ಈಗ ಯಾರನ್ನ ನೋಡಿದ್ರು ಎಲ್ಲಿ ನೋಡಿದ್ರು ಪ್ರತಿಯೊಬ್ಬರ ಕೈಯಲ್ಲೂ ಕೂಡ ಸ್ಮಾರ್ಟ್ ಫೋನ್ ಇದ್ದೆ ಇರುತ್ತೆ. ಆಡೋ ಹುಡುಗರಿಂದ ಹಿಡಿದು ಹಣ್ಣು ಹಣ್ಣು ಮುದುಕ ಮುದುಕಿಯರೂ ಕೂಡ ಈಗ ಸ್ಮಾರ್ಟ್ ಫೋನ್ ಬಳಸ್ತಾರೆ. ಇದ್ರೆ ಹೀಗೆ ಪ್ರತಿಯೊಬ್ಬರ ಕೈಲೂ ಮೊಬೈಲ್ ಇದ್ರು ಎಲ್ಲರಿಗೂ ರಿಚಾರ್ಜ್ ನದ್ದೇ ತಲೆ ಬಿಸಿ. ಹೀಗಾಗಿ ಗ್ರಾಹಕರಿಗೆ ಜಿಯೋ ಕಂಪನಿ ಗುಡ್ ನ್ಯೂಸ್ ಕೊಟ್ಟಿದೆ. ಹೌದು ಜಿಯೋ ರೀಚಾರ್ಜ್ ಯೋಜನೆ 2024 ಹೆಸರಲ್ಲಿ ಜಿಯೋ ಹೊಸ ಪ್ಲಾನ್ ಗಳನ್ನ ತಂದಿದೆ. ಸದ್ಯ ಈಗ ರಿಲಯನ್ಸ್ ಜಿಯೋದ 10 ಪ್ಲಾನ್‌ಗಳಲ್ಲಿ 84 ದಿನಗಳ ವ್ಯಾಲಿಡಿಟಿ ಲಭ್ಯವಿದೆ, ಅದರಲ್ಲಿ ಯಾವುದು ನಿಮಗೆ ಉತ್ತಮವಾಗಿದೆ ಅನ್ನೋದನ್ನ ನೋಡೋಣ. ಮೊಬೈಲ್ ರೀಚಾರ್ಜ್ ಯೋಜನೆಗೆ ಸಂಬಂಧಿಸಿದಂತೆ ಪ್ರತಿಯೊಬ್ಬ ಬಳಕೆದಾರರು ವಿಭಿನ್ನ ಅವಶ್ಯಕತೆಗಳನ್ನು ಹೊಂದಿರಬಹುದು.
ಅದರಲ್ಲೂ ನೀವು ಜಿಯೋ ಗ್ರಾಹಕರಾಗಿದ್ದರೆ ಮತ್ತು ಮೂರು ತಿಂಗಳ ರೀಚಾರ್ಜ್ ಯೋಜನೆಯನ್ನು ಹುಡುಕುತ್ತಿದ್ದರೆ, ಖಂಡಿತವಾಗಿಯೂ ಈ ಮಾಹಿತಿ ನಿಮಗೆ ತುಂಬಾ ಉಪಯುಕ್ತವಾಗುತ್ತೆ. ಇನ್ನು ಜಿಯೋ ತನ್ನ ಗ್ರಾಹಕರ ವಿವಿಧ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು 10 ರೀಚಾರ್ಜ್ ಯೋಜನೆಗಳನ್ನು ನೀಡುತ್ತಯಿದ್ದು, ಇದು 84 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ. ಒಂದೇ ವ್ಯಾಲಿಡಿಟಿ ಹೊಂದಿರುವ 10 ವಿಭಿನ್ನ ರೀಚಾರ್ಜ್ ಪ್ಲಾನ್‌ಗಳಲ್ಲಿ ನಿಮಗೆ ಯಾವ ರೀಚಾರ್ಜ್ ಪ್ಲಾನ್ ಉತ್ತಮವಾಗಿರುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಕಷ್ಟವಾಗಬಹುದು. ಹೀಗಾಗಿ ನಿಮ್ಮ ಸಮಸ್ಯೆಯನ್ನು ನಿವಾರಿಸಲು, ನಾವು ಈ ಯೋಜನೆಗಳನ್ನು ಒಂದೇ ಸ್ಥಳದಲ್ಲಿ ಅವುಗಳ ಪ್ರಯೋಜನಗಳ ಜೊತೆಗೆ ಒಂದೇ ಮಾನ್ಯತೆಯೊಂದಿಗೆ ಪಟ್ಟಿ ಮಾಡುತ್ತಿದ್ದೇವೆ, ಇದರಿಂದ ನೀವು ನಿಮಗಾಗಿ ಉತ್ತಮ ಯೋಜನೆಯನ್ನು ಆಯ್ಕೆ ಮಾಡಬಹುದು.
ಹೌದು ಜಿಯೋ ತನ್ನ ಗ್ರಾಹಕರಿಗೆ ಇದೀಗ ಸಿಹಿ ಸುದ್ದಿ ನೀಡಿದೆ ಅಂತಲೇ ಹೇಳಬಹುದು ಅದು ಬರೋಬ್ಬರಿ 10 ಹೊಸ ಪ್ಲಾನ್ ಗಳನ್ನ ಒಂದೇ ವ್ಯಾಲಿಡಿಟಿ ಯೊಂದಿಗೆ ಆರಂಭ ಮಾಡಿರೋದು ಗ್ರಾಹಕರಿಗೆ ಡಬ್ಬಲ್ ಧಮಾಕ ಅಂತಲೇ ಹೇಳಬಹುದು. ಹೌದು 10 ಪ್ಲಾನ್ ಗಳು ಸಹ 84 ದಿನಗಳ ಮಾನ್ಯತೆಯೊಂದಿಗೆ ಶುರುವಾಗಿವೆ. ಇನ್ನು ಈ ರೀಚಾರ್ಜ್ ಯೋಜನೆಯೊಂದಿಗೆ, ಮೊಬೈಲ್ ಫೋನ್ ಅನ್ನು ರೀಚಾರ್ಜ್ ಮಾಡಲು ದೀರ್ಘ ರಜೆ ಇರುತ್ತದೆ. ಹೌದು ಇದರಲ್ಲಿ ಸುಮಾರು 3 ತಿಂಗಳ ಕಾಲ ಫೋನ್ ರೀಚಾರ್ಜ್ ಮಾಡುವ ಟೆನ್ಷನ್ ಇರಲ್ಲ. ಮುಖ್ಯವಾಗಿ Jio ತನ್ನ ಗ್ರಾಹಕರಿಗೆ 84 ದಿನಗಳ ಮಾನ್ಯತೆಯೊಂದಿಗೆ ಒಂದು ಅಥವಾ ಎರಡು ಅಥವಾ ಮೂರು ಅಲ್ಲ ಬರೋಬ್ಬರಿ 10 ರೀಚಾರ್ಜ್ ಯೋಜನೆಗಳನ್ನು ನೀಡುತ್ತಿದೆ. ಮುಖ್ಯವಾಗಿ ಈ ರೀಚಾರ್ಜ್ ಯೋಜನೆಗಳ ಬೆಲೆ ರೂ 799 ರಿಂದ ಪ್ರಾರಂಭವಾಗುತ್ತದೆ. ಅದರಲ್ಕು ದೊಡ್ಡ ಬಳಕೆದಾರರ ಬೇಸ್‌ನ ವಿಭಿನ್ನ ರೀಚಾರ್ಜ್ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು, ಕಂಪನಿಯು ಹಲವು ಆಯ್ಕೆಗಳನ್ನು ನೀಡಿದ್ದು ಅದರ ಸಂಪೂರ್ಣ ಮಾಹಿತಿ ಮುಂದಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ವಿವಿಧ 10 ರಿಚಾರ್ಜ್ ಪ್ಲಾನ್ ಗಳನ್ನ ಸಿದ್ದಪಡಿಸಿದ ಜಿಯೋ ಕಂಪನಿ
ಜಿಯೋ ಅಹುರು ಮಾಡಿರೋ ಪ್ಲಾನ್ ಗಳಲ್ಲಿ ಮೊದಲ ಪ್ಲಾನ್ ಎಲ್ಲ ಗ್ರಾಹಕರ ಕೈಗೆಟ್ಟುಕುವ ಬೆಲೆಯಲ್ಲಿ ಅಂದ್ರೆ 799 ರೂಪಾಯಿಯ ಯೋಜನೆ ಮೊದಲಿಗೆ ಸಿಗುತ್ತೆ.
- ಪ್ಯಾಕ್ ಮಾನ್ಯತೆ – 84 ದಿನಗಳು.
- ಡೇಟಾ- 126GB, 1.5 GB/ದಿನ.
- ಕರೆ – ಅನಿಯಮಿತ.
- SMS- 100 SMS/ದಿನ.
- ಚಂದಾದಾರಿಕೆ-JioTV, JioCinema, JioCloud.
859 ರೂಪಾಯಿಯ ಯೋಜನೆ.
- ಪ್ಯಾಕ್ ಮಾನ್ಯತೆ – 84 ದಿನಗಳು.
- ಡೇಟಾ- 168 ಜಿಬಿ, 2 ಜಿಬಿ / ದಿನ.
- ಕರೆ – ಅನಿಯಮಿತ.
- SMS- 100 SMS/ದಿನ.
- ಚಂದಾದಾರಿಕೆ-JioTV, JioCinema, JioCloud.
889ರೂಪಾಯಿ ಯೋಜನೆ.
- ಪ್ಯಾಕ್ ಮಾನ್ಯತೆ – 84 ದಿನಗಳು.
- ಡೇಟಾ- 126 ಜಿಬಿ, 1.5 ಜಿಬಿ / ದಿನ.
- ಕರೆ – ಅನಿಯಮಿತ.
- SMS- 100 SMS/ದಿನ.
- ಚಂದಾದಾರಿಕೆ-JioTV, JioCinema, JioCloud, JioSaavn Pro.
ರೂ 949 ಯೋಜನೆ
- ಪ್ಯಾಕ್ ಮಾನ್ಯತೆ – 84 ದಿನಗಳು.
- ಡೇಟಾ- 168 ಜಿಬಿ, 2 ಜಿಬಿ / ದಿನ.
- ಕರೆ – ಅನಿಯಮಿತ.
- SMS- 100 SMS/ದಿನ.
- ಚಂದಾದಾರಿಕೆ-JioTV, JioCinema, JioCloud, Disney+Hotstar.
1028ರೂಪಾಯಿ ಯೋಜನೆ
- ಪ್ಯಾಕ್ ಮಾನ್ಯತೆ – 84 ದಿನಗಳು.
- ಡೇಟಾ- 168 ಜಿಬಿ, 2 ಜಿಬಿ / ದಿನ.
- ಕರೆ – ಅನಿಯಮಿತ.
- SMS- 100 SMS/ದಿನ.
- ಚಂದಾದಾರಿಕೆ-JioTV, JioCinema, JioCloud, Swiggy One Lite 3 ತಿಂಗಳ ಚಂದಾದಾರಿಕೆ.
ರೂ 1029 ಯೋಜನೆ
- ಪ್ಯಾಕ್ ಮಾನ್ಯತೆ – 84 ದಿನಗಳು.
- ಡೇಟಾ- 168 ಜಿಬಿ, 2 ಜಿಬಿ / ದಿನ.
- ಕರೆ – ಅನಿಯಮಿತ.
- SMS- 100 SMS/ದಿನ.
- ಚಂದಾದಾರಿಕೆ-JioTV, JioCinema, JioCloud, Prime Video Mobile Edition (84 ದಿನಗಳು.
1049ರೂಪಾಯಿ ಯೋಜನೆ
- ಪ್ಯಾಕ್ ಮಾನ್ಯತೆ – 84 ದಿನಗಳು.
- ಡೇಟಾ- 168 ಜಿಬಿ, 2 ಜಿಬಿ / ದಿನ.
- ಕರೆ – ಅನಿಯಮಿತ.
- SMS- 100 SMS/ದಿನ.
- ಚಂದಾದಾರಿಕೆ-JioTV, JioCinema, JioCloud, Sony LIV, ZEE5.
ರೂ 1199 ಯೋಜನೆ
- ಪ್ಯಾಕ್ ಮಾನ್ಯತೆ – 84 ದಿನಗಳು.
- ಡೇಟಾ- 252 GB, 3GB / ದಿನ.
- ಕರೆ – ಅನಿಯಮಿತ.
- SMS- 100 SMS/ದಿನ.
- ಚಂದಾದಾರಿಕೆ-JioTV, JioCinema, ಜಿಒಕ್ಲೋಡ್.
1299 ರೂಪಾಯಿ ಯೋಜನೆ
- ಪ್ಯಾಕ್ ಮಾನ್ಯತೆ – 84 ದಿನಗಳು.
- ಡೇಟಾ- 168GB, 2GB/ದಿನ.
- ಕರೆ – ಅನಿಯಮಿತ.
- SMS- 100 SMS/ದಿನ.
- ಚಂದಾದಾರಿಕೆ-JioTV, JioCinema, JioCloud, Netflix(ಮೊಬೈಲ್).
ರೂ 1799 ಯೋಜನೆ
- ಪ್ಯಾಕ್ ಮಾನ್ಯತೆ – 84 ದಿನಗಳು.
- ಡೇಟಾ- 252GB, 3GB/ದಿನ.
- ಕರೆ – ಅನಿಯಮಿತ.
- SMS- 100 SMS/ದಿನ.
- ಚಂದಾದಾರಿಕೆ-JioTV, JioCinema, ಜಿಒಕ್ಲೋಡ್.
ಸದ್ಯ ಇಷ್ಟು ಪ್ಲಾನ್ ಗಳ ಮಾಹಿತಿ ಹೊರಬಿಟ್ಟಿದ್ದು ನಿಮ್ಮ ಅವಶ್ಯಕತೆ ಹಾಗೂ ಬಳಕೆಗೆ ತಕ್ಕಂತೆ ನೀವು ಪ್ಲಾನ್ ಗಳನ್ನ ಆಯ್ಕೆ ಮಾಡಿಕೊಳ್ಳಬಹುದು.
ಇದನ್ನೂ ಓದಿ: ನಿಮ್ಮ ಹತ್ತಿರದಲ್ಲಿ BSNL 4G ಟವರ್ ಎಲ್ಲಿದೆ ಎಂಬುದನ್ನು ಸುಲಭವಾಗಿ ತಿಳಿಯಿರಿ.