ನಿಮ್ಮ ಹಣಕಾಸಿನ ಗುರಿಗಳನ್ನು ಸಾಧಿಸಲು ಸಹಾಯ ಮಾಡುವ ಹಲವಾರು ಲಾಭದಾಯಕ ಮತ್ತು ಸುರಕ್ಷಿತ ಹೂಡಿಕೆ ಯೋಜನೆಗಳನ್ನು ಪೋಸ್ಟ್ ಆಫೀಸ್ ಕೊಡುಗೆ. ನೀವು ಕಡಿಮೆ ಮೊತ್ತವನ್ನು ಹೂಡಿಕೆ ಮಾಡಿ ಹೆಚ್ಚಿನ ಹಣವನ್ನು ಪೋಸ್ಟ್ ಆಫೀಸ್ ನೀಡುತ್ತದೆ. ಹಾಗಾದರೆ ಪೋಸ್ಟ್ ಆಫೀಸ್ ನಾ ಯೋಜನೆಯ ಬಗ್ಗೆ ಹೂಡಿಕೆಯ ವಿಧಾನದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
ನಿಮ್ಮ ಮಗುವಿನ ಭವಿಷ್ಯಕ್ಕಾಗಿ ಖಚಿತವಾದ ಯೋಜನೆ: ಪೋಸ್ಟ್ ಆಫೀಸ್ ಪಿಪಿಎಫ್ :- 1,000 ರೂಪಾಯಿಗಳನ್ನು ಪ್ರತಿ ತಿಂಗಳು 20 ವರ್ಷ ಹೂಡಿಕೆ ಮಾಡಿ ನಿಮ್ಮ ಮಗುವಿನ ಭವಿಷ್ಯಕ್ಕಾಗಿ 8 ಲಕ್ಷಕ್ಕೂ ಹೆಚ್ಚು ರೂಪಾಯಿಗಳು ಖಚಿತವಾಗಿ ಗಳಿಸಬಹುದಾಗಿದೆ. ಸರ್ಕಾರಿ ಯೋಜನೆಗಳಲ್ಲಿ ಹೂಡಿಕೆ ಮಾಡುವಾಗ ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್) ಯಾವಾಗಲೂ ಮುಂಚೂಣಿಯಲ್ಲಿರುತ್ತದೆ. ಅಂಚೆ ಕಚೇರಿಯ ಜನಪ್ರಿಯ ಯೋಜನೆಗಳಲ್ಲಿ ಒಂದಾದ ಪಿಪಿಎಫ್, ಭದ್ರತೆ ಮತ್ತು ಉತ್ತಮ ಆದಾಯವನ್ನು ಒದಗಿಸುವ ಸರ್ಕಾರ-ಖಾತರಿ ಯೋಜನೆಯಾಗಿದೆ.
ಈ ಯೋಜನೆಯ ಪ್ರಮುಖ ಲಕ್ಷಣಗಳು:
- ಹೂಡಿಕೆ: ಪಿಪಿಎಫ್ ಒಂದು ಸರ್ಕಾರಿ ಯೋಜನೆಯಾಗಿರುವುದರಿಂದ, ನಿಮ್ಮ ಹೂಡಿಕೆ ಸಂಪೂರ್ಣವಾಗಿ ಸುರಕ್ಷಿತವಾಗಿದೆ.
- ಉತ್ತಮ ಬಡ್ಡಿ ದರ: ಪ್ರಸ್ತುತ, 7.1% ವಾರ್ಷಿಕ ಬಡ್ಡಿ ದರ ಲಭ್ಯವಿದೆ, ಇದು ದೀರ್ಘಾವಧಿಯಲ್ಲಿ ನಿಮ್ಮ ಹೂಡಿಕೆಯ ಮೌಲ್ಯವನ್ನು ಗಣನೀಯವಾಗಿ ಹೊಂದಿದೆ.
- ತೆರಿಗೆ ಪ್ರಯೋಜನಗಳು: EPF ನಿಯಮಗಳ ಪ್ರಕಾರ ಠೇವಣಿಗಳು ಮತ್ತು ಗಳಿಸಿದ ಬಡ್ಡಿ ತೆರಿಗೆ ವಿನಾಯಿತಿ ಪಡೆದಿವೆ.
- ದೀರ್ಘಾವಧಿಯ ಹೂಡಿಕೆ: 15 ವರ್ಷಗಳ ಠೇವಣಿ ಅವಧಿಯೊಂದಿಗೆ, ನಿಮ್ಮ ನಿವೃತ್ತಿ, ಮಕ್ಕಳ ಶಿಕ್ಷಣ ಅಥವಾ ಇತರ ಭವಿಷ್ಯದ ಯೋಜನೆಗಳಿಗೆ ಹಣಕಾಸು ಒದಗಿಸಲು ಈ ಯೋಜನೆ ಸಹಾಯ ಮಾಡುತ್ತದೆ.
8 ಲಕ್ಷ ರೂಪಾಯಿ ಗಳಿಸುವ ಅವಕಾಶ :- ನೀವು ಪ್ರತಿ ತಿಂಗಳು 1,000 ರೂಪಾಯಿಗಳನ್ನು ಹೂಡಿಕೆ ಮಾಡಿದಾರೆ 1 ವರ್ಷದ ನಿಮ್ಮ ಹೂಡಿಕೆಯ ಹಣವನ್ನು 12,000 ರೂಪಾಯಿ ಆಗಿರುತ್ತದೆ. ಇದು 15 ವರ್ಷಗಳ ಯೋಜನೆ ಆಗಿದೆ. ಇದರ ಬಳಿಕ ನೀವು ಈ ಯೋಜನೆಯನ್ನು 5 ವರ್ಷಗಳ ವರೆಗೆ ಬ್ಲಾಕ್ಗಳಲ್ಲಿ ಎರಡು ಬಾರಿ ವಿಸ್ತರಣೆ ಮಾಡಬಹುದಾಗಿದೆ. ಇತ್ತು ನೀವು ಈ ಯೋಜನೆಯಲ್ಲಿ 25 ವರ್ಷಗಳ ವರೆಗೆ ಹೂಡಿಕೆ ಮಾಡಬಹುದು. ನೀವು 25 ವರ್ಷಗಳ ಅವಧಿಗೆ ಪ್ರತಿ ತಿಂಗಳು 1,000 ರೂಪಾಯಿ ಹೂಡಿಕೆ ಮಾಡಿ ನೀವು ಒಟ್ಟು 3,00,000 ರೂಪಾಯಿ ಹೂಡಿಕೆ ಮಾಡಿದಂತೆ ಆಗುತ್ತದೆ. ನಿಮಗೆ ಈ ಯೋಜನೆಯಲ್ಲಿ ಶೇಕಡಾ 7.1 % ಬಡ್ಡಿ ಸಿಗುತ್ತದೆ. ನಿಮಗೆ ಸಿಗುವ ಬಡ್ಡಿದರದ ಮೊತ್ತವು 5,24,641 ರೂಪಾಯಿ ಆಗಿರುತ್ತದೆ. ಅಲ್ಲಿಗೆ ನಿಮ್ಮ ಮೆಚ್ಯೂರಿಟಿ ನಂತರ ಸಿಗುವ ಹಣವು 8,24,641 ರೂಪಾಯಿ ಆಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಹಿರಿಯ ನಾಗರಿಕರಿಗೆ FD ಯೋಜನೆಯಲ್ಲಿ ಹೆಚ್ಚು ಬಡ್ಡಿ ನೀಡುವ ಬ್ಯಾಂಕ್ ಗಳು ಯಾವುವು?
ಸಂಪೂರ್ಣ ತೆರಿಗೆ ಮುಕ್ತರಾಗುತ್ತಿರಿ :-
ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಮೂರು ರೀತಿಯಲ್ಲಿ ತೆರಿಗೆ ಪ್ರಯೋಜನವನ್ನು ಪಡೆಯಬಹುದು. ಈ ಯೋಜನೆಯ ಅಡಿಯಲ್ಲಿ ನೀವು ವಾರ್ಷಿಕವಾಗಿ ಹೂಡಿಕೆ ಮಾಡುವ ಹಣಕ್ಕೆ ಯಾವುದೇ ತೆರಿಗೆ ನೀಡಬೇಕಾಗಿಲ್ಲ. ಇದರ ಜೊತೆಗೆ ನಿಮ್ಮ ಹೂಡಿಕೆಯ ಹಣಕ್ಕೆ ಸಿಗುವ ಬಡ್ಡಿಗೆ ಯಾವುದೇ ತೆರಿಗೆ ಇರುವುದಿಲ್ಲ ಜೊತೆಗೆ ಮೆಚ್ಯೂರಿಟಿ ಸಮಯದಲ್ಲಿ ಪಡೆದ ಸಂಪೂರ್ಣ ಮೊತ್ತವು ತೆರಿಗೆ ನೀಡಬೇಕಾದ ಅಗತ್ಯ ಇರುವುದಿಲ್ಲ. ಇದರಲ್ಲಿ ನೀವು ಸಂಪೂರ್ಣವಾಗಿ ತೆರಿಗೆ ಮುಕ್ತರಾಗಿರುತ್ತಿರಿ.
ಇದನ್ನೂ ಓದಿ: ಮಹಿಳೆಯರಿಗೆ ಈ ಯೋಜನೆ ಅಡಿಯಲ್ಲಿ ಸಿಗಲಿದೆ 65 ಸಾವಿರ ರೂಪಾಯಿ ಸಾಲ ಸೌಲಭ್ಯ!