FD ಯೋಜನೆ ಅಂದರೆ ನಿಶ್ಚಿತ ಠೇವಣಿ ಯೋಜನೆ. ಇದು ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು ನೀಡುವ ಒಂದು ಉಳಿತಾಯ ಯೋಜನೆ ಇದಾಗಿದೆ. ಇದರಲ್ಲಿ ನೀವು ಹೂಡಿಕೆ ಮಾಡುವ ಮೊತ್ತಕ್ಕೆ ಉತ್ತಮ ರೀತಿಯ ಬಡ್ಡಿದರಗಳನ್ನು ಪಡೆಯಲು ಸಾಧ್ಯ. ಹಾಗೂ ನೀವು ಒಂದು ಮೊತ್ತವನ್ನು ಹಲವು ವರ್ಷಗಳ ಕಾಲ ಜೋಪಾನವಾಗಿ ಇಡಲು ಇದು ಉತ್ತಮ ಮಾರ್ಗವಾಗಿದೆ. ನಿಮ್ಮ ಹಣಕ್ಕೆ ಭದ್ರತೆಯ ಜೊತೆಗೆ ಹಣವನ್ನು ದುಪ್ಪಟ್ಟಗಿಸಲು ಇದು ಒಳ್ಳೆಯ ವಿಧಾನ ಆಗಿದೆ. ಹಾಗಾದರೆ ಭಾರತದ ಅತೀ ದೊಡ್ಡ ಬ್ಯಾಂಕ್ ಆಗಿರುವ ಎಸ್ಬಿಐ ಬ್ಯಾಂಕ್ ನಲ್ಲಿ ಈ ಯೋಜನೆಗೆ ಏಷ್ಟು ಹಣ ಸಿಗುತ್ತದೆ ಎಂಬುದನ್ನು ತಿಳಿಯಿರಿ.
ನಿಮ್ಮ ಹಣಕ್ಕೆ ಭದ್ರತೆ ನೀಡುವ ಸರಕಾರಿ ಬ್ಯಾಂಕ್ :- SBI ಭಾರತ ಸರ್ಕಾರದ ಸ್ವಾಮ್ಯದಲ್ಲಿದೆ, ಅಂದರೆ ನಿಮ್ಮ ಠೇವಣಿಗಳು ಸರ್ಕಾರದ ಭರವಸೆಯಿಂದ ಬೆಂಬಲಿತವಾಗಿವೆ. SBI bank ನಲ್ಲಿ 1 ವಾರದಿಂದ 10 ವರ್ಷಗಳವರೆಗಿನ ವಿಭಿನ್ನ ಅವಧಿಗಳಲ್ಲಿ FD ಯೋಜನೆಗಳು ಲಭ್ಯವಿವೆ. ನಿಮ್ಮ ಹಣದ ಅಗತ್ಯವನ್ನು ಅವಲಂಬಿಸಿ ಅವಧಿಯನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ನಿಮಗೆ ಇರುತ್ತದೆ.
ಎಸ್ಬಿಐ ಸರ್ವೋತ್ತಮ್ ಎಫ್ಡಿ ಯೋಜನೆಯ ಬಗ್ಗೆ ಒಂದಿಷ್ಟು ಮಾಹಿತಿ:
SBI ಒಂದು ಉತ್ತಮ FD ಯೋಜನೆ ನೀಡುತ್ತಾ ಇದೆ. ಇದು ಅಲ್ಪಾವಧಿ ಯೋಜನೆ ಆಗಿದ್ದು ಇದು ಕೇವಲ 1 ಅಥವಾ 2 ವರ್ಷಗಳ ಅವಧಿಗೆ ಹೂಡಿಕೆ ಮಾಡಲು ಉತ್ತಮ ಆಗಿದೆ. ಇದು ಶೇಕಡಾ 7.4% ರ ಬಡ್ಡಿದರವನ್ನು ನೀಡುತ್ತಾರೆ. ಹಾಗೂ ಇದರ ವಿಶೇಷ ಏನೆಂದರೆ ಹೂಡಿಕೆ ಮಾಡುವ ಹಿರಿಯ ನಾಗರಿಕರಿಗೆ ಶೇಕಡಾ 7.60% ರ ಬಡ್ಡಿಯನ್ನು ನೀಡುತ್ತಾರೆ.
ಎಸ್ಬಿಐ ಅಮೃತ್ ಕಲಶ್ ಎಫ್ಡಿ ಯೋಜನೆಯ ಕುರಿತು ಒಂದಿಷ್ಟು ಮಾಹಿತಿ :-
ಅಮೃತ್ ಕಲಶ್ ಯೋಜನೆ ಎಂಬ ವಿಶೇಷ FD ಯೋಜನೆಯನ್ನು SBI ಆರಂಭ ಮಾಡಿದೆ. ಈ ಯೋಜನೆಯಲ್ಲಿ ಜನರು ಇದೆ ಬರುವ ಕೊನೆಯ 30 ಸೆಪ್ಟೆಂಬರ್ 2024 ರ ಒಳಗಾಗಿ ಹೂಡಿಕೆ ಮಾಡಬಹುದ್ಗಾಸ್. ಈ ವಿಶೇಷ FD ಯೋಜನೆಯ ಅವಧಿಯು 400 ದಿನಗಳು ಆಗಿದೆ. ಇದರಲ್ಲಿ ನೀವು ಹೂಡಿಕೆ ಮಾಡಿದರೆ ಶೇಕಡಾ 7.10% ಬಡ್ಡಿದರ ಪಡೆಯುತ್ತೀರಿ. ವಿಶೇಷವಾಗಿ ನಿಮಗೆ ತ್ರೈಮಾಸಿಕ ಅಥವಾ ಮಾಸಿಕ ಅಥವಾ ಅರ್ಧ-ವಾರ್ಷಿಕ ಬಡ್ಡಿ ಪಾವತಿಯನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ಇರುತ್ತದೆ. ಈ ಯೋಜನೆಯ ಮೆಚುರಿಟಿ ಅವಧಿ – 400 ದಿನಗಳು ಆಗಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
SBI WeCare FD ಯೋಜನೆಯ ಬಗ್ಗೆ ಮಾಹಿತಿ :-
ಇದು ಹೆಚ್ಚಿನ ಬಡ್ಡಿದರವನ್ನು ನೀಡುತ್ತದೆ. ಈ ಯೋಜನೆಯಲ್ಲಿ, ಹಿರಿಯ ನಾಗರಿಕರು 0.5 ಶೇಕಡಾ ಹೆಚ್ಚುವರಿ ಬಡ್ಡಿಯನ್ನು ಪಡೆಯುತ್ತಾರೆ. ಪ್ರಸ್ತುತವಾಗಿ ಹೂಡಿಕೆದಾರರು ಎಫ್ಡಿ ಯೋಜನೆಯಲ್ಲಿ ಶೇಕಡಾ 7.50% ಬಡ್ಡಿಯನ್ನು ಪಡೆಯುತ್ತಿದ್ದಾರೆ. ಈ ಎಫ್ಡಿ ಯೋಜನೆಯಲ್ಲಿ ಕನಿಷ್ಠ 5 ವರ್ಷ ಮತ್ತು ಗರಿಷ್ಠ 10 ವರ್ಷಗಳವರೆಗೆ ಹೂಡಿಕೆ ಮಾಡಲಾಗುತ್ತದೆ.
ಅಮೃತ್ ವರ್ಸ್ತಿ FD ಯೋಜನೆಯ ಬಗ್ಗೆ ಮಾಹಿತಿ :-
ಈಗ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಬು ಜನರಿಗೆ ಇನ್ನೊಂದು FD ಯೋಜನೆಯನ್ನು ಪರಿಚಯ ಮಾಡಿದೆ. ಅದು ಯಾವುದು ಎಂದರೆ ಅಮೃತ್ ವರ್ಸ್ತಿ ಎಫ್ಡಿ ಯೋಜನೆ. ಈ ಯೋಜನೆಯ ಒಟ್ಟು ಅವಧಿಯು 444 ದಿನ ಆಗಿರುತ್ತದೆ. ನಿಮಗೆ ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ನೀವು ಶೇಕಡಾ 7.25% ಬಡ್ಡಿ ಪಡೆಯುತ್ತೀರಿ. ಇನ್ನೊಂದು ವಿಶೇಷ ಎಂದೆಂದರೆ ಈ ಯೋಜನೆಯಲ್ಲಿ ಹೂಡಿಕೆ ಮಾಡುವ ಹಿರಿಯ ನಾಗರಿಕರು 0.50 ಶೇಕಡಾ ಹೆಚ್ಚುವರಿ ಬಡ್ಡಿಯ ಪಡೆಯಬಹುದು. ಇನ್ನು ಈ ಯೋಜನೆಯ ಗರಿಷ್ಠ ಹೂಡಿಕೆ ಮಿತಿ 3 ಕೋಟಿ ರೂಪಾಯಿ.
ಇದನ್ನೂ ಓದಿ: ನಿಮ್ಮ ಕಾರಿನ ಮೇಲೆ ನೀವು ಸಾಲ ತೆಗೆದುಕೊಳ್ಳುವುದು ಹೇಗೆ? ವಿಧಾನವನ್ನು ತಿಳಿಯಿರಿ.