ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದಿದ್ದು 5 ಗ್ಯಾರೆಂಟಿ ಯೋಜನೆಗಳನ್ನು ಜನರಿಗೆ ನೀಡುತ್ತೇವೆ ಎಂಬ ವಿಶ್ವಾಸ ನೀಡಿ. ಅಂತೆಯೇ ಕಳೆದ ವರ್ಷ ಎಲ್ಲಾ ಯೋಜನೆಗಳನ್ನು ನೀಡಿತು. ಆದರೆ ಈಗ ಮತ್ತೆ ರಾಜ್ಯ ಸರ್ಕಾರವು ತನ್ನ ಯೋಜನೆಗಳ ನಿಯಮಗಳನ್ನು ಬದಲಾಯಿಸುತ್ತಿದೆ. ಈಗ ಗೃಹ ಜ್ಯೋತಿ ಫಲಾನುಭವಿಗಳಿಗೆ ಕೆಲವು ನಿಯಮಗಳನ್ನು ಬದಲಾಯಿಸಿ ಶಾಕ್ ನೀಡಿದೆ. ಅದರ ಬಗ್ಗೆ ಮಾಹಿತಿ ತಿಳಿಯಿರಿ.
ಹೆಚ್ಚು ಯೂನಿಟ್ ಬಳಸಿದವರಿಗೆ ಹೆಚ್ಚಿನ ಹೊರೆ :- ರಾಜ್ಯದಲ್ಲಿ ಗೃಹಜ್ಯೋತಿ ಯೋಜನೆ ಬರುವಾಗ ಸರಕಾರವು ಖಚಿತವಾಗಿ ಹೇಳಿತ್ತು, ಇಲ್ಲಿಯವರೆಗಿನ ಸರಾಸರಿ ವಿದ್ಯುತ್ ಬಳಕೆಗಿಂತ ಹೆಚ್ಚಿನ 10 ಯೂನಿಟ್ ವಿದ್ಯುತ್ ಬಳಕೆಗೆ ರಾಜ್ಯ ಸರ್ಕಾರವು ಉಚಿತವಾಗಿ ವಿದ್ಯುತ್ ನೀಡುತ್ತದೆ. ಆದರೆ ಅದಕ್ಕೂ ಹೆಚ್ಚಿನ ವಿದ್ಯುತ್ ಬಳಸಿದರೆ ಗ್ರಾಹಕರು ಕರೆಂಟ್ ಬಿಲ್ ಮೊತ್ತವನ್ನು ಪಾವತಿ ಮಾಡಬೇಕು ಎಂದು. ಅದರಂತೆಯೇ ಈಗ ಹೆಚ್ಚುವರಿ ಕರೆಂಟ್ ಬಳಸಿದವರಿಗೆ ಸರ್ಕಾರವು ಶಾಕ್ ನೀಡುತ್ತಿದೆ.
ಹೆಚ್ಚಿನ ಕಾರೆಂಟ್ ಬಳಸಿದ್ರೆ ಏನಾಗಲಿದೆ?: ನೀವು ಗೃಹಜ್ಯೋತಿ ಯೋಜನೆಯ ಫಲಾನುಭವಿಗಳು ಆಗಿದ್ದು ನಿಗದಿತ ವಿದ್ಯುತ್ ಬಳಕೆಗಿಂತ ಹೆಚ್ಚಿನ ವಿದ್ಯುತ್ ಬಳಸಿದರೆ ನೀವು ಹೆಚ್ಚುವರಿ ಭದ್ರತಾ ಠೇವಣಿಯನ್ನು ಪಾವತಿ ಮಾಡಬೇಕಾಗುತ್ತದೆ.
ಹೊಸ ನಿಯಮವು ಜೂಲೈ ತಿಂಗಳಿಂದ ಆರಂಭ ಆಗಲಿದೆ :-
ರಾಜ್ಯದ ನಾಲ್ಕು ವಿದ್ಯುತ್ ಸರಬರಾಜು ಕಂಪನಿಗಳು ಸೇರಿ ಈ ನಿರ್ಧಾರಕ್ಕೆ ಬಂದಿದ್ದು ಪ್ರತಿ ಒಬ್ಬ ಗ್ರಾಹಕರು ಬಳಸಿರುವ ವಿದ್ಯುತ್ ಪ್ರಮಾಣವನ್ನು ಲೆಕ್ಕಚಾರ ಮಾಡಿ ಇದೆ ಬರುವ ಜುಲೈ ತಿಂಗಳ ವಿದ್ಯುತ್ ಬಿಲ್‌ನಲ್ಲಿ ಹೆಚ್ಚುವರಿ ಭದ್ರತಾ ಠೇವಣಿಯ ಮೊತ್ತವನ್ನು ಹಾಕಿವೆ. ಇದರಿಂದ ಪ್ರತಿ ಒಬ್ಬ ಗೃಹ ಜ್ಯೋತಿ ಫಲಾನುಭವಿಯ ಸಹ ಹೆಚ್ಚುವರಿ ವಿದ್ಯುತ್ ಬಳಕೆಗೆ 250 ರಿಂದ 1000 ರೂಪಾಯಿಗೂ ಹೆಚ್ಚಿನ ಹಣವನ್ನು ಎಎಸ್‌ಡಿ ಗೆ ನೀಡಬೇಕಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಭದ್ರತಾ ಠೇವಣಿ ಪ್ರಮಾಣದ ಲೆಕ್ಕಾಚಾರ :- ವಿದ್ಯುತ್ ಕಂಪನಿಗಳು ಪ್ರತಿಯೊಬ್ಬ ಗ್ರಾಹಕರ 12 ತಿಂಗಳ ಸರಾಸರಿ ವಿದ್ಯುತ್ ಪ್ರಮಾಣವನ್ನು ಲೆಕ್ಕಚಾರ ಮಾಡಿ ಬಳಿಕ ಅದರಲ್ಲಿ 2 ತಿಂಗಳ ಬಿಲ್ ನಾ ಹಣವನ್ನು ಭದ್ರತಾ ಠೇವಣಿಯಾಗಿ ಪಡೆದುಕೊಳ್ಳುತ್ತವೆ. ಆದರೆ ಈಗ ಗೃಹಜ್ಯೋತಿ ಯೋಜನೆಯಲ್ಲಿನ ಲಾಭವನ್ನು ಫಲಾನುಭವಿಗಳಿಗೆ ನೀಡುವಾಗ ಸರಕಾರವು ಒಂದು ಕುಟುಂಬದ ಅಥವಾ ಮನೆಯ ಒಂದು ವರ್ಷದ ಸರಾಸರಿ ವಿದ್ಯುತ್ ಬಳಕೆಯ ಯೂನಿಟ್ ಅನ್ನು ಪರಿಗಣಿಸಲಾಗಿತ್ತು. ಇದರ ಆಧಾರದ ಮೇಲೆ ಪ್ರತಿ ತಿಂಗಳು 10 ಯುನಿಟ್ ಗೆ ಹೆಚ್ಚಿನ ಉಚಿತ ವಿದ್ಯುತ್ ಅನ್ನು ಸರಕಾರ ನೀಡುವುದಾಗಿ ಹೇಳಿತ್ತು.. ಆದರೆ ಈಗ ಈ ಹೆಚ್ಚುವರಿ ಉಚಿತ ವಿದ್ಯುತ್ ಬಳಸಿದವರು ಸಹ ಎಎಸ್‌ಡಿ ಪಾವತಿ ಮಾಡಬೇಕು.
ಇದನ್ನೂ ಓದಿ: ಕಡಿಮೆ ಬೆಲೆಯಲ್ಲಿ Unlimited Call ಹಾಗೂ ಇಂಟರ್ನೆಟ್; ಹೊಸ ಯೋಜನೆಯನ್ನು ಪರಿಚಯಿಸಿದ ಜಿಯೋ
ಈ ಹಿಂದಿನ ಗ್ರಾಹಕರ ಭದ್ರತಾ ಠೇವಣಿ ಹಣದ ಬಗ್ಗೆ ಸ್ಪಷ್ಟನೆ:
ಗ್ರಾಹಕರ ಭದ್ರತಾ ಠೇವಣಿಯ ಮೊತ್ತವನ್ನು ಅವರ ಖಾತೆಗಳಲ್ಲಿ ಸುರಕ್ಷಿತವಾಗಿ ಇರಿಸಲಾಗಿದೆ. ಈ ಠೇವಣಿಗೆ ವಾರ್ಷಿಕ 3.75% ಬಡ್ಡಿದರ ನೀಡಲಾಗುವುದು ಮತ್ತು ತಿಂಗಳ ವಿದ್ಯುತ್ ಬಿಲ್ನಲ್ಲಿ ಅಡ್ಜೆಸ್ಟ್ ಮಾಡಿಕೊಳ್ಳಾಗುತ್ತುತ್ತು. ಆದರೆ ಈಗ ಗೃಹ ಜ್ಯೋತಿ ಯೋಜನೆಯಿಂದ ಈ ಠೇವಣಿಯ ಹಣ ಬಹುತೇಕ ಗ್ರಾಹಕರಿಗೆ ಸಿಗುತ್ತಿಲ್ಲ. ಆದರೆ ಈ ವರ್ಷ ಗ್ರಾಹಕರ ಭದ್ರತಾ ಠೇವಣಿ ಹಣದ ಬಗ್ಗೆ ಇಲಾಖೆಯ ಉನ್ನತ ಅಧಿಕಾರಿಗಳು ಬಹಳ ಗೊಂದಲದಲ್ಲಿ ಇದ್ದರೆ.
ಇದನ್ನೂ ಓದಿ: ಜಿಯೋದ 98 ದಿನಗಳ ಹೊಸ ರಿಚಾರ್ಜ್ ಪ್ಲಾನ್ ಕಡಿಮೆ ಬೆಲೆಯಲ್ಲಿ; Unlimited Call ಜೊತೆ ಸಾಕಷ್ಟು ಡೇಟಾ ಪಡೆಯಿರಿ