ರೈತರಿಗೆ ತಿಂಗಳಿಗೆ ಮೂರು ಸಾವಿರ ಪಿಂಚಣಿ ನೀಡುವ ಸರ್ಕಾರಿ ಯೋಜನೆಯ ಬಗ್ಗೆ ಮಾಹಿತಿ ಇಲ್ಲಿದೆ.

ಸಣ್ಣ ಇಳುವಳಿದಾರ ರೈತರು ಭೂಮಿ ಕಡಿಮೆ ಮತ್ತು ಕಡಿಮೆ ಆದಾಯದಿಂದ ಬದುಕು ಸಾಗಿಸುತ್ತಿದ್ದಾರೆ. ಅವರ ಜೀವನಮಟ್ಟವನ್ನು ಸುಧಾರಿಸಲು ಮತ್ತು ವೃದ್ಧಾಪ್ಯದಲ್ಲಿ ಆರ್ಥಿಕ ಸ್ವಾವಲಂಬನೆ ಒದಗಿಸಲು ಸರ್ಕಾರವು ವಿಶೇಷ ಪಿಂಚಣಿ ಯೋಜನೆ ರೂಪಿಸಿದೆ. ಈ ಯೋಜನೆಯ ಬಗ್ಗೆ ಪೂರ್ಣ ಮಾಹಿತಿ ಇಲ್ಲಿದೆ.

WhatsApp Group Join Now
Telegram Group Join Now

ವೃದ್ಯಾಪ್ಯಕ್ಕೆ ಪಿಂಚಣಿ ಹಣ :- ದೇಶದ ಅನೇಕ ರೈತರು ಸಣ್ಣ ಭೂಮಿಯಲ್ಲಿ ಕೃಷಿ ಮಾಡುವುದರಿಂದ ಆರ್ಥಿಕವಾಗಿ ಸಂಕಷ್ಟದಲ್ಲಿರುತ್ತಾರೆ ಇದನ್ನು ಅರಿತ ಕೇಂದ್ರವು ಈಗ ಅವರ ವೃದ್ಧಾಪ್ಯದಲ್ಲಿ ಆರ್ಥಿಕ ಸಹಾಯವಾಗಲಿ ಎಂದು ಸರ್ಕಾರವು ಕಿಸಾನ್ ಮಂಧನ್ ಯೋಜನೆ ಎಂಬುದನ್ನು 60 ವರ್ಷ ತುಂಬಿದ ನಂತರ ಪ್ರತಿ ತಿಂಗಳು 3000 ರೂಪಾಯಿ ಪಿಂಚಣಿ ನೀಡಲು ಮುಂದಾಗಿದೆ.

ಯಾರು ಈ ಯೋಜನೆ ಲಾಭ ಪಡೆಯಬಹುದು?

  • ಸಣ್ಣ ಮತ್ತು ಅತಿಸಣ್ಣ ರೈತರು: ಅಂದರೆ ರೈತರು 2 ಹೆಕ್ಟೇರ್ ಅಥವಾ ಅದಕ್ಕಿಂತ ಕಡಿಮೆ ಭೂಮಿ ಹೊಂದಿರಬೇಕು. ಅಂತವರು ಈ ಯೋಜನೆಯಡಿ ಅರ್ಜಿ ಸಲ್ಲಿಸಬಹುದು.
  • ವಯಸ್ಸಿನ ಮಿತಿ : ಅರ್ಜಿದಾರರು ಕನಿಷ್ಠ 18 ವರ್ಷ ಮತ್ತು ಗರಿಷ್ಠ 40 ವರ್ಷ ವಯಸ್ಸಿನವರಾಗಬಹುದು ಎಂಬ ನಿಯಮ ಇದೆ.
  • ಆದಾಯ :- ಈ ಯೋಜನೆಗೆ ಅರ್ಜಿ ಸಲ್ಲಿಸುವವರ ಮಾಸಿಕ ಆದಾಯ ₹15,000 ಗಿಂತ ಕಡಿಮೆಯಿರಬೇಕು.
  • ತೆರಿಗೆ :-ಆದಾಯ ತೆರಿಗೆ ಪಾವತಿಸಿದವರು ಈ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹರಲ್ಲ.
  • ಯೋಜನೆಯಲ್ಲಿ ಭಾಗಿ :-EPFO, NPS ಅಥವಾ ESIC ಯೋಜನೆಗಳಲ್ಲಿ ಭಾಗವಹಿಸಿರುವವರು ಈ ಯೋಜನೆಯಲ್ಲಿ ಭಾಗವಹಿಸಲು ಅರ್ಹರಲ್ಲ.
  • ದಾಖಲೆ :-ಅರ್ಜಿದಾರರು ಮೊಬೈಲ್ ಫೋನ್, ಆಧಾರ್ ಕಾರ್ಡ್ ಬ್ಯಾಂಕ್ ಮತ್ತು ಖಾತೆಯನ್ನು ಹೊಂದಿರುವುದು ಕಡ್ಡಾಯ.

ಯೋಜನೆಯ ಪ್ರಮುಖ ಅಂಶಗಳು ಹೀಗಿವೆ :-

  • ಮಾಸಿಕ ಕೊಡುಗೆ ಸಿಗಲಿದೆ: ಅರ್ಜಿದಾರರು ತಮ್ಮ ವಯಸ್ಸಿನ ಆಧಾರದ ಮೇಲೆ ತಿಂಗಳ ನಿಗದಿತ ಮೊತ್ತವನ್ನು ನೀವು ಈ ಯೋಜನೆಗೆ ಹೂಡಿಕೆ ಮಾಡಬೇಕು.
  • ಪಿಂಚಣಿ: ಅರ್ಜಿ ಸಲ್ಲಿಸಿ ಹಣ ಹೂಡಿಕೆ ಮಾಡಿದ ರೈತರು 60 ವರ್ಷ ತುಂಬಿದ ಬಳಿಕ 3,000/- ತಿಂಗಳ ಪಿಂಚಣಿ ಪಡೆಯುತ್ತಾರೆ.
  • ವಿಮಾ ರಕ್ಷಣೆ: ಈ ಯೋಜನೆಯಲ್ಲಿ ವಿಮಾ ರಕ್ಷಣೆ ಸಹ ಒಳಗೊಂಡಿದೆ. ಅಂದರೆ, ರೈತನ ಮರಣ ಸಂಭವಿಸಿದಾಗ, ಅವರ ಕುಟುಂಬಕ್ಕೆ ಪಿಂಚಣಿ ಮೊತ್ತವನ್ನು ನೀಡಬೇಕು ಎಂಬ ಅಂಶವು ಈ ಯೋಜನೆಯಲ್ಲಿ ಇದೆ.

ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಕ್ರಮ :- ಪಿಎಂ ಕಿಸಾನ್ ಮಂದನ್ ಯೋಜನೆಗೆ ಅರ್ಜಿ ಸಲ್ಲಿಸಲು ಸುಲಭವಾದ ಮಾರ್ಗವೆಂದರೆ ಆನ್‌ಲೈನ್ ಮೂಲಕ. ನೀವು ಈ ಕೆಳಗಿನ ಹಂತಗಳನ್ನು ಅನುಸರಿಸಬಹುದು: ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

  • ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ: https://maandhan.in/ ಈ ವೆಬ್‌ಸೈಟ್‌ಗೆ ಭೇಟಿ ನೀಡಿ.
  • ನೋಂದಣಿ: “ಸ್ವಯಂ ನೋಂದಣಿ” ಆಯ್ಕೆಯನ್ನು ಕ್ಲಿಕ್ ಮಾಡಬೇಕು.
  • OTP ಪರಿಶೀಲನೆ: ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಮತ್ತು ನಿಮ್ಮ ಮೊಬೈಲ್‌ಗೆ ಬರುವ OTP ಅನ್ನು ನಮೂದಿಸಿ.
  • ವಿವರಗಳನ್ನು ಭರ್ತಿ ಮಾಡಿ: ನಿಮ್ಮ ವೈಯಕ್ತಿಕ ವಿವರಗಳು, ಬ್ಯಾಂಕ್ ವಿವರಗಳು ಮತ್ತು ಇತರ ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿ.
  • ದಾಖಲೆಗಳನ್ನು ಅಪ್ಲೋಡ್ ಮಾಡಿ: ದಾಖಲೆಗಳಾದ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್‌ಬುಕ್, ಇತ್ಯಾದಿಗಳನ್ನು ಅಪ್‌ಲೋಡ್ ಮಾಡಿ.
  • ಸಲ್ಲಿಸಿ: ಎಲ್ಲಾ ಮಾಹಿತಿಯನ್ನು ಸರಿಯಾಗಿ ಭರ್ತಿ ಆಗಿದೆಯೋ ಇಲ್ಲವೋ ಎಂದು ಪರಿಶೀಲಿಸಿ ಅರ್ಜಿಯನ್ನು ಸಲ್ಲಿಸಿ.

ಆಫ್ಲೈನ್ ಅರ್ಜಿ ಸಲ್ಲಿಸುವ ಕ್ರಮ :-

ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು, ರೈತರು ತಮ್ಮ ಹತ್ತಿರದ ಜನ ಸೇವಾ ಕೇಂದ್ರಕ್ಕೆ ನೀಡಿ, ಅಗತ್ಯ ದಾಖಲೆಗಳೊಂದಿಗೆ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಸಲ್ಲಿಸಬೇಕು. ಕೇಂದ್ರದ ಸಿಬ್ಬಂದಿ ನಿಮ್ಮ ಅರ್ಜಿಯನ್ನು ಪರಿಶೀಲಿಸಿ ಅರ್ಜಿಯನ್ನು ನೋಂದಣಿ ಮಾಡಿಕೊಳ್ಳುತ್ತಾರೆ.

ಸಲ್ಲಿಸಬೇಕಾದ ದಾಖಲೆಗಳು :-

  1. ಗುರುತಿನ ಚೀಟಿ.
  2. ಆಧಾರ್ ಕಾರ್ಡ್.
  3. ಪತ್ರವ್ಯವಹಾರದ ವಿಳಾಸ.
  4. ಬ್ಯಾಂಕ್ ಖಾತೆಯ ಪಾಸ್‌ಬುಕ್.
  5. ಮೊಬೈಲ್ ಸಂಖ್ಯೆ.
  6. ಪಾಸ್ಪೋರ್ಟ್ ಗಾತ್ರದ ಫೋಟೋ.

ಇದನ್ನೂ ಓದಿ: ಏಕೀಕೃತ ಪಿಂಚಣಿ ಯೋಜನಯಿಂದ ಕೇವಲ 10 ವರ್ಷಗಳ ಸರ್ಕಾರಿ ಸೇವೆಗೆ ಸಿಗಲಿದೆ ಪಿಂಚಣಿ ಹಣ!?

ಇದನ್ನೂ ಓದಿ: BSNL ನ 70 ದಿನಗಳ ಅಗ್ಗದ ರಿಚಾರ್ಜ್ ಪ್ಲಾನ್, ಅದರ ಬೆಲೆ 200 ರೂಪಾಯಿ ಗಿಂತ ಕಡಿಮೆ.

Sharing Is Caring:

Leave a Comment