ಇಂಡಿಯನ್ ಬ್ಯಾಂಕ್‌ನಲ್ಲಿ 1500 ಹುದ್ದೆಗಳಿಗೆ ಅರ್ಜಿ ಆಹ್ವಾನ. ಪದವಿಧರರಿಗೆ ಅವಕಾಶ.

ಪದವೀಧರರಿಗೆ ಈಗ ಬ್ಯಾಂಕ್ ನಲ್ಲಿ ಉದ್ಯೋಗ ಅವಕಾಶ ಇದೆ. ಆಸಕ್ತರು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಹುದ್ದೆಗಳ ಬಗ್ಗೆ ಪೂರ್ಣ ಮಾಹಿತಿ ಇಲ್ಲಿದೆ.

WhatsApp Group Join Now
Telegram Group Join Now

ಇಂಡಿಯನ್ ಬ್ಯಾಂಕ್ ನಲ್ಲಿ ಖಾಲಿಯಿರುವ ಹುದ್ದೆಗಳ ವಿವರ :- ಯಾವುದೇ ಪದವಿ ಮುಗಿಸಿ ಒಂದು ಒಳ್ಳೆಯ ಉದ್ಯೋಗಕ್ಕೆ ಹುಡುಕುತ್ತಾ ಇದ್ದರೆ ನೀವು ಇಂಡಿಯನ್ ಬ್ಯಾಂಕ್ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಉತ್ತಮ ಸಂಬಳವೂ ಸಿಗಲಿದೆ. ಇಂಡಿಯನ್ ಬ್ಯಾಂಕ್ ಭಾರತದಲ್ಲಿ ಇರುವ ಉನ್ನತ ಬ್ಯಾಂಕ್ ನಲ್ಲಿ ಒಂದಾಗಿದೆ. ಒಟ್ಟು 1500 ಅಪ್ರೆಂಟಿಸ್ ತರಬೇತುದಾರರ ಹುದ್ದೆಗಳ ಭರ್ತಿಗೆ ಬ್ಯಾಂಕ್ ಮುಂದಾಗಿದ್ದು , ಕರ್ನಾಟದಲ್ಲಿ ಒಟ್ಟು 42 ಹುದ್ದೆಗಳು ಇವೆ.

ಎಜುಕೇಷನ್ ಬಗ್ಗೆ ಮಾಹಿತಿ :- ಯಾವುದೇ ಪದವೀಧರರು ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹರು. ಆದರೆ ಅರ್ಜಿದಾರರು 31-03-2020 ನಂತರ ಪದವಿ ಪೂರ್ಣಗೊಳಿಸಿರಬೇಕು ಎಂದು ಬ್ಯಾಂಕ್ ತಿಳಿಸಿದೆ.

ಪರೀಕ್ಷೆಯ ವಿವರ ಹೀಗಿದೆ :- ಅರ್ಜಿದಾರರಿಗೆ ಮೊದಲು ಲಿಖಿತ ಪರೀಕ್ಷೆ ನಡೆಸಲಾಗುತ್ತದೆ. 100 ಅಂಕಗಳ ಬಹು ಆಯ್ಕೆಯ ಪ್ರಶ್ನೆಗಳು ಇರಲಿದೆ. ಒಟ್ಟು 60 ನಿಮಿಷಗಳ ಪರೀಕ್ಷೆ ನಡೆಯಲಿದೆ. ಒಂದು ತಪ್ಪದ ಉತ್ತರಕ್ಕೆ 0.25 ನೆಗೆಟಿವ್ ಅಂಕ ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಹುದ್ದೆಯ ತರಬೇತಿಯ ಅವಧಿ :-

ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಒಂದು ವರ್ಷಗಳ ಕಾಲ ತರಬೇತಿ ನೀಡಲಾಗುತ್ತದೆ. ಈ ಸಮಯದಲ್ಲಿ ಅಭ್ಯರ್ಥಿಗಳಿಗೆ ಸ್ಟೆಫಂಡ್ ನೀಡಲಾಗುತ್ತದೆ. ಮೆಟ್ರೊ ಅಥವಾ ನಗರ ಪ್ರದೇಶಗಳ ಬ್ಯಾಂಕ್ ಶಾಖೆಗಳಲ್ಲಿ ಉದ್ಯೋಗ ಮಾಡುವವರಿಗೆ 15,000 ರೂಪಾಯಿ ಹಾಗೂ ಗ್ರಾಮೀಣ ಭಾಗದ ಬ್ಯಾಂಕ್ ಶಾಖೆಯಲ್ಲಿ ಉದ್ಯೋಗ ಮಾಡುವವರಿಗೆ 12,000 ರೂಪಾಯಿ ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಅರ್ಜಿ ಶುಲ್ಕ ವಿವರ :- ಸಾಮಾನ್ಯ ಅಭ್ಯರ್ಥಿಗಳ ಅರ್ಜಿ ಶುಲ್ಕ 500 ರೂಪಾಯಿ ಹಾಗೂ ಪರಿಶಿಷ್ಟ ಜಾತಿ (SC), ಪರಿಶಿಷ್ಟ ಪಂಗಡ (ST) ಮತ್ತು ವಿಶೇಷ ಸಾಮರ್ಥ್ಯ ಹೊಂದಿರುವ ವ್ಯಕ್ತಿಗಳು (PwD) ಗೆ ಶುಲ್ಕ ವಿನಾಯಿತಿ ನೀಡಲಾಗಿದೆ.

ಇದನ್ನೂ ಓದಿ: ನಿರುದ್ಯೋಗಿಗಳಿಗೆ ಉದ್ಯೋಗ ಅವಕಾಶ, ಬಿಬಿಎಂಪಿ ಫೆಲೋಶಿಪ್ ಹುದ್ದೆಗಳ ನೇಮಕಾತಿ ಮಾಡತ್ತದೆ.

ವಯಸ್ಸಿನ ಮಿತಿ ಹೀಗಿದೆ :-

ಅಭ್ಯರ್ಥಿಗಳು ಕನಿಷ್ಠ 20 ವರ್ಷ ಪೂರೈಸಬೇಕು ಹಾಗೂ ಗರಿಷ್ಠ 28 ವರ್ಷ ವಯಸ್ಸನ್ನು ಮೀರಿರಬಾರದು. ಸರಕಾರಿ ಮೀಸಲಾತಿ ನಿಯಮದ ಪ್ರಕಾರ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ ಗರಿಷ್ಠ ವಯಸ್ಸಿನ ಮಿತಿಯಲ್ಲಿ 5 ವರ್ಷಗಳ ವಯಸ್ಸಿನ ಸಡಿಲಿಕೆ ಹಾಗೂ ಇತರೆ ಹಿಂದುಳಿದ ವರ್ಗ ಅಭ್ಯರ್ಥಿಗಳಿಗೆ ಗರಿಷ್ಠ ವಯಸ್ಸಿನ ಮಿತಿಯಲ್ಲಿ 3 ವರ್ಷಗಳ ವಯಸ್ಸಿನ ಸಡಿಲಿಕೆ ಇರುತ್ತದೆ.

ಮುಖ್ಯ ದಿನಾಂಕಗಳು :-

  • ಆನ್‌ಲೈನ್ ಅರ್ಜಿ ಸಲ್ಲಿಸಲು ಲಾಸ್ಟ್ ಡೇಟ್: 31-ಜುಲೈ-2024.
  • ಅರ್ಜಿ ತಿದ್ದುಪಡಿಗೆ ಲಾಸ್ಟ್ ಡೇಟ್: 31-ಜುಲೈ-2024.
  • ಅರ್ಜಿ ಪ್ರಿಂಟ್ ತೆಗೆದುಕೊಳ್ಳಲು ಲಾಸ್ಟ್ ಡೇಟ್: 15-ಆಗಸ್ಟ್-2024.
  • ಅರ್ಜಿ ಶುಲ್ಕ ಪಾವತಿಗೆ ಲಾಸ್ಟ್ ಡೇಟ್: 31-ಜುಲೈ-2024.

ಅರ್ಜಿ ಸಲ್ಲಿಸುವ ವಿಧಾನ:

  • ಹಂತ 1: ಐಬಿಪಿಎಸ್ ವೆಬ್‌ಸೈಟ್‌ಗೆ ಭೇಟಿ ನೀಡಿ:- ಐಬಿಪಿಎಸ್ ವೆಬ್ ಸೈಟ್ ವಿಳಾಸ ಇಲ್ಲಿ ಕ್ಲಿಕ್ ಮಾಡಿ ಭೇಟಿ ನೀಡಿ.
  • ಹಂತ 2: ಹೊಸ ನೋಂದಣಿಗಾಗಿ ಕ್ಲಿಕ್ ಮಾಡಿ:- ವೆಬ್‌ಪೇಜ್‌ನಲ್ಲಿ ತೆರೆದಿರುವ ‘ಹೊಸ ನೋಂದಣಿಗಾಗಿ ಇಲ್ಲಿ ಕ್ಲಿಕ್ ಮಾಡಿ’ ಎಂದಿರುವಲ್ಲಿ ಕ್ಲಿಕ್ ಮಾಡಿ.
  • ಹಂತ 3: ಅಗತ್ಯ ಮಾಹಿತಿಯನ್ನು ನೀಡಿ:- ಅರ್ಜಿ ನಮೂನೆಯಲ್ಲಿ ಕೇಳಲಾಗಿರುವ ಎಲ್ಲಾ ಮಾಹಿತಿ ನೀಡಿ.
  • ಹಂತ 4: ಅರ್ಜಿ ಸಲ್ಲಿಸಿ:- ಎಲ್ಲಾ ಮಾಹಿತಿಯನ್ನು ನಮೂದಿಸಿದ ನಂತರ, ‘ಸಲ್ಲಿಸು’ ಬಟನ್ ಕ್ಲಿಕ್ ಮಾಡಿ. ನಿಮ್ಮ ಅರ್ಜಿಯನ್ನು ಯಶಸ್ವಿಯಾಗಿ ಸಲ್ಲಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಲು ದೃಢೀಕರಣ ಸಂದೇಶವನ್ನು ನೀವು ಪಡೆಯುತ್ತೀರಿ.

ಅಧಿಸೂಚನೆ PDF ಡೌನ್ ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಡಿಸೆಂಬರ್ ಒಳಗೆ ಬರೋಬ್ಬರಿ 13,591 ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಹುದ್ದೆಗಳ ಭರ್ತಿಗೆ ಸಿಎಂ ಸೂಚನೆ.

Sharing Is Caring:

Leave a Comment