ಗ್ರಾಮಿಣ ಪ್ರದೇಶದಲ್ಲಿ ವಾಸಿಸುವ ಜನರಿಗೆ ಜನನ ಮತ್ತು ಮರಣ ಪ್ರಮಾಣ ಪತ್ರಗಳು ಸುಲಭವಾಗಿ ಸಿಗಬೇಕು ಎಂಬ ಉದ್ದೇಶದಿಂದ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಇನ್ನು ಮುಂದೆ ಜನನ ಮತ್ತು ಮರಣ ಪ್ರಮಾಣ ಪತ್ರಗಳು ಸಿಗಲಿವೆ ಎಂದು ಪ್ರಿಯಾಂಕ್ ಖರ್ಗೆ ಅವರು ತಿಳಿಸಿದ್ದಾರೆ.
21 ದಿನಗಳ ಒಳಗೆ ಸಿಗಲಿದೆ ಜನನ ಮರಣ ಪ್ರಮಾಣ ಪತ್ರ :- ಇಲ್ಲಿಯ ವರೆಗೆ ಜನನ ಮತ್ತು ಮರಣ ಪ್ರಮಾಣ ಪತ್ರ ಪಡೆಯಬೇಕು ಎಂದರೆ ತಿಂಗಳು ಹಾಗೂ ವರ್ಷಗಳ ಕಾಲ ಕಾಯಬೇಕಿತ್ತು. ಎಷ್ಟೋ ಜನರು ಸತ್ತು ವರ್ಷ ಆಗಿದ್ದರು ಅವರು ಸತ್ತಿರುವ ಬಗ್ಗೆ ಪ್ರಮಾಣಪತ್ರ ಸಿಕ್ಕಿರುವುದಲ್ಲ. ಆದರೆ ಇನ್ನೂ ಮುಂದೆ ನಿಮ್ಮ ಗ್ರಾಮ ಪಂಚಾಯಿತಿಯಲ್ಲಿಯೇ ಕೇವಲ 21 ದಿನಗಳ ಒಳಗೆ ನಿಮಗೆ ಜನನ ಮತ್ತು ಮರಣ ಪ್ರಮಾಣ ಪತ್ರ ಸಿಗಲಿದೆ. ಇದರಿಂದ ಹಳ್ಳಿಯಲ್ಲಿ ವಾಸಿಸುವ ಜನರಿಗೆ ಹೆಚ್ಚು ಅನುಕೂಲ ಆಗಲಿದೆ.
ಗ್ರಾಮ ಪಂಚಾಯ್ತಿಗೆ ಸರ್ಕಾರದ ಆದೇಶದ ಪತ್ರದಲ್ಲಿ ಇರುವ ಅಂಶ ಏನೇನು?
- ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಪ್ರದೇಶದಲ್ಲಿ ಜನನ ಮತ್ತು ಮರಣ ಘಟನೆ ಸಂಭವಿಸಿದ 30 ದಿನಗಳೊಳಗೆ ಜನನ ಹಾಗೂ ಮರಣ ಉಪ ನೋಂದಣಾಧಿಕಾರಿಯು ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳು ನಿಯಮದ ಪ್ರಕಾರವಾಗಿ ನೋಂದಣಿ ಮಾಡಿಸಬೇಕು.
- 21 ದಿನಗಳ ಒಳಗೆ ಪ್ರಮಾಣ ಪತ್ರ ನೀಡಬೇಕು.
- ಜನನ ಹಾಗೂ ಮರಣ ನೋಂದಣಿಯ ನಿಯಮ 5ರಲ್ಲಿ ತಿಳಿಸಿರುವಂತೆ ಅರ್ಜಿ ಸಲ್ಲಿಕೆ ತಡವಾದರೆ ಮರಣ ನೋಂದಣಿ ನಿಯಮಗಳು 1999ರ 9(1) ರ ಪ್ರಕಾರವಾಗಿ 2 ರೂಪಾಯಿ ತಡ ಶುಲ್ಕ ಪಡೆದು ನೋಂದಣಿ ಮಾಡಬೇಕು.
- ಒಮ್ಮೆ ಘಟನೆ ಸಂಭವಿಸಿದ 30 ದಿನಗಳ ಒಳಗೆ ವರದಿ ಮಾಡದ ಘಟನೆಗಳನ್ನು ನೋಂದಾಯಿಸಲಾಗುವುದಿಲ್ಲ ಎಂದಾದರೆ ಈ ರೀತಿಯ ಘಟನೆಗಳ ನೋಂದಣಿಗೆ ಅಗತ್ಯ ದಾಖಲೆಗಳೊಂದಿಗೆ ಗ್ರಾಮ ಆಡಳಿತ ಅಧಿಕಾರಿಗಳನ್ನು ಸಂಪರ್ಕಿಸಬೇಕೆಂದು ಸಾರ್ವಜನಿಕರಿಗೆ/ಅರ್ಜಿದಾರರಿಗೆ ತಿಳಿಸಬೇಕು.
- ಕರ್ನಾಟಕ ಜನನ ಮತ್ತು ಮರಣ ನೋಂದಣಿ ನಿಯಮ 1999 ರ ಪ್ರಕಾರವಾಗಿ ಒಂದು ವರ್ಷದ ನಂತರ ವರದಿಯಾಗುವ ಜನನ ಅಥವಾ ಮರಣ ಪ್ರಕರಣಗಳನ್ನು ನೋಂದಾಯಿಸಲು, ಮೊದಲನೇ ವರ್ಗದ ದಂಡಾಧಿಕಾರಿ ಅಥವಾ ಮಹಾ ಪ್ರಾಂತ ದಂಡಾಧಿಕಾರಿ (ಪ್ರೆಸಿಡೆನ್ಸಿ ಮ್ಯಾಜಿಸ್ಟ್ರೇಟ್) ರವರ ಆದೇಶದ ಅಗತ್ಯವಿದೆ ಮತ್ತು 10 ಶುಲ್ಕರೂಪಾಯಿ ವಿಧಿಸಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಕೃಷಿ ಸಖಿ ಯೋಜನೆಯಲ್ಲಿ ಮಹಿಳೆಯರಿಗೆ ಸಿಗಲಿದೆ ಬರೋಬ್ಬರಿ 60,000 ರೂಪಾಯಿ ಆದಾಯ ಗಳಿಸುವ ಅವಕಾಶ
ಸಂಪರ್ಕಿಸಿ :- ಜನನ, ಮರಣ ನೋಂದಣಿ ಕೆಲಸಕ್ಕೆ ಸಂಬಂಧಿಸಿದಂತೆ ಯಾವುದೇ ರೀತಿಯ ಸಂದೇಹ ಇದ್ದಲ್ಲಿ ನೀವು ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳ ಕಛೇರಿ ಅಥವಾ ಜನನ, ಮರಣಗಳ ಮುಖ್ಯ ನೋಂದಣಾಧಿಕಾರಿಗಳ ಕಛೇರಿಗೆ ಭೇಟಿ ನೀಡಬಹುದು ಹಾಗೂ ಜನನ, ಮರಣ ಮತ್ತು ನಿರ್ಜೀವ ಜನನಗಳ ನೋಂದಣಿ ಮಾಡ್ಬೇಕಾದ್ರೆ ನೀವು ಆನ್ಲೈನ್ ಮೂಲಕ ಭರ್ತಿ ಮಾಡಲು ಯಾವುದೇ ರೀತಿಯ ತಾಂತ್ರಿಕ ಸಮಸ್ಯೆ ಆದ ಪಕ್ಷದಲ್ಲಿ ನೀವು ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳ ಕಛೇರಿ ಅಥವಾ ಇ-ಜನ್ಮ ಸಹಾಯವಾಣಿ ಗೆ ಕರೆ ಮಾಡಬಹುದು. ಇಲ್ಲವೇ ಇ-ಮೇಲ್ ವಿಳಾಸ crbdkar@gmail.com ಅಥವಾ ejanmahelpdesk@gmail.com ಗೆ ಮೇಲ್ ಮಾಡಿ. ನೀವು ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ 1800-425-6578 ಆಗಿದೆ.
ಇದನ್ನೂ ಓದಿ: SSLC ಪಾಸಾದವರು ಸರ್ಕಾರಿ ಉದ್ಯೋಗ ಮಾಡಬೇಕು ಅಂತ ಆಸೆ ಇರೋರಿಗೆ SSC ನೀಡುತ್ತಿದೆ ಭರ್ಜರಿ ಗುಡ್ ನ್ಯೂಸ್.
ಇದನ್ನೂ ಓದಿ: ರೈತರಿಗೆ ಶುಭ ಸುದ್ದಿ: ಹಸು ಕುರಿ ಹಾಗೂ ಮೇಕೆ ಸಾಕಾಣಿಕೆ ಮಾಡಲು ಬರೋಬರಿ 58,000 ರೂಪಾಯಿ ಸಬ್ಸಿಡಿ ಸಿಗುತ್ತಿದೆ.