ಈಗ ಎಲ್ಲ ಕಡೆ ಬಿಎಸ್ಎನ್ಎಲ್ ತನ್ನ ಅಸ್ತಿತ್ವ ಸ್ಥಾಪಿಸಿಕೊಳ್ಳುತ್ತಿದೆ. ಎಲ್ಲಾ ಪ್ರೈವೇಟ್ ಟೆಲಿಕಾಂ ಸಂಸ್ಥೆಗಳು ಅಗ್ಗದ ದರದಲ್ಲಿ ಜನರಿಗೆ ಉತ್ತಮ ಸೇವೆಯನ್ನು ನೀಡುತ್ತಿದ್ದವು ಆಗ ಬಿಎಸ್ಎನ್ಎಲ್ ಹಲವು ಕಾರಣಕ್ಕೆ ಹಿಂದೆ ಬಿದ್ದಿತ್ತು ಈಗ ಮತ್ತೆ ಎಲ್ಲಾ ಗ್ರಾಹಕರು ಬಿಎಸ್ಎನ್ಎಲ್ ಕಡೆ ವಾಲುತ್ತಾ ಇದ್ದರೆ ಬಿಎಸ್ಎನ್ಎಲ್ ಗೆ ಈಗ ಬೇಡಿಕೆ ಹೆಚ್ಚಾಗಿದೆ. ಪ್ರತಿ ತಿಂಗಳು ಫೋನ್ ಗೆ ರೀಚಾರ್ಜ್ ಮಾಡಿಸಲು ಕಡಿಮೆ ಬೆಲೆಯ ರೀಚಾರ್ಜ್ ಪ್ಲಾನ್ ಗಳನ್ನು ಬಿಎಸ್ಎನ್ಎಲ್ ನೀಡುತ್ತಿದೆ. ಒಂದು ತಿಂಗಳಿಗೆ ಕಡಿಮೆ ಬೆಲೆಯ ಬಿಎಸ್ಎನ್ಎಲ್ ರೀಚಾರ್ಜ್ ಪ್ಲಾನ್ ಗಳ ಬಗ್ಗೆ ಮಾಹಿತಿ ನೀಡುತ್ತೇವೆ. ಹಾಗಾದರೆ ಒಂದು ತಿಂಗಳಿಗೆ ಯಾವ ಯಾವ ರೀಚಾರ್ಜ್ ಪ್ಲಾನ್ ಗಳು ಇವೆ ಎಂಬುದನ್ನು ಈ ಲೇಖನದಲ್ಲಿ ತಿಳಿಯೋಣ.
ಕೇವಲ 108 ರೂಪಾಯಿಗೆ ಒಂದು ತಿಂಗಳ ವ್ಯಾಲಿಡಿಟಿ ಪ್ಲಾನ್ ನೀಡುತ್ತಿದೆ ಬಿಎಸ್ಎನ್ಎಲ್ :- ಕೇವಲ 108 ರೂಪಾಯಿಗೆ, ಬಿಎಸ್ಎನ್ಎಲ್ 35 ದಿನಗಳ ಮಾನ್ಯತೆಯೊಂದಿಗೆ ಅನಿಯಮಿತ ಕರೆಗಳು ಮತ್ತು ಪ್ರದರ್ಶಿಸುವ ಅದ್ಭುತ ಯೋಜನೆ ನೀಡುತ್ತಿದೆ. ಈ ಯೋಜನೆ ಕೈಗೆಟುಕುವ ಬೆಲೆಯಲ್ಲಿ ಅನಿಯಮಿತ ಸಂವಹನವನ್ನು ಬಯಸುವ ಗ್ರಾಹಕರು. ಇದು ಉಚಿತ ಕರೆ ಮಾಡಲು ಕಡಿಮೆ ಬೆಳೆಯ ಉತ್ತಮ recharge plan ಆಗಿದೆ.
ಯೋಜನೆಯ ಪ್ರಯೋಜನಗಳು:
- 35 ದಿನಗಳ ಮಾನ್ಯತೆ:- 35 ದಿನಗಳ ವರೆಗೆ ಸಿಮ್ ಮಾನ್ಯತೆ ಹೊಂದಿರುತ್ತದೆ, 35 ದಿನಗಳ ಬಳಿಕ ಮತ್ತೆ recharge ಮಾಡಿಸಬೇಕು.
- ಅನಿಯಮಿತ ಕರೆಗಳು :- ಯಾವುದೇ ನೆಟ್ವರ್ಕ್ ಗೆ ನೀವು ಉಚಿತವಾಗಿ ಕರೆ ಮಾಡಬಹುದು, ಕರೆ ಮಾಡಲು ಯಾವುದೇ ಮಿತಿ ಇರುವುದಿಲ್ಲ.
- 3 ಜಿಬಿ ಡೇಟಾ :- ಒಂದು ತಿಂಗಳಿಗೆ ಒಟ್ಟು 3GB ಇಂಟರ್ನೆಟ್ ಬಳಸಲು ಸಾಧ್ಯ. ಇದು ಕಡಿಮೆ ಇಂಟರ್ನೆಟ್ ಬಳಸುವ ಜನರಿಗೆ ಉತ್ತಮ recharge plan ಆಗಿದೆ.
ಬಿಎಸ್ಎನ್ಎಲ್ 30 ದಿನಗಳ ಅನಿಯಮಿತ ಡೇಟಾ ಯೋಜನೆ:
ಬಿಎಸ್ಎನ್ಎಲ್ 30 ದಿನಗಳ ಅವಧಿಗೆ ಅನಿಯಮಿತ ಕರೆಗಳು ಮತ್ತು ಅಪಾರ ಕೊಡುಗೆಗಳನ್ನು ಒದಗಿಸುವ ಅದ್ಭುತ ಯೋಜನೆ ಪರಿಚಯಿಸುತ್ತದೆ. ಅದು ಕೇವಲ 199 ರೂಪಾಯಿಗೆ ಈ ಅಗ್ಗದ ಯೋಜನೆಯು ನಿಮ್ಮ ಎಲ್ಲಾ ಸಂವಹನ ಮತ್ತು ಇಂಟರ್ನೆಟ್ ಅಗತ್ಯಗಳನ್ನು ಪೂರೈಸಲು ಅವಕಾಶಗಳು. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಯೋಜನೆಯ ಪ್ರಯೋಜನಗಳು:
- 30 ದಿನಗಳ ಮಾನ್ಯತೆ :- ಈ ಯೋಜನೆಯಲ್ಲಿ ಒಂದು ತಿಂಗಳ ವರೆಗೆ ನಿಮ್ಮ ಸಿಮ್ ಮಾನ್ಯತೆ ಇರುತ್ತದೆ.
- ಅನಿಯಮಿತ ಕರೆಗಳು :- ನೀವು ಒಂದು ತಿಂಗಳುಗಳ ಕಾಲ ಉಚಿತವಾಗಿ ಭಾರತದಾದ್ಯಂತ ಯಾವುದೇ ನೆಟ್ವರ್ಕ್ ಗೆ ಉಚಿತವಾಗಿ ಕರೆಗಳನ್ನು ಕಾಲ್ ಮಾಡಬಹುದು.
- ಒಟ್ಟು 60GB ಡೇಟಾ :- ಒಟ್ಟು 60GB ಡೇಟಾ ಉಚಿತವಾಗಿ ಬಳಸಲು ಸಾಧ್ಯವಿದೆ.
- ಪ್ರತಿದಿನ 2GB ಡೇಟಾ ಬಳಿಕ 40kbps ನಲ್ಲಿ ಅನಿಯಮಿತ ಡೇಟಾ ಬಳಕೆ ಮಾಡಲಾಗುತ್ತಿದೆ :- ನಿತ್ಯವೂ 2GB ಡೇಟಾ ಬಳಸಲು ಸಾಧ್ಯವಿದೆ. ಇದರ ಬಳಿಕ ಇಂಟರ್ನೆಟ್ ಸ್ಪೀಡ್ ಕಡಿಮೆ ಆಗುತ್ತದೆ. ನೀವು ಅನಿಯಮಿತವಾಗಿ 40kbps ಸ್ಪೀಡ್ ನಲ್ಲಿ Internet ಬಳಸಬಹುದು.
ಬಿಎಸ್ಎನ್ಎಲ್ ಈಗ 30ದಿನಗಳಿಂದ 365 ದಿನಗಳ ವರೆಗೆ ಕಡಿಮೆ ಬೆಲೆಯಲ್ಲಿ ಉತ್ತಮ ಸೇವೆಯನ್ನು ನೀಡುತ್ತಿದೆ. ಈಗಾಗಲೆ ದೇಶದಲ್ಲಿ ಬಿಎಸ್ಎನ್ಎಲ್ 4G ಸೇವೆಯನ್ನು ನೀಡುತ್ತಿದ್ದು ಇನ್ನು ಸ್ವಲ್ಪ ತಿಂಗಳುಗಳಲ್ಲಿ ಬಿಎಸ್ಎನ್ಎಲ್ ತನ್ನ 5G ಯೋಜನೆಗಳ ಮೂಲಕ ಜನರಿಗೆ ಇನ್ನಷ್ಟು ಹತ್ತಿರ ಆಗುತ್ತದೆ.
ಇದನ್ನೂ ಓದಿ: ನಿಮ್ಮ ಏರಿಯಾದಲ್ಲಿ BSNL 4G ನೆಟ್ ವರ್ಕ್ ಸಿಗುತ್ತಿದ್ದಿಯಾ ಎಂದು ಕಂಡುಹಿಡಿಯುವುದು ಹೇಗೆ?