ನಿರುದ್ಯೋಗಿ ಯುವತಿಯರಿಗೆ ಈಗ ಶಿವಮೊಗ್ಗ ಜಿಲ್ಲೆಯ ಒಟ್ಟು 7 ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯಲ್ಲಿ ಬರುವ ಎಲ್ಲಾ ತಾಲ್ಲೂಕುಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿ ಹುದ್ದೆಗಳ ಖಾಲಿ ಸ್ಥಾನಗಳನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಭರ್ತಿಮಾಡಲಿದೆ. ಆಯ್ಕೆ ಆಗುವ ಅಭ್ಯರ್ಥಿಗಳಿಗೆ ಗೌರವಧನ ನೀಡುಲಾಗುವುದು. ಹುದ್ದೆಗಳಿಗೆ ಅರ್ಹ ಮಹಿಳಾ ಹಾಗೂ ಮಹಿಳಾ ಲಿಂಗತ್ವ ಅಲ್ಪಸಂಖ್ಯಾತ ಸ್ಥಳೀಯ ಅಭ್ಯರ್ಥಿಗಳಿಂದ ಆನ್‌ಲೈನ್ ಅರ್ಜಿ ಆಹ್ವಾನಿಸಲಾಗಿದೆ. ಅಂಗನವಾಡಿಯು ಕೆಲಸ ಮಾಡಲು ಇಚ್ಛಿಸುವವರು ಈ ಸದುಪಯೋಗವನ್ನು ಬಳಸಿಕೊಳ್ಳಬೇಕು.
ಯಾವ ಭಾಗದಲ್ಲಿ ಏಷ್ಟು ಹುದ್ದೆಗಳು ಖಾಲಿ ಇವೆ.
- ಶಿವಮೊಗ್ಗದಲ್ಲಿ :- ಕಾರ್ಯಕರ್ತೆಯರ ಹುದ್ದೆ 34 ಹಾಗೂ ಸಹಾಯಕಿಯರ ಹುದ್ದೆ 118 ಇದೆ ಹಾಗೂ
- ಭದ್ರಾವತಿ: ಕಾರ್ಯಕರ್ತೆಯರು ಹುದ್ದೆ 10, ಸಹಾಯಕಿಯರ ಹುದ್ದೆ 72.
- ಹೊಸನಗರ: ಕಾರ್ಯಕರ್ತೆಯರ ಹುದ್ದೆ 07, ಹಾಗೂ ಸಹಾಯಕಿಯರ ಹುದ್ದೆ 35.
- ಸಾಗರ: ಕಾರ್ಯಕರ್ತೆಯರ ಹುದ್ದೆ 21 ಹಾಗೂ ಸಹಾಯಕಿಯರ ಹುದ್ದೆ 62.
- ಶಿಕಾರಿಪುರ: ಕಾರ್ಯಕರ್ತೆಯರ ಹುದ್ದೆ 08 ಹಾಗೂ ಸಹಾಯಕಿಯರು 55.
- ಸೊರಬ: ಕಾರ್ಯಕರ್ತೆಯರ ಹುದ್ದೆ 38 ಹಾಗೂ ಸಹಾಯಕಿಯರ ಹುದ್ದೆ 65.
- ತೀರ್ಥಹಳ್ಳಿ: ಕಾರ್ಯಕರ್ತೆಯರ ಹುದ್ದೆ 9 ಹಾಗೂ ಸಹಾಯಕಿಯರ ಹುದ್ದೆ 41.
ಅರ್ಜಿ ಸಲ್ಲಿಸುವ ವಿಧಾನ :- ಆಸಕ್ತ ಅಭ್ಯರ್ಥಿಗಳು ಇಲಾಖೆಯ ವೆಬ್‌ಸೈಟ್ https://karnemakaone.kar.nic.in/abcd/ ಮೂಲಕ ಅಗತ್ಯ ದಾಖಲೆಗಳನ್ನು ಲಗತ್ತಿಸಿ, ಆಗಸ್ಟ್ 29 ರೊಳಗಾಗಿ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ, ಇಲಾಖೆಯ ವೆಬ್‌ಸೈಟ್ ಅಥವಾ ಸಂಬಂಧಿಸಿದ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಂದ ಮಾಹಿತಿ ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: SSC ಬರೋಬ್ಬರಿ 2006 ಹುದ್ದೆಗಳ ಭರ್ತಿಗೆ ಮುಂದಾಗಿದೆ. ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಮುನ್ನ ಈ ಮಾಹಿತಿಗಳನ್ನು ತಿಳಿಯಿರಿ
ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಹುದ್ದೆಗಳ ನೇರ ನೇಮಕಾತಿ:
ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ಎನ್‌ಪಿಸಿಡಿಸಿಎಸ್, ಎನ್‌ಪಿಎಚ್‌ಸಿಇ ಮತ್ತು ಸಿಪಿಹೆಚ್‌ಸಿಯುಹೆಚ್‌ಸಿ ಕಾರ್ಯಕ್ರಮದ ಅಡಿಯಲ್ಲಿ ಖಾಲಿ ಇರುವ ಎಂ.ಬಿ.ಬಿ.ಎಸ್. ವೈದ್ಯರು-9, ತಜ್ಞ ವೈದ್ಯರು (ಎಂ.ಡಿ. ಇಂಟರ್ನಲ್ ಮೆಡಿಸಿನ್)-1 ಮತ್ತು ಜಿಲ್ಲಾ ಆರೋಗ್ಯ ಮತ್ತು ಕ್ಷೇಮಕೇಂದ್ರ ಸಂಯೋಜಕರ-01 ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ, ಮೇರಿಟ್ ಹಾಗೂ ರೋಸ್ಟರ್ ಆಧಾರದ ಮೇಲೆ ನೇರ ನೇಮಕಾತಿ ಮಾಡಲಾಗುತ್ತದೆ. ಅರ್ಹ ಅಭ್ಯರ್ಥಿಗಳು ಆಗಸ್ಟ್ 08 ರಂದು ಬೆಳಗ್ಗೆ 10.30 ರಿಂದ ಮಧ್ಯಾಹ್ನ 4.00 ರವರೆಗೆ, ಜಿಲ್ಲಾ ಸರ್ವೇಕ್ಷಣಾಧಿಕಾರಿಗಳ ಕಚೇರಿ, ಜಿಲ್ಲಾ ಎನ್.ಸಿ.ಡಿ. ಘಟಕ, ಮೆಗ್ಗಾನ್ ಆಸ್ಪತ್ರೆ ಆವರಣ, ತುಂಗಾ ವಿದ್ಯಾರ್ಥಿನಿಯರ ವಸತಿ ನಿಲಯದ ಎದುರು ನೇರ ಸಂದರ್ಶನದಲ್ಲಿ ತಮ್ಮ ದಾಖಲೆಗಳ ಮೂಲಪ್ರತಿ ಮತ್ತು ಛಾಯಾಪ್ರತಿಗಳನ್ನು ಸಲ್ಲಿಸಬೇಕು.
ವೈದ್ಯರಿಗೆ ವಿಶೇಷ ಸೂಚನೆ ನೀಡಲಾಗಿದೆ :- ಪ್ರತಿ ತಿಂಗಳ 1, 10 ಮತ್ತು 20 ನೇ ತಾರೀಕಿನಂದು ವೈದ್ಯರ ಮತ್ತು ತಜ್ಞ ವೈದ್ಯರ ಹುದ್ದೆಗೆ (ರಜೆ ಇರುವ ದಿನವಿದ್ದರೆ, ನಂತರದ ದಿನದಲ್ಲಿ) ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು. ಹೆಚ್ಚಿನ ಮಾಹಿತಿಗಾಗಿ, ಕಚೇರಿಯನ್ನು ಖುದ್ದಾಗಿ ಅಥವಾ ದೂರವಾಣಿ: 08182-220685 ನ್ನು ಸಂಪರ್ಕಿಸುವುದು.
ಇದನ್ನೂ ಓದಿ: ಜಿಯೋ ಮೂರು ಅಗ್ಗದ ರೀಚಾರ್ಜ್ ಪ್ಲಾನ್ ಮೂಲಕ ನೀವು ಉಚಿತ OTT ಅಪ್ಲಿಕೇಶನ್‌ಗಳು ಅನಿಯಮಿತ ಕರೆ ಮತ್ತು ಡೇಟಾ ಸಿಗಲಿದೆ.
ಇದನ್ನೂ ಓದಿ: 400 ಪಶು ವೈದ್ಯರ ನೇಮಕಕ್ಕೆ ಅರ್ಜಿ ಆಹ್ವಾನ ಮಾಡಲಾಗಿದೆ; ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಹುದ್ದೆಯ ಪೂರ್ಣ ಮಾಹಿತಿ ತಿಳಿಯಿರಿ.