ಕೇಂದ್ರ ಸರ್ಕಾರದ ಹುದ್ದೆಗೆ ಸೇರಬೇಕು ಎಂದು ಪ್ರತಿಯೊಬ್ಬರೂ ಆಸೆ ಪಟ್ಟಿರುತ್ತಾರೆ. ಯಾಕೆಂದರೆ ಪರ್ಮನೆಂಟ್ ಆಗಿರುವ ಕೆಲಸ ಜೊತೆಗೆ ಹಲವು ಫೆಸಿಲಿಟಿಗಳು ಸಿಗಲಿವೆ. ಈಗ ಕೇಂದ್ರ ಸರ್ಕಾರದ ಅಡಿಯಲ್ಲಿ ಉದ್ಯೋಗ ಮಾಡಬೇಕು ಎಂಬ ಆಸೆ ಇದ್ದರೆ ನಿಮಗಾಗಿ SSC ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಿದೆ.
ಹುದ್ದೆಗಳ ವಿವರ :- ಸ್ಟಾಫ್ ಸೆಲೆಕ್ಷನ್ ಕಮಿಷನ್ ಒಟ್ಟು 8326 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. 4887 ಮಲ್ಟಿ ಟಾಸ್ಕಿಂಗ್ (ನಾನ್ ಟೆಕ್ನಿಕಲ್) ಸ್ಟಾಫ್ ಹುದ್ದೆಗಳು ಹಾಗೂ 3439 ಹವಾಲ್ದಾರ್ ಇನ್ ಸಿಬಿಐಸಿ, ಸಿಬಿಎನ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ವಯಸ್ಸಿನ ಮಿತಿ ಹೀಗಿದೆ :- ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ವಯಸ್ಸು ಆಗಿರಬೇಕು. ಇನ್ನು ಮಲ್ಟಿ ಟಾಸ್ಕಿಂಗ್ ಸ್ಟಾಫ್ ಮತ್ತು ಹವಾಲ್ದಾರ್ ಇನ್ ಸಿಬಿಎನ್ ಹುದ್ದೆಗೆ ಅರ್ಜಿ ಸಲ್ಲಿಸಲು ಗರಿಷ್ಠ ವಯಸ್ಸು 25 ಹಾಗೂ ಹವಾಲ್ದಾರ್ ಇನ್ ಸಿಬಿಐಸಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು 27 ವರ್ಷ ಆಗಿರಬೇಕು. ಸರಕಾರಿ ಮೀಸಲಾತಿ ನಿಯಮದ ಪ್ರಕಾರವಾಗಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಅಭ್ಯರ್ಥಿಗಳಿಗೆ 5 ವರ್ಷ ಹಾಗೂ ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 3 ವರ್ಷ ಹಾಗೂ ಪಿಡಬ್ಲ್ಯೂಡಿ ಅಭ್ಯರ್ಥಿಗೆ 5 ವರ್ಷ ಹಾಗೂ OBC 13 ವರ್ಷ ಹಾಗೂ ಮಾಜಿ ಸೈನಿಕರಿಗೆ 3 ವರ್ಷ ವಯಸ್ಸಿನ ಸಡಿಲಿಕೆ ಇರುತ್ತದೆ.
ಶೈಕ್ಷಣಿಕ ಅರ್ಹತೆ :- ಮೇಲಿನ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕಡ್ಡಾಯವಾಗಿ ಮಾನ್ಯತೆ ಪಡೆದ ಸಂಸ್ಥೆಯಿಂದ SSLC ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಮಾಸಿಕ ವೇತನದ ಮಾಹಿತಿ :- ಮೇಲಿನ ಹುದ್ದೆಗಳಿಗೆ ಆರಂಭಿಕ ಸಂಬಳ 52,000 ರೂಪಾಯಿ ಗಳಿಂದ 20,200 ರೂಪಾಯಿ ಆಗಿರುತ್ತದೆ.
ಅರ್ಜಿ ಶುಲ್ಕ ವಿವರ :- ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 100 ರೂಪಾಯಿ ಶುಲ್ಕ ಪಾವತಿಸಬೇಕು.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :- ಹುದ್ದೆಗೆ ಅರ್ಜಿ ಸಲ್ಲಿಸಲು 31/07/2024 ರ ರಾತ್ರಿ 11 ಗಂಟೆಯ ವರೆಗೆ ಸಮಯ ಇರುತ್ತದೆ.
ಶುಲ್ಕ ಪಾವತಿಸಲು ಕೊನೆಯ ದಿನಾಂಕ :- ಆನ್ಲೈನ್ ಮೂಲಕ ಅರ್ಜಿಯ ಶುಲ್ಕ ಪಾವತಿಗೆ 01/08/2024 ರ ರಾತ್ರಿ 11 ಗಂಟೆಯ ವರೆಗೆ ಸಮಯ ಇರುತ್ತದೆ.
ಅರ್ಜಿ ತಿದ್ದುಪಡಿಗೆ ಕೊನೆಯ ದಿನ :- ಅರ್ಜಿಯನ್ನು ತಿದ್ದುಪಡಿ ಮಾಡಲು ಆಗಸ್ಟ್ 16 2024 ರಿಂದ ಆಗಸ್ಟ್ 17 2024 ರ ವರೆಗೆ ಸಮಯ ಇರುತ್ತದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ನಿಮಗೆ ಡಿಗ್ರಿ ಆಗಿದೆಯೇ? ಕೇಂದ್ರ ಸರ್ಕಾರ 17,727 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಈಗಲೇ ಅರ್ಜಿ ಸಲ್ಲಿಸಿ.
ಅರ್ಜಿ ಸಲ್ಲಿಸುವ ವಿಧಾನ :-
ಆಸಕ್ತಿ ಇರುವ ಅಭ್ಯರ್ಥಿಗಳು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ssc ಅಧಿಕೃತ ವೆಬ್ಸೈಟ್ https://ssc.gov.in ಗೆ ಭೇಟಿ ನೀಡಬೇಕು. ನಂತರ ಮುಖಪುಟದಲ್ಲಿ Quick Links >> Apply ಎಂಬ ಆಯ್ಕೆ ಕಾಣುತ್ತದೆ. ನಂತರ Multi Tasking (Non-Technical) Staff Examination,2024 >> Apply ಆಪ್ಷನ್ ಕ್ಲಿಕ್ ಮಾಡಿ. ಹೊಸದಾಗಿ ಅರ್ಜಿ ಸಲ್ಲಿಸಿತ್ತು ಇದ್ದರೆ ನೀವು ರಿಜಿಸ್ಟರ್ ಆಗಬೇಕು. ನಂತರ ಅರ್ಜಿ ನಮೂನೆಯಲ್ಲಿ ನಿಮ್ಮ ವೈಯಕ್ತಿಕ ದಾಖಲೆಗಳು ಹಾಗೂ ಶೈಕ್ಷಣಿಕ ದಾಖಲೆಗಳನ್ನು ಭರ್ತಿ ಮಾಡಿ ಶುಲ್ಕ ಪಾವತಿಸಿ ನಿಗದಿತ ದಿನಾಂಕದ ಒಳಗಾಗಿ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸುವ ಮುನ್ನ ಭರ್ತಿ ಮಾಡಿರುವ ಎಲ್ಲಾ ಮಾಹಿತಿಗಳು ಸರಿಯಾಗಿ ಇವೆಯೇ ಎಂದು ಇನ್ನೊಮ್ಮೆ ಪರೀಕ್ಷಿಸಿ. ಅಧಿಸೂಚನೆ PDF ಡೌನ್ ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಖಾಲಿ ಇರುವ ಗ್ರಾಮ ಪಂಚಾಯತಿ ಹುದ್ದೆಗಳ ನೇಮಕಾತಿಗೆ ಆದೇಶಿಸಿದ ರಾಜ್ಯ ಸರಕಾರ.