ಅಂಚೆ ಇಲಾಖೆ ಕೇಂದ್ರ ಸರಕಾರದ ಅಡಿಯಲ್ಲಿ ಬರುವ ಸಂಸ್ಥೆ ಆಗಿರುವ ಕಾರಣ ಹುದ್ದೆಗಳ ಬೇಡಿಕೆ ಜೊತೆಗೆ ಹೆಚ್ಚಿನ ಅನುಕೂಲಗಳು ಇವೆ. ಕೇಂದ್ರ ಸರ್ಕಾರದ ಹುದ್ದೆ ಆಗಿರುವುದರಿಂದ ಹುದ್ದೆಗಳ ಭದ್ರತೆ ಹೆಚ್ಚಿರುತ್ತದೆ. ಜೊತೆಗೆ ಸಂಬಳವೂ ಚೆನ್ನಾಗಿರುತ್ತದೆ. ಅಂಚೆ ಇಲಾಖೆಯಲ್ಲಿ ಕೆಲಸ ಮಾಡಬೇಕೆಂಬ ಆಸೆ ಇರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು ಎಂದು ಇಲಾಖೆ ತಿಳಿಸಿದೆ. ಹುದ್ದೆಯ ವಯೋಮಿತಿ ಹಾಗೂ ಏಷ್ಟು ಹುದ್ದೆಗಳು ಖಾಲೀ ಇವೆ ಅರ್ಜಿ ಸಲ್ಲಿಸುವ ವಿಧಾನಗಳ ಬಗ್ಗೆ ಈ ಲೇಖನದಲ್ಲಿ ಮಾಹಿತಿ ಪಡೆಯಿರಿ.
ಗ್ರಾಮೀಣ ಡಾಕ್ ಸೇವಕ ಹುದ್ದೆ :- ಭಾರತದಾದ್ಯಂತ ಅಂಚೆ ಇಲಾಖೆಯಲ್ಲಿ ಡಾಕ್ ಸೇವಕ ಹುದ್ದೆಗಳ ನೇಮಕಾತಿ ನಡೆಸಲು ಇಲಾಖೆಯ ಚಿಂತನೆ ನಡೆಸಿದೆ. ಈ ಹುದ್ದೆಗೆ ಬಗ್ಗೆ ಜೂಲೈ 15 ರಂದು ನೇಮಕಾತಿ ಅಧಿಸೂಚನೆ ಪ್ರಕಟಿಸಲಾಗುವುದು.
ಸೂಚನೆಯ ಮಾಹಿತಿ ಹೀಗಿದೆ :-
ಸಹಾಯಕ ಮಹಾನಿರ್ದೇಶಕ (ಜಿಡಿಎಸ್ /ಪಿಸಿಸಿ / ಪಿಎಪಿ) ರವಿ ಪಹ್ವಾ ಅವರು ಸಿಇಪಿಟಿ ಬೆಂಗಳೂರು / ಹೈದರಾಬಾದ್ ಘಟಕದ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ಮತ್ತು ಜನರಲ್ ಮ್ಯಾನೇಜರ್ಗೆ ಕೆಳಗಿನ ಸೂಚನೆಗಳನ್ನು ನೀಡಲಾಗಿದೆ:
- ಜುಲೈ ಎರಡನೇ ವಾರದಲ್ಲಿ ಜಿಡಿಎಸ್ ಆನ್ಸೆನ್ ಎಂಜೆಂಟ್ ಮತ್ತು ಶೆಡ್ಯೂಲ್ 2024 ರ ಅಡಿಯಲ್ಲಿ ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಬೇಕು.
- ಗ್ರಾಮೀಣ ಡಾಕ್ ಸೇವಕರಿಗೆ ಜುಲೈ 15 ರಂದು ಅಧಿಸೂಚನೆ ಹೊರಡಿಸಬೇಕು.
ಶೈಕ್ಷಣಿಕ ಅರ್ಹತೆ :-
ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಶೈಕ್ಷಣಿಕ ಅರ್ಹತೆ ಪಟ್ಟಿ ಹೀಗಿದೆ :-
- ಗಣಿತ ಮತ್ತು ಇಂಗ್ಲಿಷ್ ವಿಷಯಗಳಲ್ಲಿ 10 ನೇ ತರಗತಿ ಪರೀಕ್ಷೆಯನ್ನು ಪೂರ್ಣಗೊಳಿಸಬೇಕು.
- ಈ ಪರೀಕ್ಷೆಯು ಭಾರತ ಸರ್ಕಾರ ಅಥವಾ ರಾಜ್ಯ ಸರ್ಕಾರದಿಂದ ಮಾನ್ಯತೆ ಪಡೆದ ಶಿಕ್ಷಣ ಮಂಡಳಿಯಿಂದ ನಡೆಸಲ್ಪಡಬೇಕು.
ವಯಸ್ಸಿನ ಮಿತಿ :- ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 18 ವರ್ಷ ವಯಸ್ಸಿನವರಾಗಿರಬೇಕು ಮತ್ತು 40 ವರ್ಷ ವಯಸ್ಸನ್ನು ಮೀರಿರಬಾರದು ಎಂಬ ವಯೋಮಿತಿ ನಿಗದಿಯಾಗಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಭಾರತೀಯ ವಾಯುಪಡೆಯಲ್ಲಿ ‘ಅಗ್ನಿವೀರ್ ವಾಯು’ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಅರ್ಜಿ ಸಲ್ಲಿಸಿ.
ಆಯ್ಕೆ ಪ್ರಕ್ರಿಯೆ:-
ಹುದ್ದೆಗಳಿಗೆ ಆಯ್ಕೆ ಪ್ರಕ್ರಿಯೆಯು ಸಂಪೂರ್ಣವಾಗಿ 10 ನೇ ತರಗತಿಯ ಪರೀಕ್ಷೆಯ ಅಂಕಗಳ ಗಳಿಕೆಯ ಆಧಾರಿತವಾಗಿದೆ. ಯಾವುದೇ ಲಿಖಿತ ಪರೀಕ್ಷೆ ಅಥವಾ ಸಂದರ್ಶನವನ್ನು ನಡೆಸಲಾಗುವುದಿಲ್ಲ. 10 ನೇ ತರಗತಿಯ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳನ್ನು ಗಳಿಸಿದ ಅಭ್ಯರ್ಥಿಗಳನ್ನು ಮಾತ್ರ ದಾಖಲೆ ಪರಿಶೀಲನೆಗೆ ಕರೆಯಲಾಗುತ್ತದೆ. ಅಂತಿಮ ಆಯ್ಕೆಯು ಅರ್ಹ ಅಭ್ಯರ್ಥಿಗಳ ದಾಖಲೆಗಳ ಪರಿಶೀಲನೆಯ ನಡೆಸಿ ಆಯ್ಕೆ ಮಾಡಲಾಗುತ್ತದೆ.
ಅರ್ಜಿ ಸಲ್ಲಿಸುವ ವಿಧಾನ :- ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು https://indiapostgdsonline.gov.in/ ವೆಬ್ಸೈಟ್ ಗೆ ತೆರಳಿ ಜೂಲೈ 15 ರ ಬಳಿಕ ಅರ್ಜಿಯನ್ನು ಸಲ್ಲಿಸಬಹುದು. ಅರ್ಜಿ ಸಲ್ಲಿಸುವಾಗ ಮಾಹಿತಿಗಳನ್ನು ನಿಖರವಾಗಿ ತಪ್ಪಿಲ್ಲದಂತೆ ಭರ್ತಿ ಮಾಡಬೇಕು.
ಅಭ್ಯರ್ಥಿಗಳಿಗೆ ನೀಡುವ ಫೆಸಿಲಿಟಿಗಳು ಏನೇನು?: ಆಯ್ಕೆಯಾದ ಗ್ರಾಮೀಣ ಡಾಕ್ ಸೇವಕರಿಗೆ ಕಚೇರಿ ನಿರ್ವಹಣಾ ಭತ್ಯೆ ಹಾಗೂ ಸ್ಟೇಷನರಿ ಭಟ್ಯೆ ಹಾಗೂ ಹೆಸರು ಭತ್ಯೆ ಹಾಗೂ ನಗದು ವಾಹನ ಭತ್ಯೆ ಹಾಗೂ ಟಿಆರ್ಸಿಎ ಹಾಗೂ ಡಿಎ ಮತ್ತು ವೈದ್ಯಕೀಯ ಭತ್ಯೆ ನೀಡಲಾಗುವುದು ಜೊತೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಸಿಗುವ ತಿಂಗಳ ಆರಂಭಿಕ ಸಂಬಳವೂ 10,000 ರೂಪಾಯಿಗಳಿಂದ 15,000 ರೂಪಾಯಿಗಳ ವರೆಗೆ ಇರುತ್ತದೆ.
ಹೆಚ್ಚಿನ ಮಾಹಿತಿಗೆ ಇಲಾಖೆ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಮಾಹಿತಿ ಮಡೆಯಿರಿ. ಇಲ್ಲವೇ ನಿಮ್ಮ ಹತ್ತಿರದ ಪೋಸ್ಟ್ ಆಫೀಸ್ ಕೇಂದ್ರಕ್ಕೆ ಭೇಟಿ ನೀಡಿ.
ಇದನ್ನೂ ಓದಿ: ಹಾವೇರಿ ನ್ಯಾಯಾಂಗ ಘಟಕದಲ್ಲಿ SSLC ಪಾಸಾದ ಅಭ್ಯರ್ಥಿಗಳಿಗೆ ಉದ್ಯೋಗಾವಕಾಶ.