ಈಗಾಗಲೇ ಬಿಪಿಎಲ್ ಕಾರ್ಡ್ ಗೆ ಅರ್ಜಿ ಹಾಕಿರುವವರೆಗೆ ಕಾರ್ಡ್ ವಿತರಣೆ ಆಗಿಲ್ಲ ಜೊತೆಗೆ ಹೊಸದಾಗಿ ಬಿಪಿಎಲ್ ಕಾರ್ಡ್ ಗೆ ಅರ್ಜಿಯನ್ನು ಸಲ್ಲಿಸುವವರಿಗೆ ಅರ್ಜಿ ಲಿಂಕ್ ಓಪನ್ ಆಗಿಲ್ಲ. ಇದರಿಂದ ಅನ್ನಭಾಗ್ಯ ಹಾಗೂ ಗೃಹಲಕ್ಷ್ಮಿ ಅಂತಹ ಸರ್ಕಾರದ ಹಲವು ಯೋಜನೆಗಳಿಗೆ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತಿಲ್ಲ. ಇದೆ ಕಾರಣಕ್ಕೆ ಸರಕಾರದ ವಿರುದ್ಧ ಸಾರ್ವಜನಿಕರು ಬೇಸರವನ್ನು ವ್ಯಕ್ತಪಡಿಸಿದ್ದರು. ಈಗ ಇದರ ಬಗ್ಗೆ ಮಹತ್ವದ ಮಾಹಿತಿಯನ್ನು ಸಚಿವ ಮುನಿಯಪ್ಪ ಅವರು ನೀಡಿದ್ದಾರೆ.
ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದ ಸಚಿವರು :- ಬಿಪಿಎಲ್ ಮತ್ತು ಎಪಿಎಲ್ ಕಾರ್ಡ್ ವಿತರಣೆ ಆಗದೆ ಇರುವ ಬಗ್ಗೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸಚಿವರು ಮೊದಲು ಇಲಾಖೆಯ ಲೋಪದೋಷಗಳು ಸರಿಪಡಿಸಿ ಮತ್ತು ಈಗಾಗಲೇ 5 ವರ್ಷಗಳಿಂದ ಹೊಸ ರೇಷನ್ ಕಾರ್ಡ್ ಗೆ ಕಾಯುತ್ತಿರುವ ಜನರಿಗೆ ಈ ಕೂಡಲೇ ಎಲ್ಲಾ ಅರ್ಜಿಗಳನ್ನು ಪರಿಶೀಲಾನೆ ನಡೆಸಿ ನಂತರ ಯಾರಿಗೆ ಎಪಿಎಲ್ ಕಾರ್ ಮತ್ತು ಯಾರಿಗೆ ಬಿಪಿಎಲ್ ಕಾರ್ಡ್ ವಿತರಣೆ ಮಾಡಬೇಕೋ ಅವರಿಗೆ ಶೀಘ್ರವಾಗಿ ತಲುಪಿಸುವ ವ್ಯವಸ್ಥೆ ಆಗಬೇಕು ಎಂದು ಎಚ್ಚರಿಕೆ ನೀಡಿದರು.
ಧಾನ್ಯಗಳ ಗುಣಮಟ್ಟ ಚೆನ್ನಾಗಿರಲಿ :- ಬಡವರಿಗೆ ಆಹಾರ ಕೊರತೆ ಉಂಟಾಗಬಾರದು ಹಾಗೂ ಹಸಿವಿನಿಂದ ಬಳಲ ಬಾರದು ಎಂದು ಬಡವರಿಗೆ ಅಕ್ಕಿ ಮತ್ತು ಧಾನ್ಯಗಳನ್ನು ನೀಡಲಾಗುತ್ತದೆ. ನೀವು ಅಕ್ಕಿ ಮತ್ತು ಧಾನ್ಯಗಳ ವಿತರಣೆಯಲ್ಲಿ ಗುಣಮಟ್ಟ ಕಾಯ್ದುಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸಚಿವರು ತಿಳಿಸಿದರು. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಅನ್ನಭಾಗ್ಯ ಅಕ್ಕಿಯನ್ನು ಶೀಘ್ರದಲ್ಲಿ ಬಿಡುಗಡೆ ಮಾಡಬೇಕು :-
ಅನ್ನಭ್ಯಾಗ ಯೋಜನೆಯಲ್ಲಿ 10 ಕೆ.ಜಿ ಅಕ್ಕಿ ನೀಡುವ ಬದಲು. ಕೇಂದ್ರ ಸರ್ಕಾರ ನೀಡುವ 5 ಕೆ.ಜಿ ಅಕ್ಕಿಯ ಜೊತೆಗೆ ಇನ್ನುಳಿದ 5 ಕೆ. ಜಿ ಅಕ್ಕಿಯ ಹಣವನ್ನು ರಾಜ್ಯ ಸರ್ಕಾರವು ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಕುಟುಂಬದ ಮುಖ್ಯ ಸದಸ್ಯರ ಖಾತೆಗೆ ಹಣವನ್ನು ಜಮಾ ಮಾಡಲಾಗುತಿತ್ತು. ಆದರೆ ಮೇ ಮತ್ತು ಜೂನ್ ತಿಂಗಳಲ್ಲಿ ಅನ್ನಭಾಗ್ಯ ಯೋಜನೆಯ ಹಣವನ್ನು ಫಲಾನುಭವಿಗಳಿಗೆ ತಲುಪಿಸಲೇ ಇಲ್ಲ. ಇದರಿಂದ ಬಡವರಿಗೆ ತೊಂದರೆ ಆಗುತ್ತಿದೆ. ಇದನ್ನು ಅರಿತಿರುವ ಸಚಿವರು ಇಲಾಖೆಯ ಅಧಿಕಾರಿಗಳಿಗೆ ಫಲಾನುಭವಿಗಳ ಖಾತೆಗೆ ಶೀಘ್ರವಾಗಿ ಹಣವನ್ನು ಹಾಕಬೇಕು ಎಂದು ತಿಳಿಸಿದ್ದಾರೆ. ಇದರಿಂದ ಅನ್ನಭಾಗ್ಯ ಯೋಜನೆಯ ಹಣವನ್ನು ನಂಬಿ ಬದುಕುತ್ತಿರುವ ಬಡ ಕುಟುಂಬದ ಜನರಿಗೆ ಅನುಕೂಲ ಆಗಲಿದೆ.
ಆಹಾರ ನಿಗಮದಲ್ಲಿ ನಡೆದ ಸಭೆಯಲ್ಲಿ ಸಚಿವರು ಭಾಗಿ :- ಸಚಿವ ಮುನಿಯಪ್ಪ ಅವರು ನಿನ್ನೆ ಆಹಾರ ನಿಗಮದಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ್ದರು.ಅಲ್ಲಿ ಅಧ್ಯಕ್ಷತೆ ವಹಿಸಿಕೊಂಡು ಇಲಾಖೆಯ ಲೋಪದೋಷಗಳ ಬಗ್ಗೆ ಮಾತನಾಡುವ ಜೊತೆಗೆ ಅನ್ನಭಾಗ್ಯ ಹಣವನ್ನು ಶೀಘ್ರವೇ ಜಮಾ ಮಾಡುವಂತೆ ಹೇಳಿದರು. ಹಾಗೂ ಇಲಾಖೆಯ ಪ್ರಗತಿಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದರು. ಇಲಾಖೆಯ ಮುಂದಿನ ಯೋಜನೆಗಳು ಹಾಗೂ ಕಾರ್ಯರೂಪದ ಬಗೆ ಹಾಗೂ ಈಗಾಗಲೇ ಜಾರಿಯಲ್ಲಿ ಇರುವ ಯೋಜನೆಗಳು ಪ್ರಗತಿಯಲ್ಲಿ ಇದೆಯೇ ಇಲ್ಲವೇ ಎಂಬುದರ ಮಗ್ಗೆ ಸಂಪೂರ್ಣ ಮಾಹಿತಿಗಳನ್ನು ಪಡೆದರು. ಇದರ ಜೊತೆಗೆ ಅನ್ನಭಾಗ್ಯ ಯೋಜನೆಯ ಅಕ್ಕಿಗಳು ಹಾಗೂ ಧಾನ್ಯಗಳ ಗುಣಮಟ್ಟದ ಬಗ್ಗೆಯೂ ಚರ್ಚೆ ನಡೆಸಿದರು.
ನಿನ್ನೆ ನಡೆದ ಸಭೆಯ ಬೆನ್ನಲ್ಲೇ ಫಲಾನುಭವಿಗಳಿಗೆ ಅನ್ನಭಾಗ್ಯ ಯೋಜನೆಯ ಹಣ ಜಮಾ ಆಗುವ ಎಲ್ಲ ಸಾಧ್ಯತೆಗಳೂ ಇವೆ ಜೊತೆಗೆ ಎಪಿಎಲ್ ಹಾಗೂ ಬಿಪಿಎಲ್ ಕಾರ್ಡ್ ಗೆ ಅರ್ಜಿ ಸಲ್ಲಿಸದವರ ಸಮಸ್ಯೆ ದೂರವಾಗಲಿದೆ.
ಇದನ್ನೂ ಓದಿ: ಕೇಂದ್ರ ಸರ್ಕಾರದಿಂದ ಮಹಿಳೆಯರಿಗೆ ಗುಡ್ ನ್ಯೂಸ್; ಕೇಂದ್ರ ಸರ್ಕಾರದಿಂದ 3 ಲಕ್ಷದವರೆಗೆ ಸಿಗಲಿದೆ ಸಾಲ ಸೌಲಭ್ಯ.
ಇದನ್ನೂ ಓದಿ: ಕೋಳಿ ಸಾಕಾಣಿಕೆ ಮಾಡಬೇಕು ಅನ್ನೋರಿಗೆ ಗುಡ್ ನ್ಯೂಸ್; ಊಟ ವಸತಿಯೊಂದಿಗೆ ಸಿಗಲಿದೆ ಉಚಿತ ತರಬೇತಿ