ವೈದ್ಯಕೀಯ ಮತ್ತು ತಾಂತ್ರಿಕ ಕ್ಷೇತ್ರದಲ್ಲಿ ಕೆಲಸ ಮಾಡಲು ಆಸಕ್ತಿ ಇರುವ ವ್ಯಕ್ತಿಗಳಿಗೆ ಈಗ ಇಂದಿರಾ ಗಾಂಧಿ ಸೆಂಟರ್ ಫಾರ್ ಅಟಾಮಿಕ್ ರಿಸರ್ಚ್ನಲ್ಲಿ ಹುದ್ದೆಗಳು ಖಾಲಿ ಇವೆ. ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು ಎಂದು ಇಲಾಖೆ ಮಾಹಿತಿ ತಿಳಿಸಿದೆ. ಹುದ್ದೆಯ ಬಗ್ಗೆ ಸಂಪೂರ್ಣ ಮಾಹಿತಿಗೆ ಈ ಲೇಖನವನ್ನು ಓದಿ.
ಹುದ್ದೆಯ ಬಗ್ಗೆ ಮಾಹಿತಿ :- ಇಂದಿರಾ ಗಾಂಧಿ ಸೆಂಟರ್ ಫಾರ್ ಅಟಾಮಿಕ್ ರಿಸರ್ಚ್ನಲ್ಲಿ ಒಟ್ಟು 91 ಹುದ್ದೆ ಖಾಲಿ ಇವೆ. ಈ ಸಂಸ್ಥೆಯು ಭಾರತ ಸರ್ಕಾರದ ಪರಮಾಣು ಶಕ್ತಿ ಇಲಾಖೆ ಅಡಿಯಲ್ಲಿ ಬರುತ್ತದೆ. ಭಾರತದಾದ್ಯಂತ ವಿವಿಧ ವೈದ್ಯಕೀಯ ಮತ್ತು ತಾಂತ್ರಿಕ ಹುದ್ದೆಗಳ ಭರ್ತಿಗೆ ಅರ್ಜಿಯನ್ನು ಆಹ್ವಾನಿಸಿದೆ. ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜೂನ್ 30 2024 ಆಗಿರುತ್ತದೆ.
ಯಾವ ವಿಭಾಗದಲ್ಲಿ ಏಷ್ಟು ಹುದ್ದೆಗಳು ಇವೆ ಮತ್ತು ವಿದ್ಯಾರ್ಹತೆ ವಿವರಗಳು ಹೀಗಿವೆ
- 15 ಸೈಂಟಿಫಿಕ್ ಆಫೀಸರ್ ಹುದ್ದೆಗಳು ಇವೆ. ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಸಂಬಂಧಿತ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು.
- 20 ಟೆಕ್ನಿಕಲ್ ಆಫೀಸರ್ ಹುದ್ದೆಗಳು ಇವೆ. ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿ ಸಂಬಂಧಿತ ವಿಷಯದಲ್ಲಿ ಪದವಿ ಪಡೆದಿರಬೇಕು.
- ಒಟ್ಟು 25 ನರ್ಸ್- ಹುದ್ದೆಗಳು ಇವೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಯು ನರ್ಸಿಂಗ್ನಲ್ಲಿ ಡಿಪ್ಲೋಮಾ ಅಥವಾ ಪದವಿ ಪಡೆದಿರಬೇಕು.
- ಒಟ್ಟು 30 ಟೆಕ್ನೀಷಿಯನ್ ಹುದ್ದೆಗಳು ಇವೆ.
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿ ಡಿಪ್ಲೋಮಾ ಮತ್ತು ಸರ್ಟಿಫಿಕೇಷನ್ ಕೋರ್ಸ್ ಮಗಿಸಿರಬೇಕು.
ವಯಸ್ಸಿನ ಮಿತಿ :-
- ಸೈಂಟಿಫಿಕ್ ಆಫೀಸರ್ ಹುದ್ದೆಗೆ ಅರ್ಜಿ ಸಲ್ಲಿಸಲು ಗರಿಷ್ಠ 35 ವರ್ಷ.
- ಟೆಕ್ನಿಕಲ್ ಆಫೀಸರ್ ಹುದ್ದೆಗೆ ಅರ್ಜಿ ಸಲ್ಲಿಸಲು ಗರಿಷ್ಠ 30 ವರ್ಷ.
- ಟೆಕ್ನೀಷಿಯನ್ ಹುದ್ದೆಗೆ ಗರಿಷ್ಠ 28 ವರ್ಷ.
- ಮೇಲಿನ ಎಲ್ಲಾ ಹುದ್ದೆಗಳಿಗೆ ಮೀಸಲಾತಿ ಇರುತ್ತದೆ. ಎಸ್ಸಿ ಅಥವಾ ಎಸ್ಟಿ ಅಭ್ಯರ್ಥಿಗಳಿಗೆ ಇತ್ತು 5 ವರ್ಷ ಮೀಸಲಾತಿ ಇದೆ. ಹಾಗೂ ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಮೀಸಲಾತಿ ಇದೆ ಹಾಗೂ ಅಂಗವಿಕಲ ಅಭ್ಯರ್ಥಿಗೆ 10 ವರ್ಷಗಳ ಮೀಸಲಾತಿ ಇರುತ್ತದೆ.
ಅರ್ಜಿ ಶುಲ್ಕ :- ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿ 500 ರೂಪಾಯಿ ಅರ್ಜಿ ಶುಲ್ಕ ಇರುತ್ತದೆ. ಉಳಿದವರಿಗೆ ಯಾವುದೇ ಅರ್ಜಿ ಶುಲ್ಕ ಇಲ್ಲ.
ಆಯ್ಕೆ ವಿಧಾನ ಹೇಗೆ ಇರುತ್ತದೆ?
ಮೊದಲು ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಆನ್ಲೈನ್ ಎಕ್ಸಾಮ್ ನಡೆಸಿ ಅದರಲ್ಲಿ ಉತ್ತೀರ್ಣ ಆಗಿರುವ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಆಹ್ವಾನ ಮಾಡಲಾಗುತ್ತದೆ. ಸಂದರ್ಶನದಲ್ಲಿ ಆಯ್ಕೆ ಆದ ಅಭ್ಯರ್ಥಿಗಳಿಗೆ ಯಾವ ಸ್ಥಳದಲ್ಲಿ ಕೆಲಸ ಮಾಡಬೇಕು ಎಂಬ ಮಾಹಿತಿಯನ್ನು ನೀಡಲಾಗುತ್ತದೆ. ಪರೀಕ್ಷೆಗಳು ಎರಡು ಹಂತದಲ್ಲಿ ನಡೆಯಲಿದೆ. ಗಣಿತ, ವಿಜ್ಞಾನ ಹಾಗೂ ಸಾಮಾನ್ಯ ಜ್ಞಾನಕ್ಕೆ ಸಂಬಂಧಿಸಿದ ಪ್ರಶ್ನೆ ಇರುತ್ತದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಅರ್ಜಿ ಸಲ್ಲಿಸುವುದು ಹೇಗೆ?: ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ ವೆಬ್ಸೈಟ್ ಗೆ ತೆರಳಿ ನೋಂದಣಿ ಮಾಡಿಕೊಳ್ಳಬೇಕು. ನಂತರ ಅರ್ಜಿ ನಮೂನೆಯಲ್ಲಿ ಕೇಳಲಾಗಿರುವ ಎಲ್ಲಾ ಮಾಹಿತಿಗಳನ್ನು ಭರ್ತಿ ಮಾಡಿ ಶುಲ್ಕ ಪಾವತಿಸಿ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸುವಾಗ ನೀವು ಭರ್ತಿ ಮಾಡಿರುವ ಎಲ್ಲಾ ಮಾಹಿತಿಗಳು ಸರಿಯಾಗಿ ಇವೆಯೇ ಎಂಬುದನ್ನು ಇನ್ನೊಮ್ಮೆ ತಿಳಿಯುವುದು ಉತ್ತಮ. ಅಧಿಸೂಚನೆ PDF ಡೌನ್ ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಮೋದಿ ಸರ್ಕಾರದ ಹೊಸ ಯೋಜನೆಯಲ್ಲಿ ಮಹಿಳೆಯರಿಗೆ ಸಿಗಲಿದೆ ಬರೋಬ್ಬರಿ 11 ಸಾವಿರ ರೂಪಾಯಿ.
ಇದನ್ನೂ ಓದಿ: ಕೇಂದ್ರ ಸರ್ಕಾರದಿಂದ ಮಹಿಳೆಯರಿಗೆ ಗುಡ್ ನ್ಯೂಸ್; ಕೇಂದ್ರ ಸರ್ಕಾರದಿಂದ 3 ಲಕ್ಷದವರೆಗೆ ಸಿಗಲಿದೆ ಸಾಲ ಸೌಲಭ್ಯ..