ಅಂಚೆ ಇಲಾಖೆಯಲ್ಲಿ ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ಹಲವಾರು ಯೋಜನೆಗಳು ಇವೆ. ಕಡಿಮೆ ಮೊತ್ತದಿಂದ ಹಿಡಿದು ಲಕ್ಷಾಂತರ ರೂಪಾಯಿಗಳ ವರೆಗೆ ಇನ್ವೆಸ್ಟ್ ಮಾಡಿ ಹೆಚ್ಚು ಹಣ ಗಳಿಸುವ ಮಾರ್ಗಗಳು ಇವೆ. ಈಗ ನಾವು ಹೇಳುತ್ತಿರುವುದು ಕಡಿಮೆ ಮೊತ್ತದ ಇನ್ವೆಸ್ಟ್ಮೆಂಟ್ ಮಾಡಿ ಹೆಚ್ಚು ಹಣವನ್ನು ಗಳಿಸಿದ್ವ ಸುಲಭ ವಿಧಾನದ ಬಗ್ಗೆ. ನೀವು ತಿಂಗಳಿಗೆ ಕೇವಲ 500 ರೂಪಾಯಿ ಇನ್ಸ್ವೆಸ್ಟ್ ಮಾಡಬಹುದು ಎಂದಾದರೆ ಈ ಯೋಜನೆಯ ಬಗ್ಗೆ ತಿಳಿಯಿರಿ.
ನೀವು ಪೋಸ್ಟ್ ಆಫೀಸ್ ನಲ್ಲಿ 500 ರೂಪಾಯಿ ಹೂಡಿಕೆ ಮಾಡಿ ಹೆಚ್ಚು ಹಣ ಗಳಿಸುವ ಹಲವಾರು ಸ್ಕೀಮ್ ಗಳು ಇವೆ ಅವುಗಳ ಬಗ್ಗೆ ಮಾಹಿತಿ ಇಲ್ಲಿದೆ. :-
ಪಿಪಿಎಫ್ ಯೋಜನೆ :-
PPF (Public Provident Fund) ಭಾರತ ಸರ್ಕಾರ ನೀಡುವ ಒಂದು ದೀರ್ಘಾವಧಿಯ ಉಳಿತಾಯ ಯೋಜನೆ, ಇದು ನಿಮ್ಮ ಹಣಕಾಸಿನ ಗುರಿಗಳನ್ನು ಸುರಕ್ಷಿತ ಮತ್ತು ಲಾಭದಾಯಕ ರೀತಿಯಲ್ಲಿ ತಲುಪಲು ಸಹಾಯ ಮಾಡುತ್ತದೆ. ಈ ಯೋಜನೆಯಲ್ಲಿ ಕನಿಷ್ಠ 500 ರೂಪಾಯಿ ಗಳಿಂದ ನೀವು 1.5 ಲಕ್ಷ ರೂಪಾಯಿ ಗಳ ವರೆಗೆ ಹೂಡಿಕೆ ಮಾಡಬಹುದು. ನೀವು ತಿಂಗಳಿಗೆ 500 ರೂಪಾಯಿ ಠೇವಣಿ ಮಾಡಿದರೆ ನಿಮ್ಮ ಹೂಡಿಕೆಯ ವಾರ್ಷಿಕವಾಗಿ ₹6,000 ಠೇವಣಿ ಮಾಡುತ್ತೀರಿ. 15 ವರ್ಷಗಳ ಅವಧಿಯಲ್ಲಿ ನೀವು ಹೂಡಿಕೆ ಮಾಡಿದರೆ ಶೇಕಡಾ 7.1 ಬಡ್ಡಿದರದಲ್ಲಿ, ನಿಮ್ಮ ಹೂಡಿಕೆಯ ಮೊತ್ತವು 1,62,728 ಆಗಿರುತ್ತದೆ. ನೀವು ನಿಮ್ಮ ಖಾತೆಯನ್ನು 20 ವರ್ಷಗಳವರೆಗೆ ವಿಸ್ತರಿಸಿದರೆ ನಿಮ್ಮ ಹೂಡಿಕೆಯ ಮೊತ್ತ ಒಟ್ಟು ಮೊತ್ತ ರೂಪಾಯಿ. 2,66,332ಕ್ಕೆ ಏರುತ್ತದೆ. 25 ವರ್ಷಗಳವರೆಗೆ ವಿಸ್ತರಿಸಿದರೆ, ಒಟ್ಟು ಮೊತ್ತ 4,12,321ಕ್ಕೆ ಏರುತ್ತದೆ.
SSY ಯೋಜನೆ:- ನೀವು ಒಬ್ಬ ಹೆಣ್ಣು ಮಗುವಿನ ತಂದೆಯಾಗಿದ್ದರೆ, ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಹೂಡಿಕೆ ಮಾಡುವುದನ್ನು ಪರಿಗಣಿಸಿ. ಈ ಸರ್ಕಾರಿ ಯೋಜನೆಯು ನಿಮ್ಮ ಮಗಳ ಶಿಕ್ಷಣ ಮತ್ತು ಮದುವೆಯಂತಹ ಭವಿಷ್ಯದ ವೆಚ್ಚಗಳಿಗೆ ಹಣವನ್ನು ಒದಗಿಸಲು ಉತ್ತಮ ಮಾರ್ಗವಾಗಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಯೋಜನೆಯ ಪ್ರಮುಖ ಲಕ್ಷಣಗಳು:
- ಅರ್ಹತೆ: 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಭಾರತೀಯ ಹೆಣ್ಣು ಮಕ್ಕಳಿಗೆ ಖಾತೆ ತೆರೆಯಬಹುದು.
- ಹೂಡಿಕೆ: ವಾರ್ಷಿಕ ಕನಿಷ್ಠ ₹250 ಮತ್ತು ಗರಿಷ್ಠ ₹1.5 ಲಕ್ಷ ಠೇವಣಿ ಮಾಡಬಹುದು.
- ಬಡ್ಡಿದರ: ಪ್ರಸ್ತುತ ಬಡ್ಡಿದರ ಶೇಕಡಾ 8.2 (ಜುಲೈ 2024) ಆಗಿದೆ.
- ಹೂಡಿಕೆಯ ಅವಧಿ: 15 ವರ್ಷಗಳು.
- ಹಣ ಸಿಗುವ ಅವಧಿ : ಖಾತೆ 21 ವರ್ಷಗಳ ನಂತರ.
- ತೆರಿಗೆ ಪ್ರಯೋಜನಗಳು: ಯೋಜನೆಯಲ್ಲಿ ಮಾಡಿದ ಹೂಡಿಕೆ ಮತ್ತು ಗಳಿಸಿದ ಬಡ್ಡಿಯ ಮೇಲೆ ತೆರಿಗೆ ವಿನಾಯಿತಿ ಇದೆ.
ಉದಾಹರಣೆ: ನೀವು ತಿಂಗಳಿಗೆ ರೂಪಾಯಿ 500 ಠೇವಣಿ ಮಾಡಿದರೆ, ವಾರ್ಷಿಕವಾಗಿ ರೂಪಾಯಿ 6,000 ಠೇವಣಿ ಮಾಡುತ್ತೀರಿ. 15 ವರ್ಷಗಳ ಅವಧಿಯಲ್ಲಿನೀವು ಶೇಕಡಾ 8.2 ಬಡ್ಡಿ ಪಡೆದರೆ ನಿಮಗೆ ಸಿಗುವ ಹಣ 2,77,103 ರೂಪಾಯಿ ಆಗಿರುತ್ತದೆ.
RD ಯೋಜನೆ :-
ಪೋಸ್ಟ್ ಆಫೀಸ್ ಆರ್ಡಿ ಯೋಜನೆಯು ಒಂದು ಸುಲಭ ಮತ್ತು ಲಾಭದಾಯಕ ಉಳಿತಾಯ ಯೋಜನೆ ಹೊಂದಿದೆ, ಇದು ನಿಮ್ಮ ಹಣಕಾಸಿನ ಗುರಿಗಳನ್ನು ಸುರಕ್ಷಿತವಾಗಿ ತಲುಪಲು ಸಹಾಯ ಮಾಡುತ್ತದೆ.
ಉದಾಹರಣೆಗೆ :- ನೀವು ತಿಂಗಳಿಗೆ ರೂಪಾಯಿ 500 RD ಯೋಜನೆಯಲ್ಲಿ 5 ವರ್ಷಗಳ ಕಾಲ ಹೂಡಿಕೆ ಮಾಡಿದರೆ ಶೇಕಡಾ 6.7 ಬಡ್ಡಿದರದಲ್ಲಿ, ನೀವು ಒಟ್ಟು 30,000 ಹೂಡಿಕೆ ಮಾಡುವ 35,681 ರೂಪಾಯಿ ಪಡೆಯುತ್ತೀರಿ.
ಇದನ್ನೂ ಓದಿ: ಕೇಂದ್ರ ಸರ್ಕಾರದ ಈ ಯೋಜನೆಯ ಅಡಿಯಲ್ಲಿ ಪ್ರತಿ ತಿಂಗಳು 5000 ರೂಪಾಯಿ ಪಿಂಚಣಿ ಪಡೆಯಿರಿ.
ಇದನ್ನೂ ಓದಿ: SBI ಬ್ಯಾಂಕ್ ಶಿಶು ಮುದ್ರಾ ಯೋಜನೆ ಅಡಿಯಲ್ಲಿ 50,000 ರೂಪಾಯಿ ಸಾಲ ನೀಡುತ್ತಿದೆ; ಈ ರೀತಿ ಅರ್ಜಿ ಸಲ್ಲಿಸಿ.