ಜಿಯೋ ತನ್ನ ಸ್ಪರ್ಧಿಗಳಿಗೆ ಟಕ್ಕರ್ ನೀಡುವ ಹೊಸ ಅಗ್ಗದ ರೀಚಾರ್ಜ್ ಯೋಜನೆ ಪರಿಚಯಿಸಿದೆ. ಈ ಯೋಜನೆಯಲ್ಲಿ ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ 336 ದಿನಗಳ ಮಾನ್ಯತೆ ಸಿಗುತ್ತದೆ. ನೀವು ಕಡಿಮೆ ಬೆಲೆಯಲ್ಲಿ ಹೆಚ್ಚು ದಿನಗಳ ಮಾನ್ಯತೆ ಹೊಂದಿರುವ ಈ ರೀಚಾರ್ಜ್ ಪ್ಲಾನ್ ಬಗ್ಗೆ ಮಾಹಿತಿ ಇಲ್ಲಿದೆ.
ಜಿಯೋದ ರೀಚಾರ್ಜ್ ದರ ಗ್ರಾಹಕರ ಆಕ್ರೋಶಕ್ಕೆ ಕಾರಣ: ರಿಲಯನ್ಸ್ ಜಿಯೋ ತನ್ನ ರೀಚಾರ್ಜ್ ದರಗಳನ್ನು 25% ಹೆಚ್ಚಿಸಿದ ನಿರ್ಧಾರವು ದೇಶಾದ್ಯಂತ ಕೋಟ್ಯಂತರ ಜಿಯೋ ಗ್ರಾಹಕರು ಆಕ್ರೋಶಕ್ಕೆ ಕಾರಣವಾಗಿದೆ. ಈ ಹಠಾತ್ ಬೆಲೆ ಏರಿಕೆಯಿಂದಾಗಿ, ಗ್ರಾಹಕರು ಇತರ ಟೆಲಿಕಾಂ ಕಂಪನಿಗಳು ಬೇರೆ ಕಂಪನಿಗಳತ್ತ ಮುಖ ಮಾಡುತ್ತಿವೆ. ಆದೆ ಕಾರಣಕ್ಕೆ ಈಗ ತನ್ನ ಗ್ರಾಹಕರನ್ನು ಸೆಳೆಯುವ ನಿಟ್ಟಿನಲ್ಲಿ ಜಿಯೋದ ಹೊಸ ಯೋಜನೆಯು ನಿಮ್ಮ ಉತ್ತಮ ಉಳಿತಾಯವನ್ನು ನೀಡುತ್ತದೆ. ಕಡಿಮೆ ಬೆಲೆಯಲ್ಲಿ 11 ತಿಂಗಳವರೆಗೆ ಮಾನ್ಯತೆ ಇರುವ ಈ ಯೋಜನೆಯು ಗ್ರಾಹಕರಿಗೆ ಹೆಚ್ಚು ಆಕರ್ಷಕವಾಗಿದೆ.
ದೀರ್ಘಾವಧಿಯ ವ್ಯಾಲಿಡಿಟಿಯಲ್ಲಿ ಅಗ್ಗದ ರೀಚಾರ್ಜ್:-
ನೀವು ಜಿಯೋ ಸಿಮ್ ಬಳಕೆದಾರರಾಗಿದ್ದರೆ ಮತ್ತು ದೀರ್ಘಾವಧಿಯ ಮಾನ್ಯತೆಯೊಂದಿಗೆ ಅಗ್ಗದ ರೀಚಾರ್ಜ್ ಯೋಜನೆ ಹುಡುಕುತ್ತಿದ್ದರೆ ನೀವು ಈ ಪ್ಲಾನ್ ರೀಚಾರ್ಜ್ ಮಾಡಿಸಬಹುದು. ರೀಚಾರ್ಜ್ನಲ್ಲಿ ನೀವು 11 ತಿಂಗಳವರೆಗೆ ಟೆನ್ಷನ್ ಫ್ರೀ ಆಗಿರಬಹುದು. ಯಾವುದೇ ನೆಟ್ವರ್ಕ್ಗೆ ಅನಿಯಮಿತ ಕರೆಗಳು ಹಾಗೂ ಇಂಟರ್ನೆಟ್ ಬಳಕೆ ಸಿಗುತ್ತದೆ. ಇದರ ಬೆಲೆ ಕೇವಲ 1899 ರೂಪಾಯಿ ಆಗಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಪ್ಲಾನ್ ವಿಶೇಷತೆಗಳು :-
ಈ ಜಿಯೋ ಯೋಜನೆಯಲ್ಲಿ, ನೀವು 336 ದಿನಗಳು ಎಲ್ಲಾ ನೆಟ್ವರ್ಕ್ಗಳಿಗೆ ಅನಿಯಮಿತವಾಗಿ ಉಚಿತ ಕರೆ ಮಾಡಬಹುದು ಮತ್ತು 3600 ಕ್ಕೂ ಹೆಚ್ಚು ಮೆಸೇಜ್ಗಳನ್ನು ಉಚಿತವಾಗಿ ಕಳುಹಿಸಬಹುದು. ಈ ಯೋಜನೆಯಲ್ಲಿ ನೀವು ಒಟ್ಟು 24GB ಇಂಟರ್ನೆಟ್ ಪಡೆಯುತ್ತಿರಿ. ಇದು ಸುಮಾರು ಒಂದು ವರ್ಷಕ್ಕೆ ಮಾನ್ಯವಾಗಿದೆ. ಒಂದು ವೇಳೆ ನೀವು ಪ್ರತಿ ತಿಂಗಳು 2GB ಗಿಂತ ಕಡಿಮೆ ಇಂಟರ್ನೆಟ್ ಬಳಸುತ್ತಿದ್ದರೆ, ಈ ಯೋಜನೆ ನಿಮಗೆ ಸೂಕ್ತವಾಗಿರಬಹುದು. ಇನ್ನೊಂದು ವಿಶೇಷತೆ ಎಂದರೆ ಈ ಜಿಯೋ ಯೋಜನೆಗೆ ತಿಂಗಳಿಗೆ ಕೇವಲ 172 ರೂಪಾಯಿ ಮಾತ್ರ ರೀಚಾರ್ಜ್ ಮಾಡಿದ ಹಾಗೆ ಆಗುತ್ತದೆ. ಹೀಗಾಗಿ, ಅನೇಕ ಜನರಿಗೆ ಈ ಯೋಜನೆ ತುಂಬಾ ಲಾಭದಾಯಕವಾಗಿದೆ. ಈ ಯೋಜನೆಯಲ್ಲಿ ನೀವು ಜಿಯೋ ಟಿವಿ ಮತ್ತು ಜಿಯೋ ಸಿನಿಮಾವನ್ನು ಉಚಿತವಾಗಿ ವೀಕ್ಷಿಸಬಹುದು.
ಇದನ್ನೂ ಓದಿ: Jio Bharat 5G: ಕೇವಲ 5999 ರೂಪಾಯಿ ಗೆ ಜಿಯೋ 5G ಸ್ಮಾರ್ಟ್ ಫೋನ್ ಶೀಘ್ರದಲ್ಲೇ ಬಿಡುಗಡೆ!
ಉತ್ತಮ ನೆಟ್ವರ್ಕ್ ನೀಡುವ ಜಿಯೋ:-
ಜಿಯೋ ಭಾರತದಲ್ಲಿನ ಪ್ರಮುಖ ದೂರಸಂಪರ್ಕ ಕಂಪನಿಗಳಲ್ಲಿ ಒಂದಾಗಿದ್ದು, ತನ್ನ ವ್ಯಾಪಕವಾದ ನೆಟ್ವರ್ಕ್ ಕವರೇಜ್ ಮತ್ತು ಆಕರ್ಷಕ ಯೋಜನೆಗಳಿಗೆ ಹೆಸರುವಾಸಿಯಾಗಿದೆ. “ಎಲ್ಲೆಡೆ ಉತ್ತಮ ನೆಟ್ವರ್ಕ್” ಎಂಬ ಅವರ ಹೇಳಿಕೆಯು ಅವರ ನೆಟ್ವರ್ಕ್ನ ಗುಣಮಟ್ಟ ಮತ್ತು ವಿಸ್ತಾರವನ್ನು ಒತ್ತಿಹೇಳುತ್ತದೆ. ಜಿಯೋ ತನ್ನ ನೆಟ್ವರ್ಕ್ ಅನ್ನು ದೇಶದ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ವಿಸ್ತರಿಸಿದೆ. ಇದರರ್ಥ ನೀವು ದೇಶದ ಯಾವುದೇ ಮೂಲೆಯಲ್ಲಿದ್ದರೂ ಸಹ ಜಿಯೋ ನೆಟ್ವರ್ಕ್ ಅನ್ನು ಪ್ರವೇಶಿಸಬಹುದು. ಜಿಯೋ 4G ಮತ್ತು 5G ನೆಟ್ವರ್ಕ್ಗಳನ್ನು ಹೊಂದಿದೆ, ಇದು ಹೆಚ್ಚಿನ ವೇಗದ ಇಂಟರ್ನೆಟ್ ಬ್ರೌಸಿಂಗ್, ವೀಡಿಯೋ ಸ್ಟ್ರೀಮಿಂಗ್ ಮತ್ತು ಡೇಟಾ-ಸಂಬಂಧಿತ ಕಾರ್ಯಗಳನ್ನು ಹೊಂದಿದೆ. ಜಿಯೋ ತನ್ನ ನೆಟ್ವರ್ಕ್ ಅನ್ನು ನಿರ್ಮಿಸಲು ಇತ್ತೀಚಿನ ತಂತ್ರಜ್ಞಾನಗಳನ್ನು ಬಳಸುತ್ತದೆ, ಇದು ವಿಶ್ವಾಸಾರ್ಹ ಮತ್ತು ದಕ್ಷ ಸೇವೆಯನ್ನು ಖಚಿತಪಡಿಸುತ್ತದೆ.
ಇದನ್ನೂ ಓದಿ: BSNL 5G: ಬಳಕೆದಾರರಿಗೆ ಗುಡ್ ನ್ಯೂಸ್, 5G ಸೇವೆಗಳು ಪ್ರಾರಂಭವಾಗಲಿವೆ.