ನೀವು ಒಂದಕ್ಕಿಂತ ಹೆಚ್ಚು ಮೊಬೈಲ್ ಸಂಖ್ಯೆಯನ್ನು ಹೊಂದಿದ್ದರೆ ಆಧಾರ್ಗೆ ಯಾವ ಸಂಖ್ಯೆಯು ಲಿಂಕ್ ಆಗಿದೆ ಎಂಬುದನ್ನು ಮರೆತುಹೋಗುವುದು ಸಾಮಾನ್ಯ. ಆದರೆ, UIDAI ವೆಬ್ಸೈಟ್ಗೆ ಭೇಟಿ ನೀಡುವ ಮೂಲಕ ನೀವು ಸುಲಭವಾಗಿ ಈ ಮಾಹಿತಿಯನ್ನು ಪಡೆಯಬಹುದು.
ವೆಬ್ಸೈಟ್ ಬಳಸಿ ಸುಲಭವಾಗಿ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ ಕಂಡು ಹಿಡಿಯಬಹುದು:- ಒಂದಕ್ಕಿಂತ ಹೆಚ್ಚು ಸಿಮ್ ಕಾರ್ಡ್ಗಳನ್ನು ಹೊಂದಿರುವ ಜನರು ಆಧಾರ್ಗೆ ಯಾವ ಸಂಖ್ಯೆಯ ಲಿಂಕ್ ಆಗಿದೆ ಎಂಬುದನ್ನು ಮರೆತುಹೋಗುವುದು ಸಾಮಾನ್ಯ. ಆದರೆ, UIDAI ವೆಬ್ಸೈಟ್ಗೆ ಭೇಟಿ ನೀಡುವ ಮೂಲಕ ನೀವು ಸುಲಭವಾಗಿ ಈ ಮಾಹಿತಿಯನ್ನು ಪಡೆಯಬಹುದು.
ಯುಐಡಿಎಐ ವೆಬ್ಸೈಟ್ ನಲ್ಲಿ ಆಧಾರ್ ಕಾರ್ಡ್ ಗೆ ಯಾವ ಮೊಬೈಲ್ ಸಂಖ್ಯೆ ಲಿಂಕ್ ಆಗಿದೆ ಎಂದು ಹೀಗೆ ಕಂಡುಹಿಡಿಯಿರಿ :-
- ಹಂತ 1. UIDAI ವೆಬ್ಸೈಟ್ಗೆ ಹೋಗಿ.
- ಹಂತ 2. ‘ನನ್ನ ಆಧಾರ್’ ಆಯ್ಕೆಯನ್ನು ಕ್ಲಿಕ್ ಮಾಡಿ.
- ಹಂತ 3. ‘ಪರಿಶೀಲಿಸಿ ಇಮೇಲ್/ಮೊಬೈಲ್ ಸಂಖ್ಯೆ’ ಆಯ್ಕೆಯನ್ನು ಕ್ಲಿಕ್ ಮಾಡಿ.
- ಹಂತ 4. ನಿಮ್ಮ ಆಧಾರ್ ಸಂಖ್ಯೆ ಮತ್ತು ಕ್ಯಾಪ್ಚಾ ಕೋಡ್ ನಮೂದಿಸಿ.
- ಹಂತ 5. ‘ಸಲ್ಲಿಸು’ ಬಟನ್ ಕ್ಲಿಕ್ ಮಾಡಿ. ಆಧಾರ್ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ ನಿಮಗೆ ಕಾಣಿಸುತ್ತದೆ.
ನಿಮಗೆ ಯಾವ ಮೊಬೈಲ್ ನಂಬರ್ ಆಧಾರ್ಗೆ ಲಿಂಕ್ ಆಗಿದೆ ಅಂತ ತಿಳಿಯಬೇಕು ಅಂದ್ರೆ, ಒಂದೊಂದಾಗಿ ನಂಬರ್ಗಳನ್ನು ಹಾಕಿ ನೋಡಿ. ಆಧಾರ್ಗೆ ಲಿಂಕ್ ಆಗಿರುವ ನಂಬರ್ ಹಾಕಿದ್ರೆ, ತಕ್ಷಣ ರಿಸಲ್ಟ್ ಬರುತ್ತೆ. ನೀವು ಯಾವ ನಂಬರ್ ಹಾಕಿದರು ಮೊಬೈಲ್ ಸಂಖ್ಯೆ ಲಿಂಕ್ ಆಗಿರುವ ಮಾಹಿತಿ ಬಾರದೆ ಇದ್ದರೆ ನಿಮ್ಮ ಆಧಾರ್ ಕಾರ್ಡ್ ಗೆ ಯಾವುದೇ ನಂಬರ್ ಲಿಂಕ್ ಆಗಿಲ್ಲ ಎಂಬುದು ನೀವು ತಿಳಿಯಬೇಕು. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: BSNL ಸಿಮ್ ಕಾರ್ಡ್ಗಳಿಗೆ ಬೇಡಿಕೆ ಹೆಚ್ಚುತ್ತಿದೆ, ಗ್ರಾಹಕರಿಗೆ ಅನುಕೂಲಕ್ಕಾಗಿ ಮನೆಗೆ ಡೆಲಿವರಿ ಸೇವೆ ಒದಗಿಸಲಾಗುತ್ತಿದೆ.
ಆಧಾರ್ಗೆ ಮೊಬೈಲ್ ನಂಬರ್ ಲಿಂಕ್ ಮಾಡುವುದರಿಂದ ಆಗುವ ಪ್ರಯೋಜನಗಳು:
- ಸುರಕ್ಷತೆ: ಆಧಾರ್ಗೆ ಮೊಬೈಲ್ ನಂಬರ್ ಲಿಂಕ್ ಆಗಿದ್ದರೆ ನಿಮ್ಮ ಆಧಾರ್ ಕಾರ್ಡ್ ಇನ್ನಷ್ಟು ಸುರಕ್ಷಿತವಾಗಿದೆ ಎಂದರ್ಥ ಮಾಡಿಕೊಳ್ಳಿ. ಏಕೆಂದರೆ ನಿಮ್ಮ ಆಧಾರ್ಗೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ಬದಲಾಯಿಸಲು ಅಥವಾ ಪರಿಶೀಲಿಸಲು OTP (ಆನ್ಟೈಮ್ ಪಾಸ್ವರ್ಡ್) ನಿಮ್ಮ ಮೊಬೈಲ್ಗೆ ಬರುತ್ತದೆ.
- ಸುಲಭ ಪ್ರವೇಶ: ಆಧಾರ್ಗೆ ಸಂಬಂಧಿಸಿದ ಎಲ್ಲಾ ಸೇವೆಗಳನ್ನು ನೀವು ನಿಮ್ಮ ಮೊಬೈಲ್ ಮೂಲಕ ಪಡೆಯಬಹುದು.
- ಸರ್ಕಾರಿ ಯೋಜನೆಗಳ ಪ್ರಯೋಜನ: ಸರ್ಕಾರಿ ಯೋಜನೆಗಳನ್ನು ಪಡೆಯಲು ಆಧಾರ್ ಕಾರ್ಡ್ ಅನ್ನು ಕಡ್ಡಾಯಗೊಳಿಸಲಾಗಿದೆ. ಆದ್ದರಿಂದ ಆಧಾರ್ಗೆ ಮೊಬೈಲ್ ನಂಬರ್ ಲಿಂಕ್ ಮಾಡುವುದರಿಂದ ನೀವು ಸುಲಭವಾಗಿ ಈ ಯೋಜನೆಗಳನ್ನು ಪಡೆಯಬಹುದು.
- ಬ್ಯಾಂಕ್ ಖಾತೆ ಲಿಂಕ್: ಆಧಾರ್ ಬ್ಯಾಂಕ್ ಖಾತೆಗೆ ಲಿಂಕ್ ಮಾಡುವುದು ಕಡ್ಡಾಯವಾಗಿದೆ. ಆದ್ದರಿಂದ, ಆಧಾರ್ಗೆ ಮೊಬೈಲ್ ನಂಬರ್ ಲಿಂಕ್ ಮಾಡುವುದು ಬಹಳ ಮುಖ್ಯ.
- ಇತರೆ ಸೇವೆಗಳು: ಪ್ಯಾನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್ ಇತ್ಯಾದಿಗಳನ್ನು ಆಧಾರ್ಗೆ ಲಿಂಕ್ ಮಾಡಬಹುದು.
ಆಧಾರ್ಗೆ ಮೊಬೈಲ್ ನಂಬರ್ ಲಿಂಕ್ ಮಾಡುವುದು ಹೇಗೆ?
- ಆನ್ಲೈನ್: UIDAI ವೆಬ್ಸೈಟ್ಗೆ ಭೇಟಿ ನೀಡಿ ಮತ್ತು ಅಲ್ಲಿ ನೀಡಲಾದ ಸೂಚನೆಗಳನ್ನು ಅನುಸರಿಸಿ.
- ಆಫ್ಲೈನ್: ನಿಮಗೆ ಹತ್ತಿರದ ಆಧಾರ್ ಸೇವಾ ಕೇಂದ್ರಕ್ಕೆ ಭೇಟಿ ನೀಡಿ ಮತ್ತು ಅಲ್ಲಿನ ಅಧಿಕಾರಿಗಳ ಮೂಲಕ ಮೊಬೈಲ್ ನಂಬರ್ ಅನ್ನು ಲಿಂಕ್ ಮಾಡಿ.
ಇದನ್ನೂ ಓದಿ: ನಿಮ್ಮ ಹೂಡಿಕೆಯ ಹಣ ಡಬಲ್ ಆಗಬೇಕು ಎಂದರೆ ನೀವು ಪೋಸ್ಟ್ ಆಫೀಸ್ ನಾ ಈ ಯೋಜನೆಯಲ್ಲಿ ಹೂಡಿಕೆ ಮಾಡಲೇಬೇಕು.