ಪಶು ವೈದ್ಯಕೀಯ ವೃತ್ತಿಜೀವನವನ್ನು ಬಯಸುವವರಿಗೆ ಪಶು ವೈದ್ಯರ ನೇಮಕಾತಿಗೆ ಉತ್ತಮ ಅವಕಾಶವಿದೆ. ನೀವು ಸಹ ಪಶು ವೈದ್ಯ ಹುದ್ದೆಗೆ ಅರ್ಜಿ ಸಲ್ಲಿಸಲು ಹುದ್ದೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯೋಣ.
ಹುದ್ದೆಯ ಬಗ್ಗೆ ಸಂಪೂರ್ಣ ಮಾಹಿತಿ :– ಕರ್ನಾಟಕ ಸರ್ಕಾರದ ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಯಲ್ಲಿನ 400 ಪಶು ವೈದ್ಯಾಧಿಕಾರಿ ಹುದ್ದೆಗಳನ್ನು ಭರ್ತಿ ಮಾಡಲು ಕೆಪಿಎಸ್‌ಸಿ ಮೂಲಕ ನೇಮಕಾತಿ ಪ್ರಕ್ರಿಯೆ ಪ್ರಾರಂಭವಾಗಿದೆ.
ವಯೋಮಿತಿಯ ವಿವರಗಳು :-
- ಸಾಮಾನ್ಯ ವರ್ಗ: ಈ ವರ್ಗದ ಅಭ್ಯರ್ಥಿಗಳ ಗರಿಷ್ಠ ವಯಸ್ಸು 35 ವರ್ಷ.
- OBC (ಇತರ ಹಿಂದುಳಿದ ವರ್ಗಗಳು): ಈ ವರ್ಗದ ಅಭ್ಯರ್ಥಿಗಳಿಗೆ 3 ವರ್ಷಗಳ ವಯೋಮಿತಿ ಸಡಿಲಿಕೆ ಇದೆ. ಆದ್ದರಿಂದ, ಅವರ ಗರಿಷ್ಠ ವಯಸ್ಸು 38 ವರ್ಷ.
- SC/ST ಮತ್ತು ಪ್ರವರ್ಗ-1: ಈ ವರ್ಗಗಳ ಅಭ್ಯರ್ಥಿಗಳಿಗೆ 5 ವರ್ಷಗಳ ವಯೋಮಿತಿ ಸಡಿಲಿಕೆ ಇದೆ. ಆದ್ದರಿಂದ, ಅವರ ಗರಿಷ್ಠ ವಯಸ್ಸು 40 ವರ್ಷ.
ವಿದ್ಯಾರ್ಹತೆಯ ವಿವರ :- ಪಶು ವೈದ್ಯಕೀಯ ವಿಜ್ಞಾನ (BVSc), ಪಶು ವೈದ್ಯಕೀಯ ವಿಜ್ಞಾನ ಮತ್ತು ಪಶು ಸಂಗೋಪನೆ (BVSc. & AH) ಪದವಿ ಪಡೆದವರು ಮತ್ತು ಕೆವಿಸಿ/ಐವಿಸಿಯಲ್ಲಿ ನೋಂದಾಯಿಸಿಕೊಂಡಿರುವವರು ಅರ್ಜಿ ಸಲ್ಲಿಸಲು ಅರ್ಹರು. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕ
- ಅರ್ಜಿ ಸಲ್ಲಿಸಲು ಆರಂಭ ದಿನಾಂಕ: ಆಗಸ್ಟ್ 12 2024.
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಸೆಪ್ಟೆಂಬರ್ 12 2024.
ಅರ್ಜಿ ಶುಲ್ಕದ ವಿವರಗಳು ಹೀಗಿವೆ :- ಮೇಲಿನ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಸಾಮಾನ್ಯ ವರ್ಗದ ಅಭ್ಯರ್ಥಿಗಳು 600 ರೂಪಾಯಿ, OBC ವರ್ಗದ ಅಭ್ಯರ್ಥಿಗಳು 300 ರೂಪಾಯಿ, ಮಾಜಿ ಸೈನಿಕರು 50 ರೂಪಾಯಿ ಹಾಗೂ SC, ST, ವರ್ಗ-1 ಮತ್ತು ವಿಶೇಷ ಚೇತನರಿಗೆ ಶುಲ್ಕ ವಿನಾಯಿತಿ ಇದೆ.
ಆಯ್ಕೆಯ ವಿಧಾನ ಹೀಗಿದೆ :- ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಎಲ್ಲಾ ಅಭ್ಯರ್ಥಿಗಳಿಗೆ ಕಡ್ಡಾಯ ಕನ್ನಡ ಭಾಷಾ ಪರೀಕ್ಷೆಯಲ್ಲಿ ಉತ್ತರರಾಗಬೇಕು. ಈ ಪರೀಕ್ಷೆಯು ಗರಿಷ್ಠ 150 ಅಂಕಗಳನ್ನು ಹೊಂದಿದ್ದು, ಅಭ್ಯರ್ಥಿಗಳು ಕನಿಷ್ಠ 50 ಅಂಕಗಳನ್ನು ಗಳಿಸಬೇಕು. ಈ ಪರೀಕ್ಷೆಯ ಪ್ರಶ್ನೆ ಪತ್ರಿಕೆಯನ್ನು ಎಸ್‌ಎಸ್‌ಎಲ್‌ಸಿ ಮಟ್ಟದ ಕನ್ನಡ ಪಠ್ಯಕ್ರಮದ ಆಧಾರದಲ್ಲಿ ತಯಾರಿಸಲಾಗಿದೆ.
ಇದನ್ನೂ ಓದಿ: SSC ಬರೋಬ್ಬರಿ 2006 ಹುದ್ದೆಗಳ ಭರ್ತಿಗೆ ಮುಂದಾಗಿದೆ. ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಮುನ್ನ ಈ ಮಾಹಿತಿಗಳನ್ನು ತಿಳಿಯಿರಿ
ಅಧಿಸೂಚನೆಯಲ್ಲಿ ತಿಳಿಸಿರುವ ಮುಖ್ಯ ಮಾಹಿತಿ :-
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕರ್ನಾಟಕ ಲೋಕಸೇವಾ ಆಯೋಗವು ದಿನಾಂಕ 29-11-2022 ರ ನಂತರ ನಡೆಸಿದ ಕನ್ನಡ ಭಾಷಾ ಪರೀಕ್ಷೆಗೆ ಹಾಜರಾಗಲು ಆನ್‌ಲೈನ್ ಅರ್ಜಿಯಲ್ಲಿ ನಿಗದಿತ ಸ್ಥಳದಲ್ಲಿ ಮಾಹಿತಿ ನೀಡಬೇಕು.
ಪ್ರಶ್ನೆ ಪತ್ರಿಕೆ ಹೇಗಿರುತ್ತದೆ :- ಈ ಪರೀಕ್ಷೆಯು ಎರಡು ಲಿಖಿತ ಪೇಪರ್‌ಗಳನ್ನು ಒಳಗೊಂಡಿದೆ. ಪ್ರತಿ ಪೇಪರ್‌ಗೆ 300 ಅಂಕಗಳನ್ನು ನಿಗದಿಪಡಿಸಲಾಗಿದೆ, ಪ್ರಶ್ನೆಗಳು ಬಹು ಆಯ್ಕೆ ಪ್ರಕಾರದಲ್ಲಿ ಇರುತ್ತವೆ. ಪ್ರತಿ ತಪ್ಪಾದ ಉತ್ತರಕ್ಕೆ ಪ್ರಶ್ನೆಗೆ ನಿಗದಿಯಾದ ಅಂಕದ ನಾಲ್ಕನೇ ಒಂದು ಭಾಗವನ್ನು ಕಡಿತಗೊಳಿಸುವುದಿಲ್ಲ. ಪೇಪರ್ 1 ಸಾಮಾನ್ಯ ಜ್ಞಾನವನ್ನು ಆಧರಿಸಿದೆ ಇದು 300 ಅಂಕಗಳ ಪತ್ರಿಕೆ ಆಗಿದೆ ಹಾಗೂ ಪೇಪರ್ 2 ನಿರ್ದಿಷ್ಟ ವಿಷಯವನ್ನು ಆಧರಿಸಿದೆ. ಇದು ಸಹ 300 ಅಂಕಗಳ ಪ್ರಶ್ನೆ ಪತ್ರಿಕೆ ಆಗಿದೆ.
ಮೇಲಿನ ಹುದ್ದೆಗಳ ಬಗೆ ಹೆಚ್ಚಿನ ಮಾಹಿತಿಗೆ ಕರ್ನಾಟಕ ಸರ್ಕಾರದ ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ ಹೊರಡಿಸಿರುವ ಅಧಿಸೂಚನೆಯನ್ನು ಗಮನಿಸಿ. ಅಧಿಸೂಚನೆ PDF ಡೌನ್ ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಆಯುಷ್ಮಾನ್ ಕಾರ್ಡ್ ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ದಿಯಾ ಅಂತ ಹೀಗೆ ಚೆಕ್ ಮಾಡಿ; 5 ಲಕ್ಷದವರೆಗೆ ಸಿಗಲಿದೆ ಉಚಿತ ಚಿಕಿತ್ಸೆ!