ಜಿಯೋದ 98 ದಿನಗಳ ಹೊಸ ರಿಚಾರ್ಜ್ ಪ್ಲಾನ್ ಕಡಿಮೆ ಬೆಲೆಯಲ್ಲಿ; Unlimited Call ಜೊತೆ ಸಾಕಷ್ಟು ಡೇಟಾ ಪಡೆಯಿರಿ

ಈಗ ಮೊಬೈಲ್ ಕಾಲ ಕಡಿಮೆ ಎಂದರೂ ಎರಡು ಸಿಮ್ ಗಳನ್ನು ಪ್ರತಿ ಒಬ್ಬರು ಬಳಸುತ್ತಾರೆ. ಯಾವ ಟೆಲಿಕಾಂ ಕಂಪನಿ ಅಗ್ಗದಲ್ಲಿ ರೀಚಾರ್ಜ್ ಪ್ಲಾನ್ ನೀಡುತ್ತದೆ ಎಂಬುದನ್ನು ತಿಳಿದು ಸಿಮ್ ಕಾರ್ಡ್ ತೆಗೆದುಕೊಳ್ಳುತ್ತಾರೆ. ಜಿಯೋ ಟೆಲಿಕಾಂ ಆರಂಭ ಆದಾಗಿನಿಂದ ಹಲವಾರು ಉತ್ತಮ ಪ್ಲಾನ್ ಗಳನ್ನು ಜನರಿಗೆ ನೀಡುತ್ತಿದೆ. ಮೊದಲು ಸಂಪೂರ್ಣ ಉಚಿತ ಕರೆ ಮತ್ತು ಡೇಟಾ ನೀಡುತ್ತಿದ್ದ ಜಿಯೋ ನಂತರ ಅಗ್ಗದ ಬೆಲೆಯಲ್ಲಿ ಡೇಟಾ ಮತ್ತು ಉಚಿತ ಕರೆಗಳನ್ನು ನೀಡುವ ಪ್ಲಾನ್ ಗಳನ್ನು ಪರಿಚಯ ಮಾಡಿತು. ಆದರೆ ಈಗ ಕೆಲವು ದಿನಗಳ ಹಿಂದೆ ದರ ಏರಿಕೆ ಆಗಿರುವ ಕಾರಣ ಜನರಿಗೆ ಜಿಯೋ ಟೆಲಿಕಾಂ ಸಂಸ್ಥೆಯ ಮೇಲೆ ಸ್ವಲ್ಪ ಬೇಸರ ಆಗಿತ್ತು. ಆದರೆ ಜಿಯೋ ಕಡಿಮೆ ಮೊತ್ತದ 98 ದಿನಗಳ ವ್ಯಾಲಿಡಿಟಿ ಇರುವ ಪ್ಲಾನ್ ಜನರಿಗೆ ನೀಡುತ್ತಿದೆ. ಈ ವಿಶೇಷ ಪ್ಲಾನ್ ನ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯೋಣ.

WhatsApp Group Join Now
Telegram Group Join Now

ಜಿಯೋದ 999 ರೂಪಾಯಿಯ ಪ್ಲಾನ್: ಜಿಯೋ ಟೆಲಿಕಾಂ 98 ದಿನಗಳ ವ್ಯಾಲಿಡಿಟಿ ಹೊಂದಿರುವ ಹೊಸ ಪ್ಲಾನ್ ಒಂದನ್ನು ಪರಿಚಯಿಸಿದೆ. ಈ ಪ್ಲಾನ್ ಇತರ ಟೆಲಿಕಾಂ ಕಂಪನಿಗಳಾದ ಏರ್‌ಟೆಲ್ ಹಾಗೂ ವೊಡಾಫೋನ್ ಐಡಿಯಾ ಗಳಿಗಿಂತ ಉತ್ತಮ ಪ್ರಯೋಜನ ನೀಡುತ್ತದೆ. 999 ರೂಪಾಯಿ ಪಾವತಿಸಿ ನೀವು ಹಲವು ಪ್ರಾಯೋಜಗಳನ್ನು ಪಡೆಯಲು ಸಾಧ್ಯವಿದೆ. ಈ ಪ್ಲಾನ್ ನಲ್ಲಿ ಗ್ರಾಹಕರು ಉಚಿತವಾಗಿ ಅನಿಯಮಿತ ಧ್ವನಿ ಕರೆಗಳ ಪ್ರಯೋಜನವನ್ನು ಪಡೆಯಲು ಸಾಧ್ಯವಿದೆ. ಇದರ ಜೊತೆಗೆ ಪ್ರತಿದಿನ 2GB ಡೇಟಾದ ಬಳಕೆಯನ್ನು ಪಡೆಯಲು ಸಾಧ್ಯವಿದೆ. ಹಾಗೂ ಪ್ರತಿದಿನ 100 SMS ಉಚಿತವಾಗಿದೆ. ಒಟ್ಟಾರೆಯಾಗಿ ಈ ಪ್ಲಾನ್ ನಲ್ಲಿ 196GB ಡೇಟಾ ಬಳಸಲು ಸಾಧ್ಯ ಆಗುತ್ತದೆ.

ಜಿಯೋ 5G ಸೌಲಭ್ಯ ಪಡೆಯಿರಿ

Jio ತನ್ನ ಗ್ರಾಹಕರಿಗೆ 5G ಸೇವಯನ್ನು ನೀಡಲು ಮುಂದಾಗಿದೆ. ಇದರಿಂದ ಗ್ರಾಹಕರು ಇನ್ನು ಹೆಚ್ಚಿನ ಸ್ಪೀಡ್ ನಲ್ಲಿ ಇಂಟರ್ನೆಟ್ ಬಳಕೆ ಮಾಡಲು ಸಹಾಯವಾಗುತ್ತದೆ. ಗ್ರಾಹಕರು ಈ ಪ್ರಿಪೇಯ್ಡ್ ಯೋಜನೆಯಲ್ಲಿ, ಅನಿಯಮಿತ 5G ಡೇಟಾವನ್ನು ಸಹ ಪಡೆಯಬಹುದು. ಆದರೆ ಈ ಸೇವೆಯನ್ನು ಪಡೆಯಲು ಗ್ರಾಹಕರು 5G ಮೊಬೈಲ್ ಬಳಸಬೇಕಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಏರ್‌ಟೆಲ್‌ ಟೆಲಿಕಾಂನ 929 ರೂಪಾಯಿ ಪ್ಲಾನ್ ಬಗ್ಗೆ ಮಾಹಿತಿ :-

ಜಿಯೋದ ಟೆಲಿಕಾಂ ಕಂಪನಿಯ ಪ್ರತಿಸ್ಪರ್ಧಿಯಾಗಿ ಇರುವ ಭಾರತದ ಟೆಲಿಕಾಂ ಆಪರೇಟರ್ ಸಂಸ್ಥೆ ಏರ್‌ಟೆಲ್ ಇದು ತನ್ನ ಗ್ರಾಹಕರಿಗೆ 929 ರೂಪಾಯಿಗಳಾ 90 ದಿನಗಳ ಮಾನ್ಯತೆಯನ್ನು ಹೊಂದಿರುವ ರೀಚಾರ್ಜ್ ಪ್ಲಾನ್ ನೀಡುತ್ತಿದೆ. ಈ ಪ್ರಿಪೇಯ್ಡ್ ರೀಚಾರ್ಜ್ ಪ್ಲಾನ್ ನಲ್ಲಿ ಏರ್ಟೆಲ್ ಬಳಕೆದಾರರು ಪ್ರತಿದಿನ 1.5GB ಡೇಟಾದ ಪ್ರಯೋಜನ ಪಡೆಯಲು ಸಾಧ್ಯವಿದೆ. ಇದರ ಜೊತೆಗೆ 100 ಉಚಿತ SMS ಕಳುಹಿಸಲು ಸಾಧ್ಯವಿದೆ. ಅದಕ್ಕೂ ಹೆಚ್ಚಿನ SMS ಗೆ ಮೈನ್ ಬ್ಯಾಲೆನ್ಸ್ ಕಡಿತ ಆಗುತ್ತದೆ. ಇದರ ಜೊತೆಗೆ ಈ ಪ್ಲಾನ್ ನಲ್ಲಿ ಅನಿಯಮಿತ ಕರೆಗಳ ಪ್ರಯೋಜನ ಪಡೆಯಲು ಸಾಧ್ಯವಿದೆ. ಈ ರೀಚಾರ್ಜ್ ಪ್ಲಾನ್ ನಲ್ಲಿ ಬಳಕೆದಾರರು ಒಟ್ಟು 135GB ಡೇಟಾದ ಪ್ರಯೋಜನವನ್ನು ಪಡೆಯಬಹುದಾಗಿದೆ. ಆದರೆ ಇದು ಜಿಯೋ ಟೆಲಿಕಾಂ ಗಿಂತ ಹೆಚ್ಚಿನ ದರದಲ್ಲಿ ಕಡಿಮೆ ಪ್ರಯೋಜನವನ್ನು ನೀಡುತ್ತದೆ.

ಇದನ್ನೂ ಓದಿ: 10 ಸಾವಿರ ರೂಪಾಯಿ ಹೂಡಿಕೆ ಮಾಡಿ 55 ಲಕ್ಷ ರೂಪಾಯಿ ಪಡೆಯುವ ಸುಕನ್ಯಾ ಸಮೃದ್ಧಿ ಯೋಜನೆಯ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಕಡಿಮೆ ಬೆಲೆಯಲ್ಲಿ Unlimited Call ಹಾಗೂ ಇಂಟರ್ನೆಟ್; ಹೊಸ ಯೋಜನೆಯನ್ನು ಪರಿಚಯಿಸಿದ ಜಿಯೋ

Sharing Is Caring:

Leave a Comment