ಪ್ರತಿ ವರ್ಷಕ್ಕೆ ಅಥವಾ ಎರಡು ಮೂರು ವರ್ಷಕ್ಕೆ ಹೊಸ ಬೈಕ್ ತೆಗೆದುಕೊಳ್ಳುವುದು ಸಾಮಾನ್ಯ. ಹಾಗೆಯೇ ವಾಹನ ತೆಗೆದುಕೊಳ್ಳುವಾಗ ನಮ್ಮ ವಾಹನದ ಇನ್ಸೂರೆನ್ಸ್ ಟ್ರಾನ್ಸ್ಫರ್ ಮಾಡಿಸಿಕೊಳ್ಳುವುದನ್ನು ಮರೆಯುತ್ತೇವೆ. ಹಾಗೆಯೇ ಈಗ ಸೆಕೆಂಡ್ ಹ್ಯಾಂಡ್ ಬೈಕ್ ತೆಗೆದುಕೊಳ್ಳುವಾಗ ನಾವು ವಾಹನ ಪಾತ್ರವನ್ನು ನಮ್ಮ ಹೆಸರಿಗೆ ಟ್ರಾನ್ಸ್ಫರ್ ಮಾಡಿಸಿಕೊಳ್ಳುತ್ತೇವೆ ಆದರೆ ಇನ್ಸೂರೆನ್ಸ್ ಟ್ರಾನ್ಸ್ಫರ್ ಮಾಡಿಸಿಕೊಳ್ಳುವುದರ ಬಗ್ಗೆ ಹೆಚ್ಚಿನ ಗಮನ ಹರಿಸುವುದಿಲ್ಲ. ವಾಹನದ ಇನ್ಸೂರೆನ್ಸ್ ಟ್ರಾನ್ಸ್ಫರ್ ಮಾಡಿಸಿಕೊಳ್ಳುವುದು ಏಷ್ಟು ಮುಖ್ಯ ಹಾಗೂ ಇನ್ಸೂರೆನ್ಸ್ ಟ್ರಾನ್ಸ್ಫರ್ ಮಾಡುವ ಬಗೆ ಹೇಗೆ ಎಂಬುದನ್ನು ತಿಳಿಯೋಣ.
ವಾಹನ ಮಾಲೀಕರ ಹೆಸರಲ್ಲಿ ಇರುವ ಇನ್ಸೂರೆನ್ಸ್ ನಿಮ್ಮ ಹೆಸರಿಗೆ ಟ್ರಾನ್ಸ್ಫರ್ ಮಾಡಿಸಿಕೊಳ್ಳಬೇಕು: ಸಾಮಾನ್ಯವಾಗಿ ಹೊಸ ಬೈಕ್ ಖರೀದಿ ಮಾಡಿದ್ದಾರೆ ವಾಹನ ನೀಡಿದ ಕಂಪನಿ ನಿಮಗೆ ಇನ್ಶುರೆಸ್ ಮಾಡಿಕೊಡುತ್ತದೆ. ಆದರೆ ಸೆಕೆಂಡ್ ಹ್ಯಾಂಡ್ ಬೈಕ್ ತೆಗೆದುಕೊಂಡರೆ ನಿಮಗೆ ಇನ್ಸೂರೆನ್ಸ್ ಪಡೆದುಕೊಳ್ಳಬೇಕು. ಅಂದರೆ ನೀವು ಯಾರ ಬಳಿ ಬೈಕ್ ತೆಗೆದುಕೊಳ್ಳುತ್ತಿರೋ ಅವರ ಬಳಿಯಲ್ಲಿಯೇ ನೀವು ವಾಹನ ಪಾತ್ರಗಳ ಜೊತೆ ಇನ್ಸೂರೆನ್ಸ್ ಸಹ ನಿಮ್ಮ ಹೆಸರಿಗೆ ಟ್ರಾನ್ಸ್ಫರ್ ಮಾಡಿಸಿಕೊಳ್ಳಬೇಕಾಗುತ್ತದೆ.
ಇನ್ಸೂರೆನ್ಸ್ ಟ್ರಾನ್ಸ್ಫರ್ ಮಾಡಿಸಿಕೊಳ್ಳುವುದು ಎಷ್ಟು ಮುಖ್ಯ :- ಬೈಕ್ ಇನ್ಸೂರೆನ್ಸ್ ಎನ್ನುವುದು ಬೈಕ್ ಸವಾರನಿಗೆ ಬಹಳ ಮುಖ್ಯ ಆಗುತ್ತದೆ. ಕೆಲವರು ಬೈಕ್ ಇನ್ಸೂರೆನ್ಸ್ ಬೇಡ ಎಂದು ನೆಗ್ಲೆಕ್ಟ್ ಮಾಡುತ್ತಾರೆ. ಆದರೆ ಯಾವುದೇ ಬೈಕ್ ಆಕ್ಸಿಡೆಂಟ್ ಅಥವಾ ಅನಾಹುತ ಸಂಭವಿಸಿದರೆ ಆ ಸಮಯದಲ್ಲಿ ಇನ್ಸೂರೆನ್ಸ್ ಬಹಳ ಉಪಯೋಗ ಆಗುತ್ತದೆ. ಬೈಕ್ ರಿಪೇರಿ ಅಥವಾ ವಾಹನ ಸವಾರರಿಗೆ ಅಪಘಾತಕ್ಕೆ ಈ ಹಣ ಬಹಳ ಮುಖ್ಯ ಆಗುತ್ತದೆ. ಜೊತೆಗೆ ಬೈಕ್ ಖರೀದಿ ಮಾಡಿದವರು ಇನ್ಸೂರೆನ್ಸ್ ಗೆ ಹೆಚ್ಚಿನ ಹಣ ಪಾವತಿ ಮಾಡುವುದು ತಡೆದ ಹಾಗಾಗುತ್ತದೆ. ನೀವು ಟ್ರಾನ್ಸ್ಫರ್ ಮಾಡಿಸಿಕ್ಕೊಳ್ಳುವುದರಿಂದ ಹೆಚ್ಚುವರಿ ಕವರೇಜ್ ಪಾವತಿ ಮಾಡುವುದು ತಪ್ಪುತ್ತದೆ. ಜೊತೆಗೆ ಬೈಕ್ ಮಾರಾಟ ಮಾಡುವವರು ಬೈಕ್ ನೀಡುವುದರ ಜೊತೆಗೆ ಇನ್ಸೂರೆನ್ಸ್ ಟ್ರಾನ್ಸ್ಫರ್ ಮಾಡುವುದರಿಂದ ಬೈಕ್ ಗೆ ಹೆಚ್ಚಿನ ವ್ಯಾಲ್ಯೂ ಸಿಗಬಹುದು. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಬೈಕ್ ಇನ್ಸೂರೆನ್ಸ್ ಟ್ರಾನ್ಸ್ಫರ್ ಮಾಡುವಾಗ ಅಗತ್ಯವಾದ ದಾಖಲೆಗಳು ಯಾವುವು?
ಬೈಕ್ ಇನ್ಸೂರೆನ್ಸ್ ಟ್ರಾನ್ಸ್ಫರ್ ಮಾಡುವಾಗ ಕೆಲವು ಮುಖ್ಯ ದಾಖಲೆಗಳನ್ನು ನೀಡಬೇಕಾಗುತ್ತದೆ. ಅವು ಯಾವುದೆಂದರೆ :-
- RC book (ನೋಂದಣಿ ಪ್ರಮಾಣಪತ್ರ).
- ವಾಹನದ ವಿವರಗಳು.
- ಇನ್ಸೂರೆನ್ಸ್ ಡೀಟೇಲ್ಸ್.
- ಬೈಕ್ ಮಾಲೀಕತ್ವ ವರ್ಗಾವಣೆ ಮಾಡಿರುವ ದಿನಾಂಕದ ಮಾಹಿತಿ.
- ಬೈಕ್ ನಾ ಹಿಂದಿನ ಮಾಲೀಕರ ಹೆಸರು.
- ಇನ್ಸೂರೆನ್ಸ್ ಪ್ರೀಮಿಯಂ ಬಗ್ಗೆ ಮಾಹಿತಿ.
- ಹಿಂದಿನ ಪಾಲಿಸಿದಾರರಿಂದ NOC.
ಇದನ್ನೂ ಓದಿ: ಬರೋಬ್ಬರಿ 85 KM ಮೈಲೇಜ್ ನೀಡುವ ಈ ಎಲೆಕ್ಟ್ರಿಕ್ ಸ್ಕೂಟರ್ ಕೇವಲ 55 ಸಾವಿರ ರೂಪಾಯಿಗೆ ಮನೆಗೆ ತನ್ನಿ.
ಖರೀದಿ ಮಾಡಿದವರು ಹಾಗೂ ಮಾರಾಟ ಮಾಡುವವರು ನೀಡಬೇಕಾಗಿರುವ ದಾಖಲೆಗಳು :-
- ಪ್ಯಾನ್ (pan) ಹಾಗೂ ಆಧಾರ್ ಕಾರ್ಡ್.
- ಚಾಲನಾ ಪರವಾನಿಗೆ.
- ಸಂಪರ್ಕ ವಿವರಗಳು.
ಇನ್ಸೂರೆನ್ಸ್ ಟ್ರಾನ್ಸ್ಫರ್ ಮಾಡುವುದು ಹೇಗೆ?: ಇನ್ಸೂರೆನ್ಸ್ ಟ್ರಾನ್ಸ್ಫರ್ ಮಾಡಲು ನೀವು ಬೈಕ್ ಖರೀದಿಸಿ ಅಥವ ಮಾರಾಟ ಮಾಡಿ 15 ದಿನಗಳ ಒಳಗಾಗಿ ನೀವು ಇನ್ಸೂರೆನ್ಸ್ ಟ್ರಾನ್ಸ್ಫರ್ ಗೆ ಅರ್ಜಿ ಸಲ್ಲಿಸಬೇಕು. ನೀವು ಇನ್ಸೂರೆನ್ಸ್ ಟ್ರಾನ್ಸ್ಫರ್ ಅನ್ನು ಆನ್ಲೈನ್ ಮೂಲಕ ಮಾಡಬಹುದು. ನೀವು ಮೊದಲು ಇನ್ಸೂರೆನ್ಸ್ ವಿಧಾನ ಆಯ್ಕೆ ಮಾಡಿ ನಂತರ ಕಂಪನಿ ಆಯ್ಕೆ ಮಾಡಿ ನಂತ್ರ ನಿಮ್ಮ ವಿವರಗಳನ್ನು ಭರ್ತಿ ಮಾಡಬೇಕು ನಂತರ ನಿಮ್ಮ ವಾಹನದ ವಿವರಗಳು ಹಾಗೂ ಹಳೆಯ ವಿಮಾ ಪಾಲಿಸಿದರರ ಡೀಟೇಲ್ಸ್ ಅನ್ನು ತೆಗೆದುಹಾಕಬೇಕಾಗುತ್ತದೇ. ನಂತರ ನೀವು ವಿಮಾ ಹಣವನ್ನು ಆನ್ಲೈನ್ ನಲ್ಲಿ ಭರ್ತಿ ಮಾಡ್ಬೇಕು.
ಇದನ್ನೂ ಓದಿ: ಹಿರಿಯ ನಾಗರಿಕರಿಗೆ ಆಯುಷ್ಮಾನ್ ಯೋಜನೆಯಲ್ಲಿ ಸಿಗಲಿದೆ 5 ಲಕ್ಷ ರೂಪಾಯಿ ವರೆಗೆ ಉಚಿತ ಚಿಕಿತ್ಸೆ.