ರಿಲಯನ್ಸ್ ಜಿಯೋ ಗ್ರಾಹಕರಿಗೆ ಬಂಪರ್ ದೀಪಾವಳಿ ಆಫರ್ ಘೋಷಿಸಿದ ಮುಕೇಶ್ ಅಂಬಾನಿ.

ರಿಲಯನ್ಸ್ ಜಿಯೋದ ಸಿಐಒ ಆಗಿರುವ ಮುಖೇಶ್ ಅಂಬಾನಿ ಇಂದು ನಡದ ಕಂಪನಿಯ ವಾರ್ಷಿಕ ಸಭೆಯಲ್ಲಿ ಜಿಯೋ ಬಳಕೆದಾರರಿಗೆ 100GB ಕ್ಲೌಡ್ ಸ್ಟೋರೇಜ್ ಅನ್ನು ಉಚಿತವಾಗಿ ನೀಡುವ ಆಫರ್ ಅನ್ನು ನೀಡುವ ಮೂಲಕ ಬಳಕೆದಾರರಿಗೆ ಸಿಹಿ ಸುದ್ದಿ ನೀಡಿದ್ದಾರೆ.

WhatsApp Group Join Now
Telegram Group Join Now

ಜಿಯೋ ವೇಲ್ಕಮ್ ಆಫರ್:- ಕ್ಲೌಡ್ ಸ್ಟೋರೇಜ್ ಸೊಲ್ಯೂಷನ್‌ಗಳ ಮೂಲಕ ಜಿಯೋ ಬಳಕೆದಾರರ ಅನುಭವವನ್ನು ಸುಧಾರಿಸುವ ನಿಟ್ಟಿನಲ್ಲಿ ಜಿಯೋ ಎಐ-ಕ್ಲೌಡ್ ವೆಲ್ಕಮ್ ಆಫರ್ ಅನ್ನು ಪರಿಚಯಿಸಲಾಗಿದೆ. ಕನೆಕ್ಟೆಡ್ ಇಂಟೆಲಿಜೆನ್ಸ್ ಮೂಲಕ ಜಿಯೋ ತನ್ನ ಬಳಕೆದಾರರಿಗೆ ಹೆಚ್ಚು ಸುಧಾರಿತ ಸೇವೆಗಳನ್ನು ಒದಗಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಸಭೆಯಲ್ಲಿ ಮುಖೇಶ್ ಅಂಬಾನಿ ಅವರು ತಿಳಿಸಿದ್ದಾರೆ. ಅಂಬಾನಿ ಅವರ ಈ ಆಫರ್ ಕೇವಲ ಜಿಯೋ ಬಳಕೆದಾರರಿಗೆ ಉಚಿತ ಡೇಟಾ ಸ್ಟೋರೇಜ್ ಅನ್ನು ಒದಗಿಸದೆ, ಕೃತಕ ಬುದ್ಧಿಮತ್ತೆ ಆಧಾರಿತ ಸೇವೆಗಳನ್ನು ವಿಶಾಲ ಜನವರಿಗೆ ತಲುಪಿಸುವ ಒಂದು ದೊಡ್ಡ ಹೆಜ್ಜೆಯಾಗಿದೆ ಎಂದು ಹೇಳಿದರು.

ಹೆಚ್ಚಿನ ಡೇಟಾ ನೀಡುವ ಗುರಿ:- ಹೆಚ್ಚಿನ ಡೇಟಾವನ್ನು ಸಂಗ್ರಹಿಸುವ ಅವಕಾಶವನ್ನು ಜಿಯೋ ನೀಡಲಿದೆ ಎಂದು ಅಂಬಾನಿ ನಿಗದಿಪಡಿಸಲಾಗಿದೆ. ಸ್ಟೋರೇಜ್ ಹೊಸ ದಾಖಲೆ ಸೃಷ್ಟಿಸುವ ಉದ್ದೇಶದಿಂದ ಜಿಯೋ ಕಡಿಮೆ ಬೆಲೆಯಲ್ಲಿ ಹೆಚ್ಚಿನ ಸ್ಟೋರೇಜ್ ಸೌಲಭ್ಯವನ್ನು ನೀಡಲಾಗುವುದು ಎಂದು ಅಂಬಾನಿ ಹೇಳಿದ್ದಾರೆ. ಹೆಚ್ಚಿನ ಸಂಗ್ರಹಣೆಯ ದತ್ತಾಂಶವನ್ನು ಗ್ರಾಹಕರು ಕೈಗೆಟುಕುವ ದರದಲ್ಲಿ ಕ್ಲೌಡ್ ಸ್ಟೋರೇಜ್ ಸೇವೆಯನ್ನು ಒದಗಿಸುವ ಮೂಲಕ ಜಿಯೋ ಹೊಸ ಅಧ್ಯಾಯಕ್ಕೆ ನಾಂದಿ ಹಾಡಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಜಿಯೋ ಕ್ಲೌಡ್ ಬಳಸುವುದರಿಂದ ಗ್ರಾಹಕರಿಗೆ ಪ್ರಯೋಜನಗಳು ಏನೇನು?

  • ಸುರಕ್ಷಿತ ಸಂಗ್ರಹಣೆ ಸಾಧ್ಯ: ಜಿಯೋ ಕ್ಲೌಡ್ ಇಂದ ನಿಮ್ಮ ಎಲ್ಲಾ ಪ್ರಮುಖ ಫೈಲ್‌ಗಳು, ಫೋಟೋಗಳು, ವಿಡಿಯೋಗಳು ಮತ್ತು ಇತರ ಪ್ರದರ್ಶನ ಜಿಯೋ ಕ್ಲೌಡ್‌ನಲ್ಲಿ ಸುರಕ್ಷಿತವಾಗಿ ಸಂಗ್ರಹಿಸಬಹುದು. ಹೀಗೆ ಮಾಡುವುದರಿಂದ ನಿಮ್ಮ ಫೋನ್‌ನಲ್ಲಿರುವ ಸ್ಥಳವನ್ನು ಮುಕ್ತಗೊಳಿಸಬಹುದು ಮತ್ತು ನಿಮ್ಮ ಡೇಟಾ ಕಳೆದುಹೋಗುವ ಚಿಂತೆಯಿಂದ ಮುಕ್ತರಾಗಬಹುದು.
  • ಯಾವಾಗ ಬೇಕಾದರೂ, ಎಲ್ಲಿಂದ ಬೇಕಾದರೂ ಪ್ರವೇಶ ಪಡೆಯುವ ವ್ಯವಸ್ಥೆ : ನೀವು ಜಿಯೋ ಕ್ಲೌಡ್ ಬಳಸುವುದರಿಂದ ಇಂಟರ್ನೆಟ್ ಸಂಪರ್ಕವಿರುವ ಯಾವುದೇ ಸಾಧನದಲ್ಲಿ ನಿಮ್ಮ ಕ್ಲೌಡ್‌ನಲ್ಲಿರುವ ಸಾಧನ ಪ್ರವೇಶಿಸಬಹುದು. ಇದರಿಂದ ನೀವು ನಿಮ್ಮ ಫೈಲ್‌ಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು, ಸಂಪಾದಿಸಬಹುದು ಮತ್ತು ಹಂಚಿಕೊಳ್ಳಬಹುದು.
  • ಸ್ವಯಂಚಾಲಿತ ಬ್ಯಾಕಪ್ ವ್ಯವಸ್ಥೆ : ನಿಮ್ಮ ಫೋನ್‌ನಲ್ಲಿ ಸ್ವಯಂಚಾಲಿತವಾಗಿ ಕ್ಲೌಡ್‌ಗೆ ಬ್ಯಾಕಪ್ ಮಾಡಬಹುದು. ಇದರಿಂದ ನಿಮ್ಮ ಫೋನ್ ಕಳೆದುಹೋದರೂ ಅಥವಾ ಹಾಳಾದರೂ ನಿಮ್ಮ ಡೇಟಾ ಸುರಕ್ಷಿತವಾಗೀ ಇರಲಿದೆ.
  • ಹೆಚ್ಚಿನ ಸ್ಥಳ: ಜಿಯೋ ಕ್ಲೌಡ್ ನಿಮಗೆ ಹೆಚ್ಚಿನ ಸ್ಥಳವನ್ನು ನೀಡುತ್ತದೆ. ಹೀಗಾಗಿ ನೀವು ನಿಮ್ಮ ಫೋನ್‌ನಲ್ಲಿ ಹೆಚ್ಚಿನ ಫೈಲ್‌ಗಳು ಮತ್ತು ಅಪ್ಲಿಕೇಶನ್‌ಗಳನ್ನು ಸಂಗ್ರಹಿಸಬಹುದು.
  • ಫೈಲ್‌ಗಳನ್ನು ಹಂಚಿಕೊಳ್ಳುವುದು ಸುಲಭ: ನಿಮ್ಮ ಕ್ಲೌಡ್‌ನಲ್ಲಿರುವ ಫೈಲ್‌ಗಳನ್ನು ನಿಮ್ಮ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಸುಲಭವಾಗಿ ಹಂಚಿಕೊಳ್ಳಬಹುದು.
  • ಹಲವಾರು ಸಾಧನಗಳಲ್ಲಿ ಬಳಕೆಗೆ ಅವಕಾಶ: ನಿಮ್ಮ ಕಂಪ್ಯೂಟರ್, ಟ್ಯಾಬ್ಲೆಟ್ ಅಥವಾ ಇತರ ಮೊಬೈಲ್ ಸಾಧನಗಳಲ್ಲಿ ನಿಮ್ಮ ಕ್ಲೌಡ್ ಸಿಂಕ್ರೊನೈಸ್ ಮಾಡಬಹುದು. ಹೀಗಾಗಿ ನೀವು ಎಲ್ಲಿಂದಲಾದರೂ ನಿಮ್ಮ ಫೈಲ್‌ಗಳನ್ನು ಪ್ರವೇಶಿಸಬಹುದು.

ಷೇರುದಾರರಿಗೆ ಶುಭ ಸುದ್ದಿ ಸಿಗುವ ಸಾಧ್ಯತೆ :- ರಿಲಯನ್ಸ್ ಇಂಡಸ್ಟ್ರೀಸ್ ಆಡಳಿತ ಮಂಡಳಿಯು ಸೆಪ್ಟೆಂಬರ್ 5 ರಂದು ನಡೆಯುವ ಸಭೆಯಲ್ಲಿ ಪ್ರತಿ ಷೇರಿಗೆ ಬೋನಸ್ ಷೇರು ನೀಡುವ ಕುರಿತು ಮಹತ್ವದ ನಿರ್ಧಾರ ಹೊರಬೀಳಲಿದೆ. ಮುಖೇಶ್ ಅಂಬಾನಿ ಅವರ ಶಿಫಾರಸಿನಂತೆ, ರಿಲಯನ್ಸ್ ಷೇರುದಾರರಿಗೆ ಒಂದು ಬೋನಸ್ ಷೇರು ನೀಡುವ ಸಾಧ್ಯತೆ ಹೆಚ್ಚಿದೆ.

ಇದನ್ನೂ ಓದಿ: Jio ಮತ್ತು Airtel ಎರಡೂ ಕಂಪನಿಗಳು ಮೊಬೈಲ್ ರೀಚಾರ್ಜ್‌ನೊಂದಿಗೆ ಉಚಿತ ನೆಟ್‌ಫ್ಲಿಕ್ಸ್ ನೀಡುತ್ತಿವೆ. ಯಾವುದರ ಯೋಜನೆ ಅಗ್ಗ ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

Sharing Is Caring:

Leave a Comment