ಟಾಟಾ ಸಮೂಹ ಭಾರತದಲ್ಲಿ ಅತಿ ದೊಡ್ಡ ಸಂಸ್ಥೆ ಎನ್ನುವುದು ಎಲ್ಲರಿಗೂ ತಿಳಿದಿದೆ. ಕೇವಲ ಲಾಭಕ್ಕಾಗಿ ಅಲ್ಲದೆ ಬಡವರ ಮತ್ತು ದೀನದಲಿತರ ಉದ್ಧಾರಕ್ಕಾಗಿ ಹಲವಾರು ಯೋಜನಗಳನ್ನು ಜಾರಿಗೆ ತರುವಲ್ಲಿ ಯಶಸ್ವಿ ಆಗಿದೆ. ಬಡ ಮಕ್ಕಳ ಓದಿಗೆ ಈಗ ಸ್ಕಾಲರ್ಶಿಪ್ ನೀಡುತ್ತಿದ್ದು, ಅರ್ಹರು ಅರ್ಜಿ ಸಲ್ಲಿಸಿ ಸಹಾಯಧನ ಪಡೆಯಬಹುದಾಗಿದೆ.
ಟಾಟಾ ಕ್ಯಾಪಿಟಲ್ ಫಂಕ್ ನೀಡುತ್ತಿದೆ ಸ್ಕಾಲರ್ಶಿಪ್:- ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದ ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಿ ಟಾಟಾ ಕ್ಯಾಪಿಟಲ್ ಫಂಕ್ ಬರೋಬ್ಬರಿ 12 ಸಾವಿರ ರೂಪಾಯಿ ಸ್ಕಾಲರ್ಶಿಪ್ ನೀಡುತ್ತಿದೆ. ಈ ಸ್ಕಾಲರ್ಶಿಪ್ 2024-25 ರ ಸಾಲಿನಲ್ಲಿ ಪ್ರಥಮ ಪಿಯುಸಿ ಅಥವಾ ದ್ವಿತೀಯ ಪಿಯುಸಿ ಅಥವಾ ಡಿಗ್ರಿ ಅಥವಾ ಡಿಪ್ಲೊಮಾ ಅಥವಾ ITI ಓದುತ್ತಿರುವ ವಿದ್ಯಾರ್ಥಿಗಳಿಗೆ ಮಾತ್ರ ಲಭ್ಯವಿದೆ. ಅವರು ಓದುವ ತರಗತಿಯ ಶುಲ್ಕದ ಆಧಾರದ ಮೇಲೆ ಶುಲ್ಕದ 80 ಪ್ರತಿಶತ ಅಥವಾ 10,000 ರೂಪಾಯಿ ಅಥವಾ 12,000 ರೂಪಾಯಿಗಳನ್ನು ಟಾಟಾ ಕ್ಯಾಪಿಟಲ್ ಫಂಕ್ ನೀಡುತ್ತದೆ.
ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು :-
- ಭಾರತೀಯ :- ಈ ಸ್ಕಾಲರ್ಶಿಪ್ ಗೆ ಕೇವಲ ಭಾರತೀಯರು ಮಾತ್ರ ಅರ್ಜಿ ಸಲ್ಲಿಸಬಹುದು. ಭಾರತೀಯ ಪ್ರಜೆ ಆಗಿರದೆ ಇದ್ದರೆ ಯೋಜನೆಗೆ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ.
- ಶಿಕ್ಷಣ :- ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಲು ಪ್ರಥಮ ಪಿಯುಸಿ ಅಥವಾ ದ್ವಿತೀಯ ಪಿಯುಸಿ ಅಥವಾ ಡಿಗ್ರಿ ಅಥವಾ ಡಿಪ್ಲೊಮಾ ಅಥವಾ ITI ತರಗತಿಗಳಲ್ಲಿ ಓದುತ್ತಿರಬೇಕು.
- ಅಂಕ :- ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಲು ವಿದ್ಯಾರ್ಥಿಯು ಹಿಂದಿನ ತರಗತಿಯಲ್ಲಿ ಶೇಕಡಾ 60%ಅಂಕ ಗಳಿಸಿರಬೇಕು.
- ಆದಾಯ :- ಅರ್ಜಿ ಸಲ್ಲಿಸುವ ವಿದ್ಯಾರ್ಥಿಯ ಕುಟುಂಬದ ಒಟ್ಟು ವಾರ್ಷಿಕ ಆದಾಯ 2.5 ಲಕ್ಷಕ್ಕಿಂತ ಕಡಿಮೆ ಇರಬೇಕು.
- ಶುಲ್ಕ ಪಾವತಿ :- ಟಾಟಾ ಕ್ಯಾಪಿಟಲ್ ಫಂಕ್ ಕೇವಲ ಕಾಲೇಜಿನ ಶುಲ್ಕಕ್ಕೆ ಮಾತ್ರ ಹಣ ನೀಡುತ್ತದೆ. ಅದನ್ನು ಹೊರತು ಪಡಿಸಿ ಯಾವುದೇ ಹಾಸ್ಟೆಲ್ ಫೀಸ್ ಅಥವಾ ಬಸ್ ಚಾರ್ಜ್ ಇತ್ಯಾದಿ ಗಳಿಗೆ ಯಾವುದೇ ಹಣ ನೀಡುವುದಿಲ್ಲ.
ನೀಡಬೇಕಾದ ದಾಖಲೆಗಳು :-
ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಲು ಕೆಲವು ದಾಖಲೆಗಳನ್ನು ನೀಡಬೇಕು. ಅವು ಯಾವುದೆಂದರೆ :-
- ಆಧಾರ್ ಕಾರ್ಡ್.
- income certificate.
- passport size photo.
- ಕಾಲೇಜಿನ ಗುರುತಿನ ಚೀಟಿ.
- ಬ್ಯಾಂಕ್ ಖಾತೆಯ ವಿವರಗಳು.
- ಶುಲ್ಕ ನೀಡಿರುವ ರಶೀದಿ.
- ಕಾಲೇಜಿನ ಪುರಾವೆ.
- ಜಾತಿ ಪ್ರಮಾಣ ಪತ್ರ.
- ಅಂಗವಿಕಲರು ಅಂಗವಿಕಲ ಪ್ರಮಾಣಪತ್ರ ನೀಡಬೇಕು.
- ಹಿಂದಿನ ವರ್ಷದ ಮಾರ್ಕ್ಸ್ ಕಾರ್ಡ್.
ಇದನ್ನೂ ಓದಿ: ರಾಜ್ಯದ ಬಡ ವರ್ಗದ ಮಕ್ಕಳಿಗೆ ಉಚಿತ ಲ್ಯಾಪ್ಟಾಪ್ ಸಿಗುತ್ತಿದೆ. ಅರ್ಜಿ ಸಲ್ಲಿಸುವುದು ಹೇಗೆ ಎಂದು ತಿಳಿಯಿರಿ.
ಅರ್ಜಿ ಸಲ್ಲಿಸುವುದು ಹೇಗೆ?
ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಲು ವಿದ್ಯಾರ್ಥಿಗಳು ಟಾಟಾ ಕ್ಯಾಪಿಟಲ್ ಫಂಕ್ ನ ಅಧಿಕೃತ ಜಾಲತಾಣಕ್ಕೆ ಭೇಟಿನೀಡಿ ನೋಂದಾಯಿತ ID ಪ್ರೂಫ್ ನಿಂದಾ buddy4study ಗೆ ಲಾಗ್ ಇನ್ ಆಗಬೇಕು. ನಂತರ ಅಪ್ಲಿಕೇಶನ್ ಫಾರ್ಮ್ ಓಪನ್ ಮಾಡಿ ಅಪ್ಲಿಕೇಶನ್ ನಲ್ಲಿ ನಿಮ್ಮ ಹೆಸರು ವಿಳಾಸ ಹಾಗೂ ದೂರವಾಣಿ ಸಂಖ್ಯೆ ಮೇಲ್ id ಜೊತೆಗೆ ನಿಮ್ಮ ಕಾಲೇಜಿನ ದಾಖಲಾತಿ ಹಾಗೂ ನಿಮ್ಮ ಮಾರ್ಕ್ಸ್ ಕಾರ್ಡ್ ಸರ್ಟಿಫಿಕೇಟ್ ಮಾಹಿತಿ ನೀಡಬೇಕು. ನಂತರ ನೀವು ಎಲ್ಲಾ ಷರತ್ತು ಮತ್ತು ನಿಯಮಗಳನ್ನು ಒಪ್ಪಿಕೊಂಡಿವ ಮಾಹಿತಿ ನೀಡಿ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಸೆಪ್ಟೆಂಬರ್ 15 2024 ಆಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ನಿಮಗೆ ಡಿಗ್ರಿ ಆಗಿದೆಯೇ? ಕೇಂದ್ರ ಸರ್ಕಾರ 17,727 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಈಗಲೇ ಅರ್ಜಿ ಸಲ್ಲಿಸಿ.