ಶಿಕ್ಷಣ ಪಡೆಯೋದು ಅಂದ್ರೆ ಈಗ ನಾವು ಅಂದುಕೊಂಡಷ್ಟು ಸುಲಭವಾಗಿಲ್ಲ, ಸ್ಪರ್ಧೆಯ ಜೊತೆ ಜೊತೆಗೆ ಆಡಂಬರ ಕೂಡ ವಿದ್ಯಾಭ್ಯಾಸದ ಒಂದು ಭಾಗವಾಗಿಬಿಟ್ಟಿದೆ. ಈ ಮಧ್ಯೆ ಸರ್ಕಾರದಿಂದ ಸಿಗುವ ಧನ ಸಹಾಯ ನಂಬಿ ವಿದ್ಯಾಭ್ಯಾಸ ಮುಂದುವರೆಸುವ ಅನೇಕ ವಿದ್ಯಾರ್ಥಿಗಳಿಗೆ ಇದು ಸಿಹಿ ಸುದ್ದಿ ಅಂತ ಹೇಳಲೇಬೇಕು. ಹೌದು ಪಿಯುಸಿ ಮುಗಿಸಿ ಯಾರು ಉನ್ನತ ಶಿಕ್ಷಣದ ಕನಸ್ಸು ಹೊತ್ತು ಕೂತಿದ್ದಾರೋ ಅವ್ರಿಗೆಲ್ಲ ಇದು ನಿಜಕ್ಕೂ ಇದು ಸಂಭ್ರಮದ ವಿಷಯ ಅಂತಲೇ ಹೇಳಬಹುದು. ಹೌದು ಉನ್ನತ ಶಿಕ್ಷಣ ಇಲಾಖೆ, ಕೇಂದ್ರ ಸರ್ಕಾರ, ನವದೆಹಲಿ ಇವರಿಂದ ನೀಡಲಾಗುವ ಪ್ರದಾನ್ ಮಂತ್ರಿ ಉಚ್ಛತಾರ್ ಶಿಕ್ಷ ಪ್ರೋತ್ಸಾಹ ಧನ್ (PM-USP) ಯೋಜನಾ ಹೆಸರಿನಲ್ಲಿ ಪ್ರತೀ ವರ್ಷದಂತೆ, ಈ ವರ್ಷವೂ ಕೂಡ ಈ ಯೋಜನೆಗೆ ಅರ್ಜಿ ಅಹ್ವಾನಿಸಲಾಗಿದೆ.
ಹೌದು ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಸಂಯೋಜನೆವಾರು 80% ಗಿಂತ ಹೆಚ್ಚು ಅಂಕ ಗಳಿಸಿದ ಹಾಗೂ ತಮ್ಮ ವಿದ್ಯಾಭ್ಯಾಸವನ್ನು ಕಡ್ಡಾಯವಾಗಿ ಉನ್ನತ ಶಿಕ್ಷಣದಲ್ಲಿ ಮುಂದುವರೆಸಿರುವಂತಹ ಅಂದೇ ಕನಿಷ್ಠ 03 ವರ್ಷದ ಪದವಿ ತರಗತಿಗಳಲ್ಲಿ ಓದುತ್ತಿರುವವರಿಗೆ 2nd Central Sector Scheme of Scholarship for Colleges and University ಸ್ಟೂಡೆಂಟ್ಸ್ ಮೂಲಕ ಕೇಂದ್ರ ಸರ್ಕಾರದ ವಿದ್ಯಾರ್ಥಿ ವೇತನಕ್ಕೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಹೀಗಾಗಿ www.scholarship.gov.in ಮೂಲಕ ನ್ಯಾಷನಲ್ ಇ-ಸ್ಕಾಲರ್‍ಶಿಫ್ ಪೋರ್ಟಲ್‍ನಲ್ಲಿ ನೋಂದಾಯಿಸಿಕೊಂಡು ಆನ್‍ಲೈನ್ ಮುಖಾಂತರವೇ 2024-25ನೇ ಸಾಲಿನ ಫ್ರೆಶ್ ಬ್ಯಾಚ್ ಹಾಗೂ ಎಲ್ಲಾ ಹಂತದ ನವೀಕರಣಕ್ಕಾಗಿ ಅರ್ಜಿಗಳನ್ನು 2024 ರ ಅಕ್ಟೋಬರ್ 31 ರೊಳಗೆ ಸಲ್ಲಿಸಬಹುದಾಗಿದೆ.
3ವರ್ಷದ ಉನ್ನತ ವಿದ್ಯಾಭ್ಯಾಸಕ್ಕೆ ಸಿಗಲಿದೆ ಪ್ರೋತ್ಸಾಹ ಧನ
ಹೌದು ಉನ್ನತ ಮಟ್ಟದ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲಿ ಅನ್ನು ನಿಟ್ಟಿನಲ್ಲಿ ಸರ್ಕಾರದ ಧನ ಸಹಾಯ ಪಡೆಯಲು ಅರ್ಜಿ ಕರೆಯಲಾಗಿದ್ದು, ವಿದ್ಯಾರ್ಥಿ ವೇತನಕ್ಕೆ ಅರ್ಜಿಗಳನ್ನು ಸಲ್ಲಿಸಲು ಜೂನ್ 30 ರಿಂದ ಅಕ್ಟೋಬರ್ 31ರ ವರೆಗೆ ದಿನಾಂಕ ನಿಗಧಿ ಮಾಡಿ ಅಧಿಸೂಚನೆ ಹೊರಡಿಸಲಾಗಿದೆ. ಇನ್ನು ಮುಖ್ಯವಾಗಿ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಕಡ್ಡಾಯವಾಗಿ ಆಧಾರ್ ನೋಂದಣಿ ಸಂಖ್ಯೆಯನ್ನು ತಮ್ಮ ಬ್ಯಾಂಕ್ ಖಾತೆಗೆ ಲಿಂಕ್ ಮಾಡಿಸಿಕೊಳ್ಳಬೇಕು.
ಆನ್‌ಲೈನ್ ಮೂಲಕ ಸಲ್ಲಿಸಿದ ಅರ್ಜಿಯ ಎಲ್ಲಾ ದಾಖಲೆಗಳನ್ನು ಪರಿಶೀಲನೆಗಾಗಿ ತಾವು ಅಧ್ಯಯನ ಮಾಡುತ್ತಿರುವ ಪದವಿ ಕಾಲೇಜುಗಳಲ್ಲಿ ನೇಮಕವಾಗಿರುವ Institute Nodal Officer ಗಳಿಗೆ ನಿಗಧಿತ ದಿನಾಂಕದೊಳಗೆ ಕಡ್ಡಾಯವಾಗಿ ಸಲ್ಲಿಸಿದ ನಂತರ ವಿದ್ಯಾರ್ಥಿಗಳು ಆನ್‌ಲೈನ್ ಮೂಲಕ ಸಲ್ಲಿಸಿರುವ ಅರ್ಜಿಗಳನ್ನು ಆಯಾ ಕಾಲೇಜುಗಳ ಐಎನ್‌ಓ ಗಳು ಕೂಲಂಕುಷವಾಗಿ ಪರಿಶೀಲಿಸಿ, ಸದರಿ ವಿದ್ಯಾರ್ಥಿಯು ತಮ್ಮ ಕಾಲೇಜಿನಲ್ಲಿ ದಾಖಲಾಗಿ ವಿದ್ಯಾಭ್ಯಾಸ ಮುಂದುವರೆಸಿರುವ ಬಗ್ಗೆ ಹಾಗೂ ವಿದ್ಯಾರ್ಥಿಯು ಸಲ್ಲಿಸಿರುವ ವಿವರಗಳನ್ನು ಖಚಿತಪಡಿಸಿಕೊಂಡು ಆನ್‌ಲೈನ್ ಮೂಲಕವೇ ನಿಗಧಿತ ದಿನಾಂಕದೊಳಗೆ ಅರ್ಹ ಅರ್ಜಿಗಳನ್ನು ಪರಿಶೀಲಿಸುವುದು. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಇನ್ನು ಮುಖ್ಯವಾಗಿ ಅರ್ಹ ವಿದ್ಯಾರ್ಥಿಯು ಒಂದಕ್ಕಿಂತ ಹೆಚ್ಚು ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಿದ್ದಲ್ಲಿ, ಯಾವುದಾದರೂ ಒಂದು ಅರ್ಜಿಯನ್ನು ಮಾತ್ರವೇ ಅಂದ್ರೆ ಎನ್.ಎಸ್.ಪಿ. ಅಥವಾ ಎಸ್.ಎಸ್.ಪಿ ವಿದ್ಯಾರ್ಥಿವೇತನಗಳಲ್ಲಿ ಯಾವುದಾದರೂ ಒಂದು ವಿದ್ಯಾರ್ಥಿವೇತನಕ್ಕೆ ಮಾತ್ರ ಅರ್ಹ ವಿದ್ಯಾರ್ಥಿಯನ್ನ ಆಯ್ಕೆ ಮಾಡಲಾಗುತ್ತದೆ. ಇನ್ನು ಯಾವುದೇ ಕಾರಣಕ್ಕೂ ನೈಜ ವಿದ್ಯಾರ್ಥಿಯ ಹೊರತು ಅಂದ್ರೆ ಆಯ್ಕೆಯಾಗದ ವಿದ್ಯಾರ್ಥಿಗೆ ವಿದ್ಯಾರ್ಥಿವೇತನ ಜಮೆಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಪ್ರಾಚಾರ್ಯರು ಅಥವ ಆಯಾ ಕಾಲೇಜುಗಳ ಮಂಡಳಿಗಳದ್ದಾಗಿರುತ್ತದೆ.
ಹೀಗಾಗಿ ಅರ್ಹ ವಿದ್ಯಾರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು. ಹೀಗಾಗಿ ಯಾರೆಲ್ಲ ಪಿಯುಸಿ ಮುಗಿಸಿ ಉನ್ನತ ಶಿಕ್ಷಣದ ಕನಸ್ಸು ಹೊತ್ತು ವಿದ್ಯಾಭ್ಯಾಸ ಮುಂದುವರೆಸಿದ್ದರೋ ಅವ್ರು ಆಯಾ ಕಾಲೇಜುಗಳ ಮೂಲಕವೇ ಅರ್ಜಿ ಸಲ್ಲಿಕೆ ಮಾಡಬಹುದಾಗಿದ್ದು, ಆಯ್ಕೆ ಪ್ರಕ್ರಿಯೆ ಕೂಡ ತಮ್ಮ ತಮ್ಮ ಕಾಲೇಜುಗಳಲ್ಲಿಯೇ ನಡೆಯಲಿದ್ದು, ಇದು ಬಹಳಷ್ಟು ಅನುಕೂಲಕರವಾಗಿದ್ದು, ಪಿಯುಸಿಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳು ಅರ್ಜಿ ನಮೂನೆಗಳನ್ನ ಆನ್ಲೈನ್ ಲಿ ಒಮ್ಮೆ ಪರಿಶೀಲನೆ ಮಾಡಿ ಅಗತ್ಯ ದಾಖಲೆಗಳನ್ನ ಒದಗಿಸುವ ಮೂಲಕ ಅರ್ಜಿ ಸಲ್ಲಿಕೆ ಮಾಡಿ ಸರ್ಕಾರದಿಂದ ಸಿಗುವ ಸೌಲಭ್ಯ ಪಡೆದುಕೊಳ್ಳಬಹುದು.
ಇದನ್ನೂ ಓದಿ: ಕೇಂದ್ರ ಸರ್ಕಾರದ ಈ ಯೋಜನೆಯಡಿಯಲ್ಲಿ ಪ್ರತಿ ತಿಂಗಳು 5000 ಸೌಲಭ್ಯ; ಯಾರೆಲ್ಲಾ ಅರ್ಜಿ ಸಲ್ಲಿಸಬಹುದು?