ಆರ್ಮಿ ವಿಭಾಗದಲ್ಲಿ ಸೇವೆ ಸಲ್ಲಿಸಬೇಕು ಎಂಬ ಆಸೆ ಇರುವ ವ್ಯಕ್ತಿಗಳಿಗೆ ಈಗ ಉತ್ತಮ ಅವಕಾಶ ಇದೆ. ನೀವು ಪಿಯುಸಿ ಪಾಸ್ ಅದರೆ ನೀವು ಅರ್ಜಿ ಸಲ್ಲಿಸಬಹುದು. ಹುದ್ದೆಗಳ ಆಯ್ಕೆ ಬಗ್ಗೆ ಹಾಗೂ ಹುದ್ದೆಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ವಯಸ್ಸಿನ ಅರ್ಹತೆ: 2025ನೇ ಸಾಲಿನ ಬ್ಯಾಚ್ 2 ಅಗ್ನಿವೀರ್ ವಾಯು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಈ ಕೆಳಗಿನ ವಯಸ್ಸಿನ ಮಿತಿ ಹೀಗಿದೆ.
- 03 ಜುಲೈ 2004 ಮತ್ತು 03 ಜನವರಿ 2008 ರ ನಡುವೆ ಜನಿಸಿರಬೇಕು.
- ಗರಿಷ್ಠ ವಯಸ್ಸು ಅರ್ಜಿ ಸಲ್ಲಿಸುವ ಸಮಯದಲ್ಲಿ 21 ವರ್ಷಕ್ಕಿಂತ ಕಡಿಮೆ (ಅಂದರೆ, ಎಲ್ಲಾ ಹಂತಗಳ ನೇಮಕಾತಿ ಪರೀಕ್ಷೆಗಳನ್ನು ಪೂರ್ಣಗೊಳಿಸಿ ಮತ್ತು ನೇಮಕಾತಿ ಪ್ರಕ್ರಿಯೆಯು ನಂತರ 21 ವರ್ಷ ತುಂಬಿರಬಾರದು).
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ?
ಅಗ್ನಿಪಥ ವಾಯು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು, ಈ ಕೆಳಗಿನ ಹಂತಗಳನ್ನು ಅನುಸರಿಸಿ:
- ಅಗ್ನಿಪಥ ವಾಯು ಪೋರ್ಟಲ್‌ಗೆ ಭೇಟಿ ನೀಡಿ: ಇಲ್ಲಿ ಕ್ಲಿಕ್ ಮಾಡಿ ಭೇಟಿ ನೀಡಿ.
- ನೋಂದಣಿ: ಮುಖಪುಟದಲ್ಲಿ, ‘ನೋಂದಣಿ ಮಾಡಲು ಇಲ್ಲಿ ಕ್ಲಿಕ್ ಮಾಡಿ’ ಎಂಬ ಲಿಂಕ್ ಕ್ಲಿಕ್ ಮಾಡಿ.
- ಲಾಗಿನ್ ಮಾಡಿ ಮತ್ತು ಅರ್ಜಿ ಸಲ್ಲಿಸಿ: ನಿಮ್ಮ ನೋಂದಾಯಿತ ಇಮೇಲ್ ವಿಳಾಸ ಮತ್ತು ಪಾಸ್ವರ್ಡ್ ಲಾಗಿನ್ ಮಾಡಿ. ನಂತರ ‘ಅರ್ಜಿ ಸಲ್ಲಿಸಿ’ ಟ್ಯಾಬ್ ಕ್ಲಿಕ್ ಮಾಡಿ. ಎಲ್ಲಾ ಅಗತ್ಯ ವಿವರಗಳನ್ನು ಒದಗಿಸಿ ಮತ್ತು ಅರ್ಜಿ ನಮೂನೆಯನ್ನು ಭರ್ತಿ ಮಾಡಿ. ದಾಖಲೆಗಳನ್ನು ಸ್ಕ್ಯಾನ್ ಮಾಡಿ ಮತ್ತು ಅಪ್ಲೋಡ್ ಮಾಡಿ. ಅರ್ಜಿ ಶುಲ್ಕವನ್ನು ಪಾವತಿಸಿದ ಬಳಿಕ ನಿಮ್ಮ ಅರ್ಜಿಯನ್ನು ಸಲ್ಲಿಸಿ ಹಾಗೂ ಸಲ್ಲಿಸಿರುವ ಬಗ್ಗೆ ದೃಢೀಕರಣ ಪತ್ರವನ್ನು ಪಡೆಯಿರಿ.
ಅರ್ಜಿ ಸಲ್ಲಿಸುವಾಗ ಗಮನಿಸಬೇಕಾದ ಮುಖ್ಯ ಅಂಶಗಳು :-
- ಎಲ್ಲಾ ಮಾಹಿತಿಯನ್ನು ಸರಿಯಾಗಿ ನಮೂದಿಸಿ.
- ಎಲ್ಲಾ ದಾಖಲೆಗಳನ್ನು ಅಪ್ಲೋಡ್ ಮಾಡಲು ಮರೆಯದಿರಿ.
- ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು ಗಮನದಲ್ಲಿಡಿ.
ಇದನ್ನೂ ಓದಿ: ಇಂಡಿಯನ್ ಬ್ಯಾಂಕ್‌ನಲ್ಲಿ 1500 ಹುದ್ದೆಗಳಿಗೆ ಅರ್ಜಿ ಆಹ್ವಾನ. ಪದವಿಧರರಿಗೆ ಅವಕಾಶ.
ಅಗತ್ಯ ದಾಖಲೆಗಳು:
ಅಗ್ನಿಪಥ ವಾಯು ಹುದ್ದೆಗಳಿಗೆ ಅರ್ಜಿ ಸಲ್ಲಿಸುವಾಗ, ಈ ಕೆಳಗಿನ ದಾಖಲೆಗಳನ್ನು ಮರೆಯದಿರಿ ಮತ್ತು ಅಪ್ಲೋಡ್ ಮಾಡಲು:
- 10ನೇ ತರಗತಿ ಅಂಕಪಟ್ಟಿ.
- 12ನೇ ತರಗತಿ ವಿಜ್ಞಾನ ವಿಭಾಗದ ಅಂಕಪಟ್ಟಿ ಅಥವಾ ತತ್ಸಮಾನ ವಿದ್ಯಾರ್ಹತೆ ದಾಖಲೆ.
- 2 ವರ್ಷದ ವೃತ್ತಿಪರ ಕೋರ್ಸ್ ಪಾಸ್ ಮಾಡಿದ ಸರ್ಟಿಫಿಕೇಟ್.
- ಪಾಸ್ಪೋರ್ಟ್ ಗಾತ್ರದ ಭಾವಚಿತ್ರ.
- ಅಭ್ಯರ್ಥಿಯ ಸಹಿ ಸ್ಕ್ಯಾನ್ ಪ್ರತಿ.
- ಅಭ್ಯರ್ಥಿಯ ಎಡಗೈ ಹೆಬ್ಬೆರಳು ಥಂಬ್ ಇಂಪ್ರೆಷನ್ ಸ್ಕ್ಯಾನ್ ಪ್ರತಿ.
- ಪೋಷಕರ ಸಹಿ.
- ಮಾನ್ಯವಾದ ಇಮೇಲ್ ವಿಳಾಸ.
- ಮಾನ್ಯವಾದ ಮೊಬೈಲ್ ಸಂಖ್ಯೆ.
- ಯಾವುದೇ ಇತರ ವಿವರಗಳು.
ಅಗ್ನಿವೀರ್ ವಾಯು ಹುದ್ದೆಗಳಿಗೆ ಶೈಕ್ಷಣಿಕ ಅರ್ಹತೆ:
ಅಗ್ನಿಪಥ ವಾಯು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಈ ಕೆಳಗಿನ ಶೈಕ್ಷಣಿಕ ಅರ್ಹತೆಯನ್ನು ಹೊಂದಿರಬೇಕು:
- 12 ನೇ ತರಗತಿ: 12ನೇ ತರಗತಿಯಲ್ಲಿ ಗಣಿತ, ಭೌತಶಾಸ್ತ್ರ ಮತ್ತು ಇಂಗ್ಲಿಷ್ ವಿಷಯಗಳನ್ನು ಓದಬೇಕು ಮತ್ತು ಪ್ರತಿಯೊಂದು ವಿಷಯದಲ್ಲೂ ಕನಿಷ್ಠ 50% ಅಂಕಗಳನ್ನು ಪಡೆದು ಪಾಸ್ ಆಗಿರಬೇಕು. ಇಂಗ್ಲಿಷ್ ವಿಷಯದಲ್ಲಿ ಪ್ರತ್ಯೇಕವಾಗಿ 50% ಕನಿಷ್ಠ ಅಂಕ ಪಡೆದಿರಬೇಕು.
- ವೃತ್ತಿಪರ ಕೋರ್ಸ್‌ಗಳು: ಯಾವುದೇ ವಿಜ್ಞಾನ ವಿಭಾಗವಲ್ಲದೆ ಕನಿಷ್ಠ 50% ಅಂಕಗಳೊಂದಿಗೆ 2 ವರ್ಷದ ವೃತ್ತಿಪರ ಕೋರ್ಸ್‌ಗಳನ್ನು ಪೂರ್ಣಗೊಳಿಸಿರಬೇಕು. ಇಂಗ್ಲಿಷ್ ವಿಷಯದಲ್ಲಿ ಪ್ರತ್ಯೇಕವಾಗಿ 50% ಕನಿಷ್ಠ ಅಂಕ ಪಡೆದಿರಬೇಕು.
ಅರ್ಜಿ ಸಲ್ಲಿಸುವ ಸಮಯ:-
ಅಗ್ನಿಪಥ ವಾಯು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆಸಕ್ತಿ ಹೊಂದಿರುವ ಮತ್ತು ಅರ್ಹ ಅಭ್ಯರ್ಥಿಗಳು ಜುಲೈ 08, 2024 ರಿಂದ ಜುಲೈ 28, 2024 ರವರೆಗೆ ಅರ್ಜಿ ಸಲ್ಲಿಸಬಹುದು.
ಅಧಿಸೂಚನೆ PDF ಡೌನ್ ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಕೆನರಾ ಬ್ಯಾಂಕ್ ನಲ್ಲಿ ಉದ್ಯೋಗಾವಕಾಶ; ಬೆಂಗಳೂರಿನಲ್ಲಿ ಕೆಲಸ ಅರ್ಜಿ ಸಲ್ಲಿಸಿ.