ಬ್ಯಾಂಕ್ ಲಾಕರ್‌ಗಳಲ್ಲಿ ಚಿನ್ನ ಅಥವಾ ಹಣ ಇಟ್ಟಿರುವವರು ಆರ್‌ಬಿಐ 5 ಹೊಸ ನಿಯಮಗಳ ಬಗ್ಗೆ ತಿಳಿಯಲೇಬೇಕು.

ಬ್ಯಾಂಕ್ ಲಾಕರ್‌ಗಳು ಅತ್ಯಂತ ಸುರಕ್ಷಿತ ಸ್ಥಳ. ಕಳ್ಳರು ಅಥವಾ ಇತರ ಅಪಾಯಗಳಿಂದ ಚಿನ್ನ ಅಥವಾ ಹಣವನ್ನು ರಕ್ಷಿಸಲು ಇದು ಒಂದು ಸುಲಭ ಮಾರ್ಗವಾಗಿದೆ. ಬ್ಯಾಂಕುಗಳು ಹಲವಾರು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುತ್ತವೆ, ಇದರಲ್ಲಿ ಸಿಸಿಟಿವಿ ಕ್ಯಾಮೆರಾಗಳು, ಬಲವಾದ ಬಾಗಿಲುಗಳು ಮತ್ತು ಭದ್ರತಾ ಸಿಬ್ಬಂದಿ ಸೇರಿದ್ದಾರೆ. ಈಗ ಬ್ಯಾಂಕ್ ಲಾಕರ್‌ ನಲ್ಲಿ ಹಣ ಅಥವಾ ಚಿನ್ನ ಇಟ್ಟವರಿಗೆ RBI ಹೊಸ ನಿಯಮವನ್ನು ಜಾರಿಗೆ ತಂದಿದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ನೀವು ತಿಳಿಯಬಹುದು.

WhatsApp Group Join Now
Telegram Group Join Now

ಪರಿಷ್ಕರಣೆ ಸಮಯದ ಬಗ್ಗೆ ಹೇಳಿರುವ RBI:- ಭಾರತೀಯ ರಿಸರ್ವ್ ಬ್ಯಾಂಕ್ 2022ರ ಆಗಸ್ಟ್‌ನಲ್ಲಿ ಸುರಕ್ಷಿತ ಠೇವಣಿ ಪೆಟ್ಟಿಗೆಗಳ ಬಳಕೆ ಮತ್ತು ನಿರ್ವಹಣೆಗೆ ಹೊಸ ನಿಯಮಗಳು ಜಾರಿಗೆ ಬಂದವು. ಈ ನಿಯಮದ ಪ್ರಕಾರ ಬ್ಯಾಂಕುಗಳು ಜನವರಿ 1, 2023 ರ ಒಳಗೆ ತಮ್ಮ ಗ್ರಾಹಕರಿಗೆ ಇರುವ ಒಪ್ಪಂದಗಳನ್ನು ಪರಿಷ್ಕರಿಸಿ, ಹೊಸ ಒಪ್ಪಂದಗಳನ್ನು ಮಾಡಿಕೊಳ್ಳುವುದು ಕಡ್ಡಾಯವಾಗಿದೆ. ಈ ಬದಲಾವಣೆಯು ಬಳಕೆದಾರರ ಹೆಚ್ಚಿನ ಸುರಕ್ಷತೆ ಮತ್ತು ಪಾರದರ್ಶಕತೆಯನ್ನು ಒದಗಿಸುವ ಗುರಿಯನ್ನು ಹೊಂದಿದೆ.

ಕಾಯುವ ಪಟ್ಟಿ ಪ್ರದರ್ಶಿಸಬೇಕು :-

ಗ್ರಾಹಕರಿಗೆ ಹೆಚ್ಚಿನ ಪಾರದರ್ಶಕತೆ ಒದಗಿಸಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೊರಡಿಸಿದ ಹೊಸ ನಿಯಮಗಳ ಪ್ರಕಾರ ಬ್ಯಾಂಕುಗಳು ಹೊಂದಿರುವ ಲಾಕರ್‌ಗಳ ಪಟ್ಟಿಯನ್ನು ಪ್ರದರ್ಶಿಸುವುದರ ಜೊತೆಗೆ, ಲಾಕರ್‌ಗಾಗಿ ಕಾಯುತ್ತಿರುವ ಗ್ರಾಹಕರ ಪಟ್ಟಿಯನ್ನು ಪ್ರದರ್ಶಿಸಬೇಕು. ಇದರೊಂದಿಗೆ, ಬ್ಯಾಂಕುಗಳು ಲಾಕರ್‌ಗಾಗಿ ಮೂರು ವರ್ಷಗಳವರೆಗೆ ಬಾಡಿಗೆಯನ್ನು ಪಡೆಯಲು ಹಕ್ಕನ್ನು ಬ್ಯಾಂಕ್ ಹೊಂದಿರುತ್ತದೆ.

ಗ್ರಾಹಕರಿಗೆ ಅನುಕೂಲ ಆಗುವಂತೆ ಇರುಬೇಕು ಒಪ್ಪಂದ :- ಆರ್‌ಬಿಐನ ಹೊಸ ನಿಯಮಗಳ ಪ್ರಕಾರ ಬ್ಯಾಂಕುಗಳು ಗ್ರಾಹಕರಿಗೆ ಅನ್ಯಾಯವಾಗದಂತೆ ಲಾಕರ್ ಒಪ್ಪಂದ ಮಾಡಿಕೊಳ್ಳಬೇಕು. ಬ್ಯಾಂಕುಗಳು ಮಾಡುವ ಲಾಕರ್ ಒಪ್ಪಂದಗಳು ಗ್ರಾಹಕರು ಹಿತದೃಷ್ಟಿಯಿಂದ ಇರಬೇಕು ಎಂದು ಆರ್ಬಿಐ ನಿಯಮವನ್ನು ಜಾರಿಗೊಳಿಸಿದೆ.

ಲಾಕರ್ ನಲ್ಲಿ ಯಾವ ವಸ್ತುಗಳು ಇಡಬಹುದು ಎಂಬುದನ್ನು ಸ್ಪಷ್ಟವಾಗಿ ತಿಳಿಸಬೇಕು :- ಭಾರತೀಯ ರಿಸರ್ವ್ ಬ್ಯಾಂಕ್‌ನ ಹೊಸ ನಿಯಮಗಳ ಪ್ರಕಾರ, ಬ್ಯಾಂಕ್ ಮತ್ತು ಗ್ರಾಹಕರು ಲಾಕರ್ ಒಪ್ಪಂದದಲ್ಲಿ ಲಾಕರ್‌ನಲ್ಲಿ ಇಡಬಹುದಾದ ಮತ್ತು ಇಡಬಾರದ ವಸ್ತುಗಳ ಪಟ್ಟಿಯನ್ನು ಸ್ಪಷ್ಟವಾಗಿ ತಿಳಿಸಬೇಕು.

ಬ್ಯಾಂಕ್ ಲಾಕಾರ್ ನಲ್ಲಿ ಏನೇನು ಇಡಬಹುದು?: ಬ್ಯಾಂಕ್ ಲಾಕರ್‌ನಲ್ಲಿ ಆಭರಣ, ಪ್ರಮುಖ ದಾಖಲೆಗಳು ಮತ್ತು ಕಾನೂನಿನ ಪ್ರಕಾರ ಇಡಬಹುದಾದ ವಸ್ತುಗಳನ್ನು ಇಡಬಹುದು. ಲಾಕರ್ ತೆರೆಯಲು ಕೇವಲ ನಿಮಗೆ ಮಾತ್ರ ಅನುಮತಿ ಇದೆ. ಬ್ಯಾಂಕ್ ಲಾಕರ್‌ಗೆ ಕೇವಲ ಗ್ರಾಹಕರಿಗೆ ಮಾತ್ರ ಪ್ರವೇಶವಿದೆ. ಲಾಕರ್‌ನಲ್ಲಿ ಕೇವಲ ಆಭರಣ ಮತ್ತು ಪ್ರಮುಖ ದಾಖಲೆಗಳನ್ನು ಇಡಬಹುದು. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಈ ವಸ್ತುಗಳನ್ನು ಲಾಕರ್ ನಲ್ಲಿ ಇಡಬೇಡಿ :-

ಬ್ಯಾಂಕ್ ಲಾಕರ್‌ನಲ್ಲಿ ಶಸ್ತ್ರಾಸ್ತ್ರಗಳು, ನಗದು, ವಿದೇಶಿ ಕರೆನ್ಸಿ, ಔಷಧಗಳು ಅಥವಾ ಯಾವುದೇ ಮಾರಣಾಂತಿಕ ವಿಷಕಾರಿ ವಸ್ತುಗಳನ್ನು ಇರಿಸುವುದು ನಿಷಿದ್ಧ. ಲಾಕರ್‌ನಲ್ಲಿ ನಗದು ಇರಿಸಿದರೆ ಅದು ನಿಯಮಗಳ ಉಲ್ಲಂಘನೆ, ಯಾವುದೇ ನಷ್ಟ ಸಂಭವಿಸಿದಾಗ ಬ್ಯಾಂಕ್ ಜವಾಬ್ದಾರನಾಗಿರುವುದಿಲ್ಲ.

ನಾಮಿನಿಗೆ ಮಾತ್ರ ಲಾಕರ್ ತೆಗೆಯುವ ಹಕ್ಕು ಇದೆ :- ಯಾರ ಹೆಸರಿಗೆ ನಾಮಿನಿ ಮಾಡಿರುತ್ತೆವೋ ಅವರು ಮಾತ್ರ ವ್ಯಕ್ತಿ ಸತ್ತ ಬಳಿಕ ಲಾಕಾರ್ ತೆಗೆಯಬಹುದು ಎಂದು ನಿಯಮದಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ನೀವು BSNL ಗೆ ನಿಮ್ಮ ಸಿಮ್ ಪೋರ್ಟ್ ಮಾಡಿಸಬೇಕಾ? ಹಾಗಾದರೆ ನೀವು ಮನೆಯಲ್ಲಿಯೇ ಕುಳಿತು ಸರಳ ವಿಧಾನ ಅನುಸರಿಸಿ

ಇದನ್ನೂ ಓದಿ: ಆಗಸ್ಟ್ 1ನೇ ತಾರೀಖಿನಿಂದ ಬದಲಾಗುವ 5 ನಿಯಮಗಳಿಂದ ನಿಮ್ಮ ಜೇಬಿಗೆ ಕತ್ತರಿ ಬೀಳಲಿದೆ.

Sharing Is Caring:

Leave a Comment