ಸರ್ಕಾರಿ ಸೇವೆ ಸಲ್ಲಿಸಲು ಈಗ ಒಂದು ಉತ್ತಮ ಅವಕಾಶವನ್ನು ರಾಜ್ಯ ಸರ್ಕಾರವು ನೀಡುತ್ತಿದೆ. ಗ್ರಾಮ ಲೆಕ್ಕಾಧಿಕಾರಿ ಹುದ್ದೆಗಳ ಜೊತೆಗೆ ಸರ್ವೇ ಡಿಪಾರ್ಟ್ಮೆಂಟ್ ಗೆ ಸಹ ಹುದ್ದೆಯ ನೇಮಕಾತಿ ನಡೆಯುತ್ತಿದೆ. ಈಗಾಗಲೇ ಜಮೀನಿನ ಸರ್ವೇ ಕೆಲಸಗಳು ಬಹಳ ವಿಳಂಬವಾಗಿವೆ. ಜಮೀನು ತೆಗೆದುಕೊಳ್ಳಲು ಅಥವಾ ಮಾರಾಟ ಮಾಡಲು ಜೊತೆಗೆ ಜಮೀನಿನ ಹಕ್ಕು ಪತ್ರ ತೆಗೆದುಕೊಳ್ಳಲು ಸರ್ವೇ ಮಾಡಿಸುವುದು ಅಗತ್ಯ. ಆದರೀಗ ರಾಜ್ಯದಲ್ಲಿ ಗ್ರಾಮ ಲೆಕ್ಕಾಧಿಕಾರಿಗಳು ಕೊರತೆ ಇರುವುದರಿಂದ ಸದ್ಯದಲ್ಲಿಯೇ ಗ್ರಾಮ ಲೆಕ್ಕಾಧಿಕಾರಿ ಹುದ್ದೆ ಮತ್ತು ಸರ್ವೇಯರ್ ಹುದ್ದೆಗಳ ನೇಮಕಾತಿ ಮಾಡಿಕೊಳ್ಳಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಕಲಬುರಗಿ ನಗರದಲ್ಲಿ ವಿಭಾಗ ಮಟ್ಟದ ಕಂದಾಯ ಇಲಾಖೆ ಅಧಿಕಾರಿಗಳ ಸಭೆಗಿಂತ ಮೊದಲು ಮಾತನಾಡಿ ನೇಮತಿಯ ಬಗ್ಗೆ ಮಾಹಿತಿ ತಿಳಿಸಿದ್ದಾರೆ.
ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರ ಹೇಳಿಕೆ ಏನು?: ಕಂದಾಯ ಸಚಿವವಾರದ ಕೃಷ್ಣ ಬೈರೇಗೌಡರು ಕಲಬುರಗಿಯ ನಗರದ ವಿಭಾಗ ಮಟ್ಟದ ಕಂದಾಯ ಇಲಾಖೆ ಅಧಿಕಾರಿಗಳ ಸಭೆಗೂ ಮುನ್ನ ಪ್ರತಿಕಾ ವರದಿಗಾರರ ಜೊತೆ ಮಾತನಾಡಿ ಈಗಲೇ ರಾಜ್ಯ ಸರ್ಕಾರವು 1000 ಗ್ರಾಮ ಲೆಕ್ಕಾಧಿಕಾರಿ ಹುದ್ದೆಗಳ ನೇಮಕಾತಿಗೆ ಕ್ರಮ ಕೈಗೊಂಡಿದೆ ಅದರ ಜೊತೆಯಲ್ಲಿ ರಾಜ್ಯದಲ್ಲಿ ಸರ್ವೇಯರ್ ಹುದ್ದೆಗಳು ಖಾಲಿ ಇರುವ ಕಾರಣದಿಂದ ಜನರಿಗೆ ತೊಂದರೆ ಉಂಟಾಗುವುದು ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಸರ್ಕಾರವು ಸರ್ವೇಯರ್ ಹುದ್ದೆಗಳ ನೇಮಕಾತಿ ಮಾಡಿಕೊಳ್ಳಲಾಗುವುದು. ಇದರಿಂದ ಜಮೀನಿನ ಹಲವು ಸಮಸ್ಯೆಗಳು ಸುಲಭವಾಗಿ ಪರಿಹಾರ ಸಿಗಲಿದೆ ಎಂದು ಹೇಳಿದರು.
ಸರ್ವೇ ಕೆಲಸಕ್ಕೆ ವಿಳಂಬ :- ಸರ್ವೇ ಆಫೀಸರ್ ಇಲ್ಲದೆ ಇರುವ ಕಡೆಗಳಲ್ಲಿ ಕೆಲಸಗಳು ವಿಳಂಬ ಆಗುತ್ತಿದೆ. ಜನರಿಗೆ ಸಮಯಕ್ಕೆ ಸರಿಯಾಗಿ ಸರ್ವೇ ಮಾಹಿತಿಗಳು ಅಥವಾ ಯಾವುದೇ ಭೂ ವಿವಾದದ ತೊಂದರೆಗಳನ್ನು ಬಗೆ ಹರಿಸಲು ಸಾಧ್ಯವಾಗುತ್ತಿಲ್ಲ. ಖಾಲಿ ಇರುವ ಸರ್ವೇ ಆಫೀಸ್ ಹುದ್ದೆಗಳ ಭರ್ತಿ ಮಾಡಿದರೆ ಜನರಿಗೆ ಬಹಳ ಅನುಕೂಲ ಆಗಲಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
“ರಾಜ್ಯದಲ್ಲಿ ಹೊಸದಾಗಿ 1 ಸಾವಿರ ಗ್ರಾಮ ಲೆಕ್ಕಾಧಿಕಾರಿಗಳ ನೇಮಕಕ್ಕೆ ಕ್ರಮ ಕೈಗೊಳ್ಳಲಾಗಿದೆ. ಸರ್ವೆ ಕೆಲಸಗಳು ವಿಳಂಬವಾಗುವುದನ್ನು ತಪ್ಪಿಸಲು ಸರ್ವೆಯರ್ಗಳ ಹುದ್ದೆಗಳನ್ನೂ ಭರ್ತಿ ಮಾಡಲಾಗುವುದು” ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ. @CMofKarnataka @siddaramaiah @krishnabgowda pic.twitter.com/kELvF4byUg
— DIPR Karnataka (@KarnatakaVarthe) June 24, 2024
ಇದನ್ನೂ ಓದಿ: ITI, ಡಿಪ್ಲೊಮಾ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್; ಈಗ ವಿದೇಶದಲ್ಲೂ ಸಿಗಲಿದೆ ನಿಮಗೆ ಕೆಲಸ!
ಹೆಚ್ಚು ಮಳೆ ಬೀಳುವ ಕಡೆ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ :-
ಕಂದಾಯ ಸಚಿವರಾಗಿರುವ ಕೃಷ್ಣ ಬೈರೇಗೌಡ ಅವರು ರಾಜ್ಯದಲ್ಲಿ ಈ ಬಾರಿ ಹೆಚ್ಚಿನ ಮಳೆ ಬೀಳಲಿದೆ ಎಂದು ಈಗಾಗಲೇ ಹವಾಮಾನ ಇಲಾಖೆ ಸೂಚನೆ ನೀಡಿದೆ. ಇದರ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಅತಿ ಹೆಚ್ಚು ಮಳೆ ಬೀಳಬಹುದಾದ ಪ್ರದೇಶಗಳನ್ನು ಗುರುತಿಸಲಾಗಿದೆ. ಈಗಾಗಲೇ ರಾಜ್ಯದಲ್ಲಿ ಅನೇಕ ಕಡೆ ಮಳೆಯಿಂದ ಹಲವು ಅನಾಹುತಗಳು ಆಗಿದೆ. ಇನ್ನು ಮುಂದಿನ ದಿನಗಳಲ್ಲಿ ಪ್ರತಿ ವರ್ಷಕ್ಕಿಂತ ಹೆಚ್ಚಿನ ಮಳೆ ಬೀಳುವ ಸಾಧ್ಯತೆ ಇದೆ. ಈಗಲೇ ಹಲವು ಜಿಲ್ಲೆಗಳಿಗೆ ಎಲ್ಲೋ ಅಲರ್ಟ್ ಮತ್ತು ರೆಡ್ ಅಲರ್ಟ್ ಘೋಷಣೆ ಮಾಡ್ಳಗಿದೆ. ಇದರಿಂದ ತಾಲೂಕು ಮತ್ತು ಜಿಲ್ಲೆಗಳ ಅಧಿಕಾರಿಗಳಿಗೆ ಮುನ್ನೆಚ್ಚರಿಕೆ ವಹಿಸುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಈ ಬಾರಿ ಮಳೆಗೆ ಹಲವು ಹಾನಿಗಳಾಗಿವೆ :- ಈ ಬಾರಿ ಪ್ರತಿ ವರುಷಕಿಂತ ಮೊದಲು ಮಳೆಗಾಲ ಆರಂಭ ಆಗಿದೆ. ಮೇ ಎರಡನೇ ವಾರದಿಂದಲೇ ರಾಜ್ಯದಲ್ಲಿ ಮಳೆ ಬೀಳುತ್ತಿದೆ. ಸಿಡಿಲು ಬಡಿದು ಸಾವಿಗೀಡಾಗಿರುವ ಘಟನೆಗಳು ನಡೆದಿವೆ. ಮಳೆಯ ಮುನ್ಸೂಚನೆ ಇದ್ದರೂ ಸಹ ರಾಜ್ಯದಲ್ಲಿ ರೈತರು ಬೆಳೆದ ಬೆಳೆಗಳ ಹಾನಿಗೊಳಗಾಗಿವೆ. ಕೆಲವು ಕಡೆಗಳಲ್ಲಿ ಮೋಜು ಮಸ್ತಿ ಮಾಡಲು ಫಾಲ್ಸ್ ಗೆ ಹೋದವರು ಪ್ರಾಣ ಕಳೆದುಕೊಂಡರು.
ಇದನ್ನೂ ಓದಿ: ಇಂದಿರಾ ಗಾಂಧಿ ಸೆಂಟರ್ ಫಾರ್ ಅಟಾಮಿಕ್ ರಿಸರ್ಚ್ನಲ್ಲಿ 91 ಖಾಲಿ ಹುದ್ದೆಗಳು ಇವೆ. ಈಗಲೇ ಅರ್ಜಿ ಹಾಕಿ.