ಸ್ನೇಹಿತರೆ ಕೋಳಿ ಸಾಕಣೆ ನಮ್ಮ ದೇಶದಲ್ಲಿ ಕೃಷಿ ಮತ್ತು ಕೃಷಿಗೆ ಸಂಬಂಧಿಸಿದ ಪ್ರಮುಖ ವ್ಯವಹಾರವಾಗಿದೆ. ಹೌದು ಕೋಳಿ ಸಾಕಾಣಿಕೆಯನ್ನ ಉಪ ಕಸುಬನ್ನಾಗಿಸಿಕೊಂಡು ಸಾವಿರಾರು ರೈತರು ಉತ್ತಮ ಆದಾಯ ಗಳಿಸುತ್ತಿದ್ದಾರೆ. ಈ ವ್ಯವಹಾರದ ಮೂಲಕ ಕಡಿಮೆ ಶ್ರಮದಲ್ಲಿ ಹೆಚ್ಚು ಲಾಭ ಗಳಿಸಬಹುದು. ಅಲ್ದೇ ಕೋಳಿ ಮಾಂಸ ಮತ್ತು ಮೊಟ್ಟೆಗಳಿಗೆ ಬೇಡಿಕೆ ನಿರಂತರವಾಗಿ ಹೆಚ್ಚುತ್ತಿರುವ ಸಂದರ್ಭದಲ್ಲಿ, ಕೋಳಿ ಸಾಕಾಣಿಕೆ ಒಂದು ಲಾಭದಾಯಕ ವ್ಯವಹಾರವಾಗಿ ಪರಿಣಮಿಸಿದೆ ಹೀಗಾಗಿ ಈ ಉದ್ಯಮವನ್ನು ಉತ್ತೇಜಿಸಲು, ಭಾರತ ಸರ್ಕಾರವು ಹೊಸ ಪೌಲ್ಟ್ರಿ ಫಾರ್ಮ್ ಲೋನ್ ಯೋಜನೆಯನ್ನು ಪ್ರಾರಂಭಿಸಿದೆ. ಈ ಯೋಜನೆಯಡಿ, ಅರ್ಹ ಉದ್ಯಮಶೀಲರಿಗೆ ಕೋಳಿ ಫಾರ್ಮ್ ಸ್ಥಾಪನೆಗೆ ಗರಿಷ್ಠ ₹9 ಲಕ್ಷ ಸಾಲ ನೀಡಲಾಗುವುದು.
ಹೌದು ಭಾರತ ಸರ್ಕಾರದ ಕೃಷಿ ಇಲಾಖೆಯು ಕೋಳಿ ಸಾಕಾಣಿಕೆಗಾಗಿ ಕೋಳಿ ಫಾರಂ ತೆರೆಯಲು 9 ಲಕ್ಷದವರೆಗೆ ಆರ್ಥಿಕ ನೆರವಿನಡಿ ಸಾಲವನ್ನು ನೀಡಲು ಅವಕಾಶ ಕಲ್ಪಿಸಿದೆ. ಇದಕ್ಕಾಗಿ ಸರ್ಕಾರವು ಈ ಸಾಲವನ್ನು ಕಡಿಮೆ ಬಡ್ಡಿ ಮತ್ತು ಹೆಚ್ಚಿನ ಸಬ್ಸಿಡಿಯೊಂದಿಗೆ ನೀಡುತ್ತದೆ. ಹೀಗಾಗಿ ಭಾರತ ಸರ್ಕಾರದ ಹೊಸ ಯೋಜನೆಯೊಂದಿಗೆ, ಕೋಳಿ ಫಾರ್ಮ್ ತೆರೆಯುವುದು ಇನ್ನಷ್ಟು ಸುಲಭವಾಗಿದೆ, ಹೌದು, ಇತ್ತೀಚೆಗೆ ಭಾರತ ಸರ್ಕಾರವು ಹೊಸ ಯೋಜನೆಯನ್ನು ಪ್ರಾರಂಭಿಸಿದ್ದು, ಇದರಲ್ಲಿ ಕೋಳಿ ಸಾಕಾಣಿಕೆಗೆ ಸಾಲ ನೀಡಲಾಗುತ್ತಿದೆ. ಈ ಯೋಜನೆಯಡಿ, ಕೋಳಿ ಫಾರ್ಮ್ ತೆರೆಯಲು ಸರ್ಕಾರವು 9 ಲಕ್ಷದವರೆಗೆ ಸಾಲವನ್ನು ನೀಡುತ್ತಿದೆ. ಹಾಗಾದ್ರೆ ಅರ್ಜಿ ಸಲ್ಲಿಕೆ ಹೇಗೆ, ಬೇಕಾದ ಅರ್ಹತೆ ಮತ್ತು ದಾಖಲಾತಿ ಏನು ಜೊತೆಗೆ ಇತರ ಮಾಹಿತಿಯನ್ನ ಸಂಪೂರ್ಣವಾಗಿ ತಿಳಿಸಿಕೊಡ್ತೀನಿ.
ಕೋಳಿ ಉದ್ಯಮ ಶುರು ಮಾಡಿ ಲಕ್ಷ ಲಕ್ಷ ಗಳಿಸಿ
ಹೌದು ಈ ಕೋಳಿ ಸಾಕಾಣಿಕೆ ಉದ್ಯಮಮವು ಬಹಳ ಲಾಭಧಾಯಕವಾಗಿದ್ದು, ಈಗ ಯೋಜನೆಯು ಮೂಲಕ ನೀಡುತ್ತಿರುವ ಸಾಲ ಸೌಲಭ್ಯವು ಹೆಚ್ಚಿನ ಸಂಖ್ಯೆಯ ಜನರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ. ಅಲ್ದೇ ರೈತರ ಆದಾಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಅಂತಲೇ ಹೇಳಬಹುದು. ಇನ್ನು ಮುಖ್ಯವಾಗಿ ದೇಶದಲ್ಲಿ ಮಾಂಸ ಮತ್ತು ಮೊಟ್ಟೆಯ ಉತ್ಪಾದನೆಯನ್ನು ಹೆಚ್ಚಿಸುತ್ತ ಬೇಡಿಕೆಗೆ ತಕ್ಕಂತೆ ಉತ್ಪಾದನೆಯ ಗುಣಮಟ್ಟವನ್ನ ಕಾಪಾಡಿಕೊಳ್ಳುತ್ತಿದೆ. ಹೌದು ಈ ಕೋಳಿ ಸಾಕಾಣಿಕೆ ಒಂದು ಲಾಭದಾಯಕ ವ್ಯವಹಾರವಾಗಿದ್ದು, ಅದು ಉದ್ಯಮಶೀಲರಿಗೆ ಉತ್ತಮ ಅವಕಾಶಗಳನ್ನು ನೀಡುತ್ತದೆ. ಹೀಗಾಗಿ ಸರ್ಕಾರದ ಪೌಲ್ಟ್ರಿ ಫಾರ್ಮ್ ಲೋನ್ ಯೋಜನೆಯು ಈ ಉದ್ಯಮವನ್ನು ಪ್ರಾರಂಭಿಸಲು ಮತ್ತು ಅಭಿವೃದ್ಧಿಪಡಿಸಲು ಬಯಸುವವರಿಗೆ ಸಹಾಯ ಮಾಡುವ ಉತ್ತಮ ಯೋಜನೆಯಾಗಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಇನ್ನು ಯೋಜನೆಗೆ ಅರ್ಜಿ ಸಲ್ಲಿಸೋದು ಹೇಗೆ ಏನ್ ಮಾಡ್ಬೇಕು ಒಂದೊಂದಾಗಿ ನೋಡ್ತಾ ಹೋಗೋಣ. ಮುಖ್ಯವಾಗಿ ಯೋಜನೆಯಡಿಯಲ್ಲಿ, ಕೋಳಿ ಸಾಕಣೆಯ ಒಟ್ಟು ವೆಚ್ಚದ 75% ವರೆಗೆ ಸಾಲವನ್ನು ನೀಡಲಾಗುತ್ತದೆ. ಉದಾಹರಣೆಗೆ, ನಿಮ್ಮ ಪೌಲ್ಟ್ರಿ ಫಾರ್ಮ್ ಯೋಜನೆಯ ಪ್ರಕಾರ ಒಟ್ಟು ವೆಚ್ಚವು 10 ಲಕ್ಷ ರೂ ಆಗಿದ್ದರೆ, ಈ ಯೋಜನೆಯಡಿಯಲ್ಲಿ ನಿಮಗೆ ರೂ 10 ಲಕ್ಷದಲ್ಲಿ 75% ಸಾಲವನ್ನು ನೀಡಲಾಗುತ್ತದೆ ಅಂದರೆ ರೂ 7,50,000/-. ಪೌಲ್ಟ್ರಿ ಫಾರ್ಮ್ ಲೋನ್ 2024 ರ ಅಡಿಯಲ್ಲಿ ಸಾಲ ನೀಡುತ್ತಾರೆ. ಇದಕ್ಕೆ ಅರ್ಜಿ ಸಲ್ಲಿಸಲು ನಿಮ್ಮ ಹತ್ತಿರದ SBI ಶಾಖೆಗೆ ಭೇಟಿ ನೀಡಿ.
ಪ್ರಧಾನಮಂತ್ರಿ ಮುದ್ರಾ ಸಾಲ ಅರ್ಜಿ ಫಾರ್ಮ್ ಪಡೆಯಿರಿ. ಅರ್ಜಿ ಫಾರ್ಮ್ನಲ್ಲಿ ನಿಮ್ಮ ಮತ್ತು ನಿಮ್ಮ ಕೋಳಿ ಫಾರ್ಮ್ನ ಎಲ್ಲಾ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಿ. ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಲಗತ್ತಿಸಿ. ಪೂರಿತ ಅರ್ಜಿ ಮತ್ತು ದಾಖಲೆಗಳನ್ನು ಬ್ಯಾಂಕ್ಗೆ ಸಲ್ಲಿಸಿ. ಇನ್ನು ಬ್ಯಾಂಕ್ ನಿಮ್ಮ ಆಯ್ಕೆ ಮಾಡಿದ ಫಾರ್ಮ್ನ ಜಮೀನಿನ ಪರಿಶೀಲನೆ ನಡೆಸುತ್ತದೆ. ಅನುಮೋದನೆಯ ನಂತರ, ಒಟ್ಟು ವೆಚ್ಚದ 75% ರಷ್ಟು ಸಾಲದ ಮೊತ್ತವನ್ನು ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ.
ಇದನ್ನೂ ಓದಿ: ಕೋಳಿ ಸಾಕಾಣಿಕೆ ಮಾಡಬೇಕು ಅನ್ನೋರಿಗೆ ಗುಡ್ ನ್ಯೂಸ್; ಊಟ ವಸತಿಯೊಂದಿಗೆ ಸಿಗಲಿದೆ ಉಚಿತ ತರಬೇತಿ
ಅರ್ಜಿ ಸಲ್ಲಿಸಲು ಅರ್ಹತೆ ಮತ್ತು ಅಗತ್ಯ ದಾಖಲೆಗಳು
ಮುಖ್ಯವಾಗಿ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾದ ಅರ್ಹತೆಗಳನ್ನ ನೋಡೋದಾದ್ರೆ ಮೊದಲಿಗೆ ಅರ್ಜಿ ಸಲ್ಲಿಸುವವರು ಭಾರತೀಯ ನಾಗರಿಕರಾಗಿರಬೇಕು. ಇನ್ನು ಅವ್ರ ವಯೋಮಿಟಿ ಕನಿಷ್ಠ 18 ವರ್ಷ ವಯಸ್ಸು ಆಗಿರಬೇಕು. ಮುಖ್ಯವಾಗಿ ಪೌಲ್ಟ್ರಿ ಫಾರ್ಮ್ ಸ್ಥಾಪನೆಗೆ ಸೂಕ್ತ ಜಮೀನು ಹೊಂದಿರಬೇಕು, ಜೊತೆಗೆ ಯೋಜನಾ ವರದಿ ಮತ್ತು ಯೋಜನೆಯ ವ್ಯವಸ್ಥಾಪನಾ ಯೋಜನೆಯನ್ನು ಸಲ್ಲಿಸಬೇಕಾಗುತ್ತೆ. ಇನ್ನು
ಅರ್ಜಿ ನಮೂನೆಗಳು ಮತ್ತು ವಿವರವಾದ ಮಾಹಿತಿಯನ್ನು ಇಲಾಖೆಯ ವೆಬ್ಸೈಟ್ನಲ್ಲಿ ಕೂಡ ಪಡೆಯಬಹುದು. ಹಾಗಾದ್ರೆ ಏನೆಲ್ಲಾ ದಾಖಲೆಗಳು ಬೇಕು ಅಂತ ನೋಡೋದಾದ್ರೆ, ಅರ್ಜಿದಾರರ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ನಿವಾಸ ಪ್ರಮಾಣಪತ್ರ, ಜಾತಿ ಪ್ರಮಾಣಪತ್ರ, ಬ್ಯಾಂಕ್ ಖಾತೆ ಪಾಸ್ಬುಕ್, ಪಾಸ್ಪೋರ್ಟ್ ಗಾತ್ರದ ಫೋಟೋ, ಬಹಳ ಮುಖ್ಯವಾಗಿ ಫಾರ್ಮ್ನ ಸಂಪೂರ್ಣ ಯೋಜನಾ ವರದಿ ಮಾಹಿತಿ ಮತ್ತು ಪಕ್ಷಿಗಳ ಸಂಖ್ಯೆಗೆ ಸಂಬಂಧಿಸಿದ ಪುರಾವೆಗಳು, ಫಾರ್ಮ್ ಸ್ಥಾಪನೆಯ ಸ್ಥಳದ ನೆಲದ ದಾಖಲೆಗಳು, ಅರ್ಜಿದಾರರ ಆದಾಯ ಮತ್ತು ಇತರ ವ್ಯವಹಾರಗಳಿಗೆ ಸಂಬಂಧಿಸಿದ ದಾಖಲೆಗಳು, ಫಾರ್ಮ್ ಸ್ಥಾಪನೆ ಮತ್ತು ನಿರ್ವಹಣೆಗೆ ಅಗತ್ಯವಿರುವ ಒಟ್ಟು ವೆಚ್ಚದ ವಿವರವಾದ ಅಂದಾಜು,
ಫಾರ್ಮ್ನಲ್ಲಿರುವ ಪಕ್ಷಿಗಳ ಔಷಧಿ ಸೇರಿದಂತೆ ಎಲ್ಲಾ ವೆಚ್ಚಗಳ ವಿವರವನ್ನ ಅರ್ಜಿಯೊಂದಿಗೆ ಒದಗಿಸಬೇಕಾಗುತ್ತದೆ.
ಇನ್ನು ಯೋಜನೆಯಲ್ಲಿ ಮುಖ್ಯವಾಗಿ ಒಂದೊಂದು ವರ್ಗಕ್ಕೆ ಒಂದೊಂದು ರೀತಿಯಲ್ಲಿ ಸಹಾಯಧನವನ್ನ ನೀಡಲಾಗುತ್ತೆ. ಹೌದು
ಸಾಮಾನ್ಯ ವರ್ಗಕ್ಕೆ: 25%, ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ: 33%ರಷ್ಟು ನೀಡಲಾಗುತ್ತೆ. ಇನ್ನು ಯೋಜನೆಗೆ ಅರ್ಜಿ ಸಲ್ಲಿಸಿ ಅರ್ಹ ಫಲಾನುಭವಿಗಳು ಸಾಲ ಪಡೆದ ನಂತರ ಸಾಲ ಮರುಪಾವತಿ ಮಾಡಲು 3 ರಿಂದ 5 ವರ್ಷಗಳು ಸಾಲದ ಅವಧಿಯನ್ನ ನೀಡಲಾಗುತ್ತದೆ.
ಇದನ್ನೂ ಓದಿ: ರಾಜ್ಯದ ರೈತರಿಗೆ ಮತ್ತೆ 3000 ರೂಪಾಯಿ ಬರ ಪರಿಹಾರದ ಹಣ ಜಮಾ ಆಗಲಿದೆ. ನೀವು ನಿಮ್ಮ ಖಾತೆಗೆ ಹಣ ಜಮಾ ಆಗಿದೆಯೇ ಚೆಕ್ ಮಾಡಿಕೊಳ್ಳಿ.