ಕೇಂದ್ರ ಸರ್ಕಾರದ ಅಟಲ್ ಪಿಂಚಣಿ ಯೋಜನೆಯಲ್ಲಿ ತಿಂಗಳಿಗೆ ₹5000 ವರೆಗೆ ಪಿಂಚಣಿ ಪಡೆಯಬಹುದಾಗಿದೆ. ಈ ಯೋಜನೆಯು 2015 ರಲ್ಲಿ ಕೇಂದ್ರ ಸರಕಾರವು ಆರಂಭ ಮಾಡಿತು. ಇದು ವೃದ್ಧಾಪ್ಯದಲ್ಲಿ ಆರ್ಥಿಕ ಸುರಕ್ಷತೆಯನ್ನು ಒದಗಿಸುವ ಗುರಿಯನ್ನು ಹೊಂದಿದೆ.
ವೃದ್ಯಾಪ್ಯ ಜೀವನಕ್ಕೆ ಭದ್ರತೆ ನೀಡುವ ಯೋಜನೆ :- ಭಾರತ ಸರ್ಕಾರವು ದೇಶದ ಪ್ರತಿಯೊಬ್ಬ ನಾಗರಿಕ ಕಲ್ಯಾಣಕ್ಕಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಅದರಲ್ಲಿ ಅಟಲ್ ಪಿಂಚಣಿ ಯೋಜನೆ ಕೂಡ ಒಂದು. 2015 ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಈ ಯೋಜನೆಯನ್ನು ಪ್ರಾರಂಭಿಸಿದರು. ವೃದ್ಧಾಪ್ಯದಲ್ಲಿ ಆರ್ಥಿಕ ಸುರಕ್ಷತೆಯನ್ನು ಖಾತ್ರಿಪಡಿಸುವ ಈ ಯೋಜನೆ, ಕಡಿಮೆ ಹೂಡಿಕೆಯಲ್ಲಿ ಹೆಚ್ಚಿನ ಲಾಭವನ್ನು ನೀಡುತ್ತದೆ.
ಕೂಲಿ ಕಾರ್ಮಿಕರಿಗೆ ಉತ್ತಮ ಅವಕಾಶ :- ದಿನಗೂಲಿ ಕಾರ್ಮಿಕರು, ಸ್ವಯಂ ಉದ್ಯೋಗಿಗಳೇ, ನಿಮ್ಮ ಭವಿಷ್ಯವನ್ನು ಸುರಕ್ಷಿತವಾಗಿಸಲು ಇದೊಂದು ಅದ್ಭುತ ಅವಕಾಶ ಆಗಿದೆ. ಯಾಕೆಂದರೆ ಈ ಯೋಜನೆ ದಿನಗೂಲಿ ಕಾರ್ಮಿಕರು, ಸ್ವಯಂ ಉದ್ಯೋಗಿಗಳು ಮತ್ತು ಸಣ್ಣ ವ್ಯಾಪಾರಿಗಳಿಗೆ ಪಿಂಚಣಿ ಕೊಡುಗೆ ಸಿಗುತ್ತದೆ. 60 ವರ್ಷ ತುಂಬಿದ ಮೇಲೆ ಈ ಯೋಜನೆಯಲ್ಲಿ ಭಾಗವಹಿಸಿದವರಿಗೆ ಪಿಂಚಣಿ ಸಿಗುತ್ತದೆ. ಇದು ಮುಖ್ಯವಾಗಿ ಕೇಂದ್ರ ಸರ್ಕಾರವು ಅಸಂಘಟಿತ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ, ವಿಶೇಷವಾಗಿ ಕೃಷಿ ಕಾರ್ಮಿಕರಿಗೆ ವೃದ್ಧಾಪ್ಯದಲ್ಲಿ ಆರ್ಥಿಕ ಸಹಾಯ ಮಾಡಲು ಒಂದು ಯೋಜನೆ ಪ್ರಾರಂಭವಾಗಿದೆ.
ಮಾಸಿಕ ಪಿಂಚಣಿ ಏಷ್ಟು?
ನಿವೃತ್ತಿಯ ನಂತರ ನಿಮಗೆ ಮಾಸಿಕ ಪಿಂಚಣಿ ಸಿಗುತ್ತದೆ. ನಿಮ್ಮ ಹೂಡಿಕೆಯ ಆಧಾರದ ಮೇಲೆ ಪಿಂಚಣಿ ಲಭ್ಯ ಇದೆ. ಈ ಯೋಜನೆಯಲ್ಲಿ ಸ್ವಲ್ಪ ಹಣ ಹೂಡಿಕೆ ಮಾಡಿದರೆ, ನಿವೃತ್ತಿಯ ನಂತರ ಪ್ರತಿ ತಿಂಗಳು ನಿಮಗೆ ನಿಗದಿತ ಮೊತ್ತದ ಪಿಂಚಣಿ ಸಿಗುತ್ತದೆ. ನೀವು ತಿಂಗಳಿಗೆ ₹1000, ₹2000, ₹3000, ₹4000 ಅಥವಾ ₹5000 ಪಿಂಚಣಿ ಆಯ್ಕೆ ಮಾಡಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಯಾವ ವಯಸ್ಸಿಗೇ ಸೇರಿದ ವ್ಯಕ್ತಿಗಳು ಹೂಡಿಕೆ ಮಾಡಬಹುದು?: 18 ರಿಂದ 40 ವರ್ಷದೊಳಗಿನ ಯಾರು ಬೇಕಾದರೂ ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು.
ಹೂಡಿಕೆಯ ಲೆಕ್ಕಾಚಾರ ಹೀಗಿದೆ :- ನೀವು 18 ವರ್ಷದ ಈ ಯೋಜನೆಯಲ್ಲಿ ಭಾಗವಹಿಸಿದರೆ ತಿಂಗಳಿಗೆ ಕೇವಲ 42 ರೂಪಾಯಿ ನಿಂದ 210 ರೂಪಾಯಿ ಹೂಡಿಕೆ ಮಾಡಿದರೆ ಸಾಕು. ಆದರೆ ನೀವು 40 ವರ್ಷಕ್ಕೆ ತಿಂಗಳಿಗೆ 1454 ರೂಪಾಯಿ ಕೊಡಬೇಕು. ಆದರೆ ಯಾವುದೇ ಸಂದರ್ಭದಲ್ಲಿ 60 ವರ್ಷ ತುಂಬಿದ ಮೇಲೆ ನೀವು ಗರಿಷ್ಠ 5000 ರೂಪಾಯಿ ಪಿಂಚಣಿ ಪಡೆಯಬಹುದು.
ನೀವು ತಿಂಗಳಿಗೆ ಕೊಡುವ ಹಣವನ್ನು ನೀವೇ ನಿರ್ಧರಿಸಬಹುದು. ಕಡಿಮೆ ಹಣ ಕೊಟ್ಟರೆ ಕಡಿಮೆ ಪಿಂಚಣಿ ಮತ್ತು ಹೆಚ್ಚು ಹಣ ಕೊಟ್ಟರೆ ಹೆಚ್ಚು ಪಿಂಚಣಿ ಸಿಗುತ್ತದೆ. ನೀವು ಕೊಡುವ ಹಣ 291 ರಿಂದ 1454 ರೂಪಾಯಿ ವರೆಗೆ ಇರಬಹುದು.
ಇದನ್ನೂ ಓದಿ: ನಿಮ್ಮ FD ಮೇಲೆ ಅತಿ ಹೆಚ್ಚು ಬಡ್ಡಿ ನೀಡುವ ಬ್ಯಾಂಕ್ ಗಳು!
ಈ ಯೋಜನೆಯ ಮುಖ್ಯ ಲಾಭಗಳು ಹೀಗಿವೆ:
- ನಿಶ್ಚಿತ ಮಾಸಿಕ ಪಿಂಚಣಿ: ಈ ಯೋಜನೆಯಲ್ಲಿ ನೀವು ಒಮ್ಮೆ ಸೇರಿದ್ದರೆ, ನಿವೃತ್ತಿಯ ನಂತರ ಪ್ರತಿ ತಿಂಗಳು ನಿಮಗೆ ನಿಗದಿತ ಮೊತ್ತದ ಪಿಂಚಣಿ ಸಿಗುತ್ತದೆ.
- ಕಡಿಮೆ ಹೂಡಿಕೆ: ಈ ಯೋಜನೆಯಲ್ಲಿ ಸಣ್ಣ ಮೊತ್ತವನ್ನು ಹೂಡಿಕೆ ಮಾಡುವ ಮೂಲಕ ನೀವು ಭವಿಷ್ಯದಲ್ಲಿ ಉತ್ತಮ ಲಾಭ ಪಡೆಯಬಹುದು.
- ಸರ್ಕಾರದ ಖಾತರಿ: ಈ ಯೋಜನೆ ಭಾರತ ಸರ್ಕಾರವು ಬೆಂಬಲಿಸುತ್ತದೆ. ಇಲ್ಲದಿದ್ದರೆ ನಿಮ್ಮ ಹಣ ಸುರಕ್ಷಿತವಾಗಿದೆ.
ಇದನ್ನೂ ಓದಿ: ಕೇಂದ್ರದಿಂದ ಪಿಂಚಣಿದಾರರಿಗೆ ಗುಡ್ ನ್ಯೂಸ್! ಇಲ್ಲಿದೆ ಸಂಪೂರ್ಣ ಮಾಹಿತಿ