ದೇಶದ ಅತಿದೊಡ್ಡ ಪೋಸ್ಟಲ್ ನೆಟ್ವರ್ಕ್ ಸೇವೆಯಾದ ಇಂಡಿಯಾ ಪೋಸ್ಟ್ ಅಧಿಸೂಚನೆಯಲ್ಲಿ, ಗ್ರಾಮೀಣ ಡಾಕ್ ಸೇವಕ್ ಹುದ್ದೆಗೆ 44,228 ಪೋಸ್ಟ್ ಗಕು ಖಾಲಿಯಿದ್ದು ಹುದ್ದೆಗಳ ನೇಮಕಾತಿ ಮಾಡಿಕೊಳ್ಳುವುದಾಗಿ ತಿಳಿಸಿದೆ. indiapostgdsonline.gov.in ಮೂಲಕ ಆನ್ಲೈನ್ ಅರ್ಜಿಗಳು ಜುಲೈ 15 ರಿಂದ ಆಗಸ್ಟ್ 5, 2024 ರವರೆಗೆ ತೆರೆದಿರುತ್ತವೆ ಅಂತ ಅಂಚೆ ಇಲಾಖೆ ಮಾಹಿತಿ ನೀಡಿದೆ. ಇನ್ನು 44,228 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿರುವ ಭಾರತೀಯ ಅಂಚೆ ಇಲಾಖೆ ಆಗಸ್ಟ್ 5, 2024 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಅಂತ ನಿಗಧಿ ಪಡಿಸಿದ್ದು, ಆಸಕ್ತರು ಆನ್ಲೈನ್ ಮೂಲಕ ಅಪ್ಲೈ ಮಾಡಬಹುದು. ಇನ್ನು ಸಂವಹನ ಇಲಾಖೆಯು ಅಂದ್ರೆ ಡಿಪಾರ್ಟ್ಮೆಂಟ್ ಆಫ್ ಕಮ್ಯುನಿಕೇಷನ್ಸ್ ಭಾರತೀಯ ಅಂಚೆ ಇಲಾಖೆಯಲ್ಲಿ ಅಂದ್ರೆ ಇಂಡಿಯನ್ ಪೋಸ್ಟಲ್ ಡಿಪಾರ್ಟ್ಮೆಂಟ್ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಒಟ್ಟು 44,228 ಹುದ್ದೆಗಳು ಖಾಲಿಯಿದ್ದು ಅದರಲ್ಲಿ ಬ್ರಾಂಚ್ ಪೋಸ್ಟ್ಮಾಸ್ಟರ್, ಅಸಿಸ್ಟೆಂಟ್ ಬ್ರಾಂಚ್ ಪೋಸ್ಟ್ಮಾಸ್ಟರ್, ಗ್ರಾಮಿಕ್ ಡಾಕ್ ಸೇವಕ್ ಹುದ್ದೆಗಳನ್ನು ತುಂಬಲು ಆನ್ಲೈನ್ ಮೂಲಕ ಅರ್ಜಿ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ಈಗಾಗ್ಲೇ ಪ್ಯಾನ್-ಇಂಡಿಯಾದಲ್ಲಿ ಒಟ್ಟು 44,228 ಖಾಲಿ ಹುದ್ದೆಗಳಿಗೆ ಅಧಿಸೂಚನೆ ನೀಡಲಾಗಿದೆ. ಮತ್ತು 10ನೇ ತರಗತಿ ಪ್ರಮಾಣ ಪತ್ರ ಹೊಂದಿರುವ 18-40 ವರ್ಷದೊಳಗಿನ ಯಾರಾದರೂ ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳು ಯಾವುದೇ ಸರ್ಕಾರಿ-ಮಾನ್ಯತೆ ಪಡೆದ ಶಾಲಾ ಮಂಡಳಿಯಿಂದ ಗಣಿತ ಮತ್ತು ಇಂಗ್ಲಿಷ್ನಲ್ಲಿ ಪಾಸ್ ಅಂಕಗಳನ್ನು ತೋರಿಸುವ ತಮ್ಮ ಮಾಧ್ಯಮಿಕ ಶಾಲಾ ಪರೀಕ್ಷೆಯ ಪಾಸ್ ಪ್ರಮಾಣಪತ್ರವನ್ನು ಒದಗಿಸಿ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಕೆ ಹೇಗೆ?
ಹೀಗಾಗಿ ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು indiapostgdsonline.gov.ಇನ್ ಗೆ ಭೇಟಿ ನೀಡಿ ಬ್ರಾಂಚ್ ಪೋಸ್ಟ್ಮಾಸ್ಟರ್, ಅಸಿಸ್ಟೆಂಟ್ ಬ್ರಾಂಚ್ ಪೋಸ್ಟ್ಮಾಸ್ಟರ್, ಡಾಕ್ ಸೇವಕ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಇನ್ನು ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ, ಇದರ ಬಗ್ಗೆ ಸಂಪೂರ್ಣ ಮಾಹಿತಿ.
ನೋಡ್ತಾ ಹೋಗೋಣ ಬನ್ನಿ.
ಮೊದಲಿಗೆ ಅರ್ಜಿ ಶುಲ್ಕದ ಬಗ್ಗೆ ನೋಡೋದಾದ್ರೆ ಜಿಡಿಎಸ್ ನೇಮಕಾತಿಗೆ ಅರ್ಜಿ ಶುಲ್ಕ 100 ರೂಪಾಯಿ ನಿಗಧಿ ಮಾಡಲಾಗಿದೆ. ಇನ್ನು
ಎಲ್ಲಾ ಮಹಿಳಾ ಅರ್ಜಿದಾರರು, SC/ST ಅರ್ಜಿದಾರರು, PwD ಅರ್ಜಿದಾರರು ಮತ್ತು ಟ್ರಾನ್ಸ್ವುಮೆನ್ ಅರ್ಜಿದಾರರಿಗೆ ಮಾತ್ರ ಶುಲ್ಕ ಪಾವತಿಯಲ್ಲಿ ವಿನಾಯಿತಿ ನೀಡಲಾಗಿದೆ. ಮುಖ್ಯವಾಗಿ ಹುದ್ದೆಗೆ ಬೇಕಾಗಿರೋದು ವಿದ್ಯಾರ್ಹತೆ, ಹೌದು ಭಾರತೀಯ ಅಂಚೆ ಇಲಾಖೆ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಮಂಡಳಿಯಿಂದ ಕಡ್ಡಾಯವಾಗಿ 10ನೇ ತರಗತಿ ಅಥವಾ ಗಣಿತ ಮತ್ತು ಇಂಗ್ಲಿಷ್ನಲ್ಲಿ ಉತ್ತೀರ್ಣ ಅಂಕಗಳೊಂದಿಗೆ ಎಸ್ಎಸ್ಎಲ್ ಸಿ ಪೂರ್ಣಗೊಳಿಸಿರಬೇಕು. ಹಿwದು ಅಭ್ಯರ್ಥಿಯು ಕನಿಷ್ಠ 10ನೇ ತರಗತಿಯವರೆಗೆ ಸ್ಥಳೀಯ ಭಾಷೆಯನ್ನು ಅಧ್ಯಯನ ಮಾಡಿರಬೇಕು. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಇನ್ನು ವಯಸ್ಸಿನ ಮಿತಿ ಬಗ್ಗೆ ಹೇಳೋದಾದ್ರೆ ಭಾರತೀಯ ಅಂಚೆ ಇಲಾಖೆ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ಕನಿಷ್ಠ ವಯಸ್ಸು 18 ವರ್ಷಗಳು ಮತ್ತು 40 ವರ್ಷಗಳಿಗಿಂತ ಹೆಚ್ಚಿರಬಾರದು. ಆದರೆ, ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗಿದೆ. ಇದರ ಜೊತೆಗೆ ಅಭ್ಯರ್ಥಿಗಳಿಗೆ ಕಂಪ್ಯೂಟರ್ ಜ್ಞಾನ ಮತ್ತು ಸೈಕ್ಲಿಂಗ್ ಗೊತ್ತಿರಬೇಕು. ಜೊತೆಗೆ ಜೀವನೋಪಾಯದ ಸಮರ್ಪಕ ವಿಧಾನಗಳ ಬಗ್ಗೆ ಅನುಭವ ಇರಬೇಕು. ಇನ್ನು ಅರ್ಜಿ ಹಾಕೋದು ಹೇಗೆ ಅನ್ನೋದಾದ್ರೆ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅಪ್ಲೈ ಮಾಡಬಹುದು. ಇನ್ನ ಸಿಸ್ಟಂ-ಜೆನರೇಟೆಡ್ ಮೆರಿಟ್ ಲಿಸ್ಟ್ ಆಧಾರದ ಮೇಲೆ ಅಭ್ಯರ್ಥಿಗಳನ್ನು ಶಾರ್ಟ್ಲಿಸ್ಟ್ ಮಾಡಲಾಗುತ್ತದೆ. ಜೊತೆಗೆ
10 ನೇ ತರಗತಿಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಮೆರಿಟ್ ಲಿಸ್ಟ್ ಇರುತ್ತದೆ ಅಂತ ಹೇಳಲಾಗಿದೆ.
ಕರ್ನಾಟಕದಲ್ಲಿ ಎಲ್ಲೆಲ್ಲಿ ಕೆಲಸಗಳು ಖಾಲಿ ಇವೆ
ಇನ್ನು ಸದ್ಯ ನಮ್ಮ ಕರ್ನಾಟಕದಲ್ಲಿ ಬಾಗಲಕೋಟೆ 23, ಬಳ್ಳಾರಿ 50, ಬೆಂಗಳೂರು ಓಪಿಓ 4, ಬೆಳಗಾವಿ 33 ಬೆಂಗಳೂರು ಪೂರ್ವ 83 ಬೆಂಗಳೂರೂ ದಕ್ಷಿಣ 62, ಬೆಂಗಳೂರು ಪಶ್ಚಿಮ 29, ಬೀದರ್ 59 ಚನ್ನಪಟ್ಟಣ 87 ಚಿಕ್ಕಮಗಳೂರು 60 ಚಿಕ್ಕೋಡಿ 19 ಚಿತ್ರದುರ್ಗ 27, ದಾವಣಗೆರೆ ಕಚೇರಿ 40, ಧಾರವಾಡ 22,ಗದಗ 18, ಗೋಕಾಕ್ 7, ಹಾಸನ 78, ಹಾವೇರಿ 44,ಕಲ್ಬುರ್ಗಿ 83, ಕಾರವಾರ 43,ಕೊಡಗು 79, ಕೋಲಾರ 106, ಕೊಪ್ಪಳ 36, ಮಂಡ್ಯ 65, ಮಂಗಳೂರು 62, ಮೈಸೂರು 42, ನಂಜನಗೂಡು 66, ಪುತ್ತೂರು 89, ರಾಯಚೂರು 63 ಆರ್ಎಂಎಸ್ ಹೆಚ್ ಬಿ 3, ಆರ್ಎಂಎಸ್ಕ್ಯೂ 9, ಶಿವಮೊಗ್ಗ 89, ಶಿರಶಿ 66, ತುಮಕೂರು107, ಉಡುಪಿ 90, ವಿಜಯಪುರ 40, ಯಾದಗಿರಿಯಲ್ಲಿ 50 ಹುದ್ದೆಗಳು ಖಾಲಿ ಇದೆ.
ಅಧಿಸೂಚನೆ PDF ಡೌನ್ ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಇಂಡಿಯನ್ ಬ್ಯಾಂಕ್ನಲ್ಲಿ 1500 ಹುದ್ದೆಗಳಿಗೆ ಅರ್ಜಿ ಆಹ್ವಾನ. ಪದವಿಧರರಿಗೆ ಅವಕಾಶ.
ಇದನ್ನೂ ಓದಿ: ದ್ವಿತೀಯ ಪಿಯು ಪಾಸಾದವರಿಗೆ ಅಗ್ನಿವೀರ್ ವಾಯು ಹುದ್ದೆಗಳ ನೇಮಕಾತಿ ನಡೆಯುತ್ತಿದೆ.