿದೆ. ಅದರಲ್ಲಿಯೂ ಪ್ರಸಕ್ತ ಮಾರುಕಟ್ಟೆಯಲ್ಲಿ ಆನ್ಲೈನ್‌ ಪೇಮೆಂಟ್‌ನಿಂದಾಗಿ ಸಣ್ಣ ಮೊತ್ತದ ನೋಟುಗಳು ಬಳಕೆಯಾಗುತ್ತಿರುವುದೇ ಕಡಿಮೆಯಾಗುತ್ತಿದೆ. ಇದರಿಂದಾಗಿ ವ್ಯಾಪಾರ ಕೇಂದ್ರಗಳಲ್ಲಿ ಹತ್ತರ ನೋಟುಗಳ ಕೊರತೆ ಕಾಡುತ್ತಿದೆ. ಈ ಸಮಯದಲ್ಲಿ ಹತ್ತರ ನಾಣ್ಯಗಳನ್ನು ನೀಡಲು ಮುಂದಾದರೆ ನಿರ್ದಾಕ್ಷಿಣ್ಯವಾಗಿ ನಾಣ್ಯ ಬೇಡವೆಂದು ಹೇಳುತ್ತಿರುವದು ಕಂಡುಬರುತ್ತಿದೆ.

WhatsApp Group Join Now
Telegram Group Join Now

ಇನ್ನು ಸರಕಾರ ಹತ್ತು ಹಾಗೂ ಇಪ್ಪತ್ತು ರೂಪಾಯಿ ನಾಣ್ಯವನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿತ್ತು. ಈ ನಾಣ್ಯಗಳು ಮಾರುಕಟ್ಟೆಯಲ್ಲಿ ಭಾರಿ ಸದ್ದು ಮಾಡಿದ್ದವು. ಕ್ರಮೇಣ ನಾಣ್ಯಗಳ ಚಲಾವಣೆ ಕಡಿಮೆಯಾಯಿತು. ಕಾರಣ, ವ್ಯಾಪಾರಸ್ಥರು ಈ ನಾಣ್ಯಗಳನ್ನು ತೆಗೆದುಕೊಳ್ಳುತ್ತಿಲ್ಲ. ಹೀಗಾಗಿ ವ್ಯಾಪಾರಸ್ಥರು ಹಾಗೂ ಗ್ರಾಹಕರ ನಡುವೆ ನಾಣ್ಯದ ಚಲಾವಣೆ ಕುರಿತು ನಿತ್ಯ ಜಗಳ ನಡೆಯುತ್ತಿದೆ. ಆದ್ರೆ ಇನ್ಮುಂದೆ ಇದು ಮುಂದುವರೆಯುವಂತಿಲ್ಲ… ಹೌದು ಯಾರು ಹಾಗೂ ಎಲ್ಲಿ 10-20 ರೂಪಾಯಿ ನಾಣ್ಯಗಳನ್ನ ತೆಗೆದುಕೊಳ್ಳಲು ನಿರಾಕರಿಸುತ್ತಾರೋ ಅಂತವರ ವಿರುದ್ಧ ದೂರು ದಾಖಲಿಸಬಹುದು..

ತಪ್ಪು ಕಲ್ಪನೆಯಿಂದ ಹೊರ ಬರದಿದ್ರೆ ಜೈಲ್ ಫಿಕ್ಸ್

ಹೌದು ಸ್ವತಃ ರಿಸರ್ವ್‌ ಬ್ಯಾಂಕ್‌ ವೆಬ್‌ಸೈಟ್‌ ಪ್ರಕಾರ ಇಲ್ಲಿಯವರೆಗೆ ಕೇಂದ್ರೀಯ ಬ್ಯಾಂಕ್‌ 14 ರೀತಿಯ 10 ರೂಪಾಯಿ ಮುಖಬೆಲೆಯ ನಾಣ್ಯಗಳನ್ನು ಬಿಡುಗಡೆ ಮಾಡಿದೆ. ಹೀಗಾಗಿ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಒಂದೇ ಮುಖಬೆಲೆಯ ನಾಣ್ಯಗಳನ್ನು ಬಿಡುಗಡೆ ಮಾಡಿರುವುದೇ ಇದೀಗ ಗೊಂದಲಕ್ಕೆ ಮೂಲ ಕಾರಣವಾಗಿದೆ. ಇದಲ್ಲದೆ 10 ರೂಪಾಯಿ ನಕಲಿ ನಾಣ್ಯದ ಬಗ್ಗೆಯೂ ದೊಡ್ಡ ಪ್ರಮಾಣದಲ್ಲಿ ಗಾಳಿ ಸುದ್ದಿಗಳು ಹರಡಿದ್ದವು. ಇದೂ ಗೊಂದಲಕ್ಕೆ ತುಪ್ಪ ಸುರಿದಿದೆ. ಹೀಗಾಗಿ ನಾಣ್ಯಗಳು ಅಂದ್ರೆ ಜನರು ಮೂರು ಮೈಲಿ ದೂರ ಸರಿಯುತ್ತಿದ್ದಾರೆ ಅಲ್ದೇ ವ್ಯಾಪಾರಿ ಸ್ಥಳಗಲ್ಲಿಯೂ ಕೂಡ ಮಾಲೀಕರು ವ್ಯಾಪಾರಸ್ಥರು ಕೂಡ ನಾಣ್ಯಗಳನ್ನ ಸ್ವೀಕರಿಸುತ್ತಿಲ್ಲ… ಬದಲಾಗಿ ನಾಣ್ಯಗಳನ್ನ ಬ್ಯಾನ್ ಮಾಡಲಾಗಿದೆ ಅವುಗಳ ಚಲಾವಣೆ ನಿಲ್ಲಿಸಲಾಗಿದೆ ಅಂತೆಲ್ಲಾ ಸುಳ್ಳು ಸುದ್ದಿಗಳನ್ನ ಹಬ್ಬಿಸುತ್ತಿದ್ದಾರೆ ಇದರಿಂದಾಗಿ ಜನರು 10 ಮತ್ತು 20ರ ನಾಣ್ಯ ಸ್ವೀಕರಿಸಲು ಹಿಂದೇಟು ಹಾಕುತ್ತಿದ್ದಾರೆ.

ಆದ್ರೆ ಕಾನೂನಿನ ಪ್ರಕಾರ ಸರಕಾರದಿಂದ ಚಲಾವಣೆಗೆ ಬಂದ ನೋಟುಗಳನ್ನಾಗಲಿ, ನಾಣ್ಯಗಳನ್ನಾಗಲಿ ಯಾರೂ ಕೂಡ ತಿರಸ್ಕರಿಸುವಂತಿಲ್ಲ. ಸಂಸ್ಥೆಗಳು ನಿರಾಕರಿಸಿದರೆ ಕ್ರಮ ಕೈಗೊಳ್ಳಬಹುದು ಅನ್ನೋ ನಿಯಮ ಇದೆ. ಹೀಗಾಗಿ ಇನ್ಮುಂದೆ ನಾಣ್ಯಗಳನ್ನ ಸ್ವೀಕಾರ ಮಾಡೋದಿಲ್ಲ ಚಲಾವಣೆಯಲ್ಲಿ ಇಲ್ಲಾ ಬ್ಯಾನ್ ಮಾಡಲಾಗಿದೆ ಅಂತ ಯಾರಾದ್ರೂ ಸಾಬುಬು ಹೇಳಿದ್ರೆ ಕ್ರಮಕ್ಕೆ ಮುಂದಾಗಬಹುದು. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಇನ್ನು ಭಾರತೀಯ ರಿಸರ್ವ್ ಬ್ಯಾಂಕ್ ಮಾತ್ರ ಹಣವನ್ನು ರದ್ದು ಮಾಡುವ ಅಧಿಕಾರವನ್ನು ಹೊಂದಿದ್ದು ಪ್ರಸ್ತುತ ಅಂತಹ ಯಾವುದೇ ಕ್ರಮ ಕೈಗೊಂಡಿಲ್ಲ. ಬ್ಯಾಂಕ್‌ನಿಂದಲೇ ಹತ್ತು ರೂಪಾಯಿ ನಾಣ್ಯಗಳನ್ನು ವಿತರಿಸುತ್ತಿದ್ದು, ಗ್ರಾಹಕರಾಗಲಿ ವ್ಯಾಪಾರಸ್ಥರಾಗಲಿ ಆತಂಕ ಪಡುವ ಅವಶ್ಯಕತೆಯಿಲ್ಲ ಜೊತೆಗೆ ₹10 ನಾಣ್ಯಗಳು ರದ್ದಾಗಿಲ್ಲ. ನಾಣ್ಯಗಳನ್ನು ಪಡೆಯಲು ಬ್ಯಾಂಕ್‌ಗಳು, ವ್ಯಾಪಾರಸ್ಥರು, ಗ್ರಾಹಕರು ನಿರಾಕರಿಸುವುದು ಅಪರಾಧವಾಗುತ್ತದೆ ಎಂದು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಶಾಖಾ ವ್ಯವಸ್ಥಾಪಕ ರಾಜಶೇಖರ ತಿಳಿಸಿದ್ದಾರೆ. ಇನ್ನು ಇದರ ಜೊತೆಗೆ 10ರೂಪಾಯಿ ನಾಣ್ಯಗಳು ಯಾವುದೇ ರೀತಿಯ ನಿಷೇಧಕ್ಕೆ ಒಳಗಾಗಿಲ್ಲವೆಂದು ಆರ್‌ ಬಿಐ ತಿಳಿಸಿತ್ತು. ಆದರೆ ಅದೇಕೋ ಜನರು ಇದನ್ನು ಕೇಳುವ ಮನಸ್ಥಿತಿಯಲ್ಲಿ ಇರಲಿಲ್ಲ.

ಇದರಿಂದ ಅದರ ಬಳಕೆ ಆರಂಭವಾಗಲಿಲ್ಲ. ಇದರಿಂದ ಬ್ಯಾಂಕ್‌ಗಳಿಗೆ ಬರುವ ಗ್ರಾಹಕರಿಗೆ ಇದರ ಬಗ್ಗೆ ತಿಳಿಸಲು ಕರಪತ್ರಗಳ ಮೂಲಕ ಮಾಹಿತಿ ಬಿತ್ತರಿಸುವ ಕೆಲಸವನ್ನು ಮಾಡಲಾಗುತ್ತಿದೆ. ಜೊತೆಗೆ 10ರೂಪಾಯಿ ನಾಣ್ಯಗಳ ಬಗ್ಗೆ ಜನರಿಗಿರುವ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಲು ಪ್ರಯತ್ನಿಸಲಾಗುತ್ತಿದೆ. ಈ ಬೆನ್ನಲ್ಲೇ ಕೆಲವೆಡೆ ಅಧಿಕಾರಿಗಳು ಜನಸಂದಣಿ ಪ್ರದೇಶಗಳಾದ ಎಪಿಎಂಸಿ, ಪೆಟ್ರೋಲ್‌ ಬಂಕ್‌, ವಾಣಿಜ್ಯ ಮಳಿಗೆ ಬಳಿ ತೆರಳಿ ಅಲ್ಲಿ 10ರೂ. ನಾಣ್ಯಗಳ ಚಲಾವಣೆ ಮಾಡಿ ನಾಣ್ಯಗಳ ಬಳಕೆ ಕುರಿತು ಅರಿವು ಮೂಡಿಸುತ್ತಿದ್ದಾರೆ. ಇದ ಹೊರತಾಗಿಯೂ ನಾಣ್ಯ ವನ್ನ ತೆಗೆದುಕೊಳ್ಳಲು ಯಾರಾದ್ರೂ ನಿರಾಕರಿಸಿದರೆ ಖಂಡಿತಾ ಅವ್ರು ಸಮಸ್ಯೆ ಎದುರಿಸುತ್ತಾರೆ. ಹೌದು ಯಾರು ನಾಣ್ಯಗಳನ್ನು ತೆಗೆದುಕೊಳ್ಳಲು ನಿರಾಕರಿಸುತ್ತಾರೋ ಅಂತವರ ಮೇಲೆ ಪ್ರಕರಣವನ್ನು ದಾಖಲಿಸುವ ಅವಕಾಶವೂ ಇದ್ಯಂತೆ.

ಇದನ್ನೂ ಓದಿ: ಗೃಹಲಕ್ಷ್ಮಿಯರಿಗೆ ಗುಡ್ ನ್ಯೂಸ್; ಇನ್ನುಂದೆ ಈ ದಿನಾಂಕದೊಂದು ನಿಮ್ಮ ಖಾತೆಗೆ ಜಮಾ ಆಗುತ್ತದೆ ಹಣ!

Sharing Is Caring:

Leave a Comment