ಕೇಂದ್ರ ಸರ್ಕಾರದ ಜೊತೆ ಜೊತೆ ಗೆ ಈಗ ಒಡಿಶಾ ಸರ್ಕಾರವೂ ಮಹಿಳೆಯರ ಸರ್ವಾಂಗೀಣ ಅಭಿವೃದ್ಧಿಗೆ ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದೆ. ಇದರ ಭಾಗವಾಗಿ, ಮಹಿಳೆಯರ ಸಬಲೀಕರಣಕ್ಕೆ ಒತ್ತು ನೀಡಲಾಗಿದೆ ‘ಸುಭದ್ರಾ’ ಯೋಜನೆ ಜಾರಿಗೆ ಬರುವ ಎಲ್ಲ ನಿರೀಕ್ಷೆಗಳು ಇವೆ. ಈ ಯೋಜನೆಯ ಕಾರ್ಯಾಚರಣಾ ಮುಖ್ಯಮಂತ್ರಿಗಳು ಬಿಡುಗಡೆ ಮಾಡಿಲಿದ್ದಾರೆ. ಈ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಎರಡು ಕಂತುಗಳಲ್ಲಿ ಹಣ ನೀಡಲಾಗುತ್ತದೆ :- ಒಡಿಶಾ ಸರ್ಕಾರವು ಮಹಿಳೆಯರ ಸಬಲೀಕರಣಕ್ಕಾಗಿ ಜಾರಿಗೆ ತರುವ ಈ ಸುಭದ್ರಾ ಯೋಜನೆಯಲ್ಲಿ ಪ್ರತಿ ವರ್ಷವು ಮಹಿಳೆಗೆ 10,000 ರೂಪಾಯಿಗಳ ಗೌರವಧನವನ್ನು ನೀಡಲಾಗುತ್ತಿದೆ ಎಂಬ ಮಾಹಿತಿ ಲಭ್ಯ ಇದೆ. ಈ ಹಣವನ್ನು ವರ್ಷಕ್ಕೆ ಎರಡು ಸಮಾನ ಕಂತುಗಳಲ್ಲಿ ನೀಡಲಾಗುವುದು. ಪ್ರತಿ ವರ್ಷವೂ ರಾಖಿ ಪೂರ್ಣಿಮಾ ಮತ್ತು ಮಹಿಳಾ ದಿನಾಚರಣೆಯಂದು ಮಹಿಳಾ ಬ್ಯಾಂಕ್ ಖಾತೆಗೆ ಈ ಹಣವನ್ನು ನೇರವಾಗಿ ಜಮಾ ಮಾಡಲಾಗುತ್ತದೆ. ಇದು ಮಹಿಳೆಯರಿಗೆ ಉತ್ತಮ ಯೋಜನೆ ಆಗಲಿದೆ.
ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಪ್ರಯುಕ್ತ ಜಾರಿಗೆ ಬರಲಿವೆ ಈ ಯೋಜನೆ :- ಪ್ರಧಾನಿ ನರೇಂದ್ರ ಮೋದಿಯವರ ಸೆಪ್ಟೆಂಬರ್ 17 ರಂದು ಸುಭದ್ರ ಯೋಜನೆಯನ್ನೂ ಒಡಿಶಾ ಸರ್ಕಾರವು ಜಾರಿಗೆ ತರಲಿದೆ ಎಂಬ ಸುದ್ದಿಯೂ ಉನ್ನತ ಮೂಲಗಳಿಂದ ಲಭ್ಯವಾಗಿದೆ.
ಯಾರು ಈ ಯೋಜನೆಯ ಪ್ರಯೋಜನ ಪಡೆಯಲು ಅರ್ಹರು?
ಈ ಯೋಜನೆಯು ನಿರ್ದಿಷ್ಟವಾಗಿ ಆರ್ಥಿಕವಾಗಿ ಕಷ್ಟದಲ್ಲಿರುವ ಮಹಿಳೆಯರನ್ನು ಗುರಿಯಾಗಿಸಿ ಆರಂಭ ಮಾಡುವ ಯೋಜನೆ ಆಗಿದೆ. ಈ ಯೋಜನೆಗೆ ಸರ್ಕಾರಿ ನೌಕರರಲ್ಲಿರುವ ಮಹಿಳೆಯರು ಅಥವಾ ತಮ್ಮ ಆದಾಯದ ಮೇಲೆ ತೆರಿಗೆ ಪಾವತಿಸುವ ಮಹಿಳೆಯರಿಗೆ ಈ ಯೋಜನೆಯ ಹಣವು ಬರುವುದಿಲ್ಲ. ಇದಲ್ಲದೆ, ಮಹಿಳೆ ಯಾವುದೇ ಇತರ ಸರ್ಕಾರಿ ಯೋಜನೆಯಿಂದ ವರ್ಷಕ್ಕೆ 15,000 ರೂಪಾಯಿಗಿಂತ ಹೆಚ್ಚಿನ ಪ್ರಯೋಜನವನ್ನು ಪಡೆಯುತ್ತಿದ್ದಾರೆ, ಅವರು ಈ ಯೋಜನೆಯ ಲಾಭ ಪಡೆಯಲು ಅನರ್ಹರಾಗುತ್ತಾರೆ.ಹಾಗೂ 21 ವರ್ಷದಿಂದ 60 ವರ್ಷಗಳ ಮಹಿಳೆಯರು ಈ ಯೋಜನೆಗೆ ಅರ್ಹರು. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಈ ಯೋಜನೆಗೆ ಹಣ ಎಷ್ಟು ಬಿಡುಗಡೆ ಮಾಡಲಿದೆ ಸರ್ಕಾರ?: ಒಡಿಶಾ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಕ್ಯಾಬಿನೆಟ್ ಸಭೆಯಲ್ಲಿ, ಮುಂದಿನ ಐದು ವರ್ಷಗಳ ಕಾಲ ಜಾರಿಗೆ ಬರಲಿರುವ ಸುಭದ್ರಾ ಯೋಜನೆಗೆ 55,825 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿ ಅನುಮೋದನೆ ಪಡೆದಿದೆ.
ಡಿಜಿಟಲ್ ಪಾವತಿಗೆ ಪ್ರೋತ್ಸಾಹ ಧನ :- ಡಿಜಿಟಲ್ ವಹಿವಾಟನ್ನು ಪ್ರೋತ್ಸಾಹಿಸುವ ಉದ್ದೇಶದಿಂದ, ಮಹಿಳೆಯರಿಗೆ ‘ಸುಭದ್ರಾ ಡೆಬಿಟ್ ಕಾರ್ಡ್’ ನೀಡಲಾಗುವುದು. ಈ ಯೋಜನೆಯಲ್ಲಿ ಭಾಗವಹಿಸುವ 100 ಮಹಿಳೆಯರು ಡಿಜಿಟಲ್ ಪಾವತಿಗಳನ್ನು ಮಾಡಿದರೆ, ಅವರಿಗೆ 500 ರೂಪಾಯಿಗಳ ಪ್ರೋತ್ಸಾಹಧನ ನೀಡಲಾಗುವುದು ಎಂದು ಇಲಾಖೆ ತಿಳಿಸಿದೆ.
ಇದನ್ನೂ ಓದಿ: ಹೊಸ ವೈಶಿಷ್ಟ್ಯದ ಮೂಲಕ ನೀವು ಖಾತೆಯಲ್ಲಿ ಹಣವಿಲ್ಲದಿದ್ದರೂ ಸುಲಭವಾಗಿ ಫೋನ್ ಪೇ ಪಾವತಿ ಮಾಡಬಹುದು.
ಅರ್ಜಿ ಸಲ್ಲಿಸುವ ವಿಧಾನ :-
ಈ ಯೋಜನೆಯ ಲಾಭ ಪಡೆಯಲು ಬಯಸುವ ಮಹಿಳೆಯರು ಅರ್ಜಿ ಫಾರ್ಮ್ ಅನ್ನು ಅಂಗನವಾಡಿ ಕೇಂದ್ರಗಳು, ತಾಲೂಕು ಕಚೇರಿಗಳು ಅಥವಾ ಗ್ರಾಮ ಪಂಚಾಯತಿಗಳಂತಹ ಸಾರ್ವಜನಿಕ ಸೇವಾ ಕೇಂದ್ರಗಳಿಂದ ಪಡೆಯಬಹುದು.. ಈ ಯೋಜನೆ ಸುಗಮವಾಗಿ ನಡೆಸಲು ಮತ್ತು ಮಹಿಳೆಯರಿಗೆ ಸಹಾಯ ಮಾಡಲು ಒಂದು ಸಂಸ್ಥೆಯನ್ನು ರಚಿಸಲಾಗಿದೆ. ಈ ಸಂಸ್ಥೆಯನ್ನು “ಸುಭದ್ರಾ ಸೊಸೈಟಿ” ಎಂದು ಕರೆಯಲಾಗುತ್ತದೆ. ಈ ಯೋಜನೆಯು ಮಹಿಳೆಯರಿಗೆ ಸಹಾಯ ಮಾಡಲು ವಿನ್ಯಾಸಗೊಳಿಸಲಾಗಿದೆ. ಮಹಿಳೆಯರು ಒಂದು ಸರಳವಾದ ಅರ್ಜಿಯನ್ನು ಭರ್ತಿ ಮಾಡುವ ಮೂಲಕ ಈ ಯೋಜನೆಯ ಪ್ರಯೋಜನಗಳನ್ನು ಪಡೆಯಬಹುದು.
ಇದನ್ನೂ ಓದಿ: ದಾಖಲೆಗಳಿಲ್ಲದೇ ನಿಮ್ಮ ವಿಳಾಸವನ್ನು ಆಧಾರ್ ಕಾರ್ಡ್ ನಲ್ಲಿ ಅಪ್ಡೇಟ್ ಮಾಡಬಹುದು, ಇಲ್ಲಿದೆ ಸಂಪೂರ್ಣ ಮಾಹಿತಿ