ಖಾಸಗಿ ಟೆಲಿಕಾಂ ಕಂಪನಿಗಳು ತಮ್ಮ ರಿಚಾರ್ಜ್ ಪ್ಲಾನ್ ಗಳ ಬೆಲೆಯನ್ನು ದಿಢೀರ್ ಹೆಚ್ಚಿಸಿರುವುದರ ಜೊತೆಗೆ ಮೊಬೈಲ್ ಬಳಕೆದಾರರಿಗೆ ದೊಡ್ಡ ಶಾಕ್ ನೀಡಿದ್ವು. ಒಂದಾದ ಮೇಲೊಂದು ಟೆಲಿಕಾಂ ಕಂಪನಿಗಳು ಬೆಲೆ ಏರಿಕೆಯಲ್ಲಿ ತಾ ಮುಂದು ನಾ ಮುಂದು ಅಂತ ಏರಿಕೆ ಮಾಡ ತೊಡಗಿದವು. ಇದು ಮೊಬೈಲ್ ಬಳಕೆದಾರರ ಆಕ್ರೋಶಕ್ಕೂ ಕಾರಣವಾಗಿತ್ತು. ಆದರೂ ವಿಧಿ ಇಲ್ಲದೆ ಮೊಬೈಲ್ ರಿಚಾರ್ಜ್ ಹೆಚ್ಚಳವನ್ನ ಒಪ್ಪಿಕೊಂಡು ಹೋಗ ತೊಡಗಿದರು. ಕೆಲವೊಂದು ಕಂಪನಿಗಳು ಇದನ್ನೇ ಬಂಡವಾಳವಾಗಿಸಿಕೊಂಡು ವಾರ್ಷಿಕ ಪ್ಯಾಕೇಜ್ ಗಳನ್ನ ವಿಶೇಷ ಆಫರ್ ಎಂಬಂತೆ ನೀಡಿ ಅಲ್ಲಿಯೂ ದುಡ್ಡು ಮಾಡಲು ಇಳಿದ್ವು.
ಮುಖ್ಯವಾಗಿ ಟೆಲಿಕಾಂ ಕಂಪನಿಗಳು ಧ್ವನಿ, ಡೇಟಾ ಮತ್ತು SMSನ ಎಲ್ಲಾ ಸೌಲಭ್ಯಗಳನ್ನು ಬಂಡಲ್ ಪ್ಲಾನ್ ರೂಪದಲ್ಲಿ ಒದಗಿಸುತ್ತಿವೆ. ಆದ್ರೆ ಅನೇಕ ಜನರು ಕೇವಲ ಧ್ವನಿ ಕರೆಗಳು ಮತ್ತು SMS ಅನ್ನು ಬಳಸುತ್ತಾರೆ ಮತ್ತು ಡೇಟಾವನ್ನು ಬಳಸಲಾಗದೆ ಬಿಟ್ಟುಬಿಡುತ್ತಿದ್ದಾರೆ. ಅದರಲ್ಲೂ ಗ್ರಾಮೀಣ ಪ್ರದೇಶದಲ್ಲಿ ಇರುವವರು ಸಾಮಾನ್ಯ ಬೆಸಿಕ್ ಮೊಬೈಲ್ ಗಳನ್ನು ಹೆಚ್ಚು ಬಳಕೆ ಮಾಡ್ತಾರೆ. ಕಾರಣದಿಂದ ಹಲವು ಮಂದಿ ಗ್ರಾಹಕರು ಇಂಟರ್ ನೆಟ್ ಬಳಕೆ ಮಾಡದಿದ್ದರು ತಾವು ಏಕೆ ಹಣ ನೀಡಬೇಕು ಎಂಬ ಬಗ್ಗೆ ದೂರುಗಳು ಕೇಳಿ ಬರುತ್ತಿದೆ. ಅದಕ್ಕಾಗಿಯೇ ಡೇಟಾ, ಎಸ್‌ಎಂಎಸ್ ಮತ್ತು ವಾಯ್ಸ್ ಕಾಲಿಂಗ್‌ಗೆ ಪ್ರತ್ಯೇಕ ರೀಚಾರ್ಜ್ ಯೋಜನೆಗಳನ್ನು ತರಲು ಟ್ರಾಯ್ ವ್ಯವಸ್ಥೆ ಮಾಡುತ್ತಿದೆ ಎಂದು ತೋರುತ್ತದೆ. ಇದು ಸಂಭವಿಸಿದಲ್ಲಿ, ರೀಚಾರ್ಜ್ ಯೋಜನೆಗಳ ಬೆಲೆಗಳು ಕಡಿಮೆಯಾಗುತ್ತವೆ. ಹೀಗಾಗಿ ಕೇಂದ್ರ ಇದಕ್ಕಾಗಿ ಹೊಸ ನಿಯಮ ಜಾರಿಗೊಳಿಸಲಿದೆ ಅಂತ ಕೂಡ ಹೇಳಲಾಗುತ್ತಿದೆ.
ಹೌದು ಈಗಾಗಲೇ ಬಂಡಲ್ ಪ್ಯಾಕ್ ಗಳಿಂದ ನಷ್ಟ ಅನುಭವಿಸುತ್ತಿರುವ ಗ್ರಹಕರನ್ನ ಗಮನದಲ್ಲಿಟ್ಟುಕೊಂಡು ಕೇಂದ್ರ ಹೊಸ ಪ್ಲಾನ್ ಗೆ ಮುಂದಾಗಿದೆ. ಇದಕ್ಕಾಗಿಯೇ ಡೇಟಾ, ಎಸ್‌ಎಂಎಸ್ ಮತ್ತು ವಾಯ್ಸ್ ಕಾಲಿಂಗ್‌ಗೆ ಪ್ರತ್ಯೇಕ ರೀಚಾರ್ಜ್ ಯೋಜನೆಗಳನ್ನು ತರಲು ಟ್ರಾಯ್ ವ್ಯವಸ್ಥೆ ಮಾಡುತ್ತಿದೆ ಅಂತ ಹೇಳಲಾಗುತ್ತಿದೆ. ಈ ಹೊಸ ಪ್ಲಾನ್ ವರ್ಕ್ ಆದ್ರೆ ಖಂಡಿತವಾಗಿಯೂ ರೀಚಾರ್ಜ್ ಯೋಜನೆಗಳ ಬೆಲೆಗಳು ಕಡಿಮೆಯಾಗುತ್ತವೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ರಿಚಾರ್ಜ್ ಯೋಜನೆಗಳ ಬೆಲೆ ಕಡಿಮೆಯಾಗುವ ನಿರೀಕ್ಷೆ..
ಇನ್ನು Jio, Airtel ಮತ್ತು VI ನಂತಹ ಟೆಲಿಕಾಂ ಕಂಪನಿಗಳು ಜುಲೈ ಆರಂಭದಲ್ಲಿ ಗ್ರಾಹಕರಿಗೆ ಶಾಕ್ ನೀಡಿದ್ದವು. ಈ ಕಂಪನಿಗಳು ತಮ್ಮ ರೀಚಾರ್ಜ್ ಯೋಜನೆಗಳ ಮೇಲೆ ಶೇಕಡಾ 11-25 ರಷ್ಟು ದರಗಳನ್ನು ಹೆಚ್ಚಿಸಿದ್ದವು. ಈ ನಿರ್ಧಾರದಿಂದ ಮೊಬೈಲ್ ಬಳಕೆದಾರರು ಅಸಮಾಧಾನಗೊಂಡಿದ್ದರು. ಹೌದು ಇದಕ್ಕಿದ್ದಂತೆ ಮೂರು ಖಾಸಗಿ ಟೆಲಿಕಾಮ್ ಕಂಪನಿಗಳಾದ Jio, Airtel ಮತ್ತು VI ಕಳೆದ ಜುಲೈ ಆರಂಭದಲ್ಲೇ ಗ್ರಾಹಕರಿಗೆ ಶಾಕ್ ನೀಡಿ, ರೀಚಾರ್ಜ್ ಯೋಜನೆಗಳ ಮೇಲೆ ಶೇಕಡಾ 11-25 ರಷ್ಟು ದರಗಳನ್ನು ಹೆಚ್ಚಿಸಿದ್ದವು. ಈ ನಿರ್ಧಾರದಿಂದ ಮೊಬೈಲ್ ಬಳಕೆದಾರರಲ್ಲಿ ಬೇಸರ ಹೆಚ್ಚಾಗಿತ್ತು. ಈ ಮಧ್ಯೆ ಇದನ್ನ ಲಾಭ ಪಡೆದ BSNL ಕೂಡ ಗ್ರಾಹಕರನ್ನು ಆಕರ್ಷಿಸಲು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಇದರ ಭಾಗವಾಗಿ ದೇಶಾದ್ಯಂತ 4ಜಿ ಟವರ್‌ಗಳನ್ನು ನಿರ್ಮಿಸುತ್ತಿದೆ. ಇದೇ ವೇಳೆ ಇನ್ನೂ ಕೆಲವು ಲಕ್ಷ ಮಂದಿ ಬಿಎಸ್‌ಎನ್‌ಎಲ್‌ಗೆ ಬದಲಾಗುವ ನಿರೀಕ್ಷೆಯಿದೆ. ಈ ಮಧ್ಯೆ ರೀಚಾರ್ಜ್ ಬೆಲೆ ಹೆಚ್ಚಳದ ಹಿನ್ನೆಲೆಯಲ್ಲಿ ಕೇಂದ್ರವು ಪ್ರಮುಖ ಘೋಷಣೆ ಮಾಡಿದೆ.
ಹೌದು ರಿಲಯನ್ಸ್, ಜಿಯೋ, ಏರ್‌ಟೆಲ್ ಮತ್ತು ವೊಡಾಫೋನ್, ಐಡಿಯಾ ಸುಂಕವನ್ನು ಹೆಚ್ಚಿಸಿದ ನಂತರ BSNL ಹೊಸ ಗ್ರಾಹಕರನ್ನು ಪಡೆಯುತ್ತಿದೆ. ಈ ಹಿಂದೆ BSNL ಮೇ ತಿಂಗಳಲ್ಲಿ 15 ಸಾವಿರ ಗ್ರಾಹಕರನ್ನು ಹೆಚ್ಚಿಸಿತ್ತು ಮತ್ತು ಜೂನ್‌ನಲ್ಲಿ 58 ಸಾವಿರ ಗ್ರಾಹಕರು ಕಂಪನಿಯನ್ನು ತೊರೆದಿದ್ದರು, ಆದರೆ ಈಗ ಪರಿಸ್ಥಿತಿ ಬದಲಾಗುತ್ತಿದೆ. ಜುಲೈ ತಿಂಗಳ ಮೊದಲ 15 ದಿನಗಳಲ್ಲಿಯೇ ಕಂಪನಿಯು ಸರಿಸುಮಾರು 15 ಲಕ್ಷ ಹೊಸ ಗ್ರಾಹಕರನ್ನು ಪಡೆದುಕೊಂಡಿದೆ. ಅಂದರೆ ಒಂದು ದಿನದಲ್ಲಿ 1 ಲಕ್ಷ ಹೊಸ ಗ್ರಾಹಕರು ಕಂಪನಿಗೆ ಸೇರುತ್ತಿದ್ದಾರೆ. ಹೀಗಾಗಿಯೇ ಮೊಬೈಲ್ ರೀಚಾರ್ಜ್ ಬೆಲೆ ಹೆಚ್ಚಳದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಶೀಘ್ರದಲ್ಲೇ ಮೊಬೈಲ್ ಬಳಕೆದಾರರಿಗೆ ಶುಭ ಸುದ್ದಿ ನೀಡಲಿದೆ. ಟೆಲಿಕಾಂ ನಿಯಂತ್ರಕ TRAI ಟೆಲಿಕಾಂ ಸೇವಾ ಪೂರೈಕೆದಾರರು ನೀಡುವ ಮೊಬೈಲ್ ರೀಚಾರ್ಜ್ ಯೋಜನೆಗಳನ್ನು ಪರಿಶೀಲಿಸಲು ಸಿದ್ಧವಾಗಿದೆ.
ಧ್ವನಿ ಕರೆಗಳು, ಡೇಟಾ ಮತ್ತು SMS ಗಾಗಿ ವಿಶೇಷ ರೀಚಾರ್ಜ್ ಯೋಜನೆಗಳನ್ನು ತರಲು TRAI ಉದ್ದೇಶಿಸಿದೆ. ಈ ಬಗ್ಗೆ ಗ್ರಾಹಕರ ಪ್ರತಿಕ್ರಿಯೆ ಕೇಳಲಾಗಿದ್ದು, ಆಗಸ್ಟ್ 16ರೊಳಗೆ ತಮ್ಮ ಅಭಿಪ್ರಾಯಗಳನ್ನು ನೀಡಬೇಕು ಎಂದು ಟ್ರಾಯ್ ತಿಳಿಸಿದೆ. ಇನ್ನು ಟೆಲಿಕಾಂ ಗ್ರಾಹಕ ಸಂರಕ್ಷಣಾ ನಿಯಮಗಳ-2012 ರ ಪರಿಶೀಲನೆಯ ಕುರಿತು ಸಮಾಲೋಚನೆ’ ಸಮಾಲೋಚನಾ ಪತ್ರಿಕೆಯನ್ನು ಬಿಡುಗಡೆ ಮಾಡಿದೆ. ಮುಂದಿನ ತಿಂಗಳ 16ರೊಳಗೆ ಈ ಸಮಾಲೋಚನಾ ಪತ್ರದ ಕುರಿತು ಅಭಿಪ್ರಾಯಗಳನ್ನು ನೀಡುವಂತೆ ಹಾಗೂ 23ರೊಳಗೆ ಆಕ್ಷೇಪಣೆಗಳನ್ನು ವ್ಯಕ್ತಪಡಿಸುವಂತೆ ಟೆಲಿಕಾಂ ಕಂಪನಿಗಳಿಗೆ ಟ್ರಾಯ್ ಗಡುವು ನೀಡಿದೆ. ಸ್ಪೆಷಲ್ ಟಾರಿಫ್ ಮತ್ತು ಕಾಂಬೊ ವೋಚರ್‌ಗಳಿಗಾಗಿ ಪ್ರಸ್ತುತ ಗರಿಷ್ಠ ಮಾನ್ಯತೆಯ ಅವಧಿಯನ್ನು 90 ದಿನಗಳವರೆಗೆ ವಿಸ್ತರಿಸಲು TRAI ಉದ್ದೇಶಿಸಿದೆ. ಅದನ್ನು ಪರಿಶೀಲಿಸಲಾಗುತ್ತಿದೆ. ಹೀಗಾಗಿ ಈ ಎಲ್ಲ ಪ್ರಕ್ರಿಯೆಗಳು ಯಾವುದೇ ಅಡ್ಡಿ ಇಲ್ಲದೆ ಮುಗಿದಿದ್ದೆ ಆದಲ್ಲಿ ಆದಷ್ಟು ಬೇಗ ಕೇಂದ್ರ ಮೊಬೈಲ್ ಬಳಕೆದಾರರಿಗೆ ಅವರ ಅಗತ್ಯತೆ ಹಾಗೂ ಬಳಕೆಗೆ ತಕ್ಕಂತೆ ರಿಚಾರ್ಜ್ ದರಗಳಲ್ಲಿ ಬದಲಾವಣೆ ತಂದು ಗುಡ್ ನ್ಯೂಸ್ ಕೊಡಲಿದೆ.
ಇದನ್ನೂ ಓದಿ: BSNL ನ 797 ರೂಪಾಯಿ ಪ್ಲಾನ್ 300 ದಿನಗಳ ವ್ಯಾಲಿಡಿಟಿ ಮತ್ತು 600GB ಡೇಟಾವನ್ನು ನೀಡುತ್ತದೆ; ಸಂಪೂರ್ಣ ಮಾಹಿತಿ ಇಲ್ಲಿದೆ.