ನೀವು ಸ್ವಂತ ಮನೆ ಖರೀದಿಸಲು ಬಯಸುತ್ತೀರಿ ಆದರೆ ಒಮ್ಮೆ ಹಣ ಕೊಡಲು ಸಾಧ್ಯವಾಗುವುದಿಲ್ಲ ಎನ್ನುವ ಚಿಂತೆ ಕಾಡುತ್ತದೆ. ಅಂತವರಿಗೆ ಬ್ಯಾಂಕ್ ಗೃಹ ಸಾಲ ನೀಡುವ ಮೂಲಕ ನಿಮಗೆ ಸಹಾಯ ಮಾಡುತ್ತದೆ. ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಯಿಂದ ನಿಮಗೆ ಬೇಕಾದಷ್ಟು ಹಣವನ್ನು ಸಾಲವಾಗಿ ಪಡೆದು ನಿಮ್ಮ ಕನಸಿನ ಮನೆಯನ್ನು ಖರೀದಿಸಬಹುದು. ನಂತರ ಸಾಲವಾಗಿ ಪಡೆದ ಹಣವನ್ನು ನೀವು ಕಂತು ಬಡ್ಡಿ ಸೇರಿಸಿ ನೀವು ಆಯ್ಕೆ ಮಾಡಿರುವ ಮರುಪಾವತಿ ಸಮಯದ ಒಳಗೆ ವಾಪಸ್ ನೀಡಬೇಕು. ಈಗ ಗೃಹ ಸಲ ಪಡೆಯುವರಿಗೆ SBI ಉತ್ತಮ ಆಫರ್ ನೀಡುತ್ತಿದೆ. ಏನು SBI ನ ಆಫರ್ ಎಂಬುದನ್ನು ತಿಳಿಯೋಣ.
ಎಸ್‌ಬಿಐ ಮಾನ್ಸೂನ್ ಆಫರ್ ಏನು?
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ತನ್ನ ಗ್ರಾಹಕರಿಗೆ ಒಂದು ಅದ್ಭುತ ಅವಕಾಶವನ್ನು ನೀಡುತ್ತಿದೆ. ಮಾನ್ಸೂನ್ ಸೀಸನ್‌ನಲ್ಲಿ ಗೃಹ ಸಾಲ ತೆಗೆದುಕೊಳ್ಳುವವರಿಗೆ ಸಂಸ್ಕರಣಾ ಶುಲ್ಕದಲ್ಲಿ 100% ವರೆಗೆ ರಿಯಾಯಿತಿ ನೀಡಲಾಗುತ್ತಿದೆ. ಇದರರ್ಥ ನೀವು ಗೃಹ ಸಾಲಕ್ಕಾಗಿ ಅರ್ಜಿ ಸಲ್ಲಿಸಿದಾಗ, ಸಾಮಾನ್ಯವಾಗಿ ವಿಧಿಸುವ ಸಂಸ್ಕರಣಾ ಶುಲ್ಕವನ್ನು ನೀವು ನೀಡಬೇಕಾಗಿಲ್ಲ.
ಸಾಮಾನ್ಯವಾಗಿ ಎಸ್‌ಬಿಐ ಗೃಹ ಸಾಲದಲ್ಲಿ ವಿಧಿಸುವ ಸಂಸ್ಕರಣ ಶುಲ್ಕ ಎಷ್ಟು?: ಸಾಮಾನ್ಯವಾಗಿ ಎಸ್‌ಬಿಐ ಗೃಹ ಸಾಲದ ಮೊತ್ತ 0.35% ಪ್ರಕ್ರಿಯೆ ಶುಲ್ಕ ಮತ್ತು GST ಯನ್ನು ವಿಧಿಸುತ್ತದೆ. ಆದರೆ, ಈ ಮಾನ್ಸೂನ್ ಆಫರ್‌ನಲ್ಲಿ ಈ ಶುಲ್ಕವನ್ನು ನೀವು ಪಡೆಯಬೇಕಾಗಿಲ್ಲ.
ಗೃಹ ಸಾಲದ ಪ್ರಕ್ರಿಯೆ ಶುಲ್ಕ ಎಂದರೇನು?
ಗೃಹ ಸಾಲವನ್ನು ಪಡೆಯುವಾಗ, ಬ್ಯಾಂಕುಗಳು ಸಾಲದ ಮೊತ್ತದ ಜೊತೆಗೆ ಒಂದು ನಿರ್ದಿಷ್ಟ ಶುಲ್ಕವನ್ನು ವಿಧಿಸುತ್ತವೆ. ಈ ಶುಲ್ಕವನ್ನು ಗೃಹ ಸಾಲದ ಪ್ರಕ್ರಿಯೆ ಶುಲ್ಕ ಅಥವಾ ಹೋಮ್ ಲೋನ್ ಪ್ರೊಸೆಸಿಂಗ್ ಶುಲ್ಕ ಎಂದು ಕರೆಯಲಾಗುತ್ತದೆ. ಸಾಲದ ಅರ್ಜಿಯನ್ನು ಸ್ವೀಕರಿಸಿ, ಪರಿಶೀಲಿಸಿ ಮತ್ತು ಮಂಜೂರು ಮಾಡುವ ಕೆಲಸಕ್ಕೆ ಬ್ಯಾಂಕ್‌ಗೆ ಹಣಕಾಸಿನ ವೆಚ್ಚವಾಗುತ್ತದೆ.ಸಾಲದ ದಾಖಲೆಗಳನ್ನು ತಯಾರಿಸಿ, ಸಾಲದ ಒಪ್ಪಂದವನ್ನು ಮಾಡಿಕೊಳ್ಳುವುದು ಇತ್ಯಾದಿ ಕೆಲಸಗಳಿಗೆ ಬ್ಯಾಂಕ್ ಸಾಲ ತಗೆದುಕೊಳ್ಳುವವರಿಗೆ ಶುಲ್ಕವನ್ನು ವಿಧಿಸುತ್ತದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಈ ಆಫರ್ ಎಲ್ಲಿಯವರೆಗೆ ಇರುತ್ತದೆ :- ಈ ವಿಶೇಷ ಕೊಡುಗೆ ಸೆಪ್ಟೆಂಬರ್ 30, 2024 ರವರೆಗೆ ಮಾನ್ಯವಾಗಿದ್ದು, ಈ ದಿನಾಂಕದ ನಂತರ ಲಭ್ಯವಿಲ್ಲ. ಅದರಿಂದ ಈ ನಿಗದಿತ ಸಮಯದ ಒಳಗೆ ನೀವು ಈ ಆಫರ್ ಪಡೆಯಬಹುದು.
Monsoon Magic is here! Unlock your dream home with up to 100% waiver on processing fees.
Offer valid for a limited period. Grab it now!
T&C apply.#SBI #TheBankerToEveryIndian #HomeLoan pic.twitter.com/zgNSBwMLMo— State Bank of India (@TheOfficialSBI) August 20, 2024
ನೀವು ಗೃಹ ಸಾಲವನ್ನು ಪಡೆಯುವಾಗ ಹಣವನ್ನು ಉಳಿಸಲು ಬಯಸುತ್ತೀರಿ ಎಂದರೆ ಈ ಆಫರ್ ನಿಮಗೆ ಅತ್ಯುತ್ತಮ ಅವಕಾಶವಾಗಿದೆ. ಆದರೆ, ಯಾವುದೇ ಹಣಕಾಸಿನ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು, ನಿಮ್ಮ ಹಣಕಾಸಿನ ಸಲಹೆಗಾರರೊಂದಿಗೆ ಮಾತನಾಡಿ. ನೀವು ಈ ಆಫರ್ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ನಿಮ್ಮ ಹತ್ತಿರದ SBI ಶಾಖೆಗೆ ಭೇಟಿ ನೀಡಿ ಮಾಹಿತಿ ಪಡೆಯಿರಿ. ಯಾವುದೇ ಆಫರ್ ಬ್ಯಾಂಕ್ ಅಥವಾ ಸಂಘ ಸಂಸ್ಥೆಗಳು ನೀಡಿದರು ಕೆಲವು ನಿಬಂಧನೆಗಳನ್ನು ವಿಧಿಸುತ್ತಾರೆ. ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದ ಬಳಿಕವೇ ನೀವು ಸಾಲವನ್ನು ಪಡೆಯುವುದು ಉತ್ತಮ. ಹಾಗೂ ಸಾಲ ಪಡೆಯುವ ಮುನ್ನ ಬಡ್ಡಿದರಗಳು , ಸಾಲದ ಅವಧಿ ಹಾಗೂ ಸಾಲ ತೀರಿಸುವ ಬಗೆ ಹೇಗೆ ಎಂಬುದನ್ನು ನೀವು ಯೋಚಿಸಿ ನಂತರ ಸಾಲ ಪಡೆಯುವುದು ನಿಮಗೆ ಉತ್ತಮ.
ಇದನ್ನೂ ಓದಿ: UPI ನ ಹೊಸ ವೈಶಿಷ್ಟ್ಯ ಈಗ ಒಂದು ಕುಟುಂಬದ 5 ಜನರು ಒಂದು ಖಾತೆಯಿಂದ UPI ಪಾವತಿಗಳನ್ನು ಮಾಡಲು ಸಾಧ್ಯವಾಗುತ್ತದೆ.