ಟ್ರೈನ್ ನಲ್ಲಿ ನೈಟ್ ಜರ್ನಿ ಮಾಡಬೇಕು ಎಂದಾದರೆ ಹಲವರಿಗೆ ಲೋಯರ್ ಬರ್ತ್ ಸಿಗಬೇಕು ಎಂಬ ಆಸೆ ಇರುತ್ತದೆ. ಯಾಕೆಂದರೆ ಅಪ್ಪರ್ ಬರ್ತ್ ನಲ್ಲಿ ಪ್ರಯಾಣ ಮಾಡುವಾಗ ಲಗೇಜ್ ಮೇಲೆ ಹಾಕಬೇಕು ಹಾಗೆಯೇ ಮಂಡಿ ನೋವು ಅಂಥಾ ಸಮಸ್ಯೆಗಳು ಇದ್ದರೆ ಅಪ್ಪರ್ ಬರ್ತ್ ಹತ್ತುವುದು ಕಷ್ಟ ಎಂಬ ಸಮಸ್ಯೆಗಳು ಇರುತ್ತವೆ. ಬೇರೆ ಪ್ರಯಾಣಿಕರ ಬಳಿ ರಿಕ್ವೆಸ್ಟ್ ಮಾಡಿ ನಾವು ಲೋಯರ್ ಬರ್ತ್ ಪಡೆಯಬಹುದಾದರೂ ಕೆಲವು ಬಾರಿ ಕಷ್ಟ. ಅದಕ್ಕೇ ಬುಕಿಂಗ್ ಮಾಡುವಾಗ ಲೋಯರ್ ಬರ್ತ್ ಬುಕ್ ಮಾಡಲು ಏನು ಮಾಡಬೇಕು. ರೈಲ್ವೆ ಇಲಾಖೆಯ ನಿಯಮಗಳು ಏನೇನು ಎಂಬುದನ್ನು ನೋಡೋಣ.
ಹಿರಿಯನಾಗರಿಕರಿಗೆ ಲೋಯರ್ ಬರ್ತ್ ಅನುಕೂಲ :- ಹಿರಿಯ ನಾಗರಿಕರು ಪ್ರಯಾಣ ಮಾಡುವಾಗ ಅಪ್ಪರ್ ಅಥವಾ ಮಿಡಲ್ ಬರ್ತ್ ಅವರಿಗೆ ಕಷ್ಟ ಆಗುತ್ತದೆ. ಆರಾಮದಾಯಕವಾಗಿ ಪ್ರಯಾಣ ಮಾಡಲು ಅವರಿಗೆ ಲೋಯರ್ ಬರ್ತ್ ಹೆಚ್ಚು ಅನುಕೂಲ ಆಗುತ್ತದೆ. ಅದರಿಂದ ಅವರಿಗೆ ಅನುಕೂಲ ಆಗಲಿ ಎಂದು ರೈಲ್ವೆ ಇಲಾಖೆ ಕೆಲವು ಸೌಲಭ್ಯಗಳನ್ನು ಒದಗಿಸಿದೆ.
ದೀರ್ಘಾವಧಿ ಪ್ರಯಾಣಕ್ಕೆ ಹೆಚ್ಚು ಅನುಕೂಲ :- ದೂರದ ಊರಿಗೆ ಪ್ರಯಾಣ ಮಾಡುವಾಗ ಅಪ್ಪರ್ ಬರ್ತ್ ನಲ್ಲಿ ಇದ್ದರೆ ನಾವು ಎಲ್ಲಿ ಇದ್ದೇವೆ ಎಂಬುದನ್ನು ತಿಳಿಯುವುದು ಕಷ್ಟ. ಈಗ ಆನ್ಲೈನ್ ಮೂಲಕ ನಮ್ಮ ಸ್ಥಳವನ್ನು ಕಂಡುಹಿಡಿಯ ಬಹುದು ಎಂದರು ಸಹ ನಮಗೆ ಪ್ರಯಾಣ ಮಾಡಿದ ಖುಷಿ ಇರುವುದಿಲ್ಲ ಅದೇ ನಮಗೆ ಲೋಯರ್ ಬರ್ತ್ ಸಿಕ್ಕಿದರೆ ಸುತ್ತಲೂ ಇರುವ ವಾತಾವರಣವನ್ನು ನೋಡುತ್ತ ಕಿಟಕಿಯ ಪಕ್ಕದಲ್ಲಿ ಕುಳಿತು ಸುತ್ತಲಿನ ದೃಶ್ಯ ನೋಡುವ ಅವಕಾಶ ಸಿಗುತ್ತದೆ. ಹಾಗೆಯೇ ನಮಗೆ ಹೊರಗಿನ ಗಾಳಿಯನ್ನು ಸೇವಿಸಲು ಸಾಧ್ಯವಾಗುತ್ತದೆ. ಅದರಿಂದ ಮಕ್ಕಳಿಂದ ಹಿರಿಯವರಿಗೂ ಸಹ ಪ್ರಯಾಣ ಮಾಡುವಾಗ ಲೋಯರ್ ಬರ್ತ್ ಇಷ್ಟ ಆಗುತ್ತದೆ.
ಇದನ್ನೂ ಓದಿ: PPF ಹಾಗೂ SSY ಯೋಜನೆಗಳಲ್ಲಿ ಯಾವ ಯಾವ ಯೋಜನೆಯಲ್ಲಿ ಹೂಡಿಕೆ ಮಾಡುವುದು ಹೆಚ್ಚು ಉಪಯುಕ್ತ ಎಂಬುದನ್ನು ತಿಳಿಯೋಣ.
ಹಿರಿಯ ನಾಗರಿಕರಿಗೆ ಲೋಯರ್ ಬರ್ತ್ ಬುಕ್ ಮಾಡುವುದು ಹೇಗೆ?
ಮನೆಯ ಹಿರಿಯ ನಾಗರಿಕರಿಗೆ ಪ್ರಯಾಣ ಮಾಡುವಾಗ ಬರ್ತ್ ಸೆಲೆಕ್ಟ್ ಮಾಡುವುದು ಹೇಗೆ ಎಂಬುದನ್ನು ನೋಡೋಣ. ನೀವು ಪ್ರಯಾಣ ಮಾಡುವಾಗ ತುಂಬಾ ದಿನಗಳ ಮೊದಲು ಟಿಕೆಟ್ ಬುಕ್ ಮಾಡಿದರೆ ಮಾತ್ರ ನೀವು ನಿಮ್ಮ ಇಷ್ಟದ ಬರ್ತ್ ಸೆಲೆಕ್ಟ್ ಮಾಡಲು ಸಾಧ್ಯ ಇಲ್ಲವಾದರೆ ನೀವು ರೈಲ್ವೆ ಇಲಾಖೆ ನೀಡಿದ ಬರ್ತ್ ನಲ್ಲಿ ಪ್ರಯಾಣ ಮಾಡಬೇಕಾಗುತ್ತದೆ.
ರೈಲ್ವೆ ಇಲಾಖೆ ಹಿರಿಯ ನಾಗರಿಕರಿಗೆ ಲೋಯರ್ ಬರ್ತ್ ನೀಡಲಿದೆ :- ಸಾಮಾನ್ಯವಾಗಿ ರೈಲ್ವೆ ಟಿಕೆಟ್ ಬುಕ್ ಮಾಡುವಾಗ ಪ್ರಯಾಣಿಕರ ಹೆಸರು ಆಧಾರ್ ಕಾರ್ಡ್ ವಯಸ್ಸು ಲಿಂಗ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿ ಟಿಕೆಟ್ ಬುಕ್ ಮಾಡುತ್ತೇವೆ. ಆಗ 60 ವರ್ಷ ಮೇಲ್ಪಟ್ಟ ವ್ಯಕ್ತಿಗಳಿಗೆ ರೈಲ್ವೆ ಇಲಾಖೆಯಿಂದಲೇ ಲೋಯರ್ ಬರ್ತ್ ನೀಡಲಾಗುತ್ತದೆ. ಬರ್ತ್ ಹಂಚಿಕೆ ಮಾಡುವಾಗ IRCTC ಕಡೆಯಿಂದಲೇ ಲೋಯರ್ ಭರ್ತಿ ನೀಡಲಾಗುತ್ತದೆ ಎಂದು ಇಲಾಖೆ ಮಾಹಿತಿ ತಿಳಿಸಿದೆ.
ಸೀಟ್ ಇಲ್ಲದೆ ಇದ್ದರೆ ನಿಮಗೆ ಲೋಯರ್ ಬರ್ತ್ ಸಿಗುವುದಿಲ್ಲ :- ನೀವು ಪ್ರಯಾಣ ಮಾಡುವಾಗ ರೈಲು ಟಿಕೆಟ್ ಬುಕ್ ಮಾಡುವಾಗ ಒಮ್ಮೆ ರೈಲಿನ ಎಲ್ಲಾ ಲೋಯರ್ ಬರ್ತ್ ಗಳು ಭರ್ತಿ ಆಗಿವೆ ಎಂಬ ಸಮಯದಲ್ಲಿ ನೀವು ಲೋಯರ್ ಬರ್ತ್ ಬುಕ್ ಮಾಡಿದರು ಸಹ ನಿಮಗೆ ಹಲವು ಬಾರಿ ಲೋಯರ್ ಬರ್ತ್ ಸಿಗುವುಲ್ಲ. ಹಿರಿಯ ನಾಗರಿಕರು ತಡವಾಗಿ ಬರ್ತ್ ಬೇಕು ಎಂದು ಬುಕ್ ಮಾಡಿದರೂ ನಿಮಗೆ ಲೋಯರ್ ಬರ್ತ್ ಸಿಗುವುದಿಲ್ಲ.
ಎಲ್ಲ ಬೋಗಿಗಳಿಗೂ ಹಿರಿಯ ನಾಗರಿಕರಿಗೆ ಲೋಯರ್ ಬರ್ತ್ ಬುಕ್ ಮಾಡಲು ಸಾಧ್ಯ: ನೀವು ರೈಲ್ವೆ ಪ್ರಯಾಣದಲ್ಲಿ ಯಾವುದೇ ಬೋಗಿಯಲ್ಲಿ ನೀವು ಟಿಕೆಟ್ ಬುಕ್ ಮಾಡಿದರು ನೀವು ಲೋಯರ್ ಬರ್ತ್ ಬುಕಿಂಗ್ ಮಾಡಲು ಸಾಧ್ಯವಿದೆ. ಸಾಮಾನ್ಯ ಬೋಗಿ ಅಥವಾ 2 AC ಟೈರ್, 3 AC ಟೈರ್ ಕೋಚ್ ನಲ್ಲಿ ನೀವು ಹಿರಿಯ ನಾಗರಿಕರಿಗೆ ಲೋಯರ್ ಬರ್ತ್ ಬುಕ್ ಮಾಡಲು ಸಾಧ್ಯ.
ಇದನ್ನೂ ಓದಿ: ಅನ್ನಭಾಗ್ಯ ಯೋಜನೆಯ ಎರಡು ತಿಂಗಳ ಹಣ ಫಲಾನುಭವಿಗಳ ಖಾತೆಗೆ ಜಮಾ ಆಗಿಲ್ಲ.
ಹಿರಿಯ ನಾಗರಿಕರ ಕೋಟಾದಲ್ಲಿ ಲೋಯರ್ ಬರ್ತ್ ಬುಕಿಂಗ್ ಮಾಡಬಹುದು :-
ಹಿರಿಯ ನಾಗರಿಕರ ಅನುಕೂಲ ಆಗಲಿ ಎಂಬ ಉದ್ದೇಶದಿಂದ ರೈಲ್ವೆ ಇಲಾಖೆಯು ಹಿರಿಯ ನಾಗರಿಕರಿಗೆ ಎಂದೇ ಕೋಟಾ ಇರಿಸಿದೆ. ಅದರ ಪ್ರಕಾರವಾಗಿ ನೀವು ಆನ್ಲೈನ್ ಅಥವಾ ಆಫ್ಲೈನ್ ಟಿಕೆಟ್ ಬುಕ್ ಮಾಡುವಾಗ ನೀವು ನೇರವಾಗಿ ಹಿರಿಯ ನಾಗರಿಕರ ಕೋಟಾದಲ್ಲಿ ಬುಕಿಂಗ್ ಮಾಡಬಹುದು. ರೈಲ್ವೆ ಇಲಾಖೆಯು ಸ್ಲೀಪರ್ ಕ್ಲಾಸ್ ಗೆ 6 ಬರ್ತ್ ಗಳು ಹಾಗೂ ಎಸಿ-3 ಟೈರ್ ಮತ್ತು ಎಸಿ-2 ಟೈರ್ ಕೋಚ್ ಗಳಿಗೆ 3 ಬರ್ತ್ ಗಳು ಹಿರಿಯ ನಾಗರಿಕರ ಕೋಟಾದಲ್ಲಿ ಇರುತ್ತದೆ. ರೈಲುಗಳ ಮೇಲೆ ಈ ಸಂಖ್ಯೆಗಳು ಹೆಚ್ಚು ಕಡಿಮೆ ಆಗುತ್ತದೆ.
ಇನ್ನೂ ಹಿರಿಯ ನಾಗರಿಕರಿಗೆ ಎಂದೇ ಮಿಸಲಿರಿಸಿದ ಕೋಟಾನಲ್ಲಿ 60 ವರ್ಷ ಅಥವಾ ಅದಕ್ಕೂ ಹೆಚ್ಚಿನ ವಯಸ್ಸಿನವರ ಪುರುಷರಿಗೆ ಹಾಗೂ 45 ವರ್ಷಕ್ಕೂ ಹೆಚ್ಚಿನ ಮಹಿಳೆಯರಿಗೆ ರೈಲ್ವೆ ಇಲಾಖೆಯು ಹಿರಿಯ ನಾಗರಿಕರು ಎಂದು ಪರಿಗಣನೆ ಮಾಡಿ ಲೋಯರ್ ಬರ್ತ್ ನೀಡುತ್ತದೆ. ಇದರ ಜೊತೆಗೆ ರೈಲಿನಲ್ಲಿ ಪ್ರಯಾಣ ಮಾಡುವ ಗರ್ಭಿಣಿಯರಿಗೆ ಸಹ ರೈಲ್ವೆ ಇಲಾಖೆಯು ಲೋಯರ್ ಬರ್ತ್ ಆಯ್ಕೆ ಪಡೆಯುವ ಅವಕಾಶ ನೀಡಿದೆ. ಆದರೆ ಒಂದು ನೆನಪಿಡುವ ವಿಷಯ ಏನೆಂದರೆ ಈ ಟಿಕೆಟ್ಗಳನ್ನು ನೀವು ಪಡೆಯಬೇಕು ಎಂದರೆ ರೈಲು ಟಿಕೆಟ್ ಬುಕಿಂಗ್ ಕೌಂಟರ್ಗಳಲ್ಲಿ ಮಾತ್ರ ಟಿಕೆಟ್ ಪಡೆಯಬೇಕು.
ಟಿಟಿ ಬಳಿ ಮಾತನಾಡಿ :- ಒಂದು ವೇಳೆ ನಿಮಗೆ ಯಾವುದೇ ಕಾರಣದಿಂದ ಲೋಯರ್ ಬರ್ತ್ ಸಿಗಲಿಲ್ಲ ಎಂದಾದರೆ ನೀವು ಹಿರಿಯ ನಾಗರಿಕರು ಅಥವಾ ನಿಮಗೆ ಯಾವುದೇ ರೀತಿಯಲ್ಲಿ ನಿಮಗೆ ಅಪ್ಪರ್ ಬರ್ತ್ ನಲ್ಲಿ ಪ್ರಯಾಣ ಮಾಡುವುದು ಕಷ್ಟ ಆಗುತ್ತಿದೆ ಎಂದಾದರೆ ನೀವು ತಕ್ಷಣ ರೈಲ್ವೆ ಟಿಟಿ ಬಳಿ ಹೋಗಿ ನಿಮ್ಮ ಸಮಸ್ಯೆ ಹೇಳಿದರೆ ಅವರೇ ನಿಮಗೆ ಎಲ್ಲಿ ಆದರೂ ಅಡ್ಜಸ್ಟ್ಮೆಂಟ್ ಮಾಡಿ ಲೋಯರ್ ಬರ್ತ್ ಸಿಗುವಂತೆ ಸಹಾಯ ಮಾಡುತ್ತಾರೆ.
ನೀವು ರೈಲ್ವೆ ಪ್ರಯಾಣದಲ್ಲಿ ಲೋಯರ್ ಬರ್ತ್ ಬಿಟ್ಟು ಬೇರೆ ಯಾವುದೇ ಬರ್ತ್ ನಲ್ಲಿ ಪ್ರಯಾಣ ಮಾಡುತ್ತೀರಿ ಎಂದರೆ ನೀವು ಬುಕಿಂಗ್ ಸಮಯದಲ್ಲಿ ನೀವು ಯಾವುದೇ ಆಯ್ಕೆ ಮಾಡಬೇಕಾಗಿಲ್ಲ. ಹಾಗೆಯೆ ನಿಮಗೆ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ. ನೀವು ಮೊದಲೇ ಟಿಕೆಟ್ ಬುಕ್ ಮಾಡಿದರೆ ನಿಮಗೆ ಲೋಯರ್ ಮಿಡಲ್ ಅಪ್ಪರ್ ಹಾಗೂ ಸೈಡ್ ಲೋಯರ್ ಹಾಗೂ ಸೈಡ್ ಅಪ್ ಅಪ್ಪರ್ ಆಪ್ಷನ್ ಇರುತ್ತವೆ. ನೀವು ಪ್ರಯಾಣ ಬೆಳೆಸುವ ಹಿಂದಿನ ದಿನ ಅಥವಾ ಸ್ವಲ್ಪ ದಿನದ ಹಿಂದೆ ಬೈಕ್ ಮಾಡಿದರೆ ಈ ಆಪ್ಷನ್ ಗಳು ಸಿಗುವ ಸಂಭವ ಕಡಿಮೆ.