ರಾಜ್ಯದ ಗೃಹಲಕ್ಷ್ಮೀಯರಿಗೆ ಗುಡ್ ನ್ಯೂಸ್; ಇನ್ಮುಂದೆ ಗೃಹಲಕ್ಷ್ಮಿ ಹಣ ಬರೋದು ತಡವಾಗಲ್ಲ.

ನಮ್ಮ ಕರ್ನಾಟಕ ರಾಜ್ಯದಲ್ಲಿ ಈಗಾಗಲೇ ಎಲ್ಲಾ ಗ್ಯಾರಂಟಿ ಯೋಜನೆಗಳು ಕೂಡ ತುಂಬಾ ಜನಪ್ರಿಯವಾಗಿದೆ, ಎಲ್ಲಾ ಪಂಚ ಗ್ಯಾರಂಟಿ ಯೋಜನೆಗಳು ಸಹ ಜೋರಾಗಿ ಸದ್ದು ಮಾಡುತ್ತಿವೆ. ಈ ಯೋಜನೆಗಳಲ್ಲಿ ಪ್ರಮುಖವಾದ ಯೋಜನೆ ಅಂದರೆ ಅದು ಗೃಹಲಕ್ಷ್ಮಿ ಯೋಜನೆ(Gruha Lakshmi Scheme). ನಮ್ಮ ರಾಜ್ಯದ ಮಹಿಳೆಯರೂ ಸಹ ತುಂಬಾ ಆದರದ ಸ್ವಾಗತವನ್ನು ಈ ಯೋಜನೆಗೆ ಈಗಾಗಲೇ ನೀಡಿದ್ದಾರೆ, ಈ ಯೋಜನೆಯನ್ನು ಕೇವಲ ನಮ್ಮ ರಾಜ್ಯದ ಮಹಿಳೆಯರಿಗೆ ಮಾತ್ರವೇ ಕಾಂಗ್ರೆಸ್ ಸರ್ಕಾರವು ಜಾರಿಗೊಳಿಸಿದೆ ಹಾಗೂ ಈ ಯೋಜನೆಯಿಂದ ಮನೆಯ ಮುಖ್ಯಸ್ಥರಾದ ಮಹಿಳೆಯ ಖಾತೆಗೆ ತಿಂಗಳಿಗೆ ಅಂದರೆ ಮಾಸಿಕವಾಗಿ 2,000 ರೂಪಾಯಿಯನ್ನು ನೀಡಲಾಗುತ್ತದೆ.

WhatsApp Group Join Now
Telegram Group Join Now

ಇದುವರೆಗೂ ರಾಜ್ಯದ ಎಲ್ಲಾ ಮಹಿಳಾ ಫಲಾನುಭಿಗಳಿಗೆ ಸುಮಾರು 10 ಕಂತಿನ 20,000 ರೂಪಾಯಿ ಹಣವನ್ನು ಸರ್ಕಾರವು ಈಗಾಗಲೇ ಬಿಡುಗಡೆ ಮಾಡಿದೆ. ಅಲ್ದೇ ರಾಜ್ಯದ ಫಲಾನುಭವಿ ಮಹಿಳೆಯರಿಗೆ ಹನ್ನೊಂದು ಮತ್ತು ಹನ್ನೆರಡನೇ ಕಂತಿನ ಅಪ್ಡೇಟ್ ಅನ್ನು ಸರ್ಕಾರವು ನೀಡಿದೆ. ಇದರ ಜೊತೆಗೆ ಇನ್ಮುಂದೆ ಮಹಿಳೆಯರ ಖಾತೆಗೆ ಹಣ ನೀಡುವ ವಿಚಾರದಲ್ಲಿ ಎಚ್ಚರಿಕೆ ತೆಗೆದುಕೊಳ್ಳಲಾಗಿದ್ದು, ಕಾಲ ಕಾಲಕ್ಕೆ ಅಂದ್ರೆ ಸಮಯಕ್ಕೆ ಸರಿಯಾಗಿ ಹಣ ನೀಡುವ ಭರವಸೆಯನ್ನ ಕೊಟ್ಟಿದೆ. ಹಾಗಿದ್ರೆ ಇನ್ಮೇಲೆ ಗೃಹಲಕ್ಷ್ಮಿ ಹಣ ಯಾವಾಗ ಬರುತ್ತೆ ಬಾಕಿ ಇರುವ ಕಂತು ಯಾವಾಗ ಬರುತ್ತೆ ಎಲ್ಲವನ್ನ ನೋಡ್ತಾ ಹೋಗೋಣ.

ರಾಜ್ಯಾ ಸರ್ಕಾರದಿಂದ ವಿಶೇಷ ಸೂಚನೆ, ಮಹಿಳೆಯರಿಗೆ ಗುಡ್ ನ್ಯೂಸ್

ಹೌದು ಕಳೆದ ಆಗಸ್ಟ್ನಲ್ಲಿ ಪ್ರಾರಂಭಿಸಲಾದ ಗೃಹ ಲಕ್ಷ್ಮಿ ಯೋಜನೆಯು(Gruha Lakshmi Scheme) ಆರ್ಥಿಕವಾಗಿ ದುರ್ಬಲ ವರ್ಗಗಳ ಅರ್ಹ ಮಹಿಳೆಯರಿಗೆ ಮಾಸಿಕ 2,000 ರೂಪಾಯಿಗಳ ಆರ್ಥಿಕ ನೆರವು ನೀಡುವ ಗುರಿಯನ್ನು ಹೊಂದಿದೆ. ಆದಾಗ್ಯೂ, ಪ್ರೋತ್ಸಾಹ ಧನ ಬಿಡುಗಡೆ ಮಾಡುವಲ್ಲಿನ ವಿಳಂಬವು ಜೀವನೋಪಾಯಕ್ಕಾಗಿ ಯೋಜನೆಯನ್ನು ಅವಲಂಬಿಸಿರುವ ಅನೇಕರಿಗೆ ಅನಾನುಕೂಲತೆಯನ್ನುಂಟು ಮಾಡಿದೆ. ಅಲ್ದೇ ಲೋಕಸಭಾ ಚುನಾವಣೆ ಹಿನ್ನಲೆ ಕಳೆದ 2ತಿಂಗಳಿಂದ ಗೃಹಲಕ್ಷ್ಮಿ ಹಣ ಸರಿಯಾಗಿ ಗೃಹಿಣಿಯರ ಖಾತೆಗೆ ಜಮೆ ಆಗಿರಲಿಲ್ಲ.

ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ಗೃಹಲಕ್ಷ್ಮಿಯ ಯೋಜನೆಯ(Gruha Lakshmi Scheme) ಜೂನ್‌, ಜುಲೈ ತಿಂಗಳ ಹಣ ಜಮೆ ಆಗಿರಲಿಲ್ಲ. ಹಣ ಜಮೆ ಆಗದ ಹಿನ್ನಲೆ ಕೆಲವೊಂದಷ್ಟು ಉಹಾಪೋಹಗಳು ಶುರುವಾಗಿದ್ವು… ಅದಕ್ಕೇಲಾ ಸ್ವತಃ ಲಕ್ಷ್ಮೀ ಹೆಬಾಳ್ಕರ್ ಅವ್ರೆ ಸ್ಪಷ್ಟನೆ ನೀಡಿ ಹಣ ಬರೋದು ನಿಲಲ್ಲ ಅಂತ ಹೇಳಿದ್ರು. ಈಗ ಅದರ ಮುಂದುವರೆದ ಭಾಗ ಎಂಬಂತೆ ಇಂದಿನಿಂದ ಹಂತಹಂತವಾಗಿ ಗೃಹಲಕ್ಷ್ಮಿ ಹಣ ಮಹಿಳೆಯರ ಅಂದ್ರೆ ಫಲಾನುಭವಿಗಳ ಖಾತೆಗೆ ಜಮೆ ಆಗಲಿದೆ ಎಂದು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಉಪಾಧ್ಯಕ್ಷೆ ಪುಷ್ಪಾ ಅಮರನಾಥ್ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಹೌದು ಚುನಾವನೆ ಸಂದರ್ಭದಲ್ಲಿ ಹಣ ಜಮೆ ಆಗದೆ ಇದ್ದನ್ನ ನೋಡಿ ಕೆಲವರು ಗ್ಯಾರಂಟಿ ಯೋಜನೆಗಳ ಖಾತೆ ಮುಗಿತು ಇಷ್ಟೇ ಅಂತ ಹೇಳಿದ್ರು, ಇನ್ನು ಕೆಲ ರಾಜಕೀಯ ನಾಯಕರೇ ವಿಚಿತ್ರ ರೀತಿಯಲ್ಲಿ ಹೇಳಿಕೆ ಕೊಟ್ಟು ಗೊಂದಲ ಸೃಷ್ಟಿ ಮಾಡಿದ್ರು ಹೀಗಾಗಿ ಫಲಾನುಭವಿಗಳಲ್ಲಿ ಆತಂಕ ಹೆಚ್ಚಾಗಿ ಅಯ್ಯೋ ಹಣ ಬಂದಿಲ್ಲ ಅಂದ್ರೆ ಏನಪ್ಪ ಮಾಡೋದು ಅಂತ ತಲೆ ಕೆಡಿಸಿಕೊಂಡಿದ್ರು. ಆದ್ರೆ ಇಂತ ಉಹಾಪೊಗಳನ್ನ ಗಮನಿಸಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬಾಳ್ಕರ್ ಯಾವುದೇ ಕಾರಣಕ್ಕೂ ಯೋಜನೆಯನ್ನ ಮೊಟಕು ಗೊಳಿಸೋದಿಲ್ಲ ಯೋಜನೆ ಸರ್ಕಾರ ಇರೋವರೆಗು ಅನುಷ್ಠಾನದಲ್ಲಿ ಇರುತ್ತೆ, ಹಣವು ಕೂಡ ಆದಷ್ಟು ಬೇಗ ಜಮೆ ಆಗುತ್ತೆ ಅಂತ ಹೇಳಿದ್ರು.

ಇದೀಗ ಈ ಕುರಿತು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಉಪಾಧ್ಯಕ್ಷೆ ಪುಷ್ಪ ಅಮರನಾಥ್ ಅವ್ರೆ ಮಾಹಿತಿ ನೀಡಿದ್ದು, ಜಿಲ್ಲೆಗಳಾದ್ಯಂತ ಹಂತ ಹಂತವಾಗಿ ಗೃಹಲಕ್ಷ್ಮಿ ಹಣವನ್ನು ವಿತರಣೆ ಮಾಡುವುದರೊಂದಿಗೆ ಯೋಜನೆ ಯಾವುದೇ ಅಡೆತಡೆಯಿಲ್ಲದೆ ಮುಂದುವರಿಯುತ್ತದೆ ಎಂದು ಫಲಾನುಭವಿಗಳಿಗೆ ಭರವಸೆ ನೀಡಿದ್ದಾರೆ. ಹೀಗಾಗಿ ಸದ್ಯಕ್ಕೆ ಗೃಹಲಕ್ಷ್ಮಿ ಯೋಜನೆಯ ಹಣಕ್ಕೆ ಯಾವುದೇ ಅಡ್ಡಿ ಇಲ್ಲಾ ಅನ್ನೋದು ಪಕ್ಕ ಆಗಿದ್ದು ಫಲಾನುಭಾವಿಗಳು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.

ಇದನ್ನೂ ಓದಿ: ಕುರಿ ಮತ್ತು ಮೇಕೆ ಸಾಕಾಣಿಕೆಗೆ ಸರಕಾರದಿಂದ ಸಹಾಯ ಧನ ಸಿಗಲಿದೆ. 

Sharing Is Caring:

Leave a Comment