ರಾಜ್ಯದಲ್ಲಿ 5 ಗ್ಯಾರೆಂಟಿ ಯೋಜನಗಳನ್ನು ಸರ್ಕಾರ ನೀಡಿದೆ. ಯೋಜನೆಗಳ ಪ್ರಯೋಜನಗಳನ್ನು ಪಡೆಯಬೇಕು ಎಂದಾದರೆ ಮೊದಲು ರೇಷನ್ ಕಾರ್ಡ್ ಇರಬೇಕು. ಆದರೆ ಕಳೆದ ಎರಡು ವರ್ಷಗಳಿಂದ ಅರ್ಜಿ ಸ್ಲಲಿಸಿರುವವರಿಗೆ ಇನ್ನು ರೇಷನ್ ಕಾರ್ಡ್ ವಿತರಣೆ ಆಗಿಲ್ಲ. ರಾಜ್ಯ ಸರಕಾರ ಅಧಿಕಾರಕ್ಕೆ ಬಂದು ಒಂದು ವರ್ಷ ಆದರೂ ಸಹ ರೇಷನ್ ಕಾರ್ಡ್ ವಿತರಣೆ ಬಗ್ಗೆ ಕಠಿಣ ನಿರ್ಧಾರ ತೆಗೆದುಕೊಂಡಂತೆ ಕಾಣುತ್ತಿಲ್ಲ. ಇದು ಈಗ ರಾಜ್ಯದ ಜನತೆಯ ಬೇಸರಕ್ಕೆ ಕಾರಣ ಆಗಿದೆ.
2.38 ಲಕ್ಷ ಕುಟುಂಬಗಳಿಗೆ ಬೇಸರ ತಂದಿದೆ :- ಹೊಸ ರೇಷನ್ ಕಾರ್ಡ್ ಪಡೆಯಬೇಕು ಎಂದು ಈಗಾಗಲೇ ರಾಜ್ಯದಲ್ಲಿ 2.38 ಲಕ್ಷ ಕುಟುಂಬಗಳು ಅರ್ಜಿ ಸಲ್ಲಿಸಿವೆ. ಆದರೆ ಸಲ್ಲಿಸುವ ಅರ್ಜಿಗಳ ಪರಿಶೀಲನೆ ಮತ್ತು ವಿತರಣೆ ಇನ್ನು ನಡೆದಿಲ್ಲ. ಇದರಿಂದ ಬಿಪಿಎಲ್ ಕಾರ್ಡ್ ದಾರರಿಗೆ ಬಹಳ ಬೇಸರ ತಂದಿದೆ.
ಬಿಪಿಎಲ್ ಕಾರ್ಡ್ ವಿತರಣೆ ರಾಜ್ಯ ಸರ್ಕಾರಕ್ಕೆ ಹೊರೆ:- ಈಗಾಗಲೇ ಪಂಚ ಗ್ಯಾರೆಂಟಿ ಯೋಜನೆಗಳನ್ನು ರಾಜ್ಯದಲ್ಲಿ ತರಲಾಗಿದ್ದು, ಹಲವಾರು ಕುಟುಂಬಗಳು ಯೋಜನೆ ಪ್ರಯೋಜನಗಳನ್ನು ಪಡೆಯುತ್ತಿದೆ. ಆದರೆ ಇನ್ನೂ ಪಡಿತರ ಚೀಟಿ ಸಿಗದ ಕಾರಣ ಯೋಜನೆಗೆ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತಿಲ್ಲ. ಈಗ ಪಡಿತರ ಚೀಟಿ ವಿತರಣೆ ಮಾಡಿದರೆ ರಾಜ್ಯ ಸರ್ಕಾರಕ್ಕೆ ಮತ್ತೆ ಹೊಡೆತ ಆಗಲಿದೆ. ಈಗಾಗಲೇ ಗ್ಯಾರಂಟಿ ಯೋಜನಗಳಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಹೊರೆ ಆಗಿದೆ. ಇನ್ನು ಪಡಿತರ ಚೀಟಿ ವಿತರಣೆ ಮಾಡಿದರೆ ಗ್ಯಾರೆಂಟಿ ಯೋಜನೆಗಳಿಗೆ ಇನ್ನಷ್ಟು ಹಣ ಬೇಕಾಗುತ್ತದೆ. ಆದ್ದರಿಂದ ರಾಜ್ಯ ಸರಕಾರವು ರೇಷನ್ ಕಾರ್ಡ್ ವಿತರಣೆ ಮಾಡುತ್ತಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ.
ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ಯೋಜನೆಗೆ ಬಿಪಿಎಲ್ ಕಾರ್ಡ್ ಅವಶ್ಯಕ :-
ರಾಜ್ಯದ ಉತ್ತಮ ಯೋಜನೆಗಳು ಆಗಿರುವ ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ಯೋಜನೆಗೆ ಅರ್ಜಿ ಸಲ್ಲಿಸಲು ಕಡ್ಡಾಯವಾಗಿ ಪಡಿತರ ಚೀಟಿ ನೀಡಲೇಬೇಕು. ಪಡಿತರ ಚೀಟಿ ಇಲ್ಲದೆ ಇದ್ದರೆ ಈ ಯೋಜನೆಗಳಿಗೆ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ. ಹಾಗೂ ರೇಷನ್ ಕಾರ್ಡ್ ಸಲ್ಲಿಸದೇ ಇದ್ದರೆ ನಿಮ್ಮ ಅರ್ಜಿಗಳು ತಿರಸ್ಕಾರ ಆಗುತ್ತವೆ.
ಬಡತನ ರೇಖೆಗಿಂತ ಕಡಿಮೆ ಆದಾಯ ಕುಟುಂಬಕ್ಕೆ ಧಾನ್ಯಗಳ ವಿತರಣೆಗೆ ಅಡ್ಡಿ:-
ಯಾವುದೇ ಸರ್ಕಾರದ ಕರ್ತವ್ಯ ಎಂದರೆ ಅದು ರಾಜ್ಯದ ಅಥವಾ ದೇಶದ ಬಡತನ ರೇಖೆಗಿಂತ ಕುಟುಂಬಕ್ಕೆ ಕನಿಷ್ಠ ಬೆಲೆಯಲ್ಲಿ ಆಹಾರ ಧಾನ್ಯಗಳನ್ನು ನೀಡಬೇಕು. ಆದರೆ ಈಗ ಬಿಪಿಎಲ್ ಕಾರ್ಡ್ ವಿತರಣೆ ಆಗದೆ ಉಚಿತ ಅಕ್ಕಿ ಹಾಗೂ ಕಡಿಮೆ ಬೆಲೆಯಲ್ಲಿ ಸರ್ಕಾರ ನೀಡುವ ಧಾನ್ಯಗಳ ವಿತರಣೆ ಕಷ್ಟ ಆಗುತ್ತಿದೆ. ಈಗ ರಾಜ್ಯ ಸರ್ಕಾರವು ಬಿಪಿಎಲ್ ಕಾರ್ಡ್ ವಿತರಣೆಗೆ ಅಡ್ಡಿ ಮಾಡುತ್ತಿರುವುದು ಬಡವರಿಗೆ ಸಿಗಬೇಕಾದ ಅಕ್ಕಿ ಬೆಲೆ ಸಿರಿ ಧಾನ್ಯಗಳು ಇಲ್ಲದಿರುವಂತೆ ಆಗಿದೆ. ಇದರಿಂದ ರಾಜ್ಯ ಸರ್ಕಾರದ ಉತ್ತಮ ಯೋಜನೆಗೆ ಆಗಿರುವ ಅನ್ನಭಾಗ್ಯ ಯೋಜನೆಯ ಜನರಿಗೆ ತಲುಪುತ್ತಿಲ್ಲ. ಅನ್ನಭಾಗ್ಯ ಯೋಜನೆಯ ಉದ್ದೇಶವೂ ಬಡವರಿಗೆ ಹಸಿವು ನೀಗಿಸುವ ಧ್ಯೇಯ ಹೊಂದಿರುವ ಕಾರಣ ಈಗ ಬಿಪಿಎಲ್ ಕಾರ್ಡ್ ವಿತರಣೆ ಆಗದೆ ಅನ್ನಭಾಗ್ಯ ಯೋಜನೆ ಪೂರ್ಣ ಆಗುವುದಿಲ್ಲ.
ಹೊಸದಾಗಿ ಬಿಪಿಎಲ್ ಕಾರ್ಡ್ ಅರ್ಜಿಗೆ ಸಲ್ಲಿಸಲು ಕಾಯುತ್ತಿರುವ ಸಂಖ್ಯೆ ಅಧಿಕ :- ರಾಜ್ಯ ಸರಕಾರವು ಈಗಾಗಲೇ ಬಿಪಿಎಲ್ ಕಾರ್ಡ್ ವಿತರಣೆ ಆಗದೆ ಹೊಸದಾಗಿ ಅರ್ಜಿಗಳನ್ನು ಆಹ್ವಾನಿಸಲಾಗುವುದಿಲ್ಲ. ಆದರೆ ರಾಜ್ಯದಲ್ಲಿ ಬರೋಬ್ಬರಿ 4 ರಿಂದ 5ಲಕ್ಷ ಜನರು ಹೊಸದಾಗಿ ಪಡಿತರ ಚೀಟಿ ಅರ್ಜಿ ಸಲ್ಲಿಸಲು ಕಾಯುತ್ತಿದ್ದಾರೆ. ಆದರೆ ಈ ಹಿಂದೆ ಸಲ್ಲಿಸಿದ ಅರ್ಜಿಗಳು ವಿತರಣೆ ಆಗಬೇಕು. ಅದಕ್ಕೇ ರಾಜ್ಯ ಸರ್ಕಾರವು ಪಡಿತರ ವಿತರಣೆ ಮಾಡಿ ಹೊಸದಾಗಿ ಅರ್ಜಿ ಪಡೆಯಬೇಕು ಎಂಬುದು ರಾಜ್ಯದ ಜನರ ಒತ್ತಾಯ ಆಗಿದೆ.
ಇದನ್ನೂ ಓದಿ: ಗ್ರಾಮೀಣ ಭಾಗದ ಮಕ್ಕಳಿಗೆ ಸಿಗಲಿದೆ ಗುಣಾತ್ಮಕ ಶಿಕ್ಷಣ; ಸರ್ಕಾರಿ ಶಾಲೆಯಲ್ಲಿ ಇನ್ಮುಂದೆ ಶುರುವಾಗಲಿದೆ ಎಲ್ ಕೆ ಜಿ, ಯುಕೆಜಿ
ಕುಂಟು ನೆಪಗಳನ್ನು ಹೇಳುವ ರಾಜ್ಯ ಸರ್ಕಾರ :-
ಈಗ ಹೊಸದಾಗಿ ಪಡಿತರ ಚೀಟಿ ವಿತರಣೆ ಮಾಡಿದರೆ ಸರ್ಕಾರ ಹೇಳಿದಂತೆ ಎಲ್ಲರಿಗೂ ಅನ್ನಭಾಗ್ಯ ಮತ್ತು ಗೃಹಲಕ್ಷ್ಮಿ ಯೋಜನೆಯ ಹಣವನ್ನು ನೀಡಬೇಕು. ಈಗ ಇರುವ ರಾಜ್ಯದ ಆರ್ಥಿಕ ಸ್ಥಿತಿಯಲ್ಲಿ ಅದು ಕಷ್ಟ. ಅದರಿಂದ ಹಲವು ಬರೀ ಈ ಬಗ್ಗೆ ರಾಜ್ಯ ಸರ್ಕಾರವನ್ನು ಕೇಳಿದರು ಸಹ ಒಂದೊಂದು ಕುಂಟು ನೆಪಗಳನ್ನು ಹೇಳುತ್ತಾ ಪಡಿತರ ಚೀಟಿ ವಿತರಣೆ ಮಾಡುವುದನ್ನ ತಡೆ ಹಿಡಿದಿದೆ. ಪ್ರತಿ ತಿಂಗಳು 2000 ರೂಪಾಯಿ ಮನೆಯ ಒಡತಿಯರಿಗೆ ಹಾಗೂ 5 k.g. ಅಕ್ಕಿಯ ಹಣವನ್ನು ಬಿಪಿಎಲ್ ಕಾರ್ಡ್ ಹೊಂದಿರುವ ಎಲ್ಲಾ ಕುಟುಂಬಕ್ಕೆ ನೀಡಲೇಬೇಕಾಗುತ್ತದೆ. ವಿತರಣೆ ಮಾಡದೆ ಇದ್ದರೆ ಬೊಕ್ಕಸಕ್ಕೆ ಇನ್ನಷ್ಟು ಹೊರೆ ತಪ್ಪಿಸಬಹುದು ಎಂಬುದು ರಾಜ್ಯ ಸರ್ಕಾರದ ಉದ್ದೇಶ ಎಂಬುದು ಹಲವಾರು ಜನರ ಅಭಿಪ್ರಾಯ ಆಗಿದೆ.
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಸ್ಪಷ್ಟನೆ ಏನು?: ರಾಜ್ಯದಲ್ಲಿ ಪಡಿತರ ಚೀಟಿ ವಿತರಣೆ ಆಗದ ಬಗ್ಗೆ ಹಾಗೂ ಪಡಿತರ ಚೀಟಿ ಏಷ್ಟು ವಿತರಣೆ ಮಾಡಲಾಗಿದೆ ಎಂಬ ಬಗ್ಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಸ್ಪಷ್ಟನೆ ನೀಡಿದೆ. ಇಲಾಖೆ ಹೇಳಿರುವ ಪ್ರಕಾರ 2013 ನೇ ಇಸವಿಯಲ್ಲಿ ರಾಜ್ಯದಲ್ಲಿ ಜನಸಂಖ್ಯೆ ಆಧಾರದ ಅನುಗುಣವಾಗಿ ಒಟ್ಟು 1.15 ಕೋಟಿ ಪಡಿತರ ಚೀಟಿಗಳ ವಿತರಣೆಗೆ ಮಾಡುವ ಗುರಿ ಇತ್ತು. ಈಗ ರಾಜ್ಯದಲ್ಲಿ ಒಟ್ಟು 1.48 ಕೋಟಿ ಕುಟುಂಬಗಳಿಗೆ ಪಡಿತರ ಚೀಟಿ ವಿತರಣೆ ಮಾಡಲಾಗಿದೆ.
2.38 ಲಕ್ಷ ಅರ್ಜಿ ಗಳು ಇನ್ನು ಹಾಗೆ ಇವೆ. :-
ರಾಜ್ಯದಲ್ಲಿ ಮೂರು ವರ್ಷಗಳ ಹಿಂದೆ ಹೊಸ ಬಿಪಿಎಲ್ ಕಾರ್ಡ್ ಗೆ ಬರೋಬ್ಬರಿ 2,95,986 ಅರ್ಜಿಗಳು ಬಂದಿದ್ದವು. ಆದರೆ ಅದರಲ್ಲಿ ಪಡಿತರ ಚೀಟಿ ವಿತರಣೆಯ ಸಂಖ್ಯೆ ಕೇವಲ 58,561. ಉಳಿದ ಅರ್ಜಿಗಳಿಗೆ ಇನ್ನು ಪಡಿತರ ವಿತರಣೆ ಆಗಲಿಲ್ಲ. ಉಳಿದ ಅರ್ಜಿ ದಾರರು ರಾಜ್ಯ ಸರ್ಕಾರ ಪಡಿತರ ವಿತರಣೆ ಮಾಡುವುದನ್ನು ಕಾಯುತ್ತಿದ್ದಾರೆ.
ರೇಷನ್ ಕಾರ್ಡ್ ವಿತರಣೆ ಆಗದೆ ಆರೋಗ್ಯ ಸೇವೆಗೆ ಅಡ್ಡಿ ಆಗುತ್ತಿದೆ: ಗಂಭೀರ ಕಾಯಿಲೆಯಿಂದ ಅಥವಾ ಯಾವುದೇ ಕಾಯಿಲೆಯಿಂದ ಆಸ್ಪತ್ರೆಗೆ ದಾಖಲಾದರೆ ಕಡ್ಡಾಯವಾಗಿ ರೇಷನ್ ಕಾರ್ಡ್ ನೀಡಬೇಕು. ಅದರಲ್ಲಿಯೂ ಬಿಪಿಎಲ್ ಕಾರ್ಡ್ ಹೊಂದಿರುವ ಬಡತನ ರೇಖೆಗಿಂತ ಕಡಿಮೆ ಆದಾಯ ಇರುವ ಕುಟುಂಬಕ್ಕೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಹಲವಾರು ಸೇವೆಗಳನ್ನು ನೀಡುತ್ತಿವೆ. ಇದರಿಂದ ಬಿಪಿಎಲ್ ಕಾರ್ಡ್ ವಿತರಣೆ ಆಗದೆಯೇ ಬಡವರು ಆರೋಗ್ಯ ಸೇವೆಯನ್ನು ಪಡೆಯಲು ಕಷ್ಟ ಆಗುತ್ತಿದೆ. ಹಾಗೆಯೇ ಹಲವಾರು ಸರಕಾರದ ಯೋಜನೆಗಳು ಹಾಗೂ ಯಶಸ್ವಿನಿ ಅಂತಹ ವಿಮಾ ಯೋಜನೆಗೆ ಕಡ್ಡಾಯವಾಗಿ ರೇಷನ್ ಕಾರ್ಡ್ ನೀಡಲೇಬೇಕು. ಹೀಗಿರುವಾಗ ರಾಜ್ಯ ಸರ್ಕಾರ ಈ ನಡೆಯು ರಾಜ್ಯ ದ ಜನತೆಗೆ ಬಹಳ ಬೇಸರದ ಸಂಗತಿ ಆಗಿದೆ.
ರಾಜ್ಯ ಸರ್ಕಾರವು ಈ ಎಲ್ಲಾ ಸಮಸ್ಯೆಗಳನ್ನೂ ಅರಿತು ಆದಷ್ಟು ಬೇಗ ಬಿಪಿಎಲ್ ಮತ್ತು ಎಪಿಎಲ್ ಕಾರ್ಡ್ ಗಾಳನ್ನು ವಿತರಣೆ ಮಾಡುವ ಮೂಲಕ ಜನರ ಕಷ್ಟಕ್ಕೆ ಪರಿಹಾರ ನೀಡಬೇಕು ಎಂಬುದು ಸಾರ್ವಜನಿಕರ ಮನವಿ.
ಇದನ್ನೂ ಓದಿ: ಎಟಿಎಂ ನಿಂದ ಹಣ ಡ್ರಾ ಮಾಡುವ ಮೊದಲು ಎಚ್ಚರ; ಬೇಕಾ ಬಿಟ್ಟಿ ಹಣ ಡ್ರಾ ಮಾಡುದ್ರೆ ಶುಲ್ಕ ಹೆಚ್ಚಳ