ರಾಜ್ಯದ ರೈತರಿಗೆ ಮತ್ತೆ 3000 ರೂಪಾಯಿ ಬರ ಪರಿಹಾರದ ಹಣ ಜಮಾ ಆಗಲಿದೆ. ನೀವು ನಿಮ್ಮ ಖಾತೆಗೆ ಹಣ ಜಮಾ ಆಗಿದೆಯೇ ಚೆಕ್ ಮಾಡಿಕೊಳ್ಳಿ.

ಈಗಾಗಲೇ ಕೇಂದ್ರ ಸರ್ಕಾರವು ರಾಜ್ಯಕ್ಕೆ ಬರ ಪರಿಹಾರದ ಮೊತ್ತವನ್ನು ನೀಡಿದೆ. ಮೊದಲ ಹಂತದಲ್ಲಿ ರಾಜ್ಯದ ಕೃಷಿಕರಿಗೆ 2000 ರೂಪಾಯಿಗಳನ್ನು ನೀಡಿದ್ದರು. ಈಗ ಮತ್ತೊಮ್ಮೆ ಬರ ಪರಿಹಾರದ ಹಣವನ್ನು ರಾಜ್ಯ ಸರ್ಕಾರವು ನೀಡಲಿದೆ. ಒಟ್ಟು 18 ಲಕ್ಷ ರೈತರಿಗೆ ಹಣ ಜಮಾ ಆಗಲಿದೆ.

WhatsApp Group Join Now
Telegram Group Join Now

ಯಾವಾಗ ಬರ ಪರಿಹಾರದ ಹಣವು ಜಮಾ ಆಗಲಿದೆ?: ಬರ ಪರಿಹಾರದ ಬಗ್ಗೆ ಮಾತನಾಡಿದ ಸಚಿವ ಕೃಷ್ಣ ಭೈರೇಗೌಡ ಕಳೆದ ವರ್ಷ ರಾಜ್ಯದಲ್ಲಿ ಮಳೆ ಇಲ್ಲದೆ ರೈತರು ಬರಗಾಲದಿಂದ ರೈತರಿಗೆ ಬಹಳ ನಷ್ಟ ಆಗಿದ್ದು. ಇದರಿಂದ ಸಣ್ಣ ಮತ್ತು ಅತೀ ಸಣ್ಣ ಆದಾಯದ ರೈತರು ಬಹಳ ತೊಂದರೆಗೆ ಒಳಗಾಗಿದ್ದರು. ಇದನ್ನು ಮನಗಂಡು ಮೊದಲ ಹಂತದಲ್ಲಿ 2,000 ರೂಪಾಯಿ ಗಳನ್ನೂ ಅರ್ಹರ ಖಾತೆಗೆ ನೇರವಾಗಿ ಜಮಾ ಮಾಡಲಾಗಿತ್ತು. ಈಗ ಮತ್ತೆ ರೈತರ ಖಾತೆಗೆ 3000 ಹಣ ನೀಡಲು ರಾಜ್ಯ ಸರ್ಕಾರವು ಬರೋಬರಿ 500 ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿದೆ. ರೈತರ ಖಾತೆಗಳಿಗೆ ಮುಂದಿನ ವಾರ ಹಣ ವರ್ಗಾವಣೆ ಆಗಲಿದೆ ಎಂಬುದು ಮಾಹಿತಿಯನ್ನು ಹಂಚಿಕೊಂಡರು. 

ರೈತ ಸಮುದಾಯದ ಆರ್ಥಿಕ ಬಲವರ್ಧನೆಗೆ ಸರ್ಕಾರ ಶ್ರಮಿಸುತ್ತಿದೆ :- ನಿನ್ನೆ ಕಲಬುರಗಿಯಲ್ಲಿ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಹೆಚ್ಚುವರಿ ಇಲಾಖೆ ವಿಭಾಗ ಮಟ್ಟದ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಬಳಿಕ ಪತ್ರಿಕಾ ಹೇಳಿಕೆ ನೀಡಿದ ಸಚಿವರು ಹಿಂದಿನ ವರ್ಷವು ರಾಜ್ಯದಲ್ಲಿ ಬರಗಾಲದ ಪರಿಸ್ಥಿತಿ ಎಷ್ಟಿತ್ತು ಎಂಬುದು ತಿಳಿದ ವಿಷಯವೇ ಆಗಿದೆ. ಇದರಿಂದ ರೈತರ ಜೀವನ ಬಹಳ ಕಷ್ಟ ಆಗಿದೆ. ಇದಕ್ಕೆ ನಾವು ಮತ್ತೆ ಅವರಿಗೆ ಆರ್ಥಿಕ ಸಹಾಯ ಆಗಬೇಕು. ಅವರು ಆರ್ಥಿಕವಾಗಿ ಅಭಿವೃದ್ದಿ ಆಗಬೇಕು ಎಂಬ ದೃಷ್ಟಿಯಿಂದ ಪರಿಹಾರದ ಹಣವನ್ನು ಬಿಡುಗಡೆಮಾಡುತ್ತಿದ್ದೇವೆ ಎಂದು ತಿಳಿಸಿದರು. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಕಳೆದ ಬಾರಿ ರಾಜ್ಯ ಸರ್ಕಾರವೇ ಹೆಚ್ಚುವರಿ ಬೆಲೆ ಪರಿಹಾರ ನೀಡಿದೆ :-

ಕಳೆದ ಬಾರಿ ಕೇಂದ್ರ ಸರ್ಕಾರವು ಸಕಾಲಕ್ಕೆ ಬೆಲೆ ಪರಿಹಾರವನ್ನು ನೀಡದೆ ಇರುವ ಕಾರಣದಿಂದ ರಾಜ್ಯದ ರೈತರ ಕಷ್ಟವನ್ನು ಅರಿತು ರಾಜ್ಯ ಸರ್ಕಾರವು 40 ಲಕ್ಷ ರೈತರಿಗೆ ನೆರವು ನೀಡಿದೆ. ನಮ್ಮ ರಾಜ್ಯದ ರೈತರಿಗೆ ಎಸ್.ಡಿ.ಆರ್.ಎಫ್ ನಿಧಿಯಿಂದ ಬರೋಬ್ಬರಿ 2,451 ಕೋಟಿ ರೂಪಾಯಿಗಳನ್ನು ಪರಿಹಾರದ ರೂಪದಲ್ಲಿ ನೀಡಲಾಗಿದೆ ಎಂದು ಸಚಿವರು ಸುದ್ದಿಗಾರರಿಗೆ ತಿಳಿಸಿದರು.

ಬೆಲೆ ಪರಿಹಾರದ ಸ್ಟೇಟಸ್ ನೋಡುವ ವಿಧಾನ ತಿಳಿಯಿರಿ :- ಈಗ ಮೊಬೈಲ್ ನಲ್ಲಿಯೇ ನಾವು ನಮ್ಮ ಖಾತೆಗೆ ಹಣ ಬಂದಿದೆಯೇ ಅಥವಾ ಇಲ್ಲವೇ ಎಂಬುದನ್ನು ತಿಳಿಯಬಹುದಾಗಿದೆ. ಅಧಿಕೃತ ವೆಬ್ಸೈಟ್ ಇಲ್ಲಿ ಕ್ಲಿಕ್ ಮಾಡಿ ತೆರಳಿದರೆ ನೀಮಗೆ ಭೂಮಿ ಆನ್‌ಲೈನ್ ಪರಿಹಾರ ಇನ್‌ಪುಟ್ ಸಬ್ಸಿಡಿ ಪಾವತಿಯ ವಿವರಗಳು ಇರುವ ಪೇಜ್ ತೆರೆಯುತ್ತದೆ. ಅಲ್ಲಿ ನೀವು ಯಾವ ಕಂತು ಅಥವಾ ಯಾವ ವರ್ಷ ಎಂಬುದನ್ನು ಆಯ್ಕೆ ಮಾಡಿಕೊಳ್ಳಬೇಕು. ನೀವು ಮುಂಗಾರು ಸೀಸನ್ ಎಂದು ಆಯ್ಕೆ ಮಾಡಿಕೊಳ್ಳಬೇಕು. ನಂತರ ವಿಪತ್ತು ಆಯ್ಕೆ  ಮಾಡಿದ ಬಳಿಕ ಡೇಟಾ ಪಡೆಯಿರಿ ಆಯ್ಕೆ ಕ್ಲಿಕ್ ಮಾಡಬೇಕು. ನಂತರ ನೀವು ಆಧಾರ್ ನಂಬರ್ ಅಥವಾ ರೈತರ ಗುರುತಿನ ಸಂಖ್ಯೆ ಅಥವಾ ಮೊಬೈಲ್ ನಂಬರ್ ಅಥವಾ ಸರ್ವೆ ನಂಬರ್ ಇವುಗಳಲ್ಲಿ ಯಾವುದಾದರೂ ಒಂದು ವಿವರಗಳನ್ನು ನೀಡಿದರೆ ನಿಮಗೆ ನಿಮ್ಮ ಖಾತೆಯ ಸ್ಟೇಟಸ್ ಬಗ್ಗೆ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ.

ಇದನ್ನೂ ಓದಿ: ರಾಜ್ಯದ ಬಡ ವರ್ಗದ ಮಕ್ಕಳಿಗೆ ಉಚಿತ ಲ್ಯಾಪ್ಟಾಪ್ ಸಿಗುತ್ತಿದೆ. ಅರ್ಜಿ ಸಲ್ಲಿಸುವುದು ಹೇಗೆ ಎಂದು ತಿಳಿಯಿರಿ. 

ಇದನ್ನೂ ಓದಿ: ಕೋಳಿ ಸಾಕಾಣಿಕೆ ಮಾಡಬೇಕು ಅನ್ನೋರಿಗೆ ಗುಡ್ ನ್ಯೂಸ್; ಊಟ ವಸತಿಯೊಂದಿಗೆ ಸಿಗಲಿದೆ ಉಚಿತ ತರಬೇತಿ

Sharing Is Caring:

Leave a Comment