ಬಿಪಿಎಲ್ ಕಾರ್ಡ್ ರದ್ದತಿ ಬಗ್ಗೆ ಪ್ರಮುಖ ಮಾಹಿತಿ ನೀಡಿದ ಸರ್ಕಾರ; ಗೃಹಲಕ್ಷ್ಮಿ ಫಲಾನುಭವಿಗಳಿಗೆ ಕಂಟಕ

ಬಿಪಿಎಲ್ ಕಾರ್ಡ್(BPL Ration Card) ಹೊದಿರಲೂ ಕೆಲವು ನಿಯಮಗಳು ಇವೆ. ಆದರೆ ಆ ನಿಯಮಗಳನ್ನು ಪಾಲಿಸದೆ ಹಲವಾರು ಜನರು ಅಕ್ರಮವಾಗಿ ಸುಳ್ಳು ಮಾಹಿತಿ ನೀಡಿ ಬಿಪಿಎಲ್ ಕಾರ್ಡ್ ಪಡೆದುಕೊಂಡಿದ್ದಾರೆ. ಇದರಿಂದ ಸರಕಾರದ ಹಲವು ಯೋಜನೆಗಳ ಲಾಭವನ್ನು ಪಡೆಯುತ್ತಿದ್ದಾರೆ. ಆದರೆ ಈಗ ಸರ್ಕಾರ ಕಠಿಣ ನಿರ್ಧಾರ ತೆಗೆದುಕೊಂಡಿದ್ದು ಹಲವಾರು ಜನರ ಬಿಪಿಎಲ್ ಕಾರ್ಡ್ ರದ್ದಾಗಲಿದೆ.

WhatsApp Group Join Now
Telegram Group Join Now

ರಾಜ್ಯದಲ್ಲಿ ಬರೋಬ್ಬರಿ ಶೇಕಡಾ 80% ಜನರ ಬಳಿ ಬಿಪಿಎಲ್ ಕಾರ್ಡ್ ಹೊಂದಿದ್ದಿದ್ದಾರೆ:- ಸಾಮಾನ್ಯವಾಗಿ ಬಡತನ ರೇಖೆಗಿಂತ ಕಡಿಮೆ ಇದ್ದರೆ ಮಾತ್ರ ಬಿಪಿಎಲ್ ಕಾರ್ಡ್(BPL Ration Card) ನೀಡುತ್ತಾರೆ. ಆದರೆ ರಾಜ್ಯದಲ್ಲಿ ಬರೋಬರಿ ಶೇಕಡಾ 80% ಜನರ ಬಳಿ ಬಿಪಿಎಲ್ ಕಾರ್ಡ್ ಇದೆ. ಇದೆ ಕಾರಣಕ್ಕೆ ಅಕ್ರಮವಾಗಿ ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬಗಳ ಗುರುತು ಹಿಡಿದು ಅವರ ಕಾರ್ಡ್ ರದ್ದತಿಗೆ ಸಿಎಂ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ರಾಜ್ಯದಲ್ಲಿ ಬಡತನ ರೇಖೆಗಿಂತ ಕೆಳಗಿರುವ ಶೇಕಡಾ ಪ್ರಮಾಣ ಎಷ್ಟು?

ಆಯೋಗದ ಪ್ರಕಾರ ರಾಜ್ಯದಲ್ಲಿ ಇರುವ ಬಡತನ ರೇಖೆಗಿಂತ ಕಡಿಮೆ ಇರುವ ಶೇಕಡಾವಾರು ಪ್ರಮಾಣವು 5.57 ಪ್ರತಿಶತ ಇದೆ. ಆದರೆ ಅದಕ್ಕೂ ಹೆಚ್ಚಿನ ಪ್ರಮಾಣದಲ್ಲಿ ರಾಜ್ಯದಲ್ಲಿ ಬಿಪಿಎಲ್ ಕಾರ್ಡ್ ಹೊಂದಿರುವವರ ಸಂಖ್ಯೆ ಇದೆ. ಎಂದು ನೀತಿ ಆಯೋಗವು ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ನಿಯಮ ಮೀರಿ ಬಿಪಿಎಲ್ ಕಾರ್ಡ್ ಹೊಂದಿದ್ದರೆ ಕೂಡಲೇ ರದ್ದು ಮಾಡಿ :- ಅಕ್ರಮವಾಗಿ ಸುಳ್ಳು ಮಾಹಿತಿ ನೀಡಿ ಬಿಪಿಎಲ್ ಕಾರ್ಡ್ ಪಡೆದುಕೊಂಡಿರುವ ಕುಟುಂಬಗಳ ಬಿಪಿಎಲ್ ಕಾರ್ಡ್ ಗಳನ್ನೂ ಕೂಡಲೇ ರದ್ದು ಮಾಡಿ ಬಿಪಿಎಲ್ ಕಾರ್ಡ್ ಪಟ್ಟಿಯಿಂದ ಹೆಸರನ್ನು ತೆಗೆದುಹಾಕಿ ಎಂದು ಹಿರಿಯ ಅಧಿಕಾರಿಗಳಿಗೆ ಸಿಎಂ ಸಿದ್ಧರಾಮಯ್ಯ ಅವರು ಖಡಕ್ ಎಚ್ಚರಿಕೆ ನೀಡಿದ್ದಾರೆ.

ಅಧಿಕಾರಿಗಳು ಯಾರ ಪಡಿತರ ಚೀಟಿ ವಿವರಗಳನ್ನು ಚೆಕ್ ಮಾಡಲಿದ್ದಾರೆ?: ಸಿಎಂ ಸೂಚನೆಯ ಬೆನ್ನಲ್ಲೇ ಅಧಿಕಾರಿಗಳು ಪಡಿತರ ಚೀಟಿಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಮೊದಲನೆಯದಾಗಿ ಸಿರಿವಂತರ ಪಡಿತರ ಚೀಟಿಗಳನ್ನು ಪರಿಶೀಲನೆ ನಡೆಸಲಿದ್ದಾರೆ. ನಂತರ ಸರಕಾರಿ ಉದ್ಯೋಗಿಗಳ ಪಡಿತರ ಚೀಟಿಗಳನ್ನು ಪರಿಶೀಲನೆ ನಡೆಸಲಿದ್ದಾರೆ. ತದನಂತರದಲ್ಲಿ ಆದಾಯ ತೆರಿಗೆ ಪಾವತಿದಾರರು ಹಾಗೂ ವೈಟ್ ಬೋರ್ಡ್ ಕಾರು ಇರುವವರು ಹಾಗೂ ಸ್ವಂತ ಕೃಷಿ ಉಪಕರಣ ಹಾಗೂ ಸ್ವಂತ ಜಮೀನು ಇರುವರ ಪಡಿತರ ಚೀಟಿಗಳನ್ನು ಪರಿಶೀಲನೆ ನಡೆಸಲಿದೆ. ನಂತರ ಹಲವಾರು ಪ್ಲ್ಯಾಟ್ ಹೊಂದಿರುವ ಜನರ ಮೇಲೆ‌ಯು ಅಧಿಕಾರಿಗಳು ಕಣ್ಣಿಡಲಿದ್ದಾರೆ. ಮೂರು ತಿಂಗಳಿಗೆ ಒಮ್ಮೆ ಪರಿಶೀಲನೆ ನಡೆಸಿ ಅನರ್ಹ ಫಲಾನುಭವಿಗಳನ್ನು ಪಟ್ಟಿಯಿಂದ ತೆಗೆದು ಹಾಕಲಾಗುತ್ತದೆ.

ಇದನ್ನೂ ಓದಿ: LIC ಜೀವನ್ ಪ್ರಗತಿ ಯೋಜನೆ ಯಲ್ಲಿ ನೀವು 200 ರೂಪಾಯಿಗಳನ್ನು ಠೇವಣಿ ಮಾಡಿ 28 ಲಕ್ಷ ರೂಪಾಯಿಗಳನ್ನು ಪಡೆಯಬಹುದು.

ಹಲವಾರು ಯೋಜನೆಗಳ ಲಾಭಗಳು ಕಡಿತ ಆಗಲಿದೆ :-

ಅನರ್ಹ ಫಲಾನುಭವಿಗಳನ್ನೂ ಬಿಪಿಎಲ್ ಕಾರ್ಡ್ ರದ್ದತಿ ಮಾಡುವುದರಿಂದ ಸರಕಾರದಿಂದ ಪಡೆಯುವ ಹಲವು ಯೋಜನೆಗಳು ಸಿಗುವುದಿಲ್ಲ. ಮುಖ್ಯವಾಗಿ ಅನ್ನಭಾಗ್ಯ ಹಾಗೂ ಗೃಹ ಲಕ್ಷ್ಮಿ ಯೋಜನೆಗಳ ಅನರ್ಹ ಫಲಾನುಭವಿಗಳು ಈ ಯೋಜನೆಯ ಲಾಭವನ್ನು ಪಡೆಯಲೂ ಸಾಧ್ಯವಿಲ್ಲ.

ಈಗ ಕರ್ನಾಟಕ ರಾಜ್ಯದಲ್ಲಿ ಒಟ್ಟು 1.27 ಕೋಟಿ ಬಿಪಿಎಲ್ ಕಾರ್ಡ್ ಬಳಸುವ ಕುಟುಂಬಗಳು ಇವೆ. ಇವುಗಳಲ್ಲಿ ಆದ್ಯತಾ ಕಾರ್ಡ್ ಹಾಗೂ ಅಂತ್ಯೋದಯ ಕಾರ್ಡಿವಿ ಮತ್ತು ಅನ್ನಪೂರ್ಣ ಕಾರ್ಡ್ ಗಳು ಸೇರಿಕ ಒಟ್ಟು 4.26 ಕೋಟಿ ಜನರು ಅನ್ನಭಾಗ್ಯ ಯೋಜನೆಯ ಫಲಾನುಭವಿಗಳು ಇದ್ದರೆ. ಇವರಿಗೆ ಪ್ರತಿ ತಿಂಗಳು ಕೇಂದ್ರ ಸರಕಾರದ 5 ಕೆಜಿ ಅಕ್ಕಿ ಹಾಗೂ ರಾಜ್ಯ ಸರಕಾರದ ಅನ್ನಭಾಗ್ಯ ಹಣ ಬರುತ್ತಿದೆ.

ಇದನ್ನೂ ಓದಿ: ಆಯುಷ್ಮಾನ್ ಭಾರತ್ ಯೋಜನೆಯಲ್ಲಿ ಭಾರಿ ಬದಲಾವಣೆ. ಇನ್ನು ಮುಂದೆ ಬರೋಬ್ಬರಿ 10 ಲಕ್ಷ ರೂಪಾಯಿ ವಿಮೆ ಪಡೆಯಬಹುದು.

Sharing Is Caring:

Leave a Comment