ಕುರಿ ಹಾಗೂ ಮೇಕೆ ಸಾಕಾಣಿಕೆಯು ಭಾರತದಲ್ಲಿ ಒಂದು ಸಾಂಪ್ರದಾಯಿಕ ಉದ್ಯಮವಾಗಿದೆ ಎಂದು ಹೇಳಬಹುದು. ಇದು ಗ್ರಾಮೀಣ ಭಾಗದ ಜನರಿಗೆ ಜೀವನೋಪಾಯವನ್ನು ನೀಡುತ್ತದೆ. ಇದರಿಂದ ಮಾಂಸ, ಉಣ್ಣೆ, ಚರ್ಮ ಮತ್ತು ಹಾಲಿನ ಉತ್ಪನ್ನಗಳಿಗೆ ಉತ್ತಮ ಬೇಡಿಕೆ ಇದ್ದು ಇದು ಒಂದು ಲಾಭದಾಯಕ ವ್ಯವಹಾರವಾಗಿದೆ. ಕೃಷಿಕರಿಗೆ ತಮ್ಮ ಕೃಷಿ ಬದುಕಿನ ಜೊತೆಗೆ ಈ ಉದ್ಯಮವನ್ನು ಆರಂಭಿಸಿ ಹೆಚ್ಚಿನ ಆದಾಯ ಗಳಿಸಲು ಸಾಧ್ಯವಾಗುತ್ತದೆ. ಈಗ ಈ ಉದ್ಯಮವನ್ನು ಸ್ಟಾರ್ಟ್ ಮಾಡಲು ನಿಮಗೆ ಸಹಾಯಧನ ದೊರೆಯುತ್ತದೆ. ಸಹಾಯಾಧನಕ್ಕೆ ಅರ್ಜಿ ಸಲ್ಲಿಸುವ ವಿಧಾನ ಮತ್ತೆ ಯಾರು ಯಾರು ಅರ್ಜಿ ಸಲ್ಲಿಸಲು ಅರ್ಹರು ಎಂಬ ಮಾಹಿತಿಯನ್ನು ತಿಳಿಯೋಣ.
ಕುರಿ ಮತ್ತು ಮೇಕೆ ಅಭಿವೃದ್ಧಿ ನಿಗಮದಿಂದ ಅರ್ಜಿ ಆಹ್ವಾನ ಮಾಡಲಾಗಿದೆ :- ಕುರಿ ಮತ್ತು ಮೇಕೆಗಳನ್ನು ಸಾಕಲು ಈಗ ಕುರಿ ಮತ್ತು ಮೇಕೆ ಅಭಿವೃದ್ಧಿ ನಿಗಮದಿಂದ ಸಹಾಯಧನ ನೀಡುವ ಬಗ್ಗೆ ಅರ್ಜಿ ಆಹ್ವಾನ ಮಾಡಲಾಗಿದೆ. ಆಸಕ್ತರು ಅರ್ಜಿ ಸಲ್ಲಿಸಲು ನಿಗಮವು ತಿಳಿಸಿದೆ. ಅರ್ಹ ವ್ಯಕ್ತಿಗಳು ದಾಖಲೆಗಳನ್ನು ನೀಡಿ ಅರ್ಜಿ ಸಲ್ಲಿಸಬಹುದಾಗಿದೆ.
ಘಟಕ ಸ್ಥಾಪನೆಗೆ ಆರ್ಥಿಕ ನೆರವು :-
ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆಯ ಅಡಿಯಲ್ಲಿ 2024-25 ನೇ ಸಾಲಿನಲ್ಲಿ ಒಟ್ಟು 20+1 ಕುರಿ ಮತ್ತು ಮೇಕೆ ಘಟಕಗಳ ಸ್ಥಾಪನೆಗಾಗಿ ತಲಾ 1.75 ಲಕ್ಷ ಆರ್ಥಿಕ ನೆರವು ನೀಡಲಾಗಿದೆ. ಈ ಆರ್ಥಿಕ ನೆರವನ್ನು ಪಡೆಯಲು ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳಲ್ಲಿ ಸದಸ್ಯರಾಗಿ ನೊಂದಾಯಿಸಿಕೊಂಡವರು ಮಾತ್ರ ಅರ್ಜಿ ಸಲ್ಲಿಸಬಹುದು. ಈಗಾಗಲೇ ಚಿತ್ರದುರ್ಗ ಜಿಲ್ಲೆಗೆ ಒಟ್ಟು 706 ಕುರಿ ಮತ್ತು ಮೇಕೆ ಸಾಕಾಣಿಕೆ ಘಟಕಗಳ ಸ್ಥಾಪನೆಗೆ ಸಹಾಯಧನ ನೀಡುವ ಗುರಿಯನ್ನು ಹೊಂದಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಅರ್ಜಿ ಸಲ್ಲಿಸುವ ವಿಧಾನ :- ನೀವು ಕುರಿ ಮತ್ತು ಮೇಕೆ ಸಾಕಾಣಿಕೆ ಮಾಡಲು ಸಹಾಯ ಧನಕ್ಕೆ ಏನು ಸಲ್ಲಿಸಬೇಕು ಎಂದರೆ ನಿಮಗೆ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳಲ್ಲಿ ಅರ್ಜಿ ನಮೂನೆಯ ಸಿಗುತ್ತದೆ. ಸಂಘಕ್ಕೆ ನೇರವಾಗಿ ಭೇಟಿ ನೀಡಿ ನೀವು ಅರ್ಜಿಯಲ್ಲಿ ಕೇಳಿರುವ ಎಲ್ಲಾ ಮಾಹಿತಿಗಳನ್ನು ಸರಿಯಾಗಿ ಭರ್ತಿ ಮಾಡಬೇಕು. ಭಾರಿ ಮಾಡಿರುವ ಅರ್ಜಿ ನಮೂನೆಯ ಜೊತೆಗೆ ಅಗತ್ಯ ದಾಖಲೆಗನ್ನು ನೀವು ಸಹಕಾರಿ ಸಂಘ ಅಥವಾ ಚಿತ್ರದುರ್ಗ ಪಶು ಆಸ್ಪತ್ರೆ ಆವರಣದಲ್ಲಿರುವ ನಿಗಮದ ಸಹಾಯಕ ನಿರ್ದೇಶಕ ಕಚೇರಿಗೆ ನೀಡಬೇಕು. ನಿಮ್ಮ ಅರ್ಜಿ ನಮೂನೆಯನ್ನು ಜುಲೈ 31 ರ ಸಂಜೆ 5:30 ಗಂಟೆಯ ಒಳಗಾಗಿ ನೀಡಬೇಕು ಎಂದು ಸೂಚನೆ ನೀಡಲಾಗಿದೆ.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ :-
ನೀವು ಸಂಘದ ಸಹಾಯಧನವನ್ನು ಪಡೆಯಲು ಬಯಸಿದರೆ ನೀವು ಸಂಪಾರ್ಕಿಸಬಹುದಾದ ದೂರವಾಣಿ ಸಂಖ್ಯೆಯು 08194-222718, ಆಗಿರುತ್ತದೆ. ಅಥವಾ ಮೊಬೈಲ್ ಸಂಖ್ಯೆಗೆ ಕರೆಮಾಡಿ 9448656231 ಸಹಾಯಾಧನಕ್ಕೆ ಅರ್ಜಿ ಸಲ್ಲಿಸುವ ಬಗ್ಗೆ ಅಥವಾ ಇನ್ನಿತರ ಮಾಹಿತಿಗಳ ಬಗ್ಗೆ ಸಂಪೂರ್ಣ ವಿವರಗಳನ್ನು ಪಡೆಯಬಹುದಾಗಿದೆ.
ಆರ್ಥಿಕವಾಗಿ ಈ ಯೋಜನೆಯಿಂದ ಬಹಳ ಸಹಾಯ ಆಗಲಿದೆ. ಕುರಿ ಸಾಕಾಣಿಕೆಯಲ್ಲಿ ಹೆಚ್ಚಿನ ಲಾಭ ಗಳಿಸಲು ಇದೆ ಉದ್ಯಮದಲ್ಲಿ ಜೀವನ ಸಾಗಿಸಲು ಹೂಡಿಕೆಯ ಅವಶ್ಯಕತೆ ಇರುವವರಿಗೆ ಇದು ಉತ್ತಮ ಸಹಾಯ ಆಗಲಿದೆ.
ಇದನ್ನೂ ಓದಿ: ರಾಜ್ಯದಲ್ಲಿ ಬರೋಬ್ಬರಿ 750 ಭೂ ಮಾಪಕರ ಹುದ್ದೆಗಳ ನೇಮಕಾತಿ.