ಪದವೀಧರರಿಗೆ ಉತ್ತಮ ಉದ್ಯೋಗ ಅವಕಾಶವೂ ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ ಇದೆ. ಈಗಾಗಲೇ ಹುದ್ದೆಗಳ ನೇಮಕಾತಿಯ ಬಗ್ಗೆ ಅಧಿಕೃತ ಜಾಲತಾಣದಲ್ಲಿ ಅಧಿಸೂಚನೆ ನೀಡಲಾಗಿದೆ. ಆಸಕ್ತಿ ಇರುವ ಪದವೀಧರರು ಈಗಲೇ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.
ಅಧಿಸೂಚನೆಯಲ್ಲಿ ಇರುವಂತೆ ಏಷ್ಟು ಹುದ್ದೆಗಳ ನೇಮಕಾತಿ ನಡೆಯುತ್ತಿದೆ. :- ಪಂಜಾಬ್ ನ್ಯಾಶನಲ್ ಬ್ಯಾಂಕ್ ನಲ್ಲಿ ಒಟ್ಟು 2700 ಅಪ್ರೆಂಟಿಸ್ ತರಬೇತುದಾರ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಲಿಂಕ್ ಓಪನ್ ಆಗಿದೆ. ಹಲವು ರಾಜ್ಯಗಳಲ್ಲಿ ನೇಮಕಾತಿ ನಡೆಯುತ್ತಿದ್ದು. ಕರ್ನಾಟಕದಲ್ಲಿಯೂ 22 ಹುದ್ದೆಗಳು ಖಾಲಿ ಇವೆ. ಕರ್ನಾಟಕದ ಆಸಕ್ತರು ಹುದ್ದೆಗೆ ಅರ್ಜಿ ಸಲ್ಲಿಸಲು ಅವಕಾಶ ಇದೆ.
ಅರ್ಜಿದಾರರ ವಯಸ್ಸಿನ ಮಿತಿ ಎಷ್ಟಿರಬೇಕು?
ಯಾವುದೇ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ವಯಸ್ಸಿನ ಮಿತಿ ಇದ್ದೆ ಇರುತ್ತದೆ. ಅದೇ ರೀತಿಯಲ್ಲಿ ಅಪ್ರೆಂಟಿಸ್ ತರಬೇತುದಾರ ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಜಿದಾರರ ಕನಿಷ್ಠ ವಯಸ್ಸು 20 ವರ್ಷ ಆಗಿರಬೇಕು ಹಾಗೂ ಗರಿಷ್ಠ 28 ವರ್ಷ ವಯಸ್ಸಾಗಿರಬೇಕು. ಇದರ ಜೊತೆಗೆ ಅಧಿಸೂಚನೆಯಲ್ಲಿ ವಯಸ್ಸಿನ ಬಗ್ಗೆ ಮುಖ್ಯ ವಿಚಾರವನ್ನು ತಿಳಿಸಲಾಗಿದೆ. ಅದೇನೆಂದರೆ ಹುದ್ದೆಗೆ ಸಲ್ಲಿಸುವ ಅಭ್ಯರ್ಥಿ 30-06-1996 ದಿನಾಂಕದ ಮೊದಲು ಜನಿಸಿರಬಾರದು ಹಾಗೂ 30-06-2004 ದಿನಾಂಕದ ನಂತರ ಜನಿಸಿರಬಾರದು ಎಂದು. ಸರ್ಕಾರಿ ಮೀಸಲಾತಿ ನಿಯಮವು ಈ ಮೇಲ್ಕಂಡ ಹುದ್ದೆಗಳಿಗೂ ಅನ್ವಯ ಆಗುತ್ತದೆ. ನಿಯಮದಂತೆ ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಮೀಸಲಾತಿ ಹಾಗೂ ಎಸ್ಸಿ ಮತ್ತು ಎಸ್ಟಿ ಯವರಿಗೆ 5 ವರ್ಷ ವಯಸ್ಸಿನ ಸಡಿಲಿಕೆ ಮೀಸಲಾತಿ ಇರುತ್ತದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಅರ್ಜಿ ಶುಲ್ಕ ವಿವರಗಳು :- ಹುದ್ದೆಗೆ ಅರ್ಜಿ ಸಲ್ಲಿಸುವ ಸಾಮಾನ್ಯ ವರ್ಗದ ಅಭ್ಯರ್ಥಿಗಳು 800 ರೂಪಾಯಿ ಶುಲ್ಕ ಪಾವತಿ ಮಾಡಬೇಕು. ಹಾಗೂ ಹಿಂದುಳಿದ ವರ್ಗದ ಅಭ್ಯರ್ಥಿಗಳು 600 ರೂಪಾಯಿ ಹಾಗೂ PWD ಅಭ್ಯರ್ಥಿಗಳು 400 ರೂಪಾಯಿ ಅರ್ಜಿ ಶುಲ್ಕ ಪಾವತಿಸಬೇಕು. ಅರ್ಜಿ ಶುಲ್ಕವನ್ನು ಆನ್ಲೈನ್ ಮೂಲಕ ಪಾವತಿ ಮಾಡಬೇಕು. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಅರ್ಜಿ ಸಲ್ಲಿಸುವ ವಿಧಾನ ಏನು?: ಹುದ್ದೆ ನೇಮಕಾತಿಯ ಅರ್ಜಿ ಲಿಂಕ್ https://bfsissc.com/apprentice_form.php ಗೆ ತೆರಳಿ Apprenticeship Application Form’ ಎಂಬ ಆಪ್ಷನ್ ಆಯ್ಕೆ ಮಾಡಿ. ಅರ್ಜಿಯಲ್ಲಿ ಕೇಳಿರುವ ನಿಮ್ಮ ವೈಯಕ್ತಿಕ ಮತ್ತು ವಿದ್ಯಾರ್ಹತೆಯ ಮಾಹಿತಿಯನ್ನು ತುಂಬಿ ನಿಮಗೆ ತಗುಲುವ ಶುಲ್ಕವನ್ನು ಆನ್ಲೈನ್ ಮೂಲಕ ಪಾವತಿಸಿ ಅರ್ಜಿ ಸಲ್ಲಿಸಿ.
ಇದನ್ನೂ ಓದಿ: ನಿಮಗೆ ಡಿಗ್ರಿ ಆಗಿದೆಯೇ? ಕೇಂದ್ರ ಸರ್ಕಾರ 17,727 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಈಗಲೇ ಅರ್ಜಿ ಸಲ್ಲಿಸಿ.
ಮುಖ್ಯ ದಿನಾಂಕಗಳು :-
- ಅರ್ಜಿ ಸಲ್ಲಿಸುವ ಆರಂಭಿಕ ದಿನಾಂಕ ಮತ್ತು ಕೊನೆಯ ದಿನಾಂಕ – 30/06/2024 ರಿಂದ 14/07/2024 ರ ವರೆಗೆ.
- ಆನ್ಲೈನ್ ಎಕ್ಸಾಮ್ ಡೆಟ್ :- 28/07/2024.
ಸ್ಟೇ ಫಂಡ್ ವಿವರಗಳು ಹೀಗಿವೆ :-
- ನಗರ ಪ್ರದೇಶದಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕ ಆಗುವವರಿಗೆ 12,000 ರೂಪಾಯಿ.
- ಗ್ರಾಮೀಣ ಮತ್ತು ಪಟ್ಟಣ ಪ್ರದೇಶಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕ ಆಗುವವರಿಗೆ 10,000 ರೂಪಾಯಿ.
- ಮೆಟ್ರೋಪಾಲಿಟನ್ ಸಿಟಿಗಳಲ್ಲಿ ನೇಮಕ ಆಗುವವರಿಗೆ 15,000 ರೂಪಾಯಿ.
ಆಯ್ಕೆ ಪ್ರಕ್ರಿಯೆ :- ಅಭ್ಯರ್ಥಿಗಳ ಅರ್ಜಿಯನ್ನು ಪರಿಶೀಲನೆ ಮಾಡಿ ಆನ್ಲೈನ್ ಎಕ್ಸಾಮ್ ನಡೆಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳ ಅಪ್ರೆಂಟಿಸ್ ತರಬೇತಿಯ ಅವಧಿಯು ಒಂದು ವರ್ಷ ಆಗಿರುತ್ತದೆ. ಅಧಿಸೂಚನೆ PDF ಡೌನ್ ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: SSLC ಪಾಸಾದವರು ಸರ್ಕಾರಿ ಉದ್ಯೋಗ ಮಾಡಬೇಕು ಅಂತ ಆಸೆ ಇರೋರಿಗೆ SSC ನೀಡುತ್ತಿದೆ ಭರ್ಜರಿ ಗುಡ್ ನ್ಯೂಸ್.