ರೈತರ ಬದುಕಿನ ಜೀವನಾಡಿ ಅಗಿರುವುದೇ ಹಸು, ಕುರಿ ಹಾಗೂ ಮೇಕೆ ರೈತರಿಗೆ ರೈತಾಪಿ ಕೆಲಸಗಳಿಗೆ ಇವು ಬಹಳ ಅನುಕೂಲ ಆಗುತ್ತದೆ. ಆದರೆ ಇವುಗಳನ್ನು ಸಾಕುವುದು ಒಂದು ರೀತಿಯ ಸವಾಲು ಅವರಿಗೆ ಸರಿಯಾದ ರೀತಿಯ ಆಹಾರಗಳನ್ನು ಸಮಯಕ್ಕೆ ಸರಿಯಾಗಿ ನೀಡಬೇಕು. ಮನೆ ಮಗುವಿನಂತೆ ಆರೈಕೆ ಮಾಡಬೇಕು. ಇಂದು ಹಸು ಅಥವಾ ಕುರಿ ಅಥವಾ ಮೇಕೆಗಳ ಖರೀದಿಗೆ ಈಗ ಬೆಲೆ ತುಂಬಾ ಇದೆ. ಹಾಗಿರುವಾಗ ಎಲ್ಲಾ ರೈತರಿಗೆ ಸಾವಿರಾರು ರೂಪಾಯಿ ನೀಡಿ ಖರೀದಿ ಮಾಡಲು ಸಾಧ್ಯವಿಲ್ಲ. ಹಾಗೆಯೇ ಇಂದಿನ ಬೆಲೆ ಏರಿಕೆಯ ಕಾಲದಲ್ಲಿ ಸಾಕುವುದು ಕಷ್ಟ. ಹಾಗೆಯೇ ನೀವು ಪ್ರಾಣಿಗಳ ಸಾಕಾಣಿಕೆ ಅದರದ್ದೇ ಮನೆ ಅಥವಾ ಶೆಡ್ ನಿರ್ಮಾಣ ಮಾಡಬೇಕು. ನೀವು ಹಸುವಿನ ಅಥವಾ ಮೇಕೆ, ಕುರಿಗಳ ಕೊಟ್ಟಿಗೆ ಅಥವಾ ಶೆಡ್ ನಿರ್ಮಾಣ ಮಾಡಲು ಈಗ ಬರಿಬ್ಬರಿ 58000 ರೂಪಾಯಿಗಳ ಸಬ್ಸಿಡಿ ಸಿಗುತ್ತಿದೆ.
ಉದ್ಯಮಕ್ಕೆ ಇದು ಬಹಳ ಉತ್ತಮ ಆಯ್ಕೆ :- ಬರೀ ಗದ್ದೆ ಅಥವಾ ತೋಟದಲ್ಲಿ ವ್ಯವಸಾಯ ಮಾಡಿಕೊಂಡಿದ್ದರೆ ಇವತ್ತಿನ ದಿನಗಳಲ್ಲಿ ಆದಾಯ ಕಡಿಮೆ. ಯಾಕೆಂದರೆ ಯಾವುದೇ ರೈತ ವರ್ಗದವರಿಗೆ ಆದಾಯಕ್ಕಿಂತ ಹಾನಿ ಹೆಚ್ಚು ಕೀಟಗಳು ಕೊಳೆ ರೋಗಗಳು ಬೆಳೆಯುವ ಬೆಳೆಗೆ ಕಾಡುವ ತೊಂದರೆಗಳಾಗಿದೆ. ಅಷ್ಟೇ ಅಲ್ಲದೆ ಬೆಳೆದ ಬೆಳೆಗೆ ಉತ್ತಮ ರೀತಿಯ ದರವು ಈಗ ಸಿಗುವುದು ಕಷ್ಟ ಆಗಿರುವುದರಿಂದ ಕೇವಲ ತೋಟಗಾರಿಕೆ ಅಥವಾ ಗದ್ದೆಯಲ್ಲಿ ಬೆಳೆ ಬೆಳೆದರೆ ರೈತರ ಜೀವನ ಕಷ್ಟ ಆಗಬಹುದು. ಅದೇ ಕಾರಣಕ್ಕೆ ರೈತರಿಗೆ ಹೈನುಗಾರಿಕೆ ಅಥವಾ ಪ್ರಾಣಿಗಳ ಸಾಕಾಣಿಕೆ ಉತ್ತಮ ಮಾರ್ಗ ಆಗಿದೆ. ಹೀಗೆ ಉದ್ಯಮ ಮಾಡುವವರಿಗೆ ಸರ್ಕಾರವು ಶೆಡ್ ನಿರ್ಮಾಣಕ್ಕೆ ಎಂದೇ ಸಬ್ಸಿಡಿ ಹಣವನ್ನು ನೀಡಲಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಸಬ್ಸಿಡಿ ಹಣ ಪಡೆಯಲು ಇರುವ ಮಾನದಂಡಗಳು :-
- ಈ ಸಬ್ಸಿಡಿ ಹಣವನ್ನು ಕೇವಲ ಕರ್ನಾಟಕ ರಾಜ್ಯದ ರೈತರು ಮಾತ್ರ ಪಡೆಯಬಹುದಾಗಿದೆ. ಬೇರೆ ರಾಜ್ಯಗಳ ರೈತರಿಗೆ ಇದು ಅನ್ವಯ ಆಗುವುದಿಲ್ಲ.
- ಪ್ರಾಣಿ ಸಾಕಾಣಿಕೆ ಶೆಡ್ ನಿರ್ಮಾಣ ಮಾಡಲು ರೈತರ ಬಳಿ ಕನಿಷ್ಠ 4 ಕುರಿ ಅಥವಾ 4 ಮೇಕೆ ಅಥವಾ 4 ಹಸು ಇರಲೇಬೇಕು.
- ಹೈನುಗಾರಿಕೆ ಮಾಡಲು ಅಥವಾ ಕುರಿ ಹಸು ಹಾಗೂ ಮೇಕೆ ಸಾಕಾಣಿಕೆ ಮಾಡುವ ಸಲುವಾಗಿ ಶೆಡ್ ನಿರ್ಮಾಣಕ್ಕೆ ಅರ್ಜಿ ಸಲ್ಲಿಸಲು ಅರ್ಜಿದಾರರ ಬಳಿ ಶೆಡ್ ನಿರ್ಮಾಣಕ್ಕೆ ಎಂದೇ ಸ್ವಂತ ಜಾಗ ಇರಬೇಕು.
- ಪ್ರಾಣಿ ಸಾಕಾಣಿಕೆ ಶೆಡ್ ನಿರ್ಮಾಣಕ್ಕೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ರೈತರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.
- ನಿರ್ಮಿಸುವ ಶೆಡ್ ಅಳತೆಯು 10 ಅಡಿ ಅಗಲ ಹಾಗೂ 18 ಅಡಿ ಗೋಡೆ ಹಾಗೂ 5 ಅಡಿ ಎತ್ತರದ ಗೋಡೆ ಇರಬೇಕು.
- ಕಡ್ಡಾಯವಾಗಿ ಶೆಡ್ ನಲ್ಲಿ ಮೇವಿನ ತೊಟ್ಟಿ ಇರಬೇಕು. ಹಾಗೂ ಪ್ರಾಣಿಗಳು ನೈಸರ್ಗಿಕ ಉಸಿರಾಟಕ್ಕೆ ಅನುಕೂಲ ಆಗುವಂತೆ ಗಾಳಿ ಮತ್ತು ಹೇಳಿಕೆನ ವ್ಯವಸ್ಥೆ ಇರಬೇಕು.
ಶೆಡ್ ನಿರ್ಮಾಣಕ್ಕೆ ನೀಡಬೇಕಾದ ದಾಖಲೆಗಳು :-
- ಆಧಾರ್ ಕಾರ್ಡ್ ಡೀಟೇಲ್ಸ್.
- ಶೆಡ್ ನಿರ್ಮಾಣ ಮಾಡುವ ಜಾಗದ ಬಗ್ಗೆ ಮಾಹಿತಿ.
- ಬ್ಯಾಂಕ್ ಅಕೌಂಟ್ ಡೀಟೇಲ್ಸ್.
- application.
- ಜಾನುವಾರುಗಳ ಬಗ್ಗೆ ವೈದ್ಯರು ನೀಡಿರುವ ಪ್ರಮಾಣ ಪತ್ರ ಹಾಗೂ ಇತರ ದಾಖಲೆಗಳು
ಹತ್ತಿರದ ಕೇಂದ್ರಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಿ.
ಇದನ್ನೂ ಓದಿ: ಹಿರಿಯ ನಾಗರಿಕರಿಗೆ ಆಯುಷ್ಮಾನ್ ಯೋಜನೆಯಲ್ಲಿ ಸಿಗಲಿದೆ 5 ಲಕ್ಷ ರೂಪಾಯಿ ವರೆಗೆ ಉಚಿತ ಚಿಕಿತ್ಸೆ.
ಇದನ್ನೂ ಓದಿ: ಪೋಸ್ಟ್ ಆಫೀಸ್ ನ ಈ ಯೋಜನೆ ಅಡಿಯಲ್ಲಿ ಮಹಿಳೆಯರು ಭರ್ಜರಿ ಹಣ ಗಳಿಸಬಹುದು.