ಟೆಲಿಕಾಂ ನಿಯಂತ್ರಣ ಸಂಸ್ಥೆ ಟ್ರಾಯ್ ಹೊಸ ನಿಯಮ ಜಾರಿಗೆ ತರುತ್ತಿದೆ, ಸೆಪ್ಟೆಂಬರ್ 1 ರಿಂದ ಟೆಲಿಕಾಂ ಕ್ಷೇತ್ರದಲ್ಲಿ ಗಮನಾರ್ಹ ಬದಲಾವಣೆಗಳು ಕಂಡುಬಂದಿವೆ. ಈ ನಿಯಮದ ಪ್ರಕಾರ, ಫ್ರಾಡ್ ಕರೆಗಳನ್ನು ತಡೆಯಲು ಕ್ರಮ ಕೈಗೊಳ್ಳಬೇಕು. ಗ್ರಾಹಕರು ಫ್ರಾಡ್ ಕರೆಗಳ ಕುರಿತು ದೂರು ನೀಡಿದರೆ, ಟೆಲಿಕಾಂ ಕಂಪನಿಗಳು ಇದಕ್ಕೆ ಹೊಣೆಯಾಗುತ್ತವೆ. ನಿಯಮ ಉಲ್ಲಂಘಿಸಿದರೆ ಸಿಮ್ ಕಾರ್ಡ್ ಬ್ಲಾಕ್ ಆಗುವ ಸಾಧ್ಯತೆಯಿದೆ. ಏನಿದು ಹೊಸ ನಿಯಮ ಎಂಬ ಬಗ್ಗೆ ಪೂರ್ಣ ಮಾಹಿತಿ ಇಲ್ಲಿದೆ.
ಫ್ರಾಡ್ ಕರೆಯನ್ನು ತಡೆಯಲು ಈ ನಿಯಮ :- ಸೆಪ್ಟೆಂಬರ್ 1 ರಿಂದ ಮೊಬೈಲ್ ನಿಯಮಗಳು ಬದಲಾಗುತ್ತಿವೆ. ಟ್ರಾಯ್ ಹೊಸ ನಿಯಮ ಮಾಡಿದ್ದು, ಫ್ರಾಡ್ ಕರೆಗಳನ್ನು ತಡೆಯಲು ಕ್ರಮ ಕೈಗೊಳ್ಳಲಾಗುತ್ತಿದೆ. ಟೆಲಿಕಾಂ ನಿಯಂತ್ರಣ ಸಂಸ್ಥೆ ಟ್ರಾಯ್ ಹೊಸ ನಿಯಮ ಜಾರಿಗೆ ಈ ಹೊಸ ನಿಯಮವನ್ನು ಜಾರಿಗೆ ತರುತ್ತಿದೆ. ಗ್ರಾಹಕರು ಫ್ರಾಡ್ ಕರೆಗಳ ಕುರಿತು ದೂರು ನೀಡಿದರೆ, ಟೆಲಿಕಾಂ ಕಂಪನಿಗಳು ಇದಕ್ಕೆ ಹೊಣೆಯಾಗುತ್ತವೆ. ನಿಯಮ ಉಲ್ಲಂಘಿಸಿದರೆ ಸಿಮ್ ಕಾರ್ಡ್ ಬ್ಲಾಕ್ ಆಗುವ ಸಾಧ್ಯತೆಯಿದೆ.
ನಿಯಮದ ಪ್ರಮುಖ ಅಂಶಗಳು ಹೀಗಿವೆ :-
- ಅನಗತ್ಯ ಕರೆಗಳು ನಿಷೇಧ: ಗ್ರಾಹಕರಿಗೆ ಅನಗತ್ಯ ಕರೆಗಳು, ಫೇಕ್ ಕರೆಗಳು, ಜಾಹೀರಾತು ಕರೆಗಳು ನಿಷೇಧ ಕಾಯ್ದೆ ಜಾರಿಗೆ ಬಂದಿದೆ.
- ಟೆಲಿಕಾಂ ಕಂಪನಿಗಳ ಜವಾಬ್ದಾರಿ: ಟೆಲಿಕಾಂ ಕಂಪನಿಗಳು ನಕಲಿ ಕರೆಗಳನ್ನು ತಡೆಯಲು ಕ್ರಮ ಕೈಗೊಳ್ಳಬೇಕು.
- ಕೃತಕ ಬುದ್ಧಿಮತ್ತೆಯ ಬಳಕೆ: ಟ್ರಾಯ್ ಕೃತಕ ಬುದ್ಧಿಮತ್ತೆಯ ನಕಲಿ ಕರೆಗಳನ್ನು ಪತ್ತೆ ಹಚ್ಚಿ ತಡೆಯಲು ಸೂಚಿಸಲಾಗಿದೆ.
- ಶಿಕ್ಷೆ: ನಿಯಮವನ್ನು ಉಲ್ಲಂಘಿಸಿದರೆ ಟೆಲಿಕಾಂ ಕಂಪನಿಗಳು ಮತ್ತು ನಕಲಿ ಕರೆ ಮಾಡಿದವರಿಗೆ ಶಿಕ್ಷೆಯಾಗುವ ಸಾಧ್ಯತೆಯಿದೆ.
ಗ್ರಾಹಕರಿಗೆ ಕಿರಿಕಿರಿ ಉಂಟಾಗುತ್ತಿದೆ :- ಹೊಸ ತಂತ್ರಜ್ಞಾನದ ಬಳಕೆಯಿಂದಾಗಿ ನಕಲಿ ಕರೆಗಳ ಸಮಸ್ಯೆಯಿದೆ. ಕೆಲವು ಕಂಪನಿಗಳು ವೈಯಕ್ತಿಕ ಮತ್ತು ಖಾಸಗಿ ಫೋನ್ ಸಂಖ್ಯೆಗಳನ್ನು ಬಳಕೆದಾರರಿಗೆ ಕಿರುಕುಳ ಮಾಡಲಾಗುತ್ತಿದೆ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ಟ್ರಾಯ್, ನಕಲಿ ಕರೆಗಳನ್ನು ತಡೆಯಲು ಹಲವಾರು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಇದರಲ್ಲಿ ನಕಲಿ ಕರೆಗಳನ್ನು ಗುರುತಿಸುವುದು, ತಡೆಯುವುದು ಮತ್ತು ನಕಲಿ ಕರೆ ಮಾಡುವವರಿಗೆ ಶಿಕ್ಷೆ ವಿಧಿಸುವುದು ಸೇರಿದೆ. ನಕಲಿ ಕರೆ ಮಾಡುವ ಫೋನ್ ಸಂಖ್ಯೆಗಳನ್ನು 2 ವರ್ಷಗಳ ಕಾಲ ಬ್ಲಾಕ್‌ಲಿಸ್ಟ್‌ಗೆ ಸೇರಿಸುವುದು ಎಂದು ನಿಯಮ ಹೇಳುತ್ತಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: SIM ಕಾರ್ಡ್ ಇಲ್ಲದೆ BSNL 4G ಸಿಗ್ನಲ್ ಸಾಮರ್ಥ್ಯವನ್ನು ಪರಿಶೀಲಿಸುವುದು ಹೇಗೆ ಎಂದು ತಿಳಿಯಿರಿ.
ನಿಯಮ ಉಲ್ಲಂಘಿಸಿದರೆ ಶಿಕ್ಷೆ :-
ಸ್ಪ್ಯಾಮ್ ಕರೆಗಳು ಮತ್ತು ನಕಲಿ ಕರೆಗಳ ಸಮಸ್ಯೆ ಹೆಚ್ಚಾಗುತ್ತಿದೆ. ಇದರಿಂದ ಗ್ರಾಹಕರು ಕಿರಿಕಿರಿ ಅನುಭವಿಸುತ್ತಿದ್ದಾರೆ ಮತ್ತು ಮೋಸ ಹೋಗುತ್ತಿದ್ದಾರೆ. ಈ ಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿರುವ ಟ್ರಾಯ್, ಸೆಪ್ಟೆಂಬರ್ 1 ರಿಂದ ಜಾರಿಗೆ ಬರುವಂತೆ ಹೊಸ ನಿಯಮಗಳನ್ನು ರೂಪಿಸಲಾಗಿದೆ. ಈ ನಿಯಮಗಳ ಪ್ರಕಾರ, ಸ್ಪ್ಯಾಮ್ ಕರೆಗಳನ್ನು ತಡೆಯಲು ಕ್ರಮ ತೆಗೆದುಕೊಳ್ಳಬೇಕು ಮತ್ತು ನಿಯಮವನ್ನು ಉಲ್ಲಂಘಿಸಿದರೆ ಶಿಕ್ಷೆ ವಿಧಿಸಲಾಗುತ್ತದೆ.
ನಿಯಮದ ಜಾರಿಗೆ ಕಾರಣಗಳು :-
- ಇತ್ತೀಚೆಗೆ ನಮಗೆ ಅನಗತ್ಯ ಕರೆಗಳು ಬರುತ್ತಲೇ ಇವೆ. ಕಂಪನಿಗಳು ಪ್ರಚಾರಕ್ಕೆ ಕರೆ ಮಾಡುತ್ತಿವೆ. ಇದರಿಂದ ಗ್ರಾಹಕರಿಗೆ ಅನಗತ್ಯ ಕಿರಿ ಕಿರಿ ಉಂಟಾಗುತ್ತಿದೆ.
- ಹಲವಾರು ಜನರು ಗ್ರಾಹಕರ ಮರಳು ಮಾಡಿ ಅನೇಕ ರೀತಿಯ ಸುಳ್ಳು ಯೋಜನಗಳ ಬಗ್ಗೆ ಹೇಳಿ ಅವರಿಂದ ಲಕ್ಷಾಂತರ ರೂಪಾಯಿ ದೋಚಿರುವ ಪ್ರಕರಣಗಳು ಬೆಳಕಿಗೆ ಬಂದಿದ್ದು ಇದರಿಂದ ಗ್ರಾಹಕರ ಹಿತಾಸಕ್ತಿಯನ್ನು ಗಮನದಲ್ಲಿ ಇಟ್ಟುಕೊಂಡು ಈ ಯೋಜನೆ ಜಾರಿಗೆ ತರಲಾಗಿದೆ.
ಇದನ್ನೂ ಓದಿ: BSNL ನ ಕಡಿಮೆ ಬೆಲೆಯ ಈ ಪ್ಲಾನ್ 70 ದಿನಗಳವರೆಗೆ ಮಾನ್ಯವಾಗಿರುತ್ತದೆ. ಉಚಿತ Unlimited ಕರೆ ಮತ್ತು ಡೇಟಾ ಸೀಗುತ್ತದೆ.