2024-25ನೇ ಸಾಲಿನ ಐಎಎಸ್ ಮತ್ತು ಕೆಎಎಸ್ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅರ್ಹ ಅಲ್ಪಸಂಖ್ಯಾತ ಅಭ್ಯರ್ಥಿಗಳಿಗೆ ಕರ್ನಾಟಕ ಹಜ್ ಭವನ, ಬೆಂಗಳೂರಿನಲ್ಲಿ ವಸತಿ ಸಹಿತ ಉಚಿತ ತರಬೇತಿ ನೀಡಲಾಗುತ್ತಿದೆ. ಆಸಕ್ತರು ಈಗಲೇ ಅರ್ಜಿ ಸಲ್ಲಿಸಬಹುದು.
ಉಚಿತ ತರಬೇತಿ ಪಡೆಯಲು ಯಾರು ಅರ್ಹರು :-
- ಸಮುದಾಯ :-ಐಎಎಸ್ ಮತ್ತು ಕೆಎಎಸ್ ಪರೀಕ್ಷೆಗಳಿಗೆ ವಸತಿ ಒಳಗೊಂಡಂತೆ ಉಚಿತ ತರಬೇತಿ ಪಡೆಯಲು ರಾಜ್ಯದ ಮುಸ್ಲಿಂ ಹಾಗೂ ಕ್ರಿಶ್ಚಿಯನ್ ಹಾಗೂ ಜೈನ್ ಹಾಗೂ ಬೌದ್ಧ ಹಾಗೂ ಸಿಖ್ ಹಾಗೂ ಪಾರ್ಸಿ ಸಮುದಾಯಕ್ಕೆ ಸೇರಿದ ಅಭ್ಯರ್ಥಿಗಳು ಅರ್ಹರಾಗಿರುತ್ತಾರೆ.
- ಶಿಕ್ಷಣ :- ಅಭ್ಯರ್ಥಿಯು ಸರ್ಕಾರ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು.
- ನಿವಾಸ :- ಅಭ್ಯರ್ಥಿಯು ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿದ್ದರೆ ಐಎಎಸ್ ಮತ್ತು ಕೆಎಎಸ್ ಪರೀಕ್ಷೆಗಳಿಗೆ ವಸತಿ ಒಳಗೊಂಡಂತೆ ಉಚಿತ ತರಬೇತಿ ಪಡೆಯಲು ಅರ್ಹರಾಗಿರುತ್ತಾರೆ.
- ವಯಸ್ಸು :- ಅರ್ಜಿ ಸಲ್ಲಿಸುವ ಅಭ್ಯರ್ಥಿಯ ವಯಸ್ಸು ಕನಿಷ್ಠ 21 ವರ್ಷ ಮತ್ತು ಗರಿಷ್ಠ 35 ವರ್ಷ ಒಳಗಿರಬೇಕು.
- ಸರ್ಕಾರಿ ನೌಕರಿ ಇರಬಾರದು :- ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕೇಂದ್ರ ಅಥವಾ ರಾಜ್ಯ ಸರ್ಕಾರದಲ್ಲಿ ನೌಕರರಾಗಿರು ಆಗಿದ್ದರೆ ಅರ್ಜಿ ಸಲ್ಲಿಸಲು ಅರ್ಹರಲ್ಲ.
ಅರ್ಜಿ ಸಲ್ಲಿಸುವ ವಿಧಾನ :- ಅರ್ಜಿದಾರರು ಅರ್ಜಿ ಸಲ್ಲಿಸಲು https://sevasindhu.karnataka.gov.in/Sevasindhu/Departmentservices ವೆಬ್ಸೈಟ್ಗೆ ಭೇಟಿ ನೀಡಬೇಕು. ಆನ್ಲೈನ್ ಅಪ್ಲಿಕೇಶನ್ ಫಾರಂ ನಲ್ಲಿ ಕೆಳಗಿರುವ ಎಲ್ಲ ಮಾಹಿತಿಗಳನ್ನು ನಿಖರವಾಗಿ ತಪ್ಪಿಲ್ಲದೆ ತುಂಬಬೇಕು. ಹಾಗೆಯೇ ಯಾವುದಾದರೂ documents ಗಳನ್ನು ಅಪ್ಲೋಡ್ ಮಾಡಲು ಕೇಳಿದರೆ ಅಪ್ಲೋಡ್ ಮಾಡಿ ಅರ್ಜಿಯನ್ನು ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಅರ್ಜಿ ಸಲ್ಲಿಸುವಾಗ ನೀಡಬೇಕಾದ ದಾಖಲೆಗಳು
- ಎಸ್ಎಸ್ಎಲ್ಸಿ ಅಂಕಪಟ್ಟಿ.
- ಗುರುತಿನ ಚೀಟಿ.
- ಆಧಾರ್ ಕಾರ್ಡ್ ಪ್ರತಿ.
- ತರಬೇತಿಗೆ ನಿಗದಿತ ವಿದ್ಯಾರ್ಹತೆ ದಾಖಲೆಗಳು.
- ಜನ್ಮ ದಿನಾಂಕ ಪ್ರಮಾಣ ಪತ್ರ.
- ಆದಾಯ ಪ್ರಮಾಣ ಪತ್ರ.
- ಅಲ್ಪಸಂಖ್ಯಾತರ ಸಮುದಾಯದ ಪ್ರಮಾಣ ಪತ್ರ (ಅನ್ವಯಿಸಿದರೆ).
- ಇತರೆ ವೈಯಕ್ತಿಕ ಮಾಹಿತಿ.
ಇದನ್ನೂ ಓದಿ: ಮುದ್ರಾ ಯೋಜನೆ ಅಡಿಯಲ್ಲಿ ಈಗ ನಿಮಗೆ ಸಿಗುತ್ತದೆ 20ಲಕ್ಷ ರೂಪಾಯಿ ವರೆಗೂ ಸಾಲ. ಈ ರೀತಿ ಸಾಲ ಪಡೆಯಿರಿ ಕಡಿಮೆ ಬಡ್ಡಿದರದಲ್ಲಿ
ಅರ್ಜಿ ಸಲ್ಲಿಸಿದವರ ಆಯ್ಕೆ ಪ್ರಕ್ರಿಯೆ ಹೀಗಿದೆ :-
- ಅರ್ಹತಾ ಪಟ್ಟಿ: ಅರ್ಜಿ ಸಲ್ಲಿಸಿದ ಸೀಟುಗಳಿಗೆ ಅನುಗುಣವಾಗಿ, ಎಲ್ಲಾ ಅಭ್ಯರ್ಥಿಗಳ ವಿದ್ಯಾರ್ಹತೆ ಅಂಕಗಳ ಆಧಾರದ ಮೇಲೆ ಮೆರಿಟ್ ಪಟ್ಟಿಯನ್ನು ಹೊಂದಿದೆ.
- ಅಲ್ಪಸಂಖ್ಯಾತರಿಗೆ ಮೀಸಲಿಟ್ಟ ಸ್ಥಾನಗಳು: ಅಲ್ಪಸಂಖ್ಯಾತ ಸಮುದಾಯಗಳಿಗೆ ಮೀಸಲಿಟ್ಟ ಸ್ಥಾನಗಳು, ಆಯಾ ಸಮುದಾಯಗಳಿಗೆ ಸೇರಿದ ಅಭ್ಯರ್ಥಿಗಳ ನಡುವೆ ಪ್ರತ್ಯೇಕ ಮೆರಿಟ್ ಪಟ್ಟಿಯನ್ನು ಹೊಂದಿದೆ.
- ತರಬೇತಿಗೆ ಹಾಜರಾಗುವುದು: ಆಯ್ಕೆಯಾದ ಅಭ್ಯರ್ಥಿಗಳು ನಿಗದಿತ ದಿನಾಂಕದಂದು ತರಬೇತಿಗೆ ಹಾಜರಾಗಬೇಕು. ಅಲ್ಪಸಂಖ್ಯಾತರ ನಿರ್ದೇಶನಾಲಯ ನಿಯಮಗಳ ಪ್ರಕಾರ, ತರಬೇತಿಯಲ್ಲಿ ಕನಿಷ್ಠ ಹಾಜರಾತಿಯನ್ನು ಕಡ್ಡಾಯವಾಗಿ ಪಡೆಯಬೇಕು.
ಈ ಸೌಲಭ್ಯ ಬೇಕಾದವರಿಗೆ ಮಾಹಿತಿ ಪಡೆಯುವುದು ಹೇಗೆ?
ಈ ಸೌಲಭ್ಯವನ್ನು ಪಡೆಯಲು ಬಯಸುವ ಅರ್ಜಿದಾರರು ಜಿಲ್ಲೆಯ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಕಚೇರಿಗೆ ಭೇಟಿ ನೀಡಿ ಯೋಜನೆ ಮತ್ತು ಅರ್ಜಿಯ ಪ್ರಕ್ರಿಯೆಯ ಕುರಿತು ವಿವರವಾದ ಮಾಹಿತಿಯನ್ನು ಪಡೆಯಬಹುದು. ಇಲ್ಲವೇ ಅಲ್ಪಸಂಖ್ಯಾತರ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ಮಾಹಿತಿ ಪಡೆಯಬಹುದು. ಅರ್ಜಿದಾರರು 8277799990 ಗೆ ಕರೆ ಮಾಡಿ ಯೋಜನೆ ಮತ್ತು ಅರ್ಜಿ ಪ್ರಕ್ರಿಯೆಯ ಬಗ್ಗೆ ಸಾಮಾನ್ಯ ಮಾಹಿತಿ ಪಡೆಯಬಹುದು.
ಮುಖ್ಯ ಸೂಚನೆ :- .ಐಎಎಸ್, ಕೆಎಎಸ್ ಅಭ್ಯರ್ಥಿಗಳು ಒಂದು ವೇಳೆ ಬೇರೆ ಯಾವುದೇ ಖಾಸಗಿ ತರಬೇತಿ ಸಂಸ್ಥೆಗಳಲ್ಲಿ ಪರೀಕ್ಷಾ ಪೂರ್ವ ತರಬೇತಿ ಪಡೆಯುತ್ತಿದ್ದಲ್ಲಿ ನೀವು ಉಚಿತ ಹಾಸ್ಟೆಲ್ ವ್ಯವಸ್ಥೆ ಪಡೆಯಬಹುದು ಆದರೆ ಮೇಲೆ ತಿಳಿಸಿದ ಸಮುದಾಯಗಳಿಗೆ ಸೇರಿದ ಅಭ್ಯರ್ಥಿಗಳು ಆಗಿರಬೇಕು.
ಇದನ್ನೂ ಓದಿ: ಉನ್ನತ ಶಿಕ್ಷಣಕ್ಕೆ 10 ಲಕ್ಷ ರೂಪಾಯಿಯ ವರೆಗೆ ಸಾಲ ಘೋಷಣೆ ಮಾಡಿದ ನಿರ್ಮಲಾ ಸೀತಾರಾಮನ್.