ಮಹಿಳೆಯರ ಸಬಲೀಕರಣಕ್ಕೆ ಹೆಚ್ಚಿನ ಒತ್ತು ನೀಡುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈಗಾಗಲೇ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ದೇಶದ ಮಹಿಳೆಯರನ್ನು ಸ್ವಾಭಿಮಾನಿ ಮಳೆಯರನ್ನಾಗಿ ಮಾಡಿ ದೇಶವನ್ನು ಪ್ರಗತಿಯತ್ತ ಕೊಂಡೊಯ್ಯುವ ನಿಟ್ಟಿನಲ್ಲಿ ಭಾರತ ಸರ್ಕಾರ ಹೊಸದಾಗಿ ಕೃಷಿ ಸಖಿ ಯೋಜನೆ ಜಾರಿಗೆ ತಂದಿದೆ. ಈ ಯೋಜನೆಯ ಬಗ್ಗೆ ಪೂರ್ಣ ಮಾಹಿತಿ ಈ ಲೇಖನದಲ್ಲಿ ಲಭ್ಯವಿದೆ.
ಮಹಿಳೆಯರನ್ನು ಕೃಷಿ ಚಟುವಟಿಕೆಗೆ ಸಕ್ರಿಯವಾಗುವಂತೆ ಮಾಡಲು ಕೃಷಿ ಸಖಿ ಯೋಜನೆ :- ದೇಶದಲ್ಲಿ ಬಹುಪಾಲು ಪುರುಷರು ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಳ್ಳುತ್ತಾರೆ. ಅದೇ ರೀತಿ ದೇಶದ ಮಹಿಳೆಯರನ್ನು ಸಹ ಕೃಷಿ ಕ್ಷೇತ್ರದಲ್ಲಿ ಮುನ್ನೆಲೆಗೆ ತರುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಕೃಷಿ ಸಖಿ ಯೋಜನೆಯನ್ನು ಜಾರಿಗೆ ತಂದಿದೆ. ಮಹಿಳೆಯರು ಸಹ ಕೃಷಿಯಲ್ಲಿ ಆದಾಯ ಗಳಿಸಬೇಕು ಎಂಬುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಈ ಯೋಜನೆಯಲ್ಲಿ ಕೃಷಿಯಲ್ಲಿ ಆಸಕ್ತಿ ಇರುವ ಮಹಿಳೆಯರಿಗೆ ತರಬೇತಿ ನೀಡಿ ಅವರನ್ನು ಶಿಕ್ಷಿತರನ್ನಾಗಿ ಮಾಡಿ ಅವರು ಸಮಾಜದಲ್ಲಿ ಉತ್ತಮ ಸ್ಥಾನ ಪಡೆಯಲು ಸಹಾಯ ಮಾಡುವ ಉದ್ದೇಶದ ಜೊತೆಗೆ ಮಹಿಳೆ ಸಹ ಕೃಷಿಯಲ್ಲಿ ಹೆಚ್ಚು ಆದಾಯ ಗಳಿಸಲು ಸಾಧ್ಯ ಎಂಬುದು ಅರಿವಾಗಬೇಕು ಎಂಬುದಾಗಿದೆ. ಮಹಿಳೆಯರು ತರಬೇತಿಯ ಮೂಲಕ ಹೆಚ್ಚಿನ ಆದಾಯ ಗಳಿಸುವ ಮಾರ್ಗ ತಿಳಿದುಕೊಳ್ಳುತ್ತಾರೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಕೃಷಿ ಸಖಿ ಯೋಜನೆಯಲ್ಲಿ ಯಾವ ಯಾವ ತರಬೇತಿ ನೀಡಲಾಗುತ್ತದೆ?
ಮಹಿಳೆಯರು ಕೃಷಿಯಲ್ಲಿ ಹೆಚ್ಚು ತೊಡಗಿಕೊಳ್ಳಬೇಕು ಎಂದು ಆರಂಭಿಸಿರುವ ಈ ಯೋಜನೆಯಲ್ಲಿ ಮಹಿಳೆಯರಿಗೆ ಕೆಲವು ತರಬೇತಿಗಳನ್ನು ನೀಡಲಾಗುತ್ತದೆ.
- ಯಾವುದೇ ಕೃಷಿ ಚಟುವಟಿಕೆಯಲ್ಲಿ ಬೆಳೆ ಬೆಳೆಯಬೇಕು ಎಂದರೆ ಭೂಮಿ ಹದ ಮಾಡುವುದು ತುಂಬಾ ಮುಖ್ಯ ಆಗುತ್ತದೆ. ಅದೇ ಕಾರಣಕ್ಕೆ ಮಹಿಳೆಯರಿಗೆ ಮಣ್ಣು ಹದ ಮಾಡುವ ತರಬೇತು ನೀಡಿ ಅವರಿಗೆ ಬಿತ್ತನೆ ಕಾರ್ಯಕ್ಕೆ ಮುಂಚೆ ಉಳುಮೆ ಮಾಡುವ ಅಥವಾ ಮಣ್ಣು ಹದ ಮಾಡುವ ಬಗ್ಗೆ ತರಬೇತಿ ನೀಡಲಾಗುತ್ತದೆ.
- ಕೃಷಿ ಎಂದರೆ ಅದು ಕೇವಲ ಒಂದೇ ಬೀಜ ಬಿತ್ತನೆಗೆ ಸಂಬಂಧ ಇರುವುದಿಲ್ಲ. ಕೃಷಿಯಲ್ಲಿ ಹಲವಾರು ರೀತಿಯ ಕೃಷಿ ಇದೆ. ಹೂವು ಬೆಳೆಯುವುದು ಬತ್ತ ಬೆಳೆಯುವುದು, ತರಕಾರಿ ಬೆಳೆಯುವುದು, ತೋಟಗಾರಿಕೆ, ಹೈನುಗಾರಿಕೆ ಅನೇಕ ಕೃಷಿ ಚಟುವಟಿಕೆಯಲ್ಲಿ ತೊಡಗಲು ಬೇಕಾದ ತರಬೇತಿ ನೀಡಲಾಗುತ್ತದೆ.
- ಕೃಷಿ ಕ್ಷೇತ್ರದಲ್ಲಿ ಪರಿಣಿತ ಆಗುವ ಮಟ್ಟಿಗೆ ಮಹಿಳೆಯರಿಗೆ ಆತ್ಮವಿಶ್ವಾಸ ತುಂಬಿ ಮಾಹಿತಿ ನೀಡಿ ಹಾಗೂ ಅವರಿಗೆ ಹೆಚ್ಚಿನ ತರಬೇತಿ ನೀಡಲಾಗುತ್ತದೆ.
ಮಹಿಳೆಯರಿಗೆ ಸರಿಯಾದ ರೀತಿಯಲ್ಲಿ ತರಬೇತಿ ನೀಡಿ ಕೃಷಿ ಚಟುವಟಿಕೆಯಲ್ಲಿ ಎಲ್ಲಾ ಕ್ಷೇತ್ರದಲ್ಲಿ ಹೆಚ್ಚು ಉತ್ಪನ್ನ ಗಳಿಸುವ ಬಗೆ ಹೇಗೆ ಎಂಬುದರ ಬಗ್ಗೆ ಮಾರ್ಗದರ್ಶನ ನೀಡಿ ಪ್ರಾಕ್ಟಿಕಲ್ ಆಗಿ ಕೆಲವು ವಿಧಾನಗಳನ್ನು ತಿಳಿಸುತ್ತಾರೆ. ಇದರಿಂದ ಮಹಿಳೆಯರಿಗೆ ವಾರ್ಷಿಕವಾಗಿ 60,000 ರೂಪಾಯಿ ಗಳಿಂದ 80,000 ರೂಪಾಯಿಗಳ ವರೆಗೆ ಗಳಿಸಲು ಸಾಧ್ಯವಾಗುತ್ತದೆ. ಒಮ್ಮೆ ಹಲವು ರೀತಿಯ ಕೃಷಿ ಚಟುವಟಿಕೆಯಲ್ಲಿ ತೊಡಗುವ ಮೂಲಕ ಸ್ವಾವಲಂಬಿಯಾಗಿ ಬದುಕಲಿ ಸಹಾಯ ಆಗುತ್ತದೆ. ಇದರಿಂದ ಮಹಿಳೆಯರು ತಮ್ಮ ಕುಟುಂಬದ ಆದಾಯಕ್ಕೆ ಹೆಚ್ಚಿನ ಸಹಾಯ ನೀಡಿದ ಹಾಗೆ ಆಗುತ್ತದೆ ಹಾಗೂ ಒಬ್ಬಂಟಿ ಮಹಿಳೆ ಅಥವಾ ಮನೆಯ ನಿಭಾಯಿಸುವ ಮಹಿಳೆಯರಿಗೆ ಹೆಚ್ಚಿನ ಅನುಕೂಲ ಆಗಲಿದೆ. ಇದರಿಂದ ಎಷ್ಟೋ ಕುಟುಂಬಗಳು ಉತ್ತಮ ರೀತಿಯಲ್ಲಿ ಬದುಕಲು ಸಹಾಯ ಆಗಲಿದೆ.
ಇದನ್ನೂ ಓದಿ: ಉದ್ಯಮ ಶುರು ಮಾಡಲು ಸರ್ಕಾರದಿಂದ ಸಿಗಲಿದೆ ಸಾಲ ಸೌಲಭ್ಯ; 9 ಲಕ್ಷದವರೆಗೆ ಸಿಗುತ್ತೆ ಹಣಕಾಸಿನ ನೆರವು
ಇದನ್ನೂ ಓದಿ: ರೈತರಿಗೆ ಶುಭ ಸುದ್ದಿ: ಹಸು ಕುರಿ ಹಾಗೂ ಮೇಕೆ ಸಾಕಾಣಿಕೆ ಮಾಡಲು ಬರೋಬರಿ 58,000 ರೂಪಾಯಿ ಸಬ್ಸಿಡಿ ಸಿಗುತ್ತಿದೆ.