ಕ್ರೆಡಿಟ್ ಕಾರ್ಡ್ ಎನ್ನುವುದು ಸುಲಭವಾಗಿ ಹಣವನ್ನು ನಮ್ಮ ಖಾತೆಯಿಂದ ಬೇರೆಯವರ ಖಾತೆಗೆ ಅಂದರೆ ಯಾವುದೇ ಅಂಗಡಿ ಅಥವಾ ಆನ್ಲೈನ್ ಶಾಪಿಂಗ್ ಮಾಡುವಾಗ ನಾವು ಹಣ ನೀಡಲು ಬಳಸುವ ಸುಲಭ ವಿಧಾನ ಆಗಿದೆ. ಈಗ ಈ ಕ್ರೆಡಿಟ್ ಕಾರ್ಡ್ ಗಳ ಮೇಲೆ ಹೆಚ್ಚಿನ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಹಾಗಾದರೆ ಎಷ್ಟು ಶುಲ್ಕ ಪಾವತಿ ಮಾಡಬೇಕು ಎಂಬುದನ್ನು ತಿಳಿಯಿರಿ.
ಆಗಸ್ಟ್ ಒಂದರಿಂದ ಹೊಸ ಶುಲ್ಕ ಪಾವತಿ ಮಾಡಬೇಕು :- ಆಗಸ್ಟ್ 1, 2024 ರಿಂದ HDFC ಬ್ಯಾಂಕ್ ಕ್ರೆಡಿಟ್ ಕಾರ್ಡ್ ಹೊಂದಿರುವವರು ವಿವಿಧ ವಹಿವಾಟುಗಳ ಮೇಲೆ ಹೆಚ್ಚಿನ ಶುಲ್ಕವನ್ನು ಪಾವತಿಸಬೇಕು. ಇದು ಒಂದು ರೀತಿಯಲ್ಲಿ ಹೊರೆ ಆಗಲಿದೆ. ಏಕೆಂದರೆ ಈಗಾಗಲೇ ಎಲ್ಲಾ ದಿನನಿತ್ಯ ಉಪಯೋಗಿಸುವ ಸಾಮಗ್ರಿಗಳ ದರಗಳು ಹಾಗೂ ತೈಲ ದರಗಳು ಜಾಸ್ತಿ ಆಗಿದ್ದು ಈಗ ಮತ್ತೆ ಕ್ರೆಡಿಟ್ ಕಾರ್ಡ್ ಶುಲ್ಕ ಹೆಚ್ಚಳವು ಗ್ರಾಹಕರಿಗೆ ಆರ್ಥಿಕವಾಗಿ ಪರಿಣಾಮ ಬೀರಲಿದೆ. ಇದು ಬಾಡಿಗೆ, ಶಿಕ್ಷಣ ಸೇರಿದಂತೆ ಹಲವು ಕ್ಷೇತ್ರಗಳ ಮೇಲೆ ಶುಲ್ಕ ಹೆಚ್ಚಾಗಲಿದೆ.
ಯಾವ ಯಾವ ಶುಲ್ಕವು ಏಷ್ಟು ಹೆಚ್ಚಾಗಿದೆ ಎಂಬ ಮಾಹಿತಿ :-
ಬಾಡಿಗೆ ಶುಲ್ಕದ ರಚನೆ ಹೀಗಿದೆ :- ಬಾಡಿಗೆ ಪಾವತಿಗೆ ಥರ್ಡ್-ಪಾರ್ಟಿ ಅಪ್ಲಿಕೇಶನ್ಗಳನ್ನು ಬಳಸುವ ಗ್ರಾಹಕರ ಮೇಲೆ ಶುಲ್ಕದ ಹೊರೆ ಹೆಚ್ಚಾಗುತ್ತದೆ. ಈಗ ಪ್ರತಿ ವಹಿವಾಟಿನ ಮೇಲೆ 1% ಶುಲ್ಕ ವಿಧಿಸಲಾಗುತ್ತಿದ್ದು, ಒಂದು ವಹಿವಾಟಿಗೆ ಗರಿಷ್ಠ 3,000 ರೂಪಾಯಿ ಆಗಿರುತ್ತದೆ.
ಶಿಕ್ಷಣ ಶುಲ್ಕ ಶುಲ್ಕ ರಚನೆ ಹೀಗಿದೆ:- ಶಿಕ್ಷಣ ಸಂಸ್ಥೆಗಳ ವೆಬ್ ಸೈಟ್ ಅಥವಾ ಪಿಓಎಸ್ ಮೂಲಕ ನೇರವಾಗಿ ಶುಲ್ಕ ಮುಕ್ತವಾಗಿದೆ. ಆದರೆ, ಮೂರನೇ ವ್ಯಕ್ತಿಯ ಅಪ್ಲಿಕೇಶನ್ಗಳ ಮೂಲಕ ಪಾವತಿಸಲು 1% ಶುಲ್ಕ ವಿಧಿಸಲಿದ್ದಾರೆ. ಈ ಶುಲ್ಕವು ಗರಿಷ್ಠ ₹ 3,000 ಮಾತ್ರ ಇರುತ್ತದೆ ಮತ್ತು ಅಂತರರಾಷ್ಟ್ರೀಯ ಪಾವತಿಗಳಿಗೆ ಇದು ಅನ್ವಯಿಸುವುದಿಲ್ಲ.
ಇಂಧನ ವಹಿವಾಟುಗಳಿಗೆ ಶುಲ್ಕದ ರಚನೆ ಹೀಗಿದೆ: 15,000 ರೂಪಾಯಿಗಳ ವರೆಗೆ ಯಾವುದೇ ಶುಲ್ಕವಿಲ್ಲ. ಆದರೆ, 15, 000 ರೂಪಾಯಿ ಕ್ಕಿಂತ ಹೆಚ್ಚಿನ ಮೊತ್ತದ ವಹಿವಾಟುಗಳಿಗೆ ಸಂಪೂರ್ಣ ಮೊತ್ತದ ಮೇಲೆ 1% ಶುಲ್ಕ ವಿಧಿಸಲಾಗುತ್ತದೆ. ಒಂದು ವಹಿವಾಟಿನ ಗರಿಷ್ಠ ಶುಲ್ಕ 3,000 ಆಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಯುಟಿಲಿಟಿ ಬಿಲ್ ಪಾವತಿಗಳಿಗೆ ಶುಲ್ಕದ ರಚನೆ ಹೀಗಿದೆ: 50,000 ರೂಪಾಯಿ ವರೆಗೆ ಯಾವುದೇ ಶುಲ್ಕವಿಲ್ಲ. ಆದರೆ, 50,000 ರೂಪಾಯಿಗೂ ಹೆಚ್ಚಿನ ಮೊತ್ತದ ಬಿಲ್ ಪಾವತಿಗಳಿಗೆ ಸಂಪೂರ್ಣ ಮೊತ್ತದ ಮೇಲೆ 1% ಶುಲ್ಕ ವಿಧಿಸಲಾಗುತ್ತದೆ. ಒಂದು ವಹಿವಾಟಿನ ಗರಿಷ್ಠ ಶುಲ್ಕ 3,000 ಆಗಿರುತ್ತದೆ. ವಿಮಾ ಪಾವತಿಗಳಿಗೆ ಈ ಶುಲ್ಕ ಅನ್ವಯವಾಗುವುದಿಲ್ಲ.
ಅಂತಾರಾಷ್ಟ್ರೀಯ ವ್ಯವಹಾರಕ್ಕೆ ಶುಲ್ಕ ವಿವರ ಹೀಗಿದೆ :- ಅಂತರರಾಷ್ಟ್ರೀಯವಾಗಿ ಅಥವಾ ಬೇರೆ ಕರೆನ್ಸಿಯಲ್ಲಿ ಮಾಡುವ ಯಾವುದೇ ವಹಿವಾಟಿನ ಮೇಲೆ 3.5% ಮಾರ್ಕ್ಅಪ್ ಶುಲ್ಕ ವಿಧಿಸದಿದ್ದರೆ. ಇದರಿಂದ ವಿದೇಶದಲ್ಲಿ ಖರೀದಿ ಮಾಡುವ ಅಥವಾ ವಹಿವಾಟು ಮಾಡುವ ಗ್ರಾಹಕರ ವೆಚ್ಚ ಹೆಚ್ಚಾಗಲಿದೆ.
ಬಿಲ್ ಪಾವತಿ ವಿಳಂಬ ಆದರೆ :- ಬಿಲ್ ಪಾವತಿಯಲ್ಲಿ ವಿಳಂಬವಾದರೆ 100 ರಿಂದ 1,300 ರೂಪಾಯಿಗಳ ವರೆಗೆ ಶುಲ್ಕ ವಿಧಿಸಲಾಗುತ್ತದೆ. ಈ ಶುಲ್ಕವು ಬಾಕಿ ಇರುವ ಮೊತ್ತವನ್ನು ಅನುಸರಿಸಿ ನಿರ್ಧರಿಸಿ ಈ ಮೊತ್ತ ಅನ್ವಯ ಆಗಲಿದೆ.
ಪ್ರತಿಫಲ ಹಾಗೂ ಹಣಕಾಸು ಶುಲ್ಕದ ರಚನೆ ಹೀಗಿದೆ :- ಸ್ಟೇಟ್ಮೆಂಟ್ ಕ್ರೆಡಿಟ್ನಿಂದ ರಿವಾರ್ಡ್ಗಳನ್ನು ವಿಮೋಚಿಸಲು 50 ರೂಪಾಯಿ ಶುಲ್ಕ ವಿಧಿಸಲಾಗುತ್ತದೆ. ಹೆಚ್ಚುವರಿಯಾಗಿ, ರಿವಾಲ್ವಿಂಗ್ ಕ್ರೆಡಿಟ್ ಸೌಲಭ್ಯವನ್ನು ಬಳಸುವ ಬಳಕೆದಾರರಿಗೆ ತಿಂಗಳಿಗೆ 3.75% ಹಣಕಾಸು ಶುಲ್ಕ ಅನ್ವಯಿಸುತ್ತದೆ.
HDFC ಬ್ಯಾಂಕ್ ತನ್ನ ಕ್ರೆಡಿಟ್ ಕಾರ್ಡ್ ಕೊಡುಗೆಗಳನ್ನು ಸುಧಾರಿಸುವ ಭಾಗವಾಗಿ ಟಾಟಾ ನ್ಯೂ ಕ್ರೆಡಿಟ್ ಕಾರ್ಡ್ಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದೆ. ಇದರಲ್ಲಿ UPI ಪಾವತಿಗಳ ಮೇಲಿನ ಕ್ಯಾಶ್ಬ್ಯಾಕ್ ನಿಯಮಗಳು ಬದಲಾಗುವುದು ಸೇರಿದೆ.
ಇದನ್ನೂ ಓದಿ: ಪೋಸ್ಟ್ ಆಫೀಸ್ ನಲ್ಲಿ 2 ಲಕ್ಷ FD ಮಾಡಿದರೆ 5 ವರ್ಷದಲ್ಲಿ ಎಷ್ಟು ಬಡ್ಡಿ ಹಣ ಸಿಗುತ್ತದೆ?