ಬೆಂಗಳೂರಿನಲ್ಲಿ ಕೆಲಸ ಮಾಡ್ಬೇಕು ಅಂತ ಆಸೆ ಇಟ್ಟುಕೊಂಡವರಿಗ್ ಇದು ನಿಜಕ್ಕೂ ಸಿಹಿಸುದ್ದಿ. ಖಾಲಿ ಇರುವ ಫೆಲೋಶಿಪ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ ಮಾಡಿದೆ. ಆಸಕ್ತರು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಹುದ್ದೆಗಳ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯಲು ಈ ಲೇಖನ ಓದಿ.
ಹುದ್ದೆಗಳ ಬಗ್ಗೆ ಮಾಹಿತಿ :- ಬೆಂಗಳೂರು ಮಹಾನಗರ ಪಾಲಿಕೆ ಒಟ್ಟು 8 ಹುದ್ದೆಗಳನ್ನು ಕರೆದಿದ್ದು ಹುದ್ದೆಯ ಅವಧಿ 12 ತಿಂಗಳು ಆಗಿರುತ್ತದೆ. ಜೂನಿಯರ್ ಫೆಲೋ ಹುದ್ದೆ 2 ಹಾಗೂ ಫೆಲೋ ಹುದ್ದೆ 5 ಹಾಗೂ ಸೀನಿಯರ್ ಫೆಲೋ 1 ಹುದ್ದೆ ಗಳನ್ನೂ ಭರ್ತಿ ಮಾಡಲು ಇಲಾಖೆ ಮುಂದಾಗಿದೆ ಬೆಂಗಳೂರಿನಲ್ಲಿ ಉದ್ಯೋಗ ಇರುತ್ತದೆ.
ಶೈಕ್ಷಣಿಕ ಅರ್ಹತೆ :-
ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಶೈಕ್ಷಣಿಕ ಅರ್ಹತೆ ಹೀಗಿದೆ :- ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ನಗರ ಯೋಜನೆ ಅಥವಾ ಆಡಳಿತ ಅಥವಾ ನಿರ್ವಹಣೆ ಅಥವಾ ಸಂವಹನ ಅಥವಾ ಪತ್ರಿಕೋದ್ಯಮ ಅಥವಾ ಪಬ್ಲಿಕ್ ರಿಲೇಷನ್ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಪೂರ್ಣಗೊಳಿರಬೇಕು. ಇದರ ಜೊತೆಗೆ ಬಿಬಿಎಂಪಿ ನಿಗದಿತ ಕೆಲಸಗಳ ಬಗ್ಗೆ ಅನುಭವ ಇರುವುದು ಅವಶ್ಯಕವಾಗಿದೆ.
ಹುದ್ದೆಗಳ ನೇಮಕಾತಿಗೆ ಮುಖ್ಯ ಕಾರಣ ಏನು?: ಬಿಬಿಎಂಪಿ ಹವಾಮಾನ ವಿಭಾಗವು ಬೆಂಗಳೂರು ವಲಯದಲ್ಲಿ ಉಂಟಾಗುವ ಹವಾಮಾನ ಬದಲಾವಣೆ ಜೊತೆಗೆ ಜನರ ಸಮಸ್ಯೆಗಳನ್ನು ಉತ್ತಮ ರೀತಿಯಲ್ಲಿ ಬಗೆಹರಿಸಲು ಹೊಸ ಆಲೋಚನೆ ಜೊತೆಗೆ ಬಿಬಿಎಂಪಿಯ ಹವಾಮಾನ ವಿಭಾಗಕ್ಕೆ ಸಹಾಯ ಮಾಡಲು ಮತ್ತು ಹವಾಮಾನ ಕೋಶದ ಕಾರ್ಯನಿರ್ವಹಣೆಯನ್ನು ಮಾಡುವ ನಿಟ್ಟಿನಲ್ಲಿ ಬೆಂಗಳೂರು ಹವಾಮಾನ ಕ್ರಿಯಾ ಬೆಂಗಳೂರು ಹವಾಮಾನ ಕ್ರಿಯಾಯೋಜನೆ ಫೆಲೋಶಿಪ್ ಕಾರ್ಯಕ್ರಮಕ್ಕೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನ ಮಾಡಲಾಗಿದೆ.
ತಿಂಗಳ ಸಂಬಳದ ವಿವರಗಳು :- ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ ಸಿಗುವ ಸಂಬಳವೂ 40,000 ರೂಪಾಯಿಗಳಿಂದ 60,000 ರೂಪಾಯಿ ಆಗಿರುತ್ತದೆ. ವೇತನವೂ ಹುದ್ದೆಗಳ ಅನುಗುಣವಾಗಿ ಬೇರೆ ಬೇರೆ ಇರುತ್ತದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಉದ್ಯೋಗಾಕಾಂಕ್ಷಿಗಳಿಗೆ ಸಂತೋಷದ ಸುದ್ದಿ! 737 ಸರ್ವೇಯರ್ಗಳ ನೇಮಕಾತಿಗೆ ಶೀಘ್ರದಲ್ಲೇ ಅಧಿಸೂಚನೆ ಹೊರಡಲಿದೆ!
ಆಯ್ಕೆ ವಿಧಾನ ಹೇಗೆ?
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ವಿದ್ಯಾರ್ಹತೆ ಮತ್ತು ಅರ್ಹತೆಯನ್ನು ಮೊದಲು ಪರಿಶೀಲನೆ ನಡೆಸಿ ನಂತರ ಸ್ಪೆಷಿಯಲ್ ಕಮೀಷನರ್ (ಫಾರೆಸ್ಟ್, ಎನ್ವಿರಾನ್ಮೆಂಟ್ ಅಂಡ್ ಕ್ಲೈಮೇಟ್ ಚೇಂಜ್) ರವರು ಮೊದಲ ಸುತ್ತಿನಲ್ಲಿ ಅರ್ಹತಾ ಮಾನದಂಡಗಳನ್ನು ಪರಿಶೀಲನೆ ನಡೆಸಿ ಎರಡನೇ ಸುತ್ತಿಗೆ ಆಯ್ಕೆ ಮಾಡಲಾಗುತ್ತದೆ. ನಂತರ ಎರಡನೇ ಸುತ್ತಿನಲ್ಲಿ ಟೆಕ್ನಿಕಲ್ ಮತ್ತು ಭಾಷಾ ಕೌಶಲ್ಯದ ಕುರಿತು ಪರೀಕ್ಷೆಏನು ನಡೆಸಿ ಅಲ್ಲಿ ಆಯ್ಕೆಯಾದ ಅಭ್ಯರ್ಥಿಗಳನ್ನು ಕೊನೆಯ ಸುತ್ತಿನ ಆಯ್ಕೆ ಪ್ರಕ್ರಿಯೆಗೆ ಕಳುಹಿಸಲಾಗುತ್ತದೆ. ಅಂತಿಮ ಸುತ್ತಿನಲ್ಲಿ ಸಂದರ್ಶನ ನಡೆಸಿ ಅಭ್ಯರ್ಥಿಗಳನ್ನು ಆಯ್ಕ್ ಮಾಡಲಾಗುತ್ತದೆ.
ಹುದ್ದೆಗಳ ಅವಧಿಯ ಬಗ್ಗೆ ಸಂಪೂರ್ಣ ಮಾಹಿತಿ :- ಮೊದಲು 12 ತಿಂಗಳುಗಳ ಅವಧಿಗೆ ಎಂದು ಅಭ್ಯರ್ಥಿಗಳನ್ನು ನೇಮಿಸಿಕೊಳ್ಳಲಾಗುವುದು. ಆದರೆ ತದನಂತರದಲ್ಲಿ ಹುದ್ದೆಯ ಸೇವಾವಧಿ ವಿಸ್ತರಣೆ ಮಾಡ್ಬಹುದು. ಆಯ್ಕೆಯಾದ ಫೆಲೋಗಳಿಗೆ ಹವಾಮಾನ ಕ್ರಿಯಾಕೋಶದ ಚಟುವಟಿಕೆಗಳಿಗೆ ಸಂಬಂಧಿಸಿದ ನಿರ್ದಿಷ್ಟ ಜವಾಬ್ದಾರಿಗಳನ್ನು ನೀಡಲಾಗುತ್ತದೆ.
ಅರ್ಜಿ ಸಲ್ಲಿಸುವ ವಿಧಾನ :- ಅರ್ಜಿಯನ್ನು ಆನ್ಲೈನ್ ಮೂಲಕ ಸಲ್ಲಿಸಬೇಕು. ಇಲಾಖೆಯ ಅಧಿಕೃತ ವೆಬ್ಸೈಟ್ ವಿಳಾಸ https://apps.bbmpgov.in/bcap/ ಗೆ ಹೋಗಿ, ಅರ್ಜಿ ನಮೂನೆಯಲ್ಲಿ ಕೇಳಿರುವ ಅಗತ್ಯ ಮಾಹಿತಿಗಳು ಹಾಗೂ ದಾಖಲೆಗಳನ್ನು ಭರ್ತಿ ಮಾಡಿ ಅರ್ಜಿಯನ್ನು ಸಲ್ಲಿಸಬೇಕು. ಇಲಾಖೆಯ ಅಧಿಸೂಚನೆಯ ಪ್ರಕಾರ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 06-08-2024 ಆಗಿರುತ್ತದೆ. ನಿಗದಿತ ದಿನಾಂಕದ ಒಳಗಾಗಿ ಅರ್ಜಿ ಸಲ್ಲಿಸಿ. ಅಧಿಸೂಚನೆ PDF ಡೌನ್ ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ