ಉನ್ನತ ಶಿಕ್ಷಣಕ್ಕೆ 10 ಲಕ್ಷ ರೂಪಾಯಿಯ ವರೆಗೆ ಸಾಲ ಘೋಷಣೆ ಮಾಡಿದ ನಿರ್ಮಲಾ ಸೀತಾರಾಮನ್.

ಇಂದು ಕೇಂದ್ರ ಬಜೆಟ್ ಮಂಡನೆ ನಡೆಯುತ್ತಿದೆ. ಇದು ಮೋದಿ ಸರ್ಕಾರದ ಮೂರನೇ ಅವಧಿಯ ಮೊದಲ ಬಜೆಟ್ ಆಗಿದೆ. ಈ ಬಜೆಟ್ ಬಗ್ಗೆ ರಾಷ್ಟ್ರದ ಜನರು ಬಹಳ ಕುತೂಹಲದಿಂದ ಕಾಯುತ್ತಾ ಇದ್ದರೆ. ಯಾವ ಕ್ಷೇತ್ರಕ್ಕೆ ಏಷ್ಟು ಅನುದಾನ ದೊರೆಯಲಿದೆ ಹಾಗೂ ಯಾವ ಯಾವ ಹೊಸ ಯೋಜನೆಗಳು ಜಾರಿಗಳಿವೆ ಎಂಬ ಬಗ್ಗೆ ಎಲ್ಲರಿಗೂ ಕುತೂಹಲ ಇದೆ. ಸತತವಾಗಿ ಮೂರನೇ ಅವಧಿಗೂ ಆರ್ಥಿಕ ಮಂತ್ರಿಯಾಗಿ ಮುಂದುವರೆದ ನಿರ್ಮಲಾ ಸೀತಾರಾಮನ್ ಅವರು ಈಗ ಉನ್ನನ ಶಿಕ್ಷಣಕ್ಕೆ 10 ಲಕ್ಷ ರೂಪಾಯಿಗಳ ವರೆಗೆ ಸಾಲ ನೀಡುವುದಾಗಿದೆ ಬಜೆಟ್ ನಲ್ಲಿ ಘೋಷಣೆ ಮಾಡಿದ್ದಾರೆ. ಬಜೆಟ್ ನಲ್ಲಿ ನಿರ್ಮನ್ನ ಸೀತಾರಾಮನ್ ಅವರು ಹಲವು ವಿಷಯಗಳ ಬಗ್ಗೆ ತಮ್ಮ ಭಾಷಣದಲ್ಲಿ ತಿಳಿಸಿದ್ದು, ಇದರ ಬಗ್ಗೆ ಹೆಚ್ಚಿನ ಮಾಹಿತಿಗಳ ವಿವರಣೆ ಇಲ್ಲಿದೆ.

WhatsApp Group Join Now
Telegram Group Join Now

ಉದ್ಯೋಗ ಮತ್ತು ಕೌಶಲ್ಯಕ್ಕೆ ಹೆಚ್ಚಿನ ಅನುದಾನ :- ನರೇಂದ್ರ ಮೋದಿ ಅವರ ಸರ್ಕಾರವು ಯುವ ಸಮುದಾಯದ ಬಗ್ಗೆ ಹೆಚ್ಚಿನ ಒಲವು ತೋರುತ್ತಿದ್ದು, ಯುವಕರ ಮುಂದಿನ ಭವಿಷ್ಯಕ್ಕೆ ಹಲವು ಯೋಜನೆಗಳನ್ನು ಜಾರಿಗೆ ತರುತ್ತಿದೆ. ರಾಜ್ಯದ ಯುವ ಜನರಿಗಾಗಿ ಉದ್ಯೋಗ ಮತ್ತು ಕೌಶಲ್ಯ ಕ್ಷೇತ್ರಕ್ಕೆ ಎಂದೇ 2 ಲಕ್ಷ ಕೋಟಿ ರೂಪಾಯಿಗಳನ್ನು ಮಿಸಲಿಡಲಿದೆ ಎಂಬುದಾಗಿ ನಿರ್ಮಲ ಸೀತಾರಾಮನ್ ಅವರು ತಿಳಿಸಿದರು. ಇದರಿಂದ ಉದ್ಯೋಗ ಕ್ಷೇತ್ರಕ್ಕೆ ಇನ್ನಷ್ಟು ಹೆಚ್ಚಿನ ಕೊಡುಗೆ ಆಗಲಿದೆ ಎಂಬುದಾಗಿ ತಿಳಿಸಿದರು.

ಉನ್ನತ ಶಿಕ್ಷಣಕ್ಕೆ ಸಾಲ :-

ದೇಶದಲ್ಲಿ ಮಧ್ಯಮ ಮತ್ತು ಬಡ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಎಂಬದು ಕೈ ಗೆಟುಕದ ಕನಸು. ಲಕ್ಷ ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿ ಒಳ್ಳೆಯ ವಿದ್ಯಾ ಸಂಸ್ಥೆಯಲ್ಲಿ ಉನ್ನತ ಶಿಕ್ಷಣವನ್ನು ಕಲಿಸುವುದು ಎಲ್ಲಾ ಪಾಲಕರಿಗೂ ಕಷ್ಟ ಸಾಧ್ಯ. ಈಗ ಅವರಿಗೆ ಒಂದು ಉತ್ತಮ ಅವಕಾಶವನ್ನು ಕೇಂದ್ರ ನೀಡುತ್ತಿದೆ. ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಆಸಕ್ತಿ ಇರುವ ವಿದ್ಯಾರ್ಥಿ ವಿದ್ಯಾರ್ಥಿನಿಯರು ಕೇವಲ 3% ಬಡ್ಡಿದರದಲ್ಲಿ 10 ಲಕ್ಷ ರೂಪಾಯಿಗಳ ವರೆಗೆ ಸಾಲವನ್ನು ಪಡೆಯಬಹುದು. ಇ-ವೋಚರ್ ಗಳನ್ನು ಪ್ರತಿ ವರ್ಷ ಒಂದು ಲಕ್ಷ ವಿದ್ಯಾರ್ಥಿಗಳಿಗೆ ನೀಡಲಾಗುವುದು ಎಂದು ತಿಳಿಸಿದರು. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಬೆಳೆ ಸರ್ವೇ ಬಗ್ಗೆ ಬಜೆಟ್ ನಲ್ಲಿ ಪ್ರಸ್ತಾವನೆ :- ದೇಶದಲ್ಲಿ ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ರೈತರು ತಾವು ಬೆಳೆದ ಬೆಳೆಗಳನ್ನು ಕಳೆದುಕೊಂಡಿದ್ದಾರೆ. ಸರಿಯಾದ ಸಮಯದಲ್ಲಿ ಉಳುಮೆ ಮಾಡಲು ನೀರಿಲ್ಲ. ಹಾಗೆ ಬೀಜ ಬಿತ್ತನೆ ಮಾಡಿದ ಮೇಲೆ ಮಳೆ ಹೆಚ್ಚಾಗಿ ರೈತರು ನೆಲದಅಪಾರ ಬೆಳೆ ನಾಶವಾಗಿದೆ. ಇದೆ ಕಾರಣಕ್ಕೆ ಈಗ ಡಿಜಿಟಲ್ ಸರ್ವೇ ಕಾರ್ಯ ನಡೆಯಲಿದ್ದು. ದೇಶದ 100 ಜಿಲ್ಲೆಗಳಲ್ಲಿ ಮೊದಲ ಹಂತದಲ್ಲಿ ಡಿಜಿಟಲ್ ಸರ್ವೇ ಮಾಡುವುದಾಗಿ ನಿರ್ಮಲ ಸೀತಾರಾಮನ್ ಅವರು ತಿಳಿಸಿದ್ದಾರೆ. ಹಾಗೂ ಇದರ ಜೊತೆಗೆ ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಎಂದೇ ಕೇಂದ್ರ ಸರ್ಕಾರವು 1.52 ಲಕ್ಷ ಕೋಟಿ ರೂಪಾಯಿಗಳನ್ನು ಮಿಸಲಿಡಲಿದೆ ಎಂಬುದನ್ನು ತಿಳಿಸಿದರು. 

ಇದನ್ನೂ ಓದಿ: ಈ ಕಾರ್ಡ್ ಇದ್ರೆ 2 ಲಕ್ಷ ರೂಪಾಯಿಗಳ ಉಚಿತ ವಿಮೆ ಸೌಲಭ್ಯ; ಯಾರಿಗೆ ಸಿಗಲಿದೆ ಇದರ ಪ್ರಯೋಜನ.

ರೈತರಿಗೆ ಬೆಂಬಲ ಬೆಲೆ ಘೋಷಣೆ :-

ರೈತರು ತಾವು ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದೆ ಕಂಗಾಲಾಗಿದ್ದಾರೆ. ಇದನ್ನರಿತ ಕೇಂದ್ರ ಸರ್ಕಾರವು ಬೆಂಬಲ ಬೆಲೆಯನ್ನು ಘೋಷಣೆ ಮಾಡಿದ್ದೇವೆ. ರೈತರು ಹೂಡಿಕೆ ಮಾಡಿದ ಹಣಕ್ಕಿಂತ ಶೇಕಡಾ 50% ಜಾಸ್ತಿ ಲಾಭವನ್ನು ಪಡೆಯಲಿದ್ದಾರೆ ಎಂಬ ಭರವಸೆಯನ್ನು ನಮ್ಮ ಸರ್ಕಾರ ನೀಡಲಿದೆ ಎಂದು ಕೇಂದ್ರ ಸಚಿವೆ ನಿರ್ಮಲ ಸೀತಾರಾಮ್ ಅವರು ತಮ್ಮ ಭಾಷಣದಲ್ಲಿ ತಿಳಿಸಿದರು.

ಇದನ್ನೂ ಓದಿ: ಪೋಸ್ಟ್ ಆಫೀಸ್ ನಲ್ಲಿ ನೀವು ನೇಮಕಾತಿಯಲ್ಲಿ ಆಯ್ಕೆಯಾದರೆ ನಿಮಗೆ ಎಷ್ಟು ಸಂಬಳ ಸಿಗುತ್ತದೆ; ಕರ್ನಾಟಕದಲ್ಲಿ 1940 ಹುದ್ದೆಗಳು ಖಾಲಿ ಇವೆ.

Sharing Is Caring:

Leave a Comment