ವಿದ್ಯಾಸಿರಿ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನಿಸಲಾಗಿದೆ.

ವಿದ್ಯಾರ್ಥಿ ಜೀವನದಲ್ಲಿ ವಿದ್ಯಾರ್ಥಿ ವೇತನವೂ ಬಹಳ ಮುಖ್ಯ ಆಗುತ್ತದೆ. ವಿದ್ಯಾರ್ಥಿ ವೇತನದಿಂದ ಮಾಧ್ಯಮ ಮತ್ತು ಕಡು ಬಡವರಿಗೆ ಬಹಳ ಉಪಯೋಗ ಆಗುತ್ತದೆ. ಎಷ್ಟೋ ಬಡ ವಿದ್ಯಾರ್ಥಿಗಳು ತಂದೆತಾಯಿಗೆ ನಮ್ಮನ್ನು ಉನ್ನತ ಶಿಕ್ಷಣಕ್ಕೆ ಕಲಿಸಲು ಆರ್ಥಿಕ ಶಕ್ತಿ ಇಲ್ಲ ಎಂಬ ಉದ್ದೇಶಕ್ಕೆ ತಮ್ಮ ಓದನ್ನು ಮೊಟಕು ಗೋಳಿಸಿ ಬೇರೆ ಉದ್ಯೋಗ ಅಥವಾ ದಿನಗೂಲಿ ಕೆಲಸಕ್ಕೆ ಹೋಗುತ್ತಾರೆ. ಇಂತಹ ಘಟನೆಗಳನ್ನು ತಡೆಯಬೇಕು ಅಂತ ಸರಕಾರ ಹಾಗೂ ಅನೇಕ ಸಂಘ ಸಂಸ್ಥೆಗಳು ವಿದ್ಯಾರ್ಥಿ ವೇತನವನ್ನು ನೀಡುತ್ತವೆ. ಕರ್ನಾಟಕ ರಾಜ್ಯದ ವಿದ್ಯಾರ್ಥಿಗಳಿಗೆ ಸರ್ಕಾರವು ವಿದ್ಯಾಸಿರಿ ವಿದ್ಯಾರ್ಥಿ ವೇತನ ನೀಡುತ್ತಿದ್ದು ಇದರ ಬಗ್ಗೆ ಪೂರ್ಣ ಮಾಹಿತಿ ಇಲ್ಲಿದೆ.

WhatsApp Group Join Now
Telegram Group Join Now

SC/ST /OBC ವಿದ್ಯಾರ್ಥಿಗಳಿಗೆ ನೀಡುವ ವಿದ್ಯಾರ್ಥಿ ವೇತನ: ವಿದ್ಯಾ ಸಿರಿಯು SC/ST /OBC ವಿದ್ಯಾರ್ಥಿಗಳಿಗೆ ನೀಡುವ ವಿದ್ಯಾರ್ಥಿ ವೇತನ ಆಗಿದ್ದು ಸಂಭಂದಿಸಿದ ವಿದ್ಯಾರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಅರ್ಜಿ ಪರಿಶೀಲನೆ ಆದ ಬಳಿಕ ಅರ್ಹ ವಿದ್ಯಾರ್ಥಿಗಳಿಗೆ ನೇರವಾಗಿ ವಿದ್ಯಾರ್ಥಿ ವೇತನವನ್ನು ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ.

ಅರ್ಜಿ ಸಲ್ಲಿಸುವಾಗ ನೀಡಬೇಕಾದ ಅಗತ್ಯ ದಾಖಲೆಗಳು

  • ಆಧಾರ್ ಕಾರ್ಡ್.
  • ಹತ್ತನೇ ತರಗತಿ ಮತ್ತು ದ್ವಿತೀಯ ಪಿಯುಸಿ ಅಂಕಪಟ್ಟಿ.
  • ಬ್ಯಾಂಕ್ ಪಾಸ್ಬುಕ್.
  • ಜಾತಿ ಮತ್ತು ಆದಾಯ ಪ್ರಮಾಣಪತ್ರ.
  • ಕಾಲೇಜ್ ಅಡ್ಮಿಷನ್ ಬಗ್ಗೆ ದಾಖಲೆ.
  • ನಿವಾಸ ಪ್ರಮಾಣಪತ್ರ ದಾಖಲೆ.

ವಿದ್ಯಾಸಿರಿ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಕೆಲವು ಪ್ರಮುಖ ಅರ್ಹತೆಗಳನ್ನು ಪೂರೈಸಬೇಕು :

  • ವರ್ಗ :-ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಕಡ್ಡಾಯವಾಗಿ SC/ST ಅಥವಾ OBC ವರ್ಗಕ್ಕೆ ಸೇರಿರುವವರಾಗಿರಬೇಕು ಅಥವಾ OBC (2A, 3A, ಅಥವಾ 3B) ವಿಭಾಗಕ್ಕೆ ಸೇರಿದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.
  • ಆದಾಯ :-ಅರ್ಜಿ ಸಲ್ಲಿಸುವ ಕುಟುಂಬದ ವಾರ್ಷಿಕ ಆದಾಯವು 1 ಲಕ್ಷ ರೂಪಾಯಿಗೂ ಕಡಿಮೆ ಇರಬೇಕು. ಹಾಗೂ ಪ್ರಥಮ ವರ್ಗದ ವಿದ್ಯಾರ್ಥಿ ಕುಟುಂಬದ ವಾರ್ಷಿಕ ಆದಾಯ 2.5 ಲಕ್ಷ ರೂಪಾಯಿಗೂ ಕಡಿಮೆ ಇರಬೇಕು.
  • ವಿದ್ಯಾರ್ಹತೆ :- ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು 10ನೇ ತರಗತಿಯಲ್ಲಿ 75% ಗಿಂತ ಹೆಚ್ಚು ಅಂಕಗಳನ್ನು ಗಳಿಸಿರಬೇಕು ಜೊತೆಗೆ ವಿದ್ಯಾರ್ಥಿಗಳು ಕರ್ನಾಟಕ ರಾಜ್ಯದಲ್ಲಿ ಕನಿಷ್ಟ 7 ವರ್ಷಗಳ ಕಾಲ ವಿದ್ಯಾಭ್ಯಾಸ ಮಾಡಿರಬೇಕು ಜೊತೆಗೆ ಅವರು ಈಗ ಕರ್ನಾಟಕದ ಯಾವುದೇ ಕಾಲೇಜುಗಳಲ್ಲಿ ಓದುತ್ತಿರಬೇಕು. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಸ್ಟೈಲಿಶ್ ಲುಕ್, ಉತ್ತಮ ವೈಶಿಷ್ಟ್ಯಗಳು! TVS Jupiter 110 ಹೊಸ ಸ್ಕೂಟರ್ ಬಿಡುಗಡೆ, ಕಡಿಮೆ ಬೆಲೆಯಲ್ಲಿ ಖರೀದಿಸಿ. 

ಅರ್ಜಿ ಸಲ್ಲಿಸುವ ವಿಧಾನ:

ಕರ್ನಾಟಕ ಸರ್ಕಾರದ ವಿದ್ಯಾರ್ಥಿ ವೇತನ ಪೋರ್ಟಲ್ (SSP) ಮೂಲಕ ನೀವು ಸುಲಭವಾಗಿ ಅರ್ಜಿ ಸಲ್ಲಿಸಬಹುದು.

  • ಹಂತ 1: ಪೋರ್ಟಲ್‌ಗೆ ಭೇಟಿ ನೀಡಿ: https://ssp.postmatric.karnataka.gov.in/ ಈ ವೆಬ್‌ಸೈಟ್‌ಗೆ ಹೋಗಿ.
  • ಹಂತ 2: ಹೊಸ ಖಾತೆ ರಚಿಸಿ: ಹೋಮ್ ಪೇಜ್‌ನಲ್ಲಿ “ಹೊಸ ಖಾತೆ ರಚಿಸಿ” ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ.
  • ಹಂತ 3: ಮಾಹಿತಿ ನಮೂದಿಸಿ: ನಿಮ್ಮ ಆಧಾರ್ ಕಾರ್ಡ್‌ನಲ್ಲಿರುವ ಹೆಸರು, ಲಿಂಗವನ್ನು ಆಯ್ಕೆ ಮಾಡಿ, ಒಟಿಪಿ ಮತ್ತು ಕ್ಯಾಪ್ಚಾ ಕೋಡ್‌ಗಳನ್ನು ಸರಿಯಾಗಿ ನಮೂದಿಸಿ.
  • ಹಂತ 4: ದೃಢೀಕರಣ: ನಿಮ್ಮ ಆಧಾರ್ ಕಾರ್ಡ್ ಸಂಖ್ಯೆ, ಪೋಷಕರ ಹೆಸರು ಮತ್ತು ಮೊಬೈಲ್ ಸಂಖ್ಯೆಯನ್ನು ನಮೂದಿಸಿ. ನಿಮ್ಮ ಮೊಬೈಲ್‌ಗೆ ಬರುವ ಒಟಿಪಿಯನ್ನು ನಮೂದಿಸಿ ದೃಢೀಕರಿಸಿ.
  • ಹಂತ 5: ಲಾಗಿನ್ ಮಾಡಿ: ನಿಮಗೆ ಸಿಕ್ಕಿದ ಯುಸರ್ನೇಮ್ ಮತ್ತು ಪಾಸ್‌ವರ್ಡ್ ಬಳಸಿ ಪೋರ್ಟಲ್‌ಗೆ ಲಾಗಿನ್ ಮಾಡಿ.
  • ಹಂತ 6: ಅರ್ಜಿಯನ್ನು ಪೂರ್ಣಗೊಳಿಸಿ: ಲಾಗಿನ್ ಮಾಡಿದ ನಂತರ, ಅರ್ಜಿಯಲ್ಲಿ ಕೇಳಲಾದ ಎಲ್ಲಾ ಮಾಹಿತಿಯನ್ನು ಸರಿಯಾಗಿ ನಮೂದಿಸಿ.
  • ಹಂತ 7: ದಾಖಲೆಗಳನ್ನು ಅಪ್ಲೋಡ್ ಮಾಡಿ: ಎಲ್ಲಾ ದಾಖಲೆಗಳನ್ನು ಅಪ್ಲೋಡ್ ಮಾಡಿ.

ಇದನ್ನೂ ಓದಿ: ಮಕ್ಕಳ ಆಧಾರ್ ಕಾರ್ಡ್ ಅಪ್ಡೇಟ್ ಕಡ್ಡಾಯ; ಸರ್ಕಾರದ ಹೊಸ ನಿಯಮ ಜಾರಿ.

Sharing Is Caring:

Leave a Comment