ನಿಮ್ಮ ಮಗುವಿನ ವಯಸ್ಸು 1 ರಿಂದ 15 ವರ್ಷದ ಒಳಗೆ ಇದ್ದರೆ ನೀವು ಆಧಾರ್ ಕಾರ್ಡ್ ಮಾಡಿಸಲು ನಿಯಮದಲ್ಲಿ ಕೆಲವು ಬದಲಾವಣೆ ತರಲಾಗಿದೆ.

ಆಧಾರ್ ಕಾರ್ಡ್ ಭಾರತ ಸರ್ಕಾರವು ನೀಡುವ ಒಂದು ವಿಶಿಷ್ಟ ಗುರುತಿನ ದಾಖಲೆ, ಇದನ್ನು ಭಾರತದ ಪ್ರತಿಯೊಬ್ಬ ನಾಗರಿಕರಿಗೂ ಪಡೆಯುವ ಅರ್ಹತೆ ಇದೆ. ಇದು 12-ಅಂಕಿಯ ಸಂಖ್ಯೆ, ಇದನ್ನು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ನೀಡಿದೆ. ಈಗ ಚಿಕ್ಕ ಮಕ್ಕಳಿಗೂ ಸಹ ಆಧಾರ್ ಕಾರ್ಡ್ ಬಂದಿದೆ. 5 ವರ್ಷದ ಒಳಗಿನ ಮಕ್ಕಳಿಗೆ ಆಧಾರ್ ಕಾರ್ಡ್ ತೆಗೆದುಕೊಳ್ಳವ ನಿಯಮದಲ್ಲಿ ಕೆಲವು ಬದಲಾವಣೆಗಳನ್ನು ತಂದಿದ್ದು. ಅದರ ಬಗ್ಗೆ ಮಾಹಿತಿ ನಿಮಗೆ ನೀಡುತ್ತೇವೆ.

WhatsApp Group Join Now
Telegram Group Join Now

ಪುಟ್ಟ ಮಕ್ಕಳಿಗೂ ಆಧಾರ್ ಕಾರ್ಡ್ ಕಡ್ಡಾಯ :- ಈಗ ಆಧಾರ್ ಕಾರ್ಡ್ ಎಂಬುದು ಎಲ್ಲ ಕಡೆಗಳಲ್ಲಿ ಕಡ್ಡಾಯವಾಗಿದೆ. ಯಾಕೆಂದರೆ ಈಗ ಭಾರತದಲ್ಲಿ ಮಗುವಿನ ಬ್ಯಾಂಕ್ ಖಾತೆ ಓಪನ್ ಮಾಡಬೇಕು ಅಥವಾ ಮಗುವಿಗೆ ಶಾಲೆಗೆ ಸೇರಿಸಬೇಕು ಅಥವಾ ದೂರದ ಪ್ರಯಾಣವನ್ನು ರೈಲ್ವೆ ಅಥವಾ ವಿಮಾನದಲ್ಲಿ ಮಾಡಬೇಕು ಎಂದರು ಸಹ ಮಗುವಿನ ಆಧಾರ್ ಕಾರ್ಡ್ ಕಡ್ಡಾಯವಾಗಿದೆ. ಅದೇ ಕಾರಣಕ್ಕೆ ಈಗ ಪಾಲಕರು ಮಗು ಹುಟ್ಟಿದ ಬಳಿಕ ಮೊದಲು ಮಗುವಿನ ಆಧಾರ್ ಕಾರ್ಡ್ ಮಾಡಿಸುತ್ತಾರೆ.

ಐದು ಒಂದು ವರ್ಷದ ಒಳಗೆ ಮಗುವಿನ ಆಧಾರ್ ಕಾರ್ಡ್ ಪಡೆಯಲು ನೀವು ಸಲ್ಲಿಸಬೇಕಾದ ದಾಖಲೆಗಳು :-

  1. ಜನನ ಪ್ರಮಾಣ ಪತ್ರ :- ನೀವು ನಿಮ್ಮ ಮಗುವಿನ ಆಧಾರ್ ಕಾರ್ಡ್ ಮಾಡಿಸಬೇಕು ಎಂದರೆ ನಿಮ್ಮ ಮಗುವಿನ ಜನನ ಪ್ರಮಾಣ ಪತ್ರದ ಪ್ರತಿಯನ್ನು ನೀಡಬೇಕು.
  2. ಡಿಸ್ಚಾರ್ಜ್ ಪ್ರಮಾಣ ಪತ್ರ :- ಮಗು ಹುಟ್ಟಿರುವ ಆಸ್ಪತ್ರೆಯಲ್ಲಿ ಮಗುವಿನ ಡಿಸ್ಚಾರ್ಜ್ ಸಮಯದಲ್ಲಿ ನೀಡುವ ಪ್ರಮಾಣ ಪತ್ರವನ್ನು ಆಧಾರ್ ಕಾರ್ಡ್ ಪಡೆಯಲು ನೀಡಬೇಕು.
  3. ಪೋಷಕರ ಆಧಾರ್ ಕಾರ್ಡ್ :- ಮಗುವಿನ ತಂದೆ ತಾಯಿಯ ಆಧಾರ್ ಕಾರ್ಡ್ ಸಂಖ್ಯೆ ಹಾಗೂ ಆಧಾರ್ ಕಾರ್ಡ್ ಪ್ರತಿ ನೀಡಬೇಕು.
  4. ಮಗುವಿನ ಭಾವ ಚಿತ್ರ :- ಆಧಾರ್ ಕೇಂದ್ರದಲ್ಲಿ ಮಗುವಿನ ಭಾವಚಿತ್ರ ತೆಗೆದುಕೊಳ್ಳಲಾಗುವುದು.

ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ :- ಸಾಮಾನ್ಯವಾಗಿ ನಾವು ಆಧಾರ್ ಕಾರ್ಡ್ ಅಪ್ಡೇಟ್ ಅಥವಾ ಹೊಸ ಆಧಾರ್ ಕಾರ್ಡ್ ಗೆ ಅರ್ಜಿ ಸಲ್ಲಿಸಬೇಕು ಎಂದರೆ ನಮ್ಮ ಮೊಬೈಲ್ ನಿಂದ ಅಥವಾ laptop ಬಳಸಿ UIDIA ವೆಬ್ಸೈಟ್ ಗೆ ತೆರಳಿ ಆಧಾರ್ ಕಾರ್ಡ್ ಗೆ ಅರ್ಜಿ ಸಲ್ಲಿಸುತ್ತೇವೆ. ಆದರೆ ನಾವು ನಮ್ಮ ಮಕ್ಕಳಿಗೆ ಅಂದರೆ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಗುವಿಗೆ ನಾವು ಆನ್ಲೈನ್ ಮೂಲಕ ಆಧಾರ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ. ನಾವು ನೇರವಾಗಿ ಆಧಾರ್ ಕೇಂದ್ರಕ್ಕೆ ತೆರಳಿ ಆಧಾರ್ ಕಾರ್ಡ್ ಗೆ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಮಕ್ಕಳ ಬಯೋಮೆಟ್ರಿಕ್ ತೆಗೆದುಕೊಳ್ಳಲಾಗುವುದಿಲ್ಲ :-

ಸಾಮಾನ್ಯವಾಗಿ ದೊಡ್ಡವರೂ ಆಧಾರ್ ಕಾರ್ಡ್ ಅರ್ಜಿ ಸಲ್ಲಿಸಿದಾಗ ಆಧಾರ್ ಕೇಂದ್ರದಲ್ಲಿ ಕೈ ಬೆರಳುಗಳ ಬೈಯಿಮೆಟ್ರಿಕ್ ತೆಗೆದುಕೊಳ್ಳುತ್ತಾರೆ. ಆದರೆ ಮಕ್ಕಳಿಗೆ ಮಗುವಿನ ಫೋಟೋ ಹೊರತಾಗಿ ಬೇರೆ ಯಾವುದೇ ಮಾಹಿತಿಯನ್ನು ತೆಗೆದುಕೊಳ್ಳಲಾಗುವುದಿಲ್ಲ. 5 ವರ್ಷಗಳ ಬಳಿಕ ಮಕ್ಕಳು ಆಧಾರ್ ಕಾರ್ಡ್ ಅಪ್ಡೇಟ್ ಗೆ ಅರ್ಜಿ ಸಲ್ಲಿಸಬೇಕು. ಆನಂತರದಲ್ಲಿ ಮಗುವಿನ ವಯಸ್ಸು 15 ವರ್ಷ ಆದ ಬಳಿಕ ಮತ್ತೊಮ್ಮೆ ಆಧಾರ್ ಅಪ್ಡೇಟ್ ಮಾಡಿಸಬೇಕು. ಆಗ ಕೈ ಬೆರಳುಗಳ ಬೈಯಿಮೆಟ್ರಿಕ್ ತೆಗೆದುಕೊಳ್ಳುತ್ತಾರೆ.

ಇದನ್ನೂ ಓದಿ: ನಿಮ್ಮ ಏರಿಯಾದಲ್ಲಿ BSNL 4G ನೆಟ್ ವರ್ಕ್ ಸಿಗುತ್ತಿದ್ದಿಯಾ ಎಂದು ಕಂಡುಹಿಡಿಯುವುದು ಹೇಗೆ? 

ಇದನ್ನೂ ಓದಿ: SBI ನ ಈ 4 ವಿಶೇಷ FD ಯೋಜನೆಗಳು ಬಂಪರ್ ರಿಟರ್ನ್ಸ್ ನೀಡುತ್ತಿವೆ.

Sharing Is Caring:

Leave a Comment