ಭಾರತ ಸರ್ಕಾರದ ಸ್ಕಾಲರ್ಶಿಪ್ ಪೋರ್ಟಲ್ ಅರ್ಹ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡುವ ಮೂಲಕ ಅವರ ಶಿಕ್ಷಣ ಪಡೆಯಲು ಆರ್ಥಿಕ ನಿಲುವು ನೀಡುತ್ತಿದೆ. ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ನೀವು ಈ ವಿದ್ಯಾರ್ಥಿ ವೇತನದಲ್ಲಿ 75,000 ರೂಪಾಯಿ ವರೆಗೆ ಪಡೆಯುವ ಅವಕಾಶ ಇರುತ್ತದೆ.
NSP ವಿದ್ಯಾರ್ಥಿವೇತನದ ಪ್ರಯೋಜನಗಳು: ಎನ್ಎಸ್ಪಿ ವಿದ್ಯಾರ್ಥಿವೇತನದ ಮುಖ್ಯ ಪ್ರಯೋಜನವೆಂದರೆ ಅದು ವಿದ್ಯಾರ್ಥಿಗಳಿಗೆ ಗಮನಾರ್ಹ ಹಣಕಾಸಿನ ನೆರವು ನೀಡುತ್ತದೆ. ಅರ್ಹ ವಿದ್ಯಾರ್ಥಿಗಳು ₹75,000 ವರೆಗೆ ಪಡೆಯಬಹುದು, ಇದು ಬೋಧನಾ ಶುಲ್ಕಗಳು, ಪುಸ್ತಕಗಳು ಮತ್ತು ಇತರ ಶೈಕ್ಷಣಿಕ ವೆಚ್ಚಗಳನ್ನು ಗಣನೀಯವಾಗಿ ಭರಿಸಬಹುದಾಗಿದೆ.
NSP ವಿದ್ಯಾರ್ಥಿ ವೇತನಕ್ಕೆ ಯಾರು ಯಾರು ಅರ್ಜಿ ಸಲ್ಲಿಸಬಹುದು?
- ವಿದ್ಯಾರ್ಥಿ ವೇತನ ಪಡೆಯಲು ಭಾರತೀಯ ಪ್ರಜೆ ಆಗಿರಬೇಕು.
- ಯಾವುದೇ ಮಾನ್ಯತೆ ಪಡೆದ ವಿಶ್ವ ವಿದ್ಯಾಲಯದಲ್ಲಿ ಅಭ್ಯಾಸ ಮಾಡುತ್ತಿರಬೇಕು.
- ಆರ್ಥಿಕವಾಗಿ ದುರ್ಬಲ ಹೊಂದಿರುವ ಕುಟುಂಬದ ವಿದ್ಯಾರ್ಥಿಗಳಿಗೆ ಮೊದಲ ಪ್ರಾಶಸ್ತ್ಯ ನೀಡಲಾಗಿದೆ.
- ಉತ್ತಮ ದರ್ಜೆಯಲ್ಲಿ ಹಿಂದಿನ ತರಗತಿಯಲ್ಲಿ ಉತ್ತೀರ್ಣ ಆಗಿರಬೇಕು.
ಯಾವ ಯಾವ Documents ನೀಡಬೇಕು. :-
ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವಾಗ ನೀಡಬೇಕಾಗಿರುವ ದಾಖಲೆಗಳು ಹೀಗಿವೆ.
- ಸರ್ಕಾರಿ ID ಪ್ರೂಫ್ ಆಧಾರ್ ಕಾರ್ಡ್ ಅಥವಾ voter ID, ಅಥವಾ pan card.
- passport ಸೈಜ್ ಫೋಟೋ.
- ಕುಟುಂಬದ ಆದಾಯ ಪ್ರಮಾಣ ಪತ್ರ.
- ವಿಳಾಸದ ಪುರಾವೆ.
- ಜಾತಿ ಪ್ರಮಾಣ ಪತ್ರ ಇದ್ದಲ್ಲಿ.
- ಅಡ್ಮಿಷನ್ ಮಾಡಿರುವ ಬಗ್ಗೆ ದಾಖಲಾತಿ.
- ಬ್ಯಾಂಕ್ ಅಕೌಂಟ್ ಡೀಟೇಲ್ಸ್.
ವಿದ್ಯಾರ್ಥಿ ವೇತನಕ್ಕೆ ಅಪ್ಲೈ ಮಾಡುವುದು ಹೇಗೆ?
- ವಿದ್ಯಾರ್ಥಿ ವೇತನಕ್ಕೆ ಅಪ್ಲೈ ಮಾಡಲು ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ. ಅಧಿಕೃತ ವೆಬ್ಸೈಟ್ ವಿಳಾಸ ಇಲ್ಲಿ ಕ್ಲಿಕ್ ಮಾಡಿ
- ನಿಮ್ಮ ಇಮೇಲ್ ಐಡಿ ಹಾಗೂ password ಹಾಕಿ ಲಾಗ್ ಇನ್ ಆಗಿ.
- ನಂತರ new registration ಬಟನ್ ಆಯ್ಕೆ ಮಾಡಿ.
- ವಿದ್ಯಾರ್ಥಿ ವೇತನದ ಫಾರ್ಮ್ ನಲ್ಲಿ ನಿಮ್ಮ ಹೆಸರು ನಿಮ್ಮ ವಿಳಾಸ ವಯಸ್ಸು ನಿಮ್ಮ ವಿದ್ಯಾರ್ಹತೆ ನೀವು ಕಲಿಯುತ್ತಿರುವ ತರಗತಿ ಮತ್ತು ಸಂಸ್ಥೆಯ ವಿವರ ನಿಮ್ಮ ಬ್ಯಾಂಕ್ ಅಕೌಂಟ್ ಡೀಟೇಲ್ಸ್ ಎಲ್ಲವನ್ನೂ ಭರ್ತಿ ಮಾಡಿ.
- ಫಾರ್ಮ್ ನಲ್ಲಿ ಕೇಳಲಾಗಿರುವ ಎಲ್ಲ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ.
- ಒಮ್ಮೆ ಫಾರಂ ನಲ್ಲಿ ತುಂಬಿರುವ ದಾಖಲೆಗಳನ್ನು ಪರಿಶೀಲನೆ ಮಾಡಿ submit ಬಟನ್ ಒತ್ತಿ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ನೀವು ನಿಮ್ಮ ಅರ್ಜಿಯ ಸ್ಥಿತಿ ತಿಳಿಯುವುದು ಹೇಗೆ?
ಮೊದ್ಲು NSP ವೆಬ್ಸೈಟ್ಗೆ ಹೋಗಿ ನಂತರ ನೀವು ಅರ್ಜಿ ಸಲ್ಲಿಸಿದ ವರ್ಷವನ್ನು ಆರಿಸಿ ಮತ್ತು ನೀವು ಹೊಸಬರೇ ಅಥವಾ ಹಿಂತಿರುಗುತ್ತಿರುವಿರಿ. ನಿಮ್ಮ ಅಪ್ಲಿಕೇಶನ್ ಐಡಿಯನ್ನು ನಮೂದಿಸಿ. ‘ಸಲ್ಲಿಸು’ ಕ್ಲಿಕ್ ಮಾಡಿ. ನಂತರ ಸೈಟ್ ನಿಮ್ಮ ಅಪ್ಲಿಕೇಶನ್ ಸ್ಥಿತಿಯನ್ನು ತೋರಿಸುತ್ತದೆ: ಪರಿಶೀಲಿಸಲಾಗುತ್ತಿದೆ, ಅನುಮೋದಿಸಲಾಗಿದೆ ಅಥವಾ ಅನುಮೋದಿಸಲಾಗಿಲ್ಲ ಎಂಬ ಮಾಹಿತಿ ತಿಳಿಯಿರಿ.
ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಹಾಗೂ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವಾಗ ಎಚ್ಚರಿಕೆಯಿಂದ ಅರ್ಜಿ ಭರ್ತಿ ಮಾಡಬೇಕು.
ಇದನ್ನೂ ಓದಿ: SSLC ಪಾಸಾದವರು ಸರ್ಕಾರಿ ಉದ್ಯೋಗ ಮಾಡಬೇಕು ಅಂತ ಆಸೆ ಇರೋರಿಗೆ SSC ನೀಡುತ್ತಿದೆ ಭರ್ಜರಿ ಗುಡ್ ನ್ಯೂಸ್.
ಇದನ್ನೂ ಓದಿ: ಒಂದು ವರ್ಷದ ಅವಧಿಯ FD ಯೋಜನೆಗೆ ಹೆಚ್ಚು ಬಡ್ಡಿ ದರ ನೀಡುವ ಬ್ಯಾಂಕ್ ಗಳು ಇವು.